ಚೇಸ್: ಕಡೇ ಕ್ಷಣದ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದ ಟ್ರೈಲರ್!

ಕೆಎನ್ಎನ್ ಸಿನಿಮಾ ಡೆಸ್ಕ್: ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಇದೇ ಹದಿನೈದನೇ ತಾರೀಕಿನಂದು ಬಿಡುಗಡೆಯಾಗಲಿದೆ. ತೆರೆಗಾಣಲು ಎರಡ್ಮೂರು ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಹೊಸಾ ಆವೇಗವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಇಷ್ಟು ದಿನ ಕಾದದ್ದೂ ಸಾರ್ಥಕವೆನಿಸುವಂಥಾ ಕಂಟೆಂಟು ಈ ಸಿನಿಮಾದಲ್ಲಿದೆ ಎಂಬ ನಿಖರ ಸುಳಿವು ಬಿಟ್ಟುಕೊಟ್ಟಿರುವ ಈ ಟ್ರೈಲರ್ಗೆ ವ್ಯಾಪಕ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಅರೆಕ್ಷಣವೂ ತುದೀ ಸೀಟಿನಿಂದ ಆಚೀಚೆ ಕದಲದಂಥಾ ವೇಗದೊಂದಿಗೆ ಚೇಸ್ ಸಾಗಲಿದೆ ಎಂಬುದು ನೋಡುಗರೆಲ್ಲರಿಗೂ ಪಕ್ಕಾ ಆದಂತಾಗಿದೆ. ಇಂಥಾದ್ದೊಂದು … Continue reading ಚೇಸ್: ಕಡೇ ಕ್ಷಣದ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದ ಟ್ರೈಲರ್!