ಸುಭಾಷಿತ :

Monday, December 9 , 2019 2:33 PM

ಟೀಸರ್ ಮೂಲಕ ಸದ್ದು ಮಾಡಲು ಮುಂದಾದ ‘ಚೇಸ್’!


Friday, November 15th, 2019 9:36 am

ಸ್ಪೆಷಲ್‌ಡೆಸ್ಕ್: ಸಿಂಪ್ಲಿ ಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅದೆಷ್ಟೋ ವರ್ಷಗಳ ಕಾಲ ಶ್ರಮ ವಹಿಸಿ ಈ ಸಿನಿಮಾ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಇಂಥಾ ಉತ್ಕಟ ಆಕಾಂಕ್ಷೆ, ನಿಂತಲ್ಲಿ ಕುಂತಲ್ಲಿ ಬಿಡದೇ ಕಾಡಿಸಿಕೊಂಡು ಸೃಷ್ಟಿಯಾದ ಯಾವುದೇ ಕಥೆಗಳು ಅದ್ಭುತ ದೃಷ್ಯ ಕಾವ್ಯವವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ. ಇದೀಗ ಬಿಡುಗಡೆಗೆ ರೆಡಿಯಾಗಿರೋ ಚೇಸ್ ಕೂಡಾ ಅಂಥಾದ್ದೇ ನಿರೀಕ್ಷೆಗಳಿಗೆ ಇಂಬು ನೀಡಿದೆ. ಇನ್ನೇನು ಬಿಡುಗಡೆಯಾಗಲಿರೋ ಈ ಚಿತ್ರದ ಟೀಸರ್ ಲಾಂಚ್ ಮಾಡಲು ಇದೀಗ ಚಿತ್ರತಂಡ ರೆಡಿಯಾಗಿದೆ.

ಈಗಾಗಲೇ ಪೋಸ್ಟರ್‌ಗಳ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿರೋ ಈ ಚಿತ್ರದ ಟೀಸರ್ ಇದೇ ತಿಂಗಳ ಹದಿನಾರನೇ ತಾರೀಕಿನಂದು ಬಿಡುಗಡೆಯಾಗಲಿದೆ. ಆರಂಭದಿಂದಲೂ ಈ ಸಿನಿಮಾ ಡಿಫರೆಂಟಾಗಿರೋ ಪೋಸ್ಟರ್ ಮೂಲಕ ಹಂತ ಹಂತವಾಗಿ ಪ್ರೇಕ್ಷಕರ ಚಿತ್ರ ಸೆಳೆಯುತ್ತಾ ಬಂದಿದ್ದ ಚೇಸ್ ಇದೀಗ ಬಿಡುಗಡೆಗೆ ಸಜ್ಜುಗೊಂಡಿದೆ. ಈ ಹಂತದಲ್ಲಿ ಪ್ರೇಕ್ಷಕರ ಕುತೂಹಲವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ ಈ ಟೀಸರ್ ಅನ್ನು ಲಾಂಚ್ ಮಾಡಲಾಗುತ್ತಿದೆ.

ವಿಲೋಕ್ ಶೆಟ್ಟಿ ವರ್ಷಾಂತರಗಳ ಕಾಲ ಶ್ರಮ ವಹಿಸಿ ನಿರ್ದೇಶನ ಮಾಡಿರೋ ಚಿತ್ರ ಚೇಜ್. ಇದರಲ್ಲಿ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ ಕೂಡಾ ಮಹತ್ವದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಶ್ವೇತಾ ಸಂಜೀವುಲು ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ತಯಾರಿಸಿರೋ ಈ ಸಿನಿಮಾದಲ್ಲಿ ಶ್ವಾನ ಕೂಡಾ ಪಾತ್ರವೊಂದನ್ನು ನಿರ್ವಹಿಸಿದೆಯಂತೆ. ಇದೆಲ್ಲದರ ಝಲಕ್‌ಗಳು ಟೀಸರ್ ಮೂಲಕ ಅನಾವರಣಗೊಳ್ಳಲಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions