ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ( Cabinet Expansion ) ಬಗ್ಗೆ ರಾಜಕೀಯ ವಿದ್ಯಮಾನ ಗರಿಗೆದರಿವೆ. ನಾನು ಸಚಿವ ಸ್ಥಾನದ ಆಕಾಂಕ್ಷಿ, ನನಗೇನು ಸಚಿವನಾಗೋ ಅರ್ಹತೆ ಇಲ್ಲವಾ ಅಂತ ಕೆಲವು ಶಾಸಕರು ಅಂದ್ರೇ, ಮತ್ತೆ ಕೆಲವರು ಸಂಪುಟ ವಿಸ್ತರಣೆ ಈಗಲೇ ಆಗಬೇಕು ಅಂತ ಒತ್ತಾಯಿಸಿದ್ದಾರೆ. ಇದರ ನಡುವೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಏನ್ ಹೇಳಿದ್ರು ಅಂತ ಮುಂದೆ ಓದಿ..
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಸಚಿವ ಸಂಪುಟದ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾಲ್ಕು ಸ್ಥಾನಗಳ ಖಾಲಿ ಇದ್ದಾವೆ. ಸಹಜವಾಗಿ ಸಚಿವರಾಗಬೇಕು ಎನ್ನುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ. ಅದನ್ನು ಯಾವಾಗ ಮಾಡಬೇಕು. ಯಾವಾಗ ಮಾಡಬಾರದು ಎನ್ನುವ ಬಗ್ಗೆ ಪಕ್ಷದ ವರಿಷ್ಠರ ಗಮನದಲ್ಲಿದೆ ಎಂದರು.
‘ಮಗನ ಸಾವಿನ ಸುದ್ದಿ’ ಕೇಳಿ ತಾಯಿಯೂ ನಿಧನ: ಸಾವಿನಲ್ಲೂ ಒಂದಾದ ‘ತಾಯಿ-ಮಗ’
ಬಿಜೆಪಿ ಹೈಕಮಾಂಡ್ ಖಾಲಿ ಇರುವಂತ ಸಚಿವ ಸ್ಥಾನಕ್ಕೆ ತುಂಬಿಕೊಳ್ಳೋ ಸಂಬಂಧ ನನ್ನನ್ನು ಕರೆದ್ರೇ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಆ ಸಂದರ್ಭ ಬಂದಾಗ ಮಾತನಾಡೋದಾಗಿ ತಿಳಿಸಿದರು.
BIGG NEWS: ನನಗೇನು ಸಚಿವನಾಗು ಅರ್ಹತೆ ಇಲ್ಲವಾ.? : ಸಚಿವಸ್ಥಾನಕ್ಕಾಗಿ ಸಿಡಿದೆದ್ದ ಬಿಜೆಪಿ ಶಾಸಕ