ಚಾಮರಾಜನಗರ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಸಾಮಾನ್ಯವಾಗಿ ದಸರಾದಲ್ಲಿ ಹಿಂದೂಗಳು ಆಯುಧ ಪೂಜೆ ಮಾಡುವುದು ಸಹಜ. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರೂ ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಆಯುಧ ಪೂಜೆಯನ್ನು ಆಚರಿಸಿ ಗಮನ ಸೆಳೆದರು.

BIG NEWS: ಮೇಸ್ತ ಚಿಕ್ಕ ಹುಡುಗ ಆಕಸ್ಮಿಕವಾಗಿ ಸಾವನ್ನಪ್ಪಲು ಸಾಧ್ಯವಿಲ್ಲ; ತನಿಖೆ ಬಗ್ಗೆ ಮಾಹಿತಿ ಪಡೆಯುತ್ತೇನೆ; ಶೋಭಾ ಕರಂದ್ಲಾಜೆ

 

ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರೂ ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಆಯುಧ ಪೂಜೆಯನ್ನು ಆಚರಿಸಿದ್ದಾರೆ. ಚರ್ಚ್​ನ ಪಾದ್ರಿಗಳಾದ ಕ್ರಿಸ್ಟೋಫರ್ ಸಗಾಯರಾಜ್ ಮತ್ತು ಸೂಸೈ ರೆಜೀಸ್ ಅವರು ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಅಪಘಾತಗಳಿಂದ ಪಾರು ಮಾಡು ರಕ್ಷಕ ಏಸು ಎಂದು ಪ್ರಾರ್ಥಿಸಲಾಯಿತು‌.ಈ ಹಿಂದೆ ತಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಆ ಸಂಪ್ರದಾಯ ಬಿಡಬಾರದೆಂದು ನಾವು ಆಯುಧ ಪೂಜೆ ಮಾಡಿದ್ದೇವೆ. ಎಲ್ಲಾ ಸಮುದಾಯದ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಾನ್ ಬ್ರಿಟೋ ತಿಳಿಸಿದರು.

Share.
Exit mobile version