ಸುಭಾಷಿತ :

Wednesday, January 29 , 2020 9:35 PM

ಬೆಂಗಳೂರಿನ ಟರ್ಫ್ ಕ್ಲಬ್ ಗೆ ಸಂದೀಪ್ ಪಾಟೀಲ್ ಭೇಟಿ, ಪರಿಶೀಲನೆ : ಒಬ್ಬನ ಬಂಧನ


Saturday, December 7th, 2019 5:58 pm

ಬೆಂಗಳೂರು : ಸಿಲಿಕಾನ್ ಸಿಟಿಯ ಟರ್ಫ್ ಕ್ಲಬ್ ಗೆ ಇಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆಯಷ್ಟೇ ಸಿಸಿಬಿ ತಂಡ ಪರಿಶೀಲನೆಗಾಗಿ ಟರ್ಫ್ ಕ್ಲಬ್ ಗೆ ತೆರಳಿತ್ತು. ಈ ವೇಳೆ, ಅಲ್ಲಿನ 20 ಕೌಂಟರ್ ಗಳು ಬಂದ್ ಆಗಿದ್ದವು. ಆದರೆ ಇಂದು ಮತ್ತೆ ದಿಡೀರ್ ಭೇಟಿ ನೀಡಲಾಗಿದ್ದು, ಈ ಸಂದರ್ಭ 20 ಕೌಂಟರ್ ಗಳ ಪೈಕಿ ಒಂದು ಕೌಂಟರ್ ತೆರೆದಿತ್ತು. ಹೀಗಾಗಿ ಸಿಸಿಬಿ ತಂಡ ಕೌಂಟರ್ ಪರಿಶೀಲನೆ ನಡೆಸಿದರು. ಇದೇ ವೇಳೆ, ಅಲ್ಲಿದ್ದ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂದು ಪರಿಶೀಲನೆಗೆ ಬಂದಿದ್ದು, ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions