ಸುಭಾಷಿತ :

Friday, April 3 , 2020 8:13 AM

ಸಚಿವ ಬಿ ಶ್ರೀರಾಮುಲುಗೆ ಬಿಗ್ ಶಾಕ್ : 4ನೇ ಡಿಸಿಎಂ ಹುದ್ದೆ ಸೃಷ್ಠಿಯ ಪ್ರಶ್ನೆಯೇ ಇಲ್ಲ ಅಂದ ಸಿಎಂ


Wednesday, January 29th, 2020 3:11 pm

ಬೆಳಗಾವಿ : ರಾಜ್ಯದಲ್ಲಿ ಈಗ ಇರುವ ಮೂವರು ಡಿಸಿಎಂ ಹುದ್ದೆಗಳನ್ನು ಸಂಪುಟ ವಿಸ್ತರಣೆ ಆದ್ರೂ ಹಾಗೆಯೇ ಮುಂದುವರಿಕೆ ಮಾಡಲಾಗುತ್ತದೆ. ಆದ್ರೇ ಯಾವುದೇ ಕಾರಣಕ್ಕೂ 4ನೇ ಉಪ ಮುಖ್ಯಮಂತ್ರಿ ಹುದ್ದೆಯ ಸೃಷ್ಠಿಯೇ ಇಲ್ಲ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಚಿವ ಬಿ ಶ್ರೀರಾಮುಲುಗೆ ಬಿಗ್ ಶಾಕ್ ನೀಡಿದ್ದಾರೆ.

ಆರೋಗ್ಯ ಸಚಿವ ಬಿ ಶ್ರೀರಾಮುಲು ಉಪ ಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಸಂಪುಟ ವಿಸ್ತರಣೆಯ ವೇಳೆಯಲ್ಲಿ ಮತ್ತೊಂದು ಡಿಸಿಎಂ ಹುದ್ದೆಯನ್ನು ಸೃಷ್ಠಿ ಮಾಡುವ ಮೂಲಕ ಸಚಿವ ಬಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬುದಾಗಿಯೂ ಹೇಳಲಾಗುತ್ತಿತ್ತು. ಆದ್ರೇ.. ಇದೀಗ ಇಂತಹ ನಿರೀಕ್ಷೆಯ ಸಚಿವ ಬಿ ಶ್ರೀರಾಮುಲುಗೆ ಬಿಗ್ ಶಾಕ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಈಗ ಇರುವ ಉಪ ಮುಖ್ಯಮಂತ್ರಿ ಸ್ಥಾನವನ್ನು ಹಾಗೆಯೇ ಮುಂದುವರೆಸಲಾಗುತ್ತದೆ. 4ನೇ ಡಿಸಿಎಂ ಹುದ್ದೆಯ ಸೃಷ್ಠಿ ಪ್ರಶ್ನೆಯೇ ಇಲ್ಲ. ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿಯ ಮೂವರು ಶಾಸಕರಿಗೂ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಚಿವ ಬಿ ಶ್ರೀರಾಮುಲು ಆಸೆಗೆ ತಣ್ಣೀರು ಎರಚಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions