ಸುಭಾಷಿತ :

Tuesday, January 28 , 2020 2:07 PM

ಶೂಟಿಂಗ್ ಚಾಂಪಿಯನ್ ಶಿಪ್ : ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ಚಿಂಕಿ ಯಾದವ್


Saturday, November 9th, 2019 7:32 am

ಧೋಹಾ: ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.

ಚಿಂಕಿ ಅರ್ಹತೆಯಲ್ಲಿ 100 ರನ್ ಗಳಿಸಿ ಒಟ್ಟು 588 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅವರ ನಂತರ ಥೈಲ್ಯಾಂಡ್‌ನ ನಫ್ಸ್ವಾನ್ ಯಾಂಗ್‌ಪೆನ್‌ಬೂನ್ 590 ಅಂಕಗಳೊಂದಿಗೆ ಟೋಕಿಯೊಗೆ ಅರ್ಹತೆ ಪಡೆದಿದ್ದಾರೆ.

21ರ ಹರೆಯದ ಚಿಂಕಿ ಫೈನಲ್ಸ್ ನಲ್ಲಿ ಎಂಟು ಸ್ಪರ್ಧಿಗಳೊಡನೆ ಕಣಕ್ಕಿಳಿಯಲಿದ್ದಾರೆ.

ಚಿಂಕಿ ಯಾದವ್, 25 ಮೀ. ಪಿಸ್ತೂಲ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಅರ್ಹತೆ ಪಡೆದ ಭಾರತದ ಎರಡನೇ ಶೂಟರ್ ಎನಿಸಿಕೊಂಡರು. ಪ್ರಸಕ್ತ ವರ್ಷದ ಆರಂಭದಲ್ಲಿ ರಹಿ ಸರ್ನೋಬತ್ ಅವರು ಮ್ಯೂನಿಚ್‍ನಲ್ಲಿ ನಡೆದಿದ್ದ ಶೂಟಿಂಗ್ ವಿಶ್ವಕಪ್‍ನಲ್ಲೇ ಇದೇ ವಿಭಾಗದಲ್ಲಿ ಒಲಿಂಪಿಕ್ಸ್ ಟಿಕೆಟ್ ತ್ನನದಾಗಿಸಿಕೊಂಡಿದ್ದರು.

ಭಾರತದ ಇನ್ನಿತರ ಶೂಟರ್‍ಗಳಾದ ಅನ್ನು ರಾಜ್ ಸಿಂಗ್ (575) ಹಾಗೂ ನೀರಜ್ ಕೌರ್ (572) ಅವರು ಕ್ರಮವಾಗಿ 21 ಮತ್ತು 27ನೇ ಸ್ಥಾನ ಪಡೆದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions