ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು

ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ನಡೆಸಿದ ಸಿಇಟಿ ಕನ್ನಡ ಭಾಷಾ ಪರೀಕ್ಷೆಗೆ 1,792 ಅಭ್ಯರ್ಥಿಗಳ ಪೈಕಿ 822 (ಶೇ 46) ಮಂದಿ ಹಾಜರಾಗಿದ್ದರು. ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ನಗರಗಳ ಐದು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 50 ಅಂಕಗಳ ಈ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಏಪ್ರಿಲ್ 23ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ 24ರಂದು ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು … Continue reading ಸುಸೂತ್ರವಾಗಿ ನಡೆದ ಸಿಇಟಿ ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು