ಚೀನಾ : ಚೀನಾದಲ್ಲಿ ಕೊರೊನಾ ಉಲ್ಬಣಗೊಂಡಿದ್ದು, ಅಲ್ಲಿನ ಜನಸಂಖ್ಯೆಯ ಶೇ.80ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಪ್ರಮುಖ ಸರ್ಕಾರಿ ವಿಜ್ಞಾನಿ ಹೇಳಿದ್ದಾರೆ.
ಹೊಸ ವರ್ಷದ ರಜೆಯ ಅವಧಿಯಲ್ಲಿ ಜನರ ಚಲನೆಯಿಂದಾಗಿ ಸಾಂಕ್ರಾಮಿಕ ರೋಗ ಕೋವಿಡ್ ಹರಡಬಹುದು.ಕೆಲವು ಪ್ರದೇಶಗಳಲ್ಲಿ ಪ್ರಕರಣಗಳು ಹೆಚ್ಚಿಸಬಹುದು. ಆದರೆ ಮುಂದಿನ ಅವಧಿಯಲ್ಲಿ ಎರಡನೇ ಕೋವಿಡ್ ತರಂಗವು ಅಸಂಭವವಾಗಿದೆ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ , Weibo ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕಠಿಣ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ನೂರಾರು ಮಿಲಿಯನ್ ಚೀನಿಯರು ದೇಶಾದ್ಯಂತ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಕೊರೊನಾ ಕೇಸ್ ಗಳು ಏಕಾಏಕಿ ಏರಿಕೆಯಾಗುತ್ತಿವೆ. ಕೇವಲ ನಗರ ಭಾಗಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಕೋವಿಡ್ ಭಯ ಹೆಚ್ಚಾಗಿದೆ.
ಇದಾಗಲೇ ಚೀನಾದಲ್ಲಿ ಕೋವಿಡ್ ಉತ್ತುಂಗವನ್ನು ದಾಟಿದ್ದು, ಆಸ್ಪತ್ರೆಗಳು, ಸ್ಮಶಾನಗಳು, ತುರ್ತು ಕೋಣೆಗಳು ಸಂಪೂರ್ಣ ಕೊರೊನಾ ರೋಗಿಗಳಿಂದ ತುಂಬಿ ತುಳುಕುತ್ತಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ಹಠಾತ್ತನೆ ತೆಗೆದು ಹಾಕಿದ ಸರಿಸುಮಾರು ಒಂದು ತಿಂಗಳ ನಂತರ, ಜನವರಿ 12 ರ ಹೊತ್ತಿಗೆ ಕೋವಿಡ್ ನಿಂದಾಗಿ ಸುಮಾರು 60,000 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಿದೆ.
ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಾಣಿಸ್ತಿವ್ಯಾ.? ನಿರ್ಲಕ್ಷಿಸ್ಬೇಡಿ, ತಕ್ಷಣ ‘ಲಿವರ್ ಟೆಸ್ಟ್’ ಮಾಡಿಸ್ಕೊಳ್ಳಿ
ಒಪ್ಪಿಗೆ ಇಲ್ಲದೇ ‘ಮಹಿಳೆ’ಯನ್ನ ಮುಟ್ಟಬಾರದು, ಆಕೆ ಬೇಡ ಅಂದ್ರೆ ಬೇಡ ಅಷ್ಟೇ ; ಹೈಕೋರ್ಟ್ ಮಹತ್ವದ ಆದೇಶ