ಬೆಂಗಳೂರು : ಒಕ್ಕಲಿಗ, ವೀರಶೈವ ಪಂಚಮಸಾಲಿಗೆ ಮೀಸಲಾತಿ ಹೆಚ್ಚಳ ಮಾಡಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. 2 ಸಿಗೆ ಶೇಕಡ 6 ರಷ್ಟು ಹಾಗೂ 2 ಡಿಗೆ ಶೇಕಡ 7 ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆಯ ಬಳಿಕ ಸ್ವತಹ ಸಂಪುಟ ನಿರ್ಣಯಗಳನ್ನು ಸುದ್ದಿಗೋಷ್ಠಿ ನಡೆಸಿ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿ, ಸಮುದಾಯಗಳ ಆಶೋತ್ತರಗಳು ಹೆಚ್ಚಿವೆ. ಎಸ್ಸಿ,ಎಸ್ಟಿ ರಿಸರ್ವೇಶನ್ ಹೆಚ್ಚಳ ಮಾಡಿದ್ದೇವೆ. ಅಸೆಂಬ್ಲಿಯಲ್ಲಿ ಕಾನೂನು ಮಾಡಿದ್ದೇವೆ. ಈಗ ಆ ಹೆಚ್ಚಳ ಅನುಷ್ಠಾನದಲ್ಲಿದೆ. 9 ಶೆಡ್ಯೂಲ್ ಗೆ ನಾವು ಕಳಿಸಿದ್ದೇವೆ ಎಂದರು.
ಎಸ್ಸಿಯೊಳಗೆ 101 ಕ್ಯಾಸ್ಟ್ ಗಳಿವೆ. ಟಚಬಲ್, ಅನ್ ಟಚ್ಚಬಲ್ ನಾವು ನೋಡಿದ್ದೇವೆ. ಇತ್ತೀಚೆಗೆ ಅನ್ ಟಚ್ಚಬಲ್ ಸೇರಿದ್ದಾರೆ. ಬಂಜಾರ, ಕೊರಮ, ಕೊರಚ ಟಚ್ಚಬಲ್ ಕಮ್ಯುನಿಟಿಯಾಗಿದೆ. ಇವರಿಗೆ ನಮ್ಮನ್ನ ತೆಗೆಯುತ್ತಾರೆಂಬ ಆತಂಕವಿತ್ತು. ಬೋವಿ, ಲಂಬಾಣಿ, ಕೊರಚ ಒರಿಜಿನಲ್ ಶೆಡ್ಯೂಲ್ ಕಾಸ್ಟ್ ಆಗಿತ್ತು. ಇದು ಮಹಾರಾಜರ ಕಾಲದಲ್ಲಿತ್ತು. ಸ್ವಾತಂತ್ರ್ಯ ಬಂದ ನಂತರ ಅವರು ಅಲ್ಲೇ ಇದ್ದಾರೆ. ಎಸ್ಸಿ ಪಟ್ಟಿಯಲ್ಲೇ ಅವರಿದ್ದಾರೆ. ಕೇಂದ್ರಕ್ಕೆ ನಾವು ಅದನ್ನ ಶಿಫಾರಸು ಮಾಡಿದ್ದೇವೆ. ಒಳ ಮೀಸಲಾತಿಯಲ್ಲಿಭಿನ್ನಾಬಿಪ್ರಾಯಗಳು ಇದ್ವು. ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೆವು. ಎಸ್ಸಿಯಲ್ಲಿ ಈಗ ಎಲ್ಲರಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗಬೇಕಾದರೆ 3412೨ ಅನ್ವಯ ಆಗಬೇಕು ಎಂದರು.
BIG NEWS: ‘ಸಿಎಂ ಬೊಮ್ಮಾಯಿ’ ನೇತೃತ್ವದ ಕೊನೆಯ ‘ಸಚಿವ ಸಂಪುಟ ಸಭೆ’ಯಲ್ಲಿ ಮಹತ್ವದ ನಿರ್ಣಯ: ಹೀಗಿದೆ ಹೈಲೈಟ್ಸ್
BIG NEWS: ‘ಸಿಎಂ ಬೊಮ್ಮಾಯಿ’ ನೇತೃತ್ವದ ಕೊನೆಯ ‘ಸಚಿವ ಸಂಪುಟ ಸಭೆ’ಯಲ್ಲಿ ಮಹತ್ವದ ನಿರ್ಣಯ: ಹೀಗಿದೆ ಹೈಲೈಟ್ಸ್