ನವದೆಹಲಿ : ಭಾರತದ ಬ್ಯಾಟ್ಸ್ ಮ್ಯಾನ್ಗಳಾದ ಚೇತೇಶ್ವರ್ ಪೂಜಾರ ಮತ್ತು ಹನುಮ ವಿಹಾರಿ ಐಪಿಎಲ್ 2023ರ ಹರಾಜಿನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 714 ಭಾರತೀಯರು ಮತ್ತು 277 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 991 ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಚೇತೇಶ್ವರ್ ಪೂಜಾರ ಅವರನ್ನ 2021ರ ಹರಾಜಿನಲ್ಲಿ ಸಿಎಸ್ಕೆ ತನ್ನ ಮೂಲ ಬೆಲೆ 50 ಲಕ್ಷಕ್ಕೆ ಖರೀದಿಸಿತ್ತು. ಆದಾಗ್ಯೂ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ಪೂಜಾರ ಈ ಹಿಂದೆ ಐಪಿಎಲ್ನಲ್ಲಿ ಕೆಕೆಆರ್, ಆರ್ಸಿಬಿ, ಪಿಬಿಕೆಎಸ್ ತಂಡದ ಭಾಗವಾಗಿದ್ದರು. ಅವರು ಎಂಟು ವರ್ಷಗಳ ಹಿಂದೆ 2014ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನ ಆಡಿದರು. ಪೂಜಾರ ಐಪಿಎಲ್ ಸಂಖ್ಯೆಗಳ ಬಗ್ಗೆ ಹೇಳೋದಾದ್ರೆ, ಅವ್ರು 30 ಪಂದ್ಯಗಳನ್ನ ಆಡಿದ್ದಾರೆ, ಇದರಲ್ಲಿ ಅವರು ಅರ್ಧ ಶತಕ ಸೇರಿದಂತೆ 390 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಮೆಗಾ-ಹರಾಜಿನಲ್ಲಿ ಪೂಜಾರ ಯಾವುದೇ ಖರೀದಿದಾರರನ್ನ ಆಕರ್ಷಿಸಲು ಸಾಧ್ಯವಾಗಲಿಲ್ಲ.

ಹನುಮ ವಿಹಾರಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್’ನ ಭಾಗವಾಗಿದ್ದಾರೆ. ಅವರು 24 ಐಪಿಎಲ್ ಪಂದ್ಯಗಳನ್ನ ಆಡಿದ್ದಾರೆ, ಇದರಲ್ಲಿ ಅವರು 284 ರನ್ ಗಳಿಸಿದ್ದಾರೆ. ವಿಹಾರಿ 2019ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದರು. 2022ರ ಹರಾಜಿನಲ್ಲಿ ಯಾವುದೇ ತಂಡವು ಅವರ ಮೇಲೆ ಬಿಡ್ ಮಾಡಿರಲಿಲ್ಲ. ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೇಧರ್ ಜಾಧವ್, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಮಾತ್ರ ಹರಾಜಿನಲ್ಲಿ ಪ್ರಸಿದ್ಧ ಭಾರತೀಯ ಆಟಗಾರರಾಗಿದ್ದು, ಖರೀದಿದಾರರಿಂದ ಹೆಚ್ಚಿನ ಆಸಕ್ತಿ ವಹಿಸುವ ಸಾಧ್ಯತೆಯಿದೆ.

 

BIG NEWS : ದೆಹಲಿ ಪಾಲಿಕೆ ನಡೆಸಲು ಕೇಂದ್ರದ ಸಹಕಾರ, ಪ್ರಧಾನಿ ಆಶೀರ್ವಾದ ಬೇಕು : ಸಿಎಂ ಅರವಿಂದ್ ಕೇಜ್ರಿವಾಲ್ |CM Kejriwal on MCD Win

BREAKING NEWS : ‘ಕಂದಾಯ ಇಲಾಖೆ’ಯ ಎಲ್ಲಾ ವರ್ಗಾವಣೆಗಳಿಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ

BREAKING NEWS : ‘ವಿದೇಶಿ ಬೆಟ್ಟಿಂಗ್ ಜಾಹೀರಾತು’ ಪ್ರಸಾರ ಮಾಡ್ಬೇಡಿ ; ‘ಗೂಗಲ್-ಯೂಟ್ಯೂಬ್’ಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ |Foreign betting advertisements

Share.
Exit mobile version