Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Facebook Twitter Instagram
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Home»KARNATAKA»Good News: ನಾಳೆ ಬಿಬಿಎಂಪಿ ವ್ಯಾಪ್ತಿಯ ‘108 ನಮ್ಮ ಕ್ಲಿನಿಕ್’ಗೆ ಸಿಎಂ ಬೊಮ್ಮಾಯಿ ಚಾಲನೆ: ಈ ಎಲ್ಲಾ ಸೇವೆಗಳು ಉಚಿತವಾಗಿ ಲಭ್ಯ
    KARNATAKA

    Good News: ನಾಳೆ ಬಿಬಿಎಂಪಿ ವ್ಯಾಪ್ತಿಯ ‘108 ನಮ್ಮ ಕ್ಲಿನಿಕ್’ಗೆ ಸಿಎಂ ಬೊಮ್ಮಾಯಿ ಚಾಲನೆ: ಈ ಎಲ್ಲಾ ಸೇವೆಗಳು ಉಚಿತವಾಗಿ ಲಭ್ಯ

    By kannadanewsliveFebruary 06, 5:23 pm

    ಬೆಂಗಳೂರು : ಆರೋಗ್ಯ ವಲಯದ ಮೂಲಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 108 ‘ನಮ್ಮ ಕ್ಲಿನಿಕ್’ ಗಳಿಗೆ ( Namma Clinic ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ತಿಳಿಸಿದ್ದಾರೆ.

    ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿಪುರ ವಾರ್ಡ್ ನಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸಲಾಗುತ್ತಿದೆ. ಇದೇ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಉಳಿದ 107 ಕ್ಲಿನಿಕ್ ಗಳಿಗೂ ಚಾಲನೆ ನೀಡಲಾಗುತ್ತದೆ. ಈ ದಿನದಿಂದ ಈ ಆರೋಗ್ಯ ಕೇಂದ್ರಗಳು ಜನಸೇವೆಗೆ ಮುಕ್ತವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಡಿಸೆಂಬರ್ 14, 2022 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಧಾರವಾಡದ ಬೈರದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ 100‌ ನಮ್ಮ ಕ್ಲಿನಿಕ್ ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದರು. ಸಾರ್ವಜನಿಕರಿಗೆ ನಮ್ಮ ಕ್ಲಿನಿಕ್ ಗಳಲ್ಲಿ ದೊರೆಯುವ ಸೇವೆಗಳು ಮತ್ತು ಉಪಯೋಗಗಳ ಕುರಿತು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದಾಗ, ಜನರು ಸಂತೋಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದರು. ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್ ಗಳು ಆರೋಗ್ಯ ಆರೈಕೆಯಲ್ಲಿ ಹೊಸ ಆಯಾಮ ಸೃಷ್ಟಿಸುತ್ತಿವೆ ಎಂದು ಹೇಳಿದರು.

    ನಮ್ಮ ಕ್ಲಿನಿಕ್ ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ 438 “ನಮ್ಮ ಕ್ಲಿನಿಕ್” ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ನಗರ ಪ್ರದೇಶದ ಬಡವರು, ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಇದು ಸಂಜೀವಿನಿಯಾಗಲಿದೆ ಎಂದು ಹೇಳಿದರು.

    15-20 ಸಾವಿರ ಜನಸಂಖ್ಯೆಗೆ ಒಂದು ಕ್ಲಿನಿಕ್

    ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ, ಪ್ರತಿ 50,000 ಜನಸಂಖ್ಯೆಗೆ ಒಂದರಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 15 ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ 15 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಮತ್ತು ಉಳಿದ ಜಿಲ್ಲೆಗಳಲ್ಲಿ 195 “ನಮ್ಮ ಕ್ಲಿನಿಕ್” ಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

    ರೆಫರಲ್ ಸೇವೆಯೂ ಇದೆ

    “ನಮ್ಮ ಕ್ಲಿನಿಕ್”ಗಳಲ್ಲಿ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಇವು ಸಂಪರ್ಕ ಕಲ್ಪಿಸುತ್ತಿವೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗುಲುವ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸಲಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಯಾವೆಲ್ಲಾ ಸೇವೆಗಳು ಇರಲಿವೆ?

    ನಮ್ಮ ಕ್ಲಿನಿಕ್ ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಇರಲಿದ್ದಾರೆ. ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ಇಲ್ಲಿ ಲಭ್ಯವಿದ್ದು, ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ, ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ, ಬಾಯಿ ಆರೋಗ್ಯ ಸೇವೆಗಳು, ನೇತ್ರ ಹಾಗೂ ಕಿವಿ, ಮೂಗು , ಗಂಟಲು ಆರೋಗ್ಯ ಆರೈಕೆ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ, ವೃದ್ಧಾಪ್ಯ ಆರೈಕೆ, ಉಪಶಮನಕಾರಿ ಆರೈಕೆ ಸೇವೆ, ಸುಟ್ಟ ಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವ್ಯೆದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ , ಪ್ರಯೋಗ ಶಾಲಾ ಸೇವೆಗಳು ಮತ್ತು ಚಿಕಿತ್ಸೆ ದೊರೆಯಲಿದೆ. ಟೆಲಿ ಕನ್ಸಲ್ಟೇಷನ್ ಸೇವೆಗಳು, ಕ್ಷೇಮ ಚಟುವಟಿಕೆ, ಉಚಿತ ರೆಫರಲ್ ಸೇವೆಗಳು ಸಹ ದೊರೆಯಲಿವೆ ಎಂದರು.

    ಸಮರ್ಪಕ ವ್ಯವಸ್ಥೆ

    ನಮ್ಮ ಕ್ಲಿನಿಕ್ ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ. 1,000 ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿವೆ. ಆಸ್ಪತ್ರೆ ಸಿಬ್ಬಂದಿ, ಮಹಿಳೆ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ವಿವರಿಸಿದ್ದಾರೆ.

    BIG NEWS: ಪೇಶ್ವೆ ಡಿಎನ್ ಎ ವ್ಯಕ್ತಿ ಬಗ್ಗೆ ಹೇಳಿದ್ದೇನೆಯೇ ಹೊರತು ಬ್ರಾಹ್ಮಣರನ್ನು ನಿಂದಿಸಿಲ್ಲ- ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ

    BIGG NEWS: ಕುಮಾರಸ್ವಾಮಿ ಆರೋಗ್ಯ ಲೆಕ್ಕಿಸದೇ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ: ರೇವಣ್ಣ ಭಾವುಕ


    Bengaluru news namma clinic
    best web service company
    Share. Facebook Twitter LinkedIn WhatsApp Email

    Related Posts

    BIGG NEWS : ಡಿನೋಟಿಫಿಕೇಷನ್ ಪ್ರಕರಣದಲ್ಲಿ `BSY’ ಗೆ ಬಿಗ್ ರಿಲೀಫ್ : ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು

    April 02, 8:10 am
    siddaramaiah 1

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    April 02, 7:47 am

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am
    Recent News

    BIG NEWS : ಜನನ ದರ ಹೆಚ್ಚಿಸಲು ʻಚೀನಾʼ ಹೆಣಗಾಟ: ʻಪ್ರೀತಿಯಲ್ಲಿ ಬೀಳಲುʼ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ರಜೆ!

    April 02, 8:23 am

    BIGG NEWS : ಡಿನೋಟಿಫಿಕೇಷನ್ ಪ್ರಕರಣದಲ್ಲಿ `BSY’ ಗೆ ಬಿಗ್ ರಿಲೀಫ್ : ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು

    April 02, 8:10 am

    BIG NEWS : ಹಿಜಾಬ್ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ: ಇರಾನ್‌ನ ನ್ಯಾಯಾಂಗ ಮುಖ್ಯಸ್ಥ ಎಚ್ಚರಿಕೆ

    April 02, 8:05 am
    siddaramaiah 1

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    April 02, 7:47 am
    State News
    KARNATAKA

    BIGG NEWS : ಡಿನೋಟಿಫಿಕೇಷನ್ ಪ್ರಕರಣದಲ್ಲಿ `BSY’ ಗೆ ಬಿಗ್ ರಿಲೀಫ್ : ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು

    By kannadanewsliveApril 02, 8:10 am0

    ಬೆಂಗಳೂರು : ಭೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಗ್ ರಿಲೀಫ್ ಸಿಕ್ಕಿದ್ದು, ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು…

    siddaramaiah 1

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    April 02, 7:47 am

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2023 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.