ಕುಲು(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಮಣಿಕರಣ್ ಕಣಿವೆಯಲ್ಲಿ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹ ಉಂಟಾಗಿದೆ.
ಕುಲು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹಠಾತ್ ಪ್ರವಾಹ ಉಂಟಾಗಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
#WATCH | Himachal Pradesh: Flash flood hits Manikaran valley of Kullu district due to heavy rainfall, dozens of houses and camping sites damaged in Choj village: SP Kullu Gurdev Sharma pic.twitter.com/NQhq8o8JXC
— ANI (@ANI) July 6, 2022
ಹಠಾತ್ ಪ್ರವಾಹದಿಂದಾಗಿ ಚೋಜ್ ಕಣಿವೆಯಲ್ಲಿ ಹತ್ತಾರು ಮನೆಗಳನ್ನು ಮುಳುಗಿಸಿವೆ. ಈ ಪ್ರದೇಶವು ಪ್ರಾಥಮಿಕವಾಗಿ ಕ್ಯಾಂಪಿಂಗ್ ಸೈಟ್ಗಳ ಕೇಂದ್ರವಾಗಿತ್ತು. ಸುದ್ದಿ ಸಂಸ್ಥೆ ಎಎನ್ಐ ಮಣಿಕರಣ್ ಕಣಿವೆಯಿಂದ ಮೇಘಸ್ಫೋಟದ ವಿಡಿಯೋವನ್ನು ಹಂಚಿಕೊಂಡಿದೆ.