ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವರು ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನಾ ಸಂಬಂಧಿಕರಿಗೆ ತನ್ನ ಸಾವಿಗೆ ಸಚಿವ ಕೆ.ಎಸ್ ಈಶ್ವರಪ್ಪ ಎಂಬುದಾಗಿ ಸಂದೇಶ ಕಳುಹಿಸಿದ್ದರು. ಈ ಮೂಲಕ ಡೆತ್ ನೋಟ್ ನಲ್ಲಿ ಈಶ್ವರಪ್ಪ ಹೆಸರನ್ನು ಉಲ್ಲೇಖಿಸಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿರುವಂತ ಪೊಲೀಸರು, ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಮೂಲಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ.

ರಾಜ್ಯದ ಕಾರಾಗೃಹಗಳಲ್ಲಿನ ಖೈದಿಗಳ ಕೂಲಿ ಮೊತ್ತ ರೂ.200ಕ್ಕೆ ಹೆಚ್ಚಳ – ಗೃಹ ಸಚಿವ ಅರಗ ಜ್ಞಾನೇಂದ್ರ

ಈಶ್ವರಪ್ಪ ವಿರುದ್ಧ ಗುತ್ತಿಗೆಯಲ್ಲಿ ಕಮೀಷನ್ ಆರೋಪ ಮಾಡುವ ಮೂಲಕ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸುದ್ದಿಯಾಗಿದ್ದರು. ಇದೇ ಕಾರಣದಿಂದ ಅವರು ಪ್ರಧಾನಿ, ಸೇರಿದಂತೆ ಕೇಂದ್ರ ಸಚಿವರಿಗೂ ಗುತ್ತಿಗೆ ಕಮೀಷನ್ ವಿರುದ್ಧ ದೂರು ನೀಡಿದ್ದರು. ಆ ಬಳಿಕ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಆತ್ಮಹತ್ಯೆಗೂ ವಾಟ್ಸಾಪ್ ಮೂಲಕ ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂಬುದಾಗಿ ಡೆತ್ ನೋಟ್ ಸಂದೇಶ ಕಳುಹಿಸಿದ್ದರು.

BREAKING NEWS : ಖ್ಯಾತ ಟಾಲಿವುಡ್‌ ನಟ ‘ಪವನ್ ಕಲ್ಯಾಣ್’ ಆರೋಗ್ಯದಲ್ಲಿ ಏರುಪೇರು ; ಅಭಿಮಾನಿಗಳಲ್ಲಿ ಆತಂಕ

ಇದೇ ಪ್ರಕಣರದಲ್ಲಿ ಸಚಿವಸ್ಥಾನಕ್ಕೆ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದಂತ ಉಡುಪಿಯ ಪೊಲೀಸರು, ಈಶ್ವರಪ್ಪ ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ. ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂಬುದಾಗಿ ವರದಿಯಲ್ಲಿ ಉಲ್ಲೇಧಿಸಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಈ ಮೂಲಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ.

‘ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ’ದಿಂದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಈ ಕುರಿತಂತೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನ್ಯಾಯಾಲಯಕ್ಕೆ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿರೋ ವಿಷಯ ಕೇಳಿ ಸಂತೋಷವಾಗಿದೆ. ನಾನು ತಪ್ಪು ಮಾಡಿಲ್ಲವೆಂದು ಮನೆದೇವ್ರು ಚೌಡೇಶ್ವರಿ ಮೇಲೆ ಆಣೆ ಮಾಡಿ ಹೇಳಿದ್ದೆನು. ಆ ತಾಯಿಯ ಆಶೀರ್ವಾದದಿಂದ ಕೇಸ್ ನಲ್ಲಿ ಖುಲಾಸೆಯಾಗಿದೆ. ಆರೋಪದಿಂದ ಮುಕ್ತನಾಗುವೆ ಎಂಬ ವಿಶ್ವಾಸವಿದೆ ಎಂಬುದಾಗಿ ಹೇಳಿದ್ದಾರೆ.

Share.
Exit mobile version