ಕೋಲಾರ: RL ಜಾಲಪ್ಪ ನಿಧನದ ನಂತ್ರ, ಕುಟುಂಬಸ್ಥರ ಜಗಳ ಈಗ ಬೀದಿಗೆ ಬಂದಿದೆ. ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದ್ದು, ಜಾಲಪ್ಪ ಕಾಲೇಜು ಬಳಿ ಭಾರೀ ಹೈಡ್ರಾಮವೇ ನಡೆಯುತ್ತಿದೆ. ಪ್ರತಿಭಟನಾ ನಿರತ ಆರ್ ಎಲ್ ಜಾಲಪ್ಪ ಮಕ್ಕಳು, ಬೆಂಬಲಿಗರನ್ನು ಪೊಲೀಸರು ಲಾಠಿ ಚಾರ್ಜ್ ಮಾಡಿ ಸ್ಥಳದಿಂದ ಕಳುಹಿಸೋ ಪ್ರಯತ್ನಕ್ಕೆ ಇಳಿದಿದ್ದಾರೆ.
BIGG BREAKING NEWS: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ನಿವೃತ್ತಿ ಘೋಷಣೆ
ಕೋಲಾರ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಆರ್ ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆ. ಈ ಸಂಸ್ಥೆಯ ಅಡಿಯಲ್ಲಿನ ದೇವರಾಜು ಅರಸು ಶಿಕ್ಷಣ ಸಂಸ್ಥೆ ಅಧ್ಯಕ್ಷರ ಹುದ್ದೆಯ ಜಗಳ, ಈಗ ಬೀದಿಗೆ ಬಿದ್ದಿದೆ. ಜಾಲಪ್ಪ ಅವರ ಪುತ್ರರು ಹಾಗೂ ಪುತ್ರಿಯರ ನಡುವೆ ಜಗಳ ನಡೆಯುತ್ತಿದೆ. ದೇವರಾಜು ಅರಸು ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಬಿ.ಹೆಚ್.ನಾಗರಾಜ್ ಆಯ್ಕೆ ವಿಚಾರವಾಗಿ ಮತ್ತಷ್ಟು ತಾರಕ್ಕೇರಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಜಾಲಪ್ಪ ಕಾಲೇಜು ಬಳಿಯಲ್ಲಿ ಆರ್ ಎಲ್ ಜಾಲಪ್ಪ ಮಕ್ಕಳು, ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು-ಪ್ರತಿಭಟನಾ ನಿರತರ ನಡುವೆ ವಾಗ್ವಾದ ಕೂಡ ನಡೆದಿದೆ. ಈ ವೇಳೆ ಪ್ರತಿಭಟನೆ ತಾರಕ್ಕೆ ಏರಿದಂತ ಸಂದರ್ಭದಲ್ಲಿ ಲಾಠಿ ಚಾರ್ಜ್ ಕೂಡ ನಡೆಸಲಾಗಿದೆ. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮೀಪತಿ ತಲೆಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ. ಜೊತೆಗೆ ಪೊಲೀಸ್ ಅಧಿಕಾರಿಯೊಬ್ಬರಿಗೂ ಪ್ರತಿಭಟನೆ ಸಂದರ್ಭದಲ್ಲಿ ಕಾಲಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ.