ಮಂಡ್ಯ : ಕಾವೇರಿಯ ಜಲಾನಯ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದು, ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್‌ಎಸ್ ಡ್ಯಾಂ‌ ನಲ್ಲಿ ಒಳಹರಿವು ನೀರು ಹೆಚ್ಚಳವಾಗಿದೆ.

ಹೌದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆ ಮಳೆಯ ಅಬ್ಬರದಿಂದ ಕೆಆರ್‌ಎಸ್‌ಗೆ ಅಧಿಕವಾಗಿ ಒಳಹರಿವು ಹರಿದು ಬಂದಿದೆ.

ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು

ಈ ವರ್ಷದಲ್ಲಿ ಸದ್ಯ ಇದೇ ಅಧಿಕ ಪ್ರಮಾಣದ ಒಳಹರಿವು ಎಂದು ಹೇಳಲಾಗುತ್ತಿದ್ದು, ನಿನ್ನೆ 3,856 ಕ್ಯೂಸೆಕ್‌ ಒಳಹರಿವು ಇತ್ತು.
24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಅಲ್ಲದೇ ಒಂದೇ ದಿನದಲ್ಲಿ 1 ಟಿಎಂಸಿಗೂ ಅಧಿಕ ನೀರು ಡ್ಯಾಂಗೆ ಹರಿದು ಬಂದಿದೆ.

49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 16.118 ಟಿಎಂಸಿ ನೀರು ಸಂಗ್ರಹವಾಗಿದ್ದು,ನಿನ್ನೆ 15.007 ಟಿಎಂಸಿ ನೀರು ಇತ್ತು. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 90.30 ಅಡಿ ನೀರು ಇದೆ. ಇದೀಗ ಇಂದು ಹೊರ 478 ಕ್ಯೂಸೆಕ್ ಹೊರ ಹರಿವು ಇದೆ.

Share.
Exit mobile version