ಕಳೆದ 6 ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಒಳನುಸುಳುವಿಕೆ ನಡೆದಿಲ್ಲ : ಕೇಂದ್ರ ಸರ್ಕಾರ – Kannada News Now


India

ಕಳೆದ 6 ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಒಳನುಸುಳುವಿಕೆ ನಡೆದಿಲ್ಲ : ಕೇಂದ್ರ ಸರ್ಕಾರ

ನವದೆಹಲಿ : ಇಂದು ಸಂಸತ್ತಿನಲ್ಲಿ ಗಡಿ ವಿಚಾರವಾಗಿ ನಡೆದ ಮಾತುಕತೆಯಲ್ಲಿ ಕಳೆದ 6 ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಭಾರತ ಚೀನಾ ಗಡಿಯಲ್ಲಿ ಒಳನುಸಳುವಿಕೆ ಸಂಬಂಧ ಕೇಳಲಾದ ಪ್ರಶ್ನೆಗೆ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲಿಖಿತ ಉತ್ತರ ನೀಡಿದ್ದು, ಕಳೆದ ಆರು ತಿಂಗಳಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ.

ಆದರೆ ಭಾರತ ಪಾಕ್‌ ಗಡಿಯಲ್ಲಿ ಹಲವು ಬಾರಿ ಒಳನುಸುಳುವಿಕೆ ನಡೆದಿದ್ದು, ಕಳೆದ ಆರು ತಿಂಗಳಲ್ಲಿ ಇದು ಬಾರಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 47 ಬಾರಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಸುಳಿವಿಕೆ ಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.