ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿಶೇಷ ಆಹ್ವಾನದ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ರಾಷ್ಟ್ರಪತಿ ಭವನದಲ್ಲಿರುವ ಅಮೃತ್ ಉದ್ಯಾನಕ್ಕೆ ಭೇಟಿ ನೀಡಿದ್ದರು.
ಈ ಕುರಿತಂತೆ ರಾಷ್ಟ್ರಪತಿಗಳು ಅಧ್ಯಕ್ಷ ಮುರ್ಮು ಅವರು ನ್ಯಾಯಾಮೂರ್ತಿಗಳು ಉದ್ಯಾನಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
On a special invitation by President Droupadi Murmu, Chief Justice of India, Dr Justice D.Y. Chandrachud and judges of the Supreme Court visited the Amrit Udyan of Rashtrapati Bhavan. @RBVisit pic.twitter.com/uXxrsHNBH8
— President of India (@rashtrapatibhvn) February 5, 2023
ಜ. 29 ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಭಾನುವಾರ ರಾಷ್ಟ್ರಪತಿ ಭವನದ ಉದ್ಯಾನವನದಲ್ಲಿ ‘ಅಮೃತ್ ಉದ್ಯಾನ’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ ‘ಅಮೃತ ಉದ್ಯಾನ’ ಎಂದು ಮರು ನಾಮಕರಣ ಮಾಡಿದ್ದರು.
ಮಾರ್ಚ್ 28-31 ರ ನಡುವೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಾರ್ಚ್ 28 ರಂದು ರೈತರಿಗೆ, ಮಾರ್ಚ್ 29 ರಂದು ವಿಕಲಚೇತನರಿಗೆ, ಮಾರ್ಚ್ 30 ರಂದು ರಕ್ಷಣಾ ಪಡೆಗಳು, ಅರೆಸೇನಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮತ್ತು ಮಾರ್ಚ್ 31 ರಂದು ಬುಡಕಟ್ಟು ಮಹಿಳೆಯರ ಸ್ವಸಹಾಯ ಗುಂಪುಗಳು ಸೇರಿದಂತೆ ಮಹಿಳೆಯರಿಗೆ ಮುಕ್ತವಾಗಿರುತ್ತದೆ.
ರಾಷ್ಟ್ರಪತಿ ಭವನವನ್ನು ಹೆಚ್ಚು ಜನರಿಗೆ ಪ್ರವೇಶಿಸಲು, ಪ್ರತಿ ಗಂಟೆಯ ಸ್ಲಾಟ್‌ನ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ವರ್ಷದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 12 ವಿಶಿಷ್ಟ ಪ್ರಭೇದಗಳ ವಿಶೇಷವಾಗಿ ಬೆಳೆಸಲಾದ ಟುಲಿಪ್‌ಗಳು ಹಂತಗಳಲ್ಲಿ ಅರಳುವ ನಿರೀಕ್ಷೆಯಿದೆ. ಭೇಟಿಯ ಸಮಯದಲ್ಲಿ ಯಾವುದೇ ನಿರ್ದಿಷ್ಟ ಹೂವು, ಸಸ್ಯ ಅಥವಾ ಮರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಜನರು ಉದ್ಯಾನದಲ್ಲಿ ಇರಿಸಲಾದ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಫೆ.7ರಿಂದ ಸಾಗರದ ಮಾರಿಕಾಂಬ ಜಾತ್ರೆ ಆರಂಭ: ಇಲ್ಲಿದೆ ತಾಯಿಯ ಸಂಪೂರ್ಣ ಕತೆ, ಜಾತ್ರೆಯ ವಿಶೇಷ
ಪಿಎಂ ಕಿಸಾನ್ 13ನೇ ಕಂತಿನ ಫಲಾನುಭವಿಗಳ ಪಟ್ಟಿ ರಿಲೀಸ್ ; ಲಿಸ್ಟ್’ಲ್ಲಿ ನಿಮ್ಮ ಹೆಸ್ರಿದ್ಯಾ.? ಈ ರೀತಿ ಚೆಕ್ ಮಾಡಿ.!