ನಿತೀಶ್ ಕುಮಾರ್ ಸಿಎಂ ಆದರೆ ‘NDA’ ತೊರೆಯುವೆ ; ಚಿರಾಗ್ ಪಾಸ್ವಾನ್ – Kannada News Now


India

ನಿತೀಶ್ ಕುಮಾರ್ ಸಿಎಂ ಆದರೆ ‘NDA’ ತೊರೆಯುವೆ ; ಚಿರಾಗ್ ಪಾಸ್ವಾನ್

ಪಟ್ನಾ :  ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾದರೆ ಎನ್ ಡಿ ಎ ಮೈತ್ರಿಕೂಟ ತೊರೆಯುವುದಾಗಿ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ,

ಮತ ವಿಭಜಕ ಎಂಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಮತ ವಿಭಜಕನಾದರೆ 2014 ರಲ್ಲಿ ನಮ್ಮ ಜೊತೆ ಮೈತ್ರಿ ಮಾಡಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ನಿತೀಶ್ ಕುಮಾರ್ ಅವರಿಂದ ಪ್ರಚೋದನೆ ಹೇಳಿಕೆ ನಿರೀಕ್ಷಿಸಿರಲಿಲ್ಲ,  ಇಂತಹ ಹೇಳಿಕೆ ನೀಡುವ ವೇಳೆ ಅವರು ಸಂಯಮ ವಹಿಸಬೇಕಿತ್ತು, ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ತಿರಸ್ಕರಿಸಬೇಕಿದೆ. ಅವರು  ಸಿಎಂ ಆದರೆ ನಾನು ಎನ್ ಡಿ ಎ ತೊರೆಯುವೆ ಎಂದಿದ್ದಾರೆ.

ಇನ್ಮುಂದೆ ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ’ಕ್ಕೆ ಆನ್ ಲೈನ್ ಮೂಲಕವೂ ದೂರು ಸಲ್ಲಿಸಬಹುದು
error: Content is protected !!