ಚೀನಾ: ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬಹು-ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 16 ಜನರು ಸಾವನ್ನಪ್ಪಿದ್ದು, 66 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಹುನಾನ್ ಪ್ರಾಂತ್ಯದ ಚಾಂಗ್ ಶಾ ನಗರದ ಕ್ಸುಚಾಂಗ್-ಗುವಾಂಗ್‌ಝೌ ಹೆದ್ದಾರಿಯಲ್ಲಿ ಒಟ್ಟು 49 ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಸರ್ಕಾರಿ ಸಿಜಿಟಿಎನ್ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದು, 66 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸಂಚಾರ ಪೊಲೀಸ್ ಇಲಾಖೆಯನ್ನು ಉಲ್ಲೇಖಿಸಿ ವರದಿ ಹೇಳಿದೆ.
ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ಅವರಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಸ್ಥಿರ ಸ್ಥಿತಿಯಲ್ಲಿದ್ದಾರೆ. ಅಪಘಾತಗಳ ನಿರ್ವಹಣೆಗೆ ಮಾರ್ಗದರ್ಶನ ನೀಡಲು ತುರ್ತು ನಿರ್ವಹಣಾ ಸಚಿವಾಲಯವು ಕಾರ್ಯನಿರತ ತಂಡವನ್ನು ಸ್ಥಳಕ್ಕೆ ಕಳುಹಿಸಿದೆ ಎಂದು ವರದಿ ತಿಳಿಸಿದೆ.
‘MLC ರವಿಕುಮಾರ್ ಸಿಡಿ’ಯಲ್ಲಿ ಎಕ್ಸ್ ಪರ್ಟ್, ವಿಜಯಸಂಕಲ್ಪ ಯಾತ್ರೆ ಬದಲು ಸಿಡಿಯಾತ್ರೆ ಮಾಡಿ: HDK ಟಾಂಗ್
BIGG NEWS: ನಾಳೆ ‘ಸುಪ್ರಿಂ ಕೋರ್ಟ್’ನ ಐವರು ನೂತನ ‘ನ್ಯಾಯಾಧೀಶರು’ ಪ್ರಮಾಣವಚನ ಸ್ವೀಕಾರ | Supreme Court