ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕದ ( Chief Minister’s Medal ) ಪಟ್ಟಿಗೆ ರಾಜ್ಯ ಸರ್ಕಾರ ಅನುಮೋದಿಸಿದೆ. 2021ನೇ ಸಾಲಿನಲ್ಲಿ 135 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಿಎಂ ಪದಕ ಸಂದಿದೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ’10 ವರ್ಷದ ಬಾಲಕ’ನಿಗೆ ಯಶಸ್ವಿ ‘ಲಿವರ್ ಕಸಿ’
ಈ ಕುರಿತಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಅವರು, 2021ನೇ ಸಾಲಿನ ಮುಖ್ಯಮಂತ್ರಿಗಳ ಪದಕ ನೀಡಲು ಅನುಮೋದಿಸಲಾಗಿದೆ. ಆದುದರಿಂದ ಸಂಬಂಧಪಟ್ಟ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಮಾಹಿತಿಯನ್ನು ಕೂಡಲೇ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.
2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು 135 ಮಂದಿಗೆ ನೀಡಲಾಗುತ್ತಿದೆ. ಈ ಅಧಿಕಾರಿ, ಸಿಬ್ಬಂದಿಗಳು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಮಾಹಿತಿಯಲ್ಲಿ ಯಾವುದಾದರೂ ಬದಲಾವಣೆಗಳಿದ್ದರೇ, ಇವರಲ್ಲಿ ಯಾರಾದರೂ ಸ್ವಯಂ ನಿವೃತ್ತಿ, ಮರಣ, ಕರ್ತವ್ಯದಿಂದ ಬಿಡುಗಡೆ ಆಗಿದ್ದಲ್ಲಿ, ಪ್ರಸ್ತುತ ಅಮಾನತ್ತಿನಲ್ಲಿದ್ದರೇ, ಈ ಬಗ್ಗೆ ಮಾಹಿತಿಯನ್ನು ಕೂಡಲೇ ಪ್ರಧಾನ ಕಚೇರಿಗೆ ಕಳುಹಿಸುವಂತೆ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಕೋರಿದ್ದಾರೆ.
ಇನ್ನೂ 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪದಕ ಪ್ರದಾನ ಸಮಾರಂಭವನ್ನು ದಿನಾಂಕ 02-04-2022ರಂದು ಬೆಳಿಗ್ಗೆ 8 ಗಂಟೆಗೆ 3ನೇ ಪಡೆ, ಕೆ ಎಸ್ ಆರ್ ಪಿ, ಕೋರಮಂಗಲ, ಬೆಂಗಳೂರು ಇಲ್ಲಿ ಏರ್ಪಡಿಸಲು ಉದ್ದೇಶಿಸಿರೋದಾಗಿ ತಿಳಿಸಿದ್ದಾರೆ.
ಹೀಗಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ