ಹಾವೇರಿ : ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘವು ಪ್ರಸಕ್ತ ಸಾಲಿನ ಎಸ್.ಎಸ್. ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ಕ್ಕೂ ಅಧಿಕ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌಡ ಬ. ಪಾಟೀಲ ತಿಳಿಸಿದ್ದಾರೆ.

BREAKING NEWS: ಭಾರೀ ಮಳೆ ಹಿನ್ನಲೆ: ಜು.9ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ನೌಕರರಾಗಿರಬೇಕು. ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕಗೊಂಡ ನೌಕರರ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ. ವಿದ್ಯಾರ್ಥಿ ಪ್ರಥಮ ಪ್ರಯತ್ನದಲ್ಲೇ ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

BIG NEWS: ಇಂದು ಒಂದೇ ದಿನದಲ್ಲಿ ಎರಡನೇ ಘಟನೆ: ಗುಜರಾತ್-ಮುಂಬೈ Spicejet ವಿಮಾನದಲ್ಲಿ ವಿಂಡ್ಶೀಲ್ಡ್ ಬಿರುಕು, ತುರ್ತು ಭೂಸ್ಪರ್ಷ | Spicejet Incident

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಪಾಸ್ ಪೊರ್ಟ್ ಅಳತೆಯ ಭಾವಚಿತ್ರ , ಧೃಡೀಕ್ರತ ಅಂಕಪಟ್ಟಿ, ಇಲಾಖೆಯ ಸೇವಾ ಧೃಡೀಕರಣ ಪತ್ರ, ಸಂಘದ ಜಿಲ್ಲಾ, ತಾಲ್ಲೂಕು, ಯೋಜನಾ ಶಾಖೆ ಅಧ್ಯಕ್ಷರ ಸಹಿ, ಮೊಹರಿನೊಂದಿಗೆ ಪಡೆದ ಧೃಡೀಕ್ರತ ಪತ್ರ ಅಪ್ ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ನೊಂದಾಯಿತ ಇ-ಮೇಲ್ ಗೆ ಸ್ವೀಕೃತಿ ರವಾನೆಯಾಗಲಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ: ಜೋಗ್ ಜಲಪಾತದ ಬಳಿಯ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು

ಜುಲೈ 15ರೊಳಗೆ https://bit.ly/ksgeaprathibapuraskara2022ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕೇಂದ್ರ ಕಛೇರಿಯ ವ್ಯವಸ್ಥಾಪಕ ಸುರೇಶ ಎನ್. (080-22354784/83), ಲೆಕ್ಕ ಸಹಾಯಕ ಸೈಯದ್ ಜಬಿ (99021358130), ಹಾವೇರಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿ.ಜಿ.ಬ್ಯಾಡಗಿ (9980780229) ಅಥವಾ ಜಿಲ್ಲಾ ಕಾರ್ಯದರ್ಶಿ ಎಮ್.ಎ.ಎಣ್ಣಿ (9972531845) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

Share.
Exit mobile version