ಚೀನಾ : ನೆರೆಯ ದೇಶ ಚೀನಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ವಾರದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 37 ಮಿಲಿಯನ್ ಕೋವಿಡ್ ಕೇಸ್ ಗಳು ವರದಿಯಾಗಿವೆ ಎಂದು ಅಲ್ಲಿನ ಉನ್ನತ ಆರೋಗ್ಯ ಪ್ರಾಧಿಕಾರ ಅಂಕಿಅಂಶಗಳ ಮಾಹಿತಿ ಅನುಸರಿಸಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಈ ವರ್ಷದ ಡಿಸೆಂಬರ್‌ ಮೊದಲ 20 ದಿನಗಳಲ್ಲಿ ಚೀನಾದಲ್ಲಿ 248 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿ ಅಂದಾಜಿಸಿದೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯನ್ನು ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿದೆ.

ವರದಿಯ ಪ್ರಕಾರ, ಡಿಸೆಂಬರ್ 20 ರಂದು 37 ಮಿಲಿಯನ್ ದೈನಂದಿನ ಪ್ರಕರಣಗಳು ದಾಖಲಾಗಿವೆ. ಅಂಕಿಅಂಶಗಳು ಚೀನಾದ ಅಧಿಕೃತ ಲೆಕ್ಕಾಚಾರದಿಂದ ಭಾರಿ ವಿಚಲನವಾಗಿದ್ದು, ಆ ದಿನ ಕೇವಲ 3,049 ಸೋಂಕುಗಳು ದಾಖಲಾಗಿವೆ ಎಂದು ಹೇಳಿಕೊಂಡಿದೆ.

ಚೀನಾಲ್ಲಿ ಶೂನ್ಯ ಕೋವಿಡ್ ನಿಯಮಗಳನ್ನು ಖಂಡಿಸಿ ತೀವರ ಪ್ರತಿಭಟನೆ ನಡೆದ ಬೆನ್ನಲ್ಲೆ ಅಲ್ಲಿನ ಸರ್ಕಾರ ಕೋವಿಡ್ ನಿಯಮಗಳನ್ನು ತೆಗೆದು ಹಾಕಿತ್ತು. ಇದಾದ ಬಳಿಕ ದೇಶದಲ್ಲಿ ಕೋವಿಡ್ ಉಲ್ಬಣಗೊಂಡಿದೆ. ಇದರಿಂದ  ಆರೋಗ್ಯ ವ್ಯವಸ್ಥೆಯು ಅಪಾರ ಒತ್ತಡಕ್ಕೆ ಒಳಗಾಗಿದ್ದು, ಆಸ್ಪತ್ರೆಗಳ ಹೊರೆಯನ್ನು ತೋರಿಸುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮುಂಬರುವ ಕೆಲವು ತಿಂಗಳುಗಳಲ್ಲಿ ಲಕ್ಷಾಂತರ ಜನರು ವೈರಸ್‌ಗೆ ತುತ್ತಾಗುವ ಸಾಧ್ಯತೆಯಿದ್ದು, ಲಕ್ಷಾಂತರ ಜನರು ವೈರಸ್‌ಗೆ ಬಲಿಯಾಗಬಹುದು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ.

BREAKIN NEWS : ಸೆಂಟ್ರಲ್ ಪ್ಯಾರಿಸ್ ನಲ್ಲಿ ಗುಂಡಿನ ದಾಳಿ : ಇಬ್ಬರು ಸಾವು, ಗನ್ ಮ್ಯಾನ್ ಅರೆಸ್ಟ್ | Shootout In Central Paris

Bharat Jodo Yatra : ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಶಿವನ ವಿಗ್ರಹ ನೀಡಿದ ಬುರ್ಖಾ ಧರಿಸಿದ ಮಹಿಳೆ

Share.
Exit mobile version