ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮತದಾರನ ಬಳಿ ಇರೊ ಮೊಬೈಲ್ ಮತಗಟ್ಟೆ ತೆಗೆದುಕೊಂಡು ಹೋಗುವುದನ್ನು ನಿಷೇದ ಮಾಡಿದರ ಹಿನ್ನಲೆಯಲ್ಲಿ ಖಾಕಿಗಳಿಗೂ ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ರಿಟರ್ನಿಂಗ್ ಆಫೀಸರ್‌ಗಾಗಿ ಹ್ಯಾಂಡ್‌ಬುಕ್, 2023 (ಆವೃತ್ತಿ-2) ಅಧ್ಯಾಯ 13.26.3 ರಲ್ಲಿ ECI ನಿರ್ದೇಶನಗಳನ್ನು ಉಲ್ಲೇಖಿಸಿದಂತೆ ಈ ನಿರ್ದೇಶನದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿ ಕೊಂಡೊಯ್ಯಲು ಅನುಮತಿಸಲಾಗಿದೆ ಮತ್ತು ಮೈಕ್ರೋ ಅಬ್ಸರ್ವರ್‌ಗಳು ಮತಗಟ್ಟೆಯಲ್ಲಿ ಪೋಸ್ಟ್ ಮಾಡಿದಲ್ಲೆಲ್ಲಾ ತಮ್ಮ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಕೊಂಡೊಯ್ಯಬಹುದು ಎಂದು ತಿಳಿಸಲಾಗಿದೆ. ಮತದಾನದ ದಿನದಂದು ಮತದಾನ ಕೇಂದ್ರದ ಒಳಗೆ ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಕಾರ್ಡ್ ಲೆಸ್ ಸೆಟ್ ಇತ್ಯಾದಿಗಳನ್ನು ಒಯ್ಯುವುದನ್ನು ಆಯೋಗ ನಿಷೇಧಿಸಿದೆ.

ಮೇಲಿನ ನಿರ್ದೇಶನಗಳ ದೃಷ್ಟಿಯಿಂದ, ಯಾವುದೇ ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯಲು ಅನುಮತಿಸುವುದಿಲ್ಲ ಎಂದು ಎಲ್ಲಾ RO/DEO ಗಳು ಖಚಿತಪಡಿಸಿಕೊಳ್ಳಬೇಕು.

ಆದ್ದರಿಂದ, ಮತದಾರನು ತನ್ನ ಮೊಬೈಲ್ ಫೋನ್ (ಒಯ್ಯುತ್ತಿದ್ದರೆ) ಮತಗಟ್ಟೆಯ ಹೊರಗೆ ಠೇವಣಿ ಇಡಲು ಮತ್ತು ಮತದಾನ ಮುಗಿದ ನಂತರ ಮತ್ತು ಅವರು ನಿರ್ಗಮಿಸಿದ ನಂತರ ಅದನ್ನು ಮರಳಿ ಪಡೆಯಲು ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಎಲ್ಲಾ RO/DEO ಗಳನ್ನು ವಿನಂತಿಸಲು ನನಗೆ ನಿರ್ದೇಶಿಸಲಾಗಿದೆ ಎಂದು  ಸಿಇಒ ಕಚೇರಿಯ ನೂಡಲ್ ಅದಿಕಾರಿ ಸಂಜಯ್ ಆದೇಶ ಹೊರಡಿಸಿದ್ದರು ಈ ಆದೇಶದಂತೆ ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ಆದೇಶ ಪಾಲಿಸಲು ಆರಂಬಿಸಿದ್ದಾದರೂ ತಮ್ಮ‌ಭದ್ರತಾ ಸೇವೆ ಬಿಟ್ಟು ಮೊಬೈಲ್ ಕಾಯುವ ಕೆಲಸ ಮಾಡಬೇಕಾಗಿದೆ. ಆರಂಬಿಕದಲ್ಲಿ ಕಡಿಮೆ ಮತದಾರರಿದ್ದ ಹೇಗೊ ನಿರ್ವಹಣೆ ಮಾಡಿದ್ದಾದರೂ ಹೋಗು ಹೋಗುತ್ತಾ ಮತದಾರ ಹೆಚ್ಚಾದಂತೆ ಮೊಬೈಲ್ ಹೆಚ್ಚಾಗತೊಡಗುತ್ತದೆ..ಇದನ್ನ ಇಡಲು ಪ್ರತ್ಯೇಕ ಟ್ರಾಯ್ ವ್ಯವಸ್ಥೆ ಇಲ್ಲ..ಮೊಬೈಲ್ ಅದಲು ಬದಲಾದರೆ ಸಂಘರ್ಷಗಳು ಆದರೆ ಅದರ ಜವಬ್ದಾರಿ ಕೂಡ ನಮ್ಮದೆ. ಜಿಲ್ಲಾಡಳಿತ ಪ್ರತ್ಯೇಕ ಸಿಬ್ಬಂದಿಯ ಜೊತೆಗೆ ಟ್ಯಾಯ್ ವ್ಯವಸ್ಥೆ ಮಾಡಿದರೆ ಉತ್ತಮ ವ್ಯವಸ್ಥೆ ಮಾಡಬೇಕಾಗಿದೆ.

Share.
Exit mobile version