• STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Facebook Twitter Instagram
Kannada | Kannada News | Karnataka News | India NewsKannada | Kannada News | Karnataka News | India News
  • STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Home»Uncategorized»don't tick»BREAKING NEWS : ರಾಜ್ಯಮಟ್ಟದ ‘ವಿಜ್ಞಾನ ಮೇಳ’ಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ |Science fair
don't tick

BREAKING NEWS : ರಾಜ್ಯಮಟ್ಟದ ‘ವಿಜ್ಞಾನ ಮೇಳ’ಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ |Science fair

By KNN IT TEAMJanuary 27, 11:23 am

ಬೆಂಗಳೂರು : ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಇಂದಿನಿಂದ 2 ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ರಾಜ್ಯ ಮಟ್ಟದ ವಿಜ್ಞಾನ ಮೇಳವನ್ನು(Science Exhibition) ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಸುಪ್ತಚೇತನದಲ್ಲಿರುವ ವೈಜ್ಞಾನಿಕ ಮನೋಭವಾವನೆ, ಪ್ರತಿಭೆಯನ್ನು ಪ್ರೋತ್ಸಾಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವರುಗಳು, ಶಾಸಕರುಗಳು, ಸಂಸದರು ಹಾಗೂ ಇನ್ನಿತರೆ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಈ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಮಾಹಿತಿ ತಂತ್ರಜ್ಞಾನ ಹಾಗೂ ಇನ್ನಿತರೆ ಕ್ಷೇತ್ರಗಳಿಗೆ ಸಂಬಂಧಿಸಿದ ನಾವಿನ್ಯಯುತ ಪ್ರಯೋಗಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಿದ್ದಾರೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ KREIS ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಒಂದು ಶಾಲೆಯನ್ನು ಆಯಾ ಕ್ಷೇತ್ರದ ಶಾಸಕರ ಮಾರ್ಗದರ್ಶನದಲ್ಲಿ, ಅಧಿಕಾರಿಗಳು ಮತ್ತು ಸಂಪನ್ಮೂಲ ತಂಡದ ಮೂಲಕ ಆಯ್ಕೆ ಮಾಡಲಾಗಿದ್ದು, ಆಯ್ಕೆಗೊಂಡ ಶಾಲೆಯು ರಾಜ್ಯಮಟ್ಟದ ಪ್ರದರ್ಶದಲ್ಲಿ ಭಾಗವಹಿಸಲಿದೆ. ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಸತಿ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಈ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತಿಯೊಂದು ಶಾಲೆಯಿಂದ 5 ವಿದ್ಯಾರ್ಥಿಗಳು, ಒಬ್ಬರು ಪ್ರಾಂಶುಪಾಲರು ಮತ್ತು ಒಬ್ಬ ಶಿಕ್ಷಕರು ಒಟ್ಟು ಏಳು ಜನ ಭಾಗವಹಿಸಲಿದ್ದು, ಒಟ್ಟಾರೆ 1500 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಾದ ISRO, IISc, Agasthya Foundation, Bharatha Jnana Vignana samiti, Nehru planetarium, Vishveshvaraiah Museum etc ಇವರಿಂದ ಮಕ್ಕಳು ಹಾಗೂ ಶಿಕ್ಷಕರ ಜ್ಞಾನಾರ್ಜನೆಗೆ ಪೂರಕವಾದ ವಿಜ್ಞಾನದ ಪ್ರಯೋಗಳ ಪ್ರದರ್ಶನ/ಪ್ರಾತ್ಯಕ್ಷಿಕೆ ಯನ್ನು ಏರ್ಪಡಿಸಲಾಗಿದೆ. ಈ ವಿಜ್ಞಾನ ಮೇಳವನ್ನು ವೀಕ್ಷಿಸಲು ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಾಸಕ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪುರಸ್ಕಾರ : ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ಶಾಲೆಗೆ ರೂ.5.00 ಲಕ್ಷ, ದ್ವಿತೀಯ ಬಹುಮಾನ ಪಡೆದ ಶಾಲೆಗೆ ರೂ.3.00 ಲಕ್ಷ ಮತ್ತು ತೃತೀಯ ಬಹುಮಾನ ಪಡೆದ ಶಾಲೆಗೆ ರೂ.2.00 ಲಕ್ಷಗಳನ್ನು ನೀಡಲಾಗುವುದು. ಅಲ್ಲದೆ ಪ್ರತಿ ಕಂದಾಯ ವಿಭಾಗದಲ್ಲಿನ ಅತ್ಯುತ್ತಮ ಪ್ರಯೋಗಕ್ಕೆ ಮೊದಲನೇ ಬಹುಮಾನ ಪಡೆಯುವ ಶಾಲೆಗೆ ರೂ.3.00 ಲಕ್ಷ, ಎರಡನೇ ಬುಹುಮಾನ ಪಡೆಯುವ ಶಾಲೆಗೆ ರೂ.2.00 ಲಕ್ಷ ಮತ್ತು 3ನೇ ಬುಹುಮಾನ ಪಡೆಯುವ ಶಾಲೆಗೆ ರೂ.1.00 ಲಕ್ಷ ನೀಡಲಾಗುತ್ತಿದ್ದು, ಒಟ್ಟಾರೆ ರೂ.34.00 ಲಕ್ಷ ಮೊತ್ತದ ನಗದು ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರದೊಡನೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

BIGG NEWS : 5ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಧರಣಿ : ಚಳಿಯಲ್ಲೂ ರಸ್ತೆಯಲ್ಲೇ ಮಲಗಿದ ಮಹಿಳೆಯರು

GOOD NEWS : ರಾಜ್ಯದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

blank
Share. Facebook Twitter LinkedIn WhatsApp Email

Related Posts

ಮೈಸೂರು-ಬೆಂಗಳೂರಲ್ಲಿ ಪ್ರತ್ಯೇಕ ಬೈಕ್ ಅಪಘಾತ : ಸ್ಥಳದಲ್ಲೇ ಮೂವರ ಸವಾರರ ಸಾವು

October 05, 9:09 am

ಹಣಕಾಸಿನ ಸಮಸ್ಯೆ ದೂರವಾಗ ಬೇಕೆಂದರೆ ನವರಾತ್ರಿಯ ದಿನಗಳಲ್ಲಿ ಈ ರೀತಿ ಮಾಡಿ.

October 05, 9:08 am

ಕಾವೇರಿ ವಿವಾದ: ಇಂದು ಬೆಂಗಳೂರಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ Rally, KRS ಡ್ಯಾಂಗೆ ಮುತ್ತಿಗೆ

October 05, 8:58 am
Recent News
blank

WATCH VIDEO: 20 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಸಿಲುಕಿದ 5 ವರ್ಷ ಬಾಲಕಿ… ಮುಂದೇನಾಯ್ತು ನೋಡಿ

October 05, 9:14 am
blank

ಮೈಸೂರು-ಬೆಂಗಳೂರಲ್ಲಿ ಪ್ರತ್ಯೇಕ ಬೈಕ್ ಅಪಘಾತ : ಸ್ಥಳದಲ್ಲೇ ಮೂವರ ಸವಾರರ ಸಾವು

October 05, 9:09 am
blank

ಹಣಕಾಸಿನ ಸಮಸ್ಯೆ ದೂರವಾಗ ಬೇಕೆಂದರೆ ನವರಾತ್ರಿಯ ದಿನಗಳಲ್ಲಿ ಈ ರೀತಿ ಮಾಡಿ.

October 05, 9:08 am
blank

ಸಿಕ್ಕಿಂನಲ್ಲಿ ಮೇಘಸ್ಪೋಟ : ಅ.8ರವರೆಗೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

October 05, 8:59 am
State News
don't tick

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

By KNN IT TEAMApril 01, 9:03 am0

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ…

blank

BIGG NEWS : ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ : ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ

April 01, 8:57 am
blank

BIGG NEWS : `SSLC’ ಪರೀಕ್ಷೆ : ಹಾಜರಾತಿ ಕೊರತೆಯಿಂದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು!

April 01, 8:23 am
blank

BIGG NEWS : ಹೊಸಕೋಟೆಯ ಮೇಡಹಳ್ಳಿಯಲ್ಲಿ ಅಗ್ನಿ ದುರಂತ : ಚಿಕಿತ್ಸೆ ಫಲಿಸದೇ 7 ಕಾರ್ಮಿಕರು ಸಾವು!

April 01, 8:06 am
blank

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US
blank blank blank blank

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.