ಚಿತ್ರದುರ್ಗ: ಅನಾಮಧೇಯ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಹಿರಿಯೂರು ಪೋಲಿಸರು

ಚಿತ್ರದುರ್ಗ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅನಾಥ ಶವಕ್ಕೆ ಹಿರಿಯೂರು ಗ್ರಾಮಾಂತರ ಇಲಾಖೆಯ ಎಎಸ್ಐ ಪ್ರಭುಲಿಂಗಪ್ಪ ಹಾಗೂ ಕಾನ್ಸ್ಟೇಬಲ್ ಶಶಿಧರ್ ಅವರು ಹಿರಿಯೂರಿನ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ಮೃತರ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿರುವ ಪೋಲಿಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.  ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ : ಹಿರಿಯೂರು ನಗರದ ಹೊರವಲಯದ ಚಳ್ಳಕೆರೆ ರಸ್ತೆಯ ಚಿನ್ನಯ್ಯನಹಟ್ಟಿ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಪಘಾತವಾದ ರಭಸಕ್ಕೆ … Continue reading ಚಿತ್ರದುರ್ಗ: ಅನಾಮಧೇಯ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಹಿರಿಯೂರು ಪೋಲಿಸರು