ಬೆಂಗಳೂರು: ಉದ್ಯಮಿ ವಿಜಯ್ ಸಂಕೇಶ್ವರ್ ಜೀವನ ಚರಿತ್ರೆ ಆಧಾರಿತ ವಿಜಯಾನಂದ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ನಡುವೆ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಯದಲ್ಲಿ ವಿಜಯ್‌ ಸಂಕೇಶ್ವರ್‌ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಹೊಗಳಿದ ಸನ್ನಿವೇಶ ಕಂಡು ಬಂತು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ವಿಜಯ್‌ ಸಂಕೇಶ್ವರ್‌ ಅವರು ಹೊಸದಾಗಿ ಏನನ್ನಾದರು ಮಾಡುತ್ತಲೇ ಇರುತ್ತಾರೆ, ಇದಲ್ಲದೇ ನಾವು ಯಾವುದನ್ನು ಬೇಡ ಎನ್ನುತ್ತೇವೋ ಅದನ್ನೇ ಅವರು ಮಾಡಿ ತೀರುತ್ತಾರೆ ಅಂತ ಅವರ ಸಾಹಸದ ಗುಣವನ್ನು ಕೊಂಡಿದರು. ಇದೇ ವೇಳೆ ಅವರು ಮಾತನಾಡುತ್ತ, ಐಐಎಂನಲ್ಲಿ ವಿಜಯ್‌ ಸಂಕೇಶ್ವರ್‌ ಅವರ ವ್ಯಕ್ತಿತ್ವ ಮಕ್ಕಳಗೆ ಪಾಠವಾಗಬೇಕು, ಅಂತ ಹೇಳಿದ ಅವರು ಸಿನಿಮಾ ಯಶಸ್ವಿ ಕಾಣಲಿ ಅಂತ ಹಾರೈಸಿದರು.

ಅಂದ ಹಾಗೇ ಈ ಸಿನಿಮಾ ಇದೇ . ಡಿಸೆಂಬರ್ 9ರಂದು ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರ ಟ್ರೈಲರ್ ಈಗಾಗಲೇ ಪಂಚ ಭಾಶೆಗಳಲ್ಲಿ ತೆರೆ ಕಂಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ನಾಯಕನಾಗಿ ನಿಹಾಲ್, ನಾಯಕಿಯಾಗಿ ಸಿರಿ ಪ್ರಹ್ಲಾದ್, ಭರತ್ ಬೋಪ್ಪಣ್ಣ, ಅರ್ಚನಾ ಕೊಟ್ಟಿಗೆ, ರಾಜೇಶ್ ನಟರಂಗ ಮಾತನಾಡಿದರು. ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಿನಿಮಾವನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಅವರು ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೀರ್ತನ್​ ಪೂಜಾರಿ ಛಾಯಾಗ್ರಹಣ, ಹೇಮಂತ್​ ಕುಮಾರ್​ ಡಿ. ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.

Share.
Exit mobile version