ಸುಭಾಷಿತ :

Monday, March 30 , 2020 12:21 AM

ರೋಚಕ ರಹಸ್ಯ ಭೇದಿಸಿದ ಚಾಣಾಕ್ಷ ಶಿವಾಜಿ ಸುರತ್ಕಲ್ !-4 / 5


Friday, February 21st, 2020 4:45 pm

ಚಿತ್ರ: ಶಿವಾಜಿ ಸುರತ್ಕಲ್
ನಿರ್ದೇಶಕ: ಆಕಾಶ್ ಶ್ರೀವತ್ಸ
ನಿರ್ಮಾಪಕ: ರೇಖಾ.ಕೆ.ಎನ್, ಅನೂಪ್ ಗೌಡ
ಸಂಗೀತ: ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ: ಗುರುಪ್ರಸಾಧ್.ಎಂ.ಜಿ
ತಾರಾಬಳಗ: ರಮೇಶ್ಅರವಿಂದ್, ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್, ರಘು ರಾಮನಕೊಪ್ಪ, ಇತರರು.

ಸಿನಿಮಾಡೆಸ್ಕ್: ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಮೊಟ್ಟ ಮೊದಲು ಅಭಿನಯಿಸಿರುವ ಬಹು ನಿರೀಕ್ಷಿತ ಶಿವಾಜಿ ಸುರತ್ಕಲ್’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿಂದೆ ಹಲವು ಪತ್ತೇದಾರಿ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ತೆರೆಕಂಡಿದ್ರೂ ಸಹಿತ ಶಿವಾಜಿ ಸುರತ್ಕಲ್ ವಿಶೇಷ ಅನುಭವ ನೀಡುತ್ತೆ. ನಾಯಕ ಶಿವಾಜಿ ಸುರತ್ಕಲ್ ರಣಗಿರಿಯಲ್ಲಿ ಶವವಾಗಿ ಪತ್ತೆಯಾದ ಸಚಿವರ ಮಗನ ಕೇಸ್ ಜಾಡು ಹಿಡಿದು ಹೊರಡುತ್ತಾನೆ. ಇದು ಕೊಲೆಯೋ, ಆತ್ಮಹತ್ಯೆಯೋ ಎಂದು ಪತ್ತೆಹಚ್ಚುವಷ್ಟರಲ್ಲಿ ಚಿತ್ರ ಪ್ರೇಕ್ಚಕರಿಗೆ ಮತ್ತಷ್ಟು ಥ್ರಿಲ್ ನೀಡುತ್ತೆ, ಶಿವಾಜಿ ಹೆಂಡತಿ ಜನನಿ ಅಪಹರಣವಾಗುತ್ತಾಳೆ. ಎರಡು ಘಟನೆಗಳನ್ನು ಶಿವಾಜಿ ಸುರತ್ಕಲ್ ಹೇಗೆ ತನ್ನ ಚಾಣಾಕ್ಷತೆಯಿಂದ ಕಂಡು ಹಿಡಿಯುತ್ತಾನೆ..ಸಚಿವರ ಮಗನ ಕೊಲೆಗೂ, ಜನನಿ ಅಪಹರಣಕ್ಕೂ ಏನಾದ್ರು ಸಂಬಂಧ ಇದಿಯಾ ಅನ್ನೋದನ್ನ ನಿರ್ದೇಶಕರು ರೋಚಕವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.

ಎಲ್ಲೂ ಫೇಲವ ಎನಿಸದೇ, ಕೊನೆವರೆಗೂ ಕ್ಷಣ, ಕ್ಷಣಕ್ಕೂ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತ ಶಿವಾಜಿ ಸುರತ್ಕಲ್ ಚಿತ್ರ ಮನರಂಜನೆಯನ್ನು ನೀಡುತ್ತೆ.. ಕಥೆಯಲ್ಲಿನ ಹಿಡಿತ, ತಾಂತ್ರಿಕತೆ, ಹಿನ್ನೆಲೆ ಸಂಗೀತ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದ್ದು, ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ಇಷ್ಟವಾಗುತ್ತೆ. ಎರಡೂ ಶೇಡ್ನಲ್ಲೂ ರಮೇಶ್ ಅರವಿಂದ್ ಅಭಿನಯದ ಬಗ್ಗೆ ಮಾತನಾಡೋಹಾಗಿಲ್ಲ. ರಾಧಿಕಾ ನಾರಾಯಣ್, ಆರೋಹಿ , ಅವಿನಾಶ್ ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ಜೀವತುಂಬಿ ಸಿನಿಮಾವನ್ನು ಚೆಂದಗಾಣಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions