ʼಚೆಕ್ ಇನ್ ಲಗೇಜ್ʼ ಮಿತಿ ನಿರ್ಧರಿಸಿ, ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರದ ಅನುಮತಿ..! – Kannada News Now


India

ʼಚೆಕ್ ಇನ್ ಲಗೇಜ್ʼ ಮಿತಿ ನಿರ್ಧರಿಸಿ, ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರದ ಅನುಮತಿ..!

ಹೊಸದಿಲ್ಲಿ: ದೇಶೀಯ ಪ್ರಯಾಣಿಕರ ವಿಮಾನಗಳಿಗೆ ಲಗೇಜ್ ಮಿತಿಗಳನ್ನ ನಿರ್ಧರಿಸಲು ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದೆ ಎಂದು ಅಧಿಕೃತ ಆದೇಶ ತಿಳಿಸಿದೆ.

ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ತಿಂಗಳ ಅಂತರದ ನಂತರ ದೇಶೀಯ ಪ್ರಯಾಣಿಕರ ವಿಮಾನಗಳನ್ನು ಮೇ 25ರಂದು ಪುನರಾರಂಭಿಸಿದಾಗ, ಪ್ರತಿ ಪ್ರಯಾಣಿಕನಿಗೆ ಒಂದು ಚೆಕ್ ಇನ್ ಬ್ಯಾಗೇಜ್ ಮತ್ತು ಒಂದು ಹ್ಯಾಂಡ್ ಬ್ಯಾಗೇಜ್ ಮಾತ್ರ ಅನುಮತಿಸಬೇಕೆಂದು ಸಚಿವಾಲಯ ತಿಳಿಸಿತ್ತು.

ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ʼಎನ್‌ಸಿಬಿʼಯಿಂದ ಸಮನ್ಸ್‌ ಜಾರಿ: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..!

2020ರ ಸೆಪ್ಟೆಂಬರ್ 23ರಂದು ಹೊರಡಿಸಿದ ಆದೇಶದಲ್ಲಿ ವಿಮಾನಯಾನ ಸಂಸ್ಥೆಗಳ ನೀತಿಗಳ ಪ್ರಕಾರ ಬ್ಯಾಗೇಜ್ ಮಿತಿಗಳನ್ನು ನಿಗದಿಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

‘ಚೆಕ್ ಇನ್ ಲಗೇಜ್ʼಗೆ ಸಂಬಂಧಿಸಿದ ವಿಷಯವನ್ನ ಸಂಬಂಧಪಟ್ಟವರಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ ಪರಿಶೀಲಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಗುಡ್‌ ನ್ಯೂಸ್‌: ನೊಬೆಲ್ ವಿಜೇತರ ಬಹುಮಾನದ ಹಣ 110,000 ಡಾಲರ್‌ಗೆ ಹೆಚ್ಚಳ..!
error: Content is protected !!