ದೆಹಲಿ: ರಾಜ್ಯದಲ್ಲಿ ಹಿಜಾಬ್ ವಿವಾದ ( Hijab Row ) ತಾರಕಕ್ಕೇರಿದೆ. ಇದೇ ಸಂದರ್ಭದಲ್ಲಿ ದೆಹಲಿಗೆ ತೆರಳಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ), ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಂತಿ ಕದಡುವಂತ ಕೆಲಸವನ್ನು ಮಾಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ.
ಶಿವಮೊಗ್ಗ: ಸದ್ಯಾದ್ರಿ ಕಾಲೇಜಿನಲ್ಲಿ ತಾರಕಕ್ಕೇರಿದ ಹಿಜಾಬ್-ಕೇಸರಿ ಶಾಲು ಸಂಘರ್ಷ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಜಾಬ್ ವಿವಾದ ಕುರಿತಂತೆ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಬರುವವರೆಗೆ ವಿದ್ಯಾರ್ಥಿಗಳು ಶಾಂತಿಯನ್ನು ಕದಡುವಂತ ಕೆಲಸ ಮಾಡಬಾರದು ಎಂಬುದಾಗಿ ತಿಳಿಸಿದರು.
‘ಪಬ್’ನಲ್ಲಿ ‘ಕನ್ನಡ ಕಡಗಣನೆ’ ಆರೋಪ: ‘ಕನ್ನಡಿಗರ ಕ್ಷಮೆ’ ಕೋರಿದ ‘ಡಿಜೆ ಸಿದ್ಧಾರ್ಥ್’
ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಹೊರಡಿಸಿರುವಂತ ಸಮವಸ್ತ್ರ ಕಡ್ಡಾಯ ನಿಯಮ ಪಾಲಿಸಬೇಕು. ನಾಳೆ ನ್ಯಾಯಾಲಯದಿಂದ ತೀರ್ಪು ಬರಲಿದೆ. ಆ ನಂತ್ರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಪ್ರಸ್ತುತ ಯಾವ ನಿಯಮ ಇದೆಯೋ ಆ ನಿಯಮ ಪಾಲಿಸುವಂತೆ ಮವಿ ಮಾಡಿದ್ದಾರೆ.