ಸುಭಾಷಿತ :

Tuesday, April 7 , 2020 5:15 PM

‘ಡಿ ಬಾಸ್’ ಹುಟ್ಟು ಹಬ್ಬಕ್ಕೆ ‘ಭರ್ಜರಿ ಗಿಫ್ಟ್’ : ‘ರಾಬರ್ಟ್’ ಚಿತ್ರದ ಟೀಸರ್ ರಿಲೀಸ್


Sunday, February 16th, 2020 5:59 pm

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಕಳೆದ ರಾತ್ರಿ 12 ಗಂಟೆಯಿಂದಲೇ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿದ್ದು, ದರ್ಶನ್ ಭೇಟಿಯಾಗಲು ಅಭಿಮಾನಿ ಬಳಗ ಮುಗಿಬಿದ್ದಿದೆ. ಈ ನಡುವೆಯೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ದರ್ಶನ್ ಅವರ ಮುಂಬರುವ ಚಿತ್ರ ‘ರಾಬರ್ಟ್’ನ ಟೀಸರನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ.

ಸುಮಾರು 1.11 ನಿಮಿಷದ ಈ ಟೀಸರ್ ನಲ್ಲಿ ಮೊದಲಿಗೆ ಹಿನ್ನಲೆ ಧ್ವನಿ ಕೇಳಿಸುತ್ತದೆ. ‘ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ…?’ ಎಂದು ನಿಲ್ಲುವ ಧ್ವನಿ ಡಿ ಬಾಸ್ ಎಂಟ್ರಿಗೆ ಮುನ್ನುಡಿಯಾಗುತ್ತದೆ. ಈ ಚಿತ್ರದಲ್ಲಿ ದರ್ಶನ್ ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಇನ್ನು ಟೀಸರ್ ನಲ್ಲಿ ‘ನಾನು, ಚತುದರ್ಶ ಭುವನ ಭಯಂಕರನಾದ ಲಂಕೇಶ್ವರ ದಶಕಂಠ ರಾವಣ’ ಎಂಬ ಡಿ ಬಾಸ್ ಧ್ವನಿಯೊಂದಿಗೆ ಗಹಗಹಿಸಿ ನಗುವ ಮೂಲಕ ಅವರ ಮಾಸ್ ಲುಕ್ ಅಪಿಯರೆನ್ಸ್ ಅಭಿಮಾನಿಗಳಿಗೆ ಕಿಕ್ ನೀಡಿದೆ.

ಉಮಾಪತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ಅವರು ನಿರ್ಮಿಸುತ್ತಿದ್ದು, ತರುಣ್  ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಈ ಚಿತ್ರಕ್ಕಿದ್ದು. ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣ ಟೀಸರ್ ನಲ್ಲಿ ಗಮನ ಸೆಳೆಯುತ್ತದೆ….

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions