Big Breaking: ‘ಲಾಕ್‌ಡೌನ್‌’ ಮುಂದುವರೆಸುವಂತೆ ಎಲ್ಲಾ ರಾಜ್ಯಗಳ ಸಿಎಂ ಮನವಿ, ಪ್ರಧಾನಿ ಮೋದಿಯಿಂದ ಇಂದು ಸಂಜೆ ಘೋಷಣೆ ಸಾಧ್ಯತೆ – Kannada News Now


India

Big Breaking: ‘ಲಾಕ್‌ಡೌನ್‌’ ಮುಂದುವರೆಸುವಂತೆ ಎಲ್ಲಾ ರಾಜ್ಯಗಳ ಸಿಎಂ ಮನವಿ, ಪ್ರಧಾನಿ ಮೋದಿಯಿಂದ ಇಂದು ಸಂಜೆ ಘೋಷಣೆ ಸಾಧ್ಯತೆ

 

ನವದೆಹಲಿ: ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್​ಡೌನ್​ ಮುಕ್ತಾಯಗೊಳ್ಳಲು ಇನ್ನು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಲಾಕ್‌ಡೌನ್‌ ವಿಸ್ತರಣೆ ಕುರಿತಾಗಿ ವಿಡಿಯೋ ಸಂವಾದ ಮೂಲಕ ಮಹತ್ವದ ಚರ್ಚೆ ನಡೆಸಿದರು. ಇದೇ ವೇಳೆ ಸಂವಾದಲ್ಲಿ ಪ್ರಧಾನಿ ಮೋದಿಯವರಿಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ ಮುಂದುವರೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಲಾಕ್‌ ಡೌನ್‌ ಮುಂದುವರೆಸುವ ಬಗ್ಗೆ ಪ್ರಧಾನಿ ಮೋದಿಯವರು ಇಂದು ಸಂಜೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಆ ವೇಳೇಯಲ್ಲಿ ಪ್ರಧಾನಿ ಮೋದಿಯವರು ಎಷ್ಟು ದಿನಗಳ ಕಾಲ ದೇಶವನ್ನು ಲಾಕ್‌ ಡೌನ್‌ ಅನ್ನು ಮುಂದುವರಿಸುವ ಬಗ್ಗೆ ತಿಳಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಈಗಾಗಲೇ ಒಡಿಶಾ ಹಾಗೂ ಪಂಜಾಬ್​ ರಾಜ್ಯಗಳು ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಿಸಿವೆ. ಇನ್ನು ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 7,447 ದಾಟಿದೆ. 239 ಜನರು ಸಾವನ್ನಪ್ಪಿದ್ದು, ಇನ್ನೂ ಕೂಡ ಕೋರಾನ ಸೊಂಕಿತರ ಸಂಖ್ಯೆಯಲ್ಲಿ ಇಳಿಮುಖವಾದ ಕಾರಣ ಲಾಕ್‌ಡೌನ್‌ ಅನ್ನು ಮುಂದುವರೆಸಬೇಕಾದ ಅನಿವಾರ್ಯತೆ ಇದೆ.