ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವಂತ ವಾಣಿ ವಿಲಾಸ ಸಾಗರ ಅಣೆಕಟ್ಟು ( Vani vilasa Sagara Dam ) ಭರ್ತಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಡ್ಯಾಂ ಭರ್ತಿಯಾಗೋದಕ್ಕೆ ಕೇವಲ 3 ಅಡಿಗಳು ಮಾತ್ರವೇ ಬಾಕಿ ಇದೆ. ಈ ಮೂಲಕ ಹಲವು ವರ್ಷಗಳ ಬಳಿಕ ವಿವಿ ಸಾಗರ ಡ್ಯಾಂ ಭರ್ತಿಯಾಗುತ್ತಿರೋದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಇಂದಿನಿಂದ ಮಂತ್ರಾಲಯದಲ್ಲಿ ಶ್ರೀರಾಯರ 351ನೇ ಆರಾಧನಾ ಮಹೋತ್ಸವ ಆರಂಭ

ಮಾರಿಕಣಿವೆ ಡ್ಯಾಂ ( Marikanive Dam ) ಎಂಬುದಾಗಿಯೇ ಪ್ರಸಿದ್ಧಿ ಗಳಿಸಿರುವಂತ ಏಷ್ಯಾದ ಅತ್ಯಂತ ದೊಡ್ಡ ಅಣೆಕಟ್ಟು ವಿವಿ ಸಾಗರ ( VV Sagara Dam ) ಆಗಿದೆ. ಈ ಡ್ಯಾಂ ಹಿಂಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗೋದಕ್ಕೆ ಕೇವಲ 3.80 ಅಡಿ ಮಾತ್ರವೇ ಬಾಕಿ ಇದೆ.

ಇನ್ಮುಂದೆ ‘ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ’ಕ್ಕೂ ಒಂದೇ ಮಾದರಿಯ ‘ಚಾರ್ಜರ್’.! | One charger for all gadgets

ಅಂದಹಾಗೇ 129 ಅಡಿ ಗರಿಷ್ಠ ಭರ್ತಿ ಮಟ್ಟವನ್ನು ಹೊಂದಿರುವಂತ ವಿವಿ ಸಾಗರ ಡ್ಯಾಂನಲ್ಲಿ 1957ರ ಬಳಿಕ 125 ಅಡಿಗಳಷ್ಟು ನೀರು ಭರ್ತಿಯಾಗಿದೆ. 3.80 ಅಡಿಗಳು ಕೋಡಿಗೆ ಬಾಕಿ ಇದೆ. ಈ ನೀರಿನ ಮಟ್ಟ ಭರ್ತಿಯಾದ್ರೇ.. ವಾಣಿ ವಿಲಾಸ ಡ್ಯಾಂ ಸಂಪೂರ್ಣ ಭರ್ತಿಯಾದಂತೆ ಆಗಲಿದೆ. ಈ ಮೂಲಕ ಹಲವು ವರ್ಷಗಳ ಬಳಿಕ, ವಿವಿ ಸಾಗರ ಡ್ಯಾಂ ಭರ್ತಿಯಾಗಿ, ಕೋಡಿ ಬೀಳಲಿದೆ.

ವರದಿ : ವಸಂತ ಬಿ ಈಶ್ವರಗೆರೆ

Share.
Exit mobile version