ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್(Zealand)ನ 41 ನೇ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್(Chris Hipkins) ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ನ್ಯೂಜಿಲೆಂಡ್‌ನ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವಾರ ಜಸಿಂಡಾ ಆರ್ಡೆರ್ನ್(Jacinda Ardern) ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ, ಕ್ರಿಸ್ ಹಿಪ್ಕಿನ್ಸ್ ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾದರು.
ಹಿಪ್ಕಿನ್ಸ್ ಮತ್ತು ಉಪ ಪ್ರಧಾನ ಮಂತ್ರಿ ಕಾರ್ಮೆಲ್ ಸೆಪುಲೋನಿ ಅವರು ಬೆಳಿಗ್ಗೆ 11.20 ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ, ಹಿಪ್ಕಿನ್ಸ್ ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವಿದಾಗಿ ಮತ್ತು ಹಣದುಬ್ಬರವನ್ನು ನಿಭಾಯಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಹಿಪ್ಕಿನ್ಸ್ 2008 ರಲ್ಲಿ ಸಂಸತ್ತಿಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು ಅವರು ಪೊಲೀಸ್, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯ ಸಚಿವರಾಗಿದ್ದರು.
BIG NEWS : ಭೂಮಿಯ ಒಳಭಾಗ ತನ್ನ ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸಿದೆ: ಅಧ್ಯಯನ
BIG NEWS : ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ʻಪಠಾಣ್ʼ ಸಿನಿಮಾ ಲೀಕ್ | ʻPathaanʼ Leaked Online
BIG NEWS : ಭೂಮಿಯ ಒಳಭಾಗ ತನ್ನ ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸಿದೆ: ಅಧ್ಯಯನ
BIG NEWS : ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ʻಪಠಾಣ್ʼ ಸಿನಿಮಾ ಲೀಕ್ | ʻPathaanʼ Leaked Online