ಬೆಂಗಳೂರು : ರಾಜ್ಯದಲ್ಲಿ ತಲೆಮರಿಸಿಕೊಂಡು ಓಡಿಸ್ಸಾದಲ್ಲಿ ಹಾಲಶ್ರೀ ಸಿಸಿಬಿ ಪೊಲೀಸರ ಕೈಗೆ ಸಿಗಿಬಿದ್ದಿದ್ದು, ಇದೀಗ ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿ ಕರೆತರುತ್ತಿದ್ದಾರೆ. ಸಿಸಿ ಅಧಿಕಾರಿಗಳು ಅಭಿನವ ಹಾಲಶ್ರೀಗಳನ್ನು ಕೆಂಪೇಗೌಡ ಏರ್ಪೋರ್ಟ್ಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ಹಾಲಶ್ರೀ, ಪ್ರಮುಖ ಆರೋಪಿಯಾದ ಚೈತ್ರ ಕುಂದಾಪುರ ಬಂಧನವಾಗುತ್ತಿದ್ದಂತೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದರು.
ಇದೀಗ ಖಚಿತ ಮಾಹಿತಿಯ ಮೇರೆಗೆ ಒಡಿಸ್ಸಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಾಲಶ್ರೀ ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಓಡಿಸ್ಸಾದಿಂದ ಬೆಂಗಳೂರಿಗೆ ಸಿಸಿಬಿ ಅಧಿಕಾರಿಗಳು ಆಲಶ್ರೀ ಅವರನ್ನು ಕರೆತರುತ್ತಿದ್ದು ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟಿಗೆ ಕರೆತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಭಿನವ ಹಾಲಶ್ರೀ ಕರೆದೊಯಲು ಸಿಸಿಬಿ ಪೊಲೀಸರು ಆಗಮಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಬೆಂಗಳೂರಿನ ದೇವನಹಳ್ಳಿ ಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹಾಲಶ್ರೀಗಳನ್ನು ಸಿಸಿಬಿ ಅಧಿಕಾರಿಗಳು ಕರೆ ತರಲಿದ್ದಾರೆ.ಈ ಸಂಬಂಧ ಈಗಾಗಲೇ ಕೆಂಪೇಗೌಡ ಏರ್ಪೋರ್ಟ್ ನ ಮುಖ್ಯ ದ್ವಾರದ ಬಳಿ ಸಿಸಿಬಿ ಅಧಿಕಾರಿಗಳು ಸಿವಿಲ್ ಉಡುಪಿನಲ್ಲಿ ಕಾಯುತ್ತಿದ್ದದ್ದು ಕಂಡುಬಂದಿತು.