ಮಂಡ್ಯ: ಜಿಲ್ಲೆಯ ಜನರಿಗೆ ಕಾವೇರಿ ನೀರು ಬೇಕಿದೆ. ಅನ್ಯಾಯ ಆಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡ್ತೇನೆ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವರಾದ ಬಳಿಕ ಆಗಮಿಸಿದಂತ ಅವರನ್ನು, ಅದ್ಧೂರಿಯಾಗಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಈ ಬಳಿಕ ಮದ್ದೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ,  ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದಿರಿ. ಮಂಡ್ಯ ಜಿಲ್ಲೆಗು, ನನಗೂ, ದೇವೇಗೌಡ್ರುಗು ಅನುಬಂಧ ಇದೆ. ಕಳೆದ ಚುನಾವಣೆಯಲ್ಲಿ ನಾನು ನಿಲ್ಲಲು ಒತ್ತಡ ಹಾಕಿದ್ರಿ. ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರದಲ್ಲಿ ಎರಡೂ ಇಲಾಖೆ ಕೊಟ್ಟಿದ್ದಾರೆ. ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಸ್ಥಾನ ಕೊಟ್ಟಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಆಸೆ ನನ್ನದು ಎಂದರು.

ಯುವಕರಿಗೆ ಉದ್ಯೋಗಗಳನ್ನು ಕೊಡಿಸುವ ಜವಾಬ್ದಾರಿ ಇದೆ. ನನ್ನ ಇಲಾಖೆ ಮಂತ್ರಿ ಅಲ್ಲ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡ್ತೇನೆ. ಜಿಲ್ಲೆಯ ಅಭಿವೃದ್ಧಿ ಕಂಡಿಲ್ಲ. 50 ವರ್ಷದಿಂದ ಹಾಗೇ ಇದೆ. ನನ್ನ ಬೆಳೆಸಿದ ಜಿಲ್ಲೆಯ ಜನತೆಗೆ ಕೃತಜ್ಞತಾ ಸಲ್ಲಿಸುತ್ತೇನೆ ಎಂದರು.

15 ದಿನ ಸಮಯ ಕೊಡಿ ಇಲಾಖೆ ಬಗ್ಗೆ ಮಾಹಿತಿ ಪಡೆಯಬೇಕಿದೆ. ಬಳಿಕ ಪ್ರತಿ ಹಳ್ಳಿಗೆ ಬರ್ತೇನೆ. ರಾಷ್ಟ್ರದಲ್ಲಿ ಕೆಲಸ ಮಾಡಿ ನಮ್ಮ ಸಮಾಜ ಉಳಿಸಬೇಕು. ನಿಖಿಲ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ ಜಿಲ್ಲೆಯಲ್ಲಿ ಅವರು ಇರ್ತಾರೆ. ಜಿಲ್ಲೆಯ ಜನರ ಕಷ್ಟ ಸುಖದಲ್ಲಿ ನಿಖಿಲ್ ಇರ್ತಾರೆ. ನಿಮ್ಮ ಋಣದ ಭಾರ ಇದೆ ನಿಮ್ಮ ಸೇವೆ ಮಾಡ್ತೇನೆ. ಕೊನೆಯವರೆಗೂ ನಿಮ್ಮ ಆಶೀರ್ವಾದ ಇರಲಿ. ಜಿಲ್ಲೆಯ ಜನರಿಗೆ ಕಾವೇರಿ ನೀರು ಬೇಕಿದೆ. ಅನ್ಯಾಯ ಆಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡ್ತೇನೆ ಎಂದು ಹೇಳಿದರು.

ವರದಿ: ಗಿರೀಶ್ ರಾಜ್, ಮಂಡ್ಯ

ಬೆಂಗಳೂರಲ್ಲಿ BBMPಯಿಂದ ಭರ್ಜರಿ ಕಾರ್ಯಾಚರಣೆ: 3800ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ತೆರವು

ಬೆಂಗಳೂರಲ್ಲಿ BBMPಯಿಂದ ಭರ್ಜರಿ ಕಾರ್ಯಾಚರಣೆ: 3800ಕ್ಕೂ ಹೆಚ್ಚು ಅನಧಿಕೃತ ಫ್ಲೆಕ್ಸ್ ತೆರವು

Nitish Kumar Health: ಬಿಹಾರ ಮುಖ್ಯಮಂತ್ರಿ ‘ನಿತೀಶ್ ಕುಮಾರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Share.
Exit mobile version