ನವದೆಹಲಿ (ಭಾರತ], ಸೆಪ್ಟೆಂಬರ್ 20 (ANI): ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಯನ್ನು ಮಿತಿಗೊಳಿಸುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಚುನಾವಣಾ ನಿಧಿಯನ್ನು ಕಪ್ಪುಹಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ರಾಜಕೀಯ ದೇಣಿಗೆಯನ್ನು 20,000 ರೂ.ನಿಂದ 2,000 ರೂ.ಗೆ ಇಳಿಸಲು ಚುನಾವಣಾ ಆಯೋಗವು ಪ್ರಸ್ತಾಪಿಸಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಪತ್ರದಲ್ಲಿ, ಸಿಇಸಿ ಜನರ ಪ್ರಾತಿನಿಧ್ಯ (ಆರ್‌ಪಿ) ಕಾಯಿದೆಗೆ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಪ್ರಸ್ತಾವನೆಯ ಪ್ರಕಾರ, ರಾಜಕೀಯ ಪಕ್ಷಗಳು 2000 ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದ ಬಗ್ಗೆ ಬಹಿರಂಗಪಡಿಸಬೇಕೆಂದು ಸೂಚಿಸಿದೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಯಾವುದೇ ರಾಜಕೀಯ ಪಕ್ಷಗಳು ಪಡೆದುಕೊಳ್ಳುವ 2 ಸಾವಿರ ರೂ.ಗಿಂತಲೂ ಅಧಿಕ ಮೊತ್ತವನ್ನು ಅನಾಮಧೇಯವಾಗಿ ಉಳಿಸುವಂತಿಲ್ಲ. ದೇಣಿಗೆ ನೀಡಿದವರ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ. ಇಷ್ಟು ದಿನ ಕನಿಷ್ಠ 20 ಸಾವಿರ ರೂ. ದೇಣಿಗೆ ನೀಡಿದವರ ಮಾಹಿತಿ ಬಹಿರಂಗಪಡಿಸುವ ಮಿತಿಯಿತ್ತು. ಆದ್ರೆ, ಇದೀಗ ಅದನ್ನು 2 ಸಾವಿರ ರೂ.ಗಳಿಗೆ ಇಳಿಸಲು ನಿರ್ಧರಿಸಲಾಗಿದೆ.

BIGG NEWS : ರಾಜ್ಯದ ಶಾಲೆಗಳಲ್ಲಿ ಡಿಸೆಂಬರ್ ನಿಂದ `ನೈತಿಕ ಶಿಕ್ಷಣ’ ಆರಂಭ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ

BIG NEWS : ವಿಶ್ವಸಂಸ್ಥೆ 77 ನೇ ಮಹಾಧಿವೇಶನ: UNGA ಗೆ ಸಂಪೂರ್ಣ ಬೆಂಬಲ ನೀಡೋದಾಗಿ ಭಾರತ ಪ್ರತಿಜ್ಞೆ!

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

Share.
Exit mobile version