ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಜೂಜಾಟದಲ್ಲಿ ತೊಡಗಿದ್ದಂತವರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸರು ( Chitradurga District Police ) ಬಿಗ್ ಶಾಕ್ ನೀಡಿದ್ದಾರೆ. ಇಂದು ಇಸ್ಪಿಟ್ ಆಟದಲ್ಲಿ ತೊಡಗಿದ್ದಂತ 98 ಮಂದಿಯನ್ನು ಬಂಧಿಸಿ, 2.69 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಚಿತ್ರದುರ್ಗ ಜಿಲ್ಲಾ ಪೊಲೀಸ್, ಇಂದು ಜಿಲ್ಲೆಯಾಧ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ವಿಶೇಷ ದಾಳಿ ನಡೆಸಲಾಗಿದೆ. ಕಾನೂನು ಬಾಹಿರವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದಂತವರ ವಿರುದ್ಧ 18 ಪ್ರಕರಣ ದಾಖಲು ಮಾಡಿ, 98 ಮಂದಿಯನ್ನು ದಸ್ತಗಿರಿ ಮಾಡಿ, ಅವರಿಂದ 6,69,370 ರೂ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಅಂದಹಾಗೇ ಯುಗಾದಿ ಹಬ್ಬದ ದಿನ ಜೂಜಾಟ ನಿಷೇಧವಿದ್ದರೂ, ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಇಸ್ಪೀಟ್ ಆಟ ಆಡಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ 98 ಮಂದಿ ಬಂಧಿಸಿ, 18 ಪ್ರಕರಣ ದಾಖಲಿಸಿ, ಜೂಜಾಡುತ್ತಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಚಿತ್ರದುರ್ಗ ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ದಿನಾಂಕ.22.03.2023 ರಂದು ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ 98 ಜನರನ್ನು ಬಂಧಿಸಿದ್ದು , 2,69,370 /-ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.@DgpKarnataka @alokkumar6994 @igperdvg @ParashuramaKal1 @112chitradurga pic.twitter.com/qJIpZeME2w
— Chitradurga District Police (@DistrictPolice1) March 22, 2023