ಚಿತ್ರದುರ್ಗ: ಹಿರಿಯೂರು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 25, 2023ರಂದು 6ನೇ ತಾಲೂಕು ಸಾಹಿತ್ಯ ಪರಿಷತ್ ಸಮ್ಮೇಳನವನ್ನು ನಡೆಸೋದಕ್ಕೆ ನಿರ್ಧರಿಸಲಾಗಿದೆ.
ನಿನ್ನೆ ಹಿರಿಯೂರು ತಾಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ದಿನಾಂಕ 25-02-2023ರಂದು 6ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ.
ಸಮ್ಮೇಳನಾಧ್ಯಕ್ಷರ ಆಯ್ಕೆಗಾಗಿ ಡಾ.ಮಹೇಶ್, ಹರಿಯಬ್ಬೆ ಕೆಂಚಮ್ಮ ಹಾಗೂ ಡಾ.ಜೆ ಕರಿಯಪ್ಪ ಮಾಳಗಿ ಅವರ ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಡಾ.ಜೆ ಕರಿಯಪ್ಪ ಮಾಳಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನೂ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯೂರು ತಾಲೂಕಿನ ಕಸಬಾ ಹೋಬಳಿಯ ಅಧ್ಯಕ್ಷರನ್ನಾಗಿ ಬಿಎನ್ ಶಿವಮೂರ್ತಿ, ಐಮಂಗಲ ಹೋಬಳಿಗೆ ಜೆ.ನಿಜಲಿಂಗಪ್ಪ, ಧರ್ಮಪುರ ಹೋಬಳಿಗೆ ಸಕ್ಕರ ರಂಗಸ್ವಾಮಿ ಹಾಗೂ ಜೆಜಿ ಹಳ್ಳಿ ಹೋಬಳಿಗೆ ಡಾ.ಎಸ್ ಶೇಖ್ ಮೊಹ್ಮದ್ ಆಲಿ ಅವರನ್ನು ಆಯ್ಕೆ ಮಾಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
BIGG NEWS: ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗಿಲ್ಲ :ಡಿ.ಕೆ ಸುರೇಶ್ ವಾಗ್ದಾಳಿ