ಸುಭಾಷಿತ :

Tuesday, February 18 , 2020 1:49 PM

‘ಮೊಬೈಲ್ ಗ್ರಾಹಕ’ರೇ ಗಮನಿಸಿ : ಇಂದಿನಿಂದ ಡಿ.15ರ ವರೆಗೆ ‘ಮೊಬೈಲ್ ನಂಬರ್ ಪೋರ್ಟಿಬಿಲಿಟಿ’(MNP) ಸೇವೆ ಲಭ್ಯವಿಲ್ಲ


Tuesday, December 10th, 2019 1:08 pm

ನವದೆಹಲಿ : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ಇದೀಗ ಮೊಬೈಲ್ ನಂಬರ್ ಪೋರ್ಟೆಬಿಲಿಟಿ( ಎಂ ಎನ್ ಪಿ ) ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುತ್ತಿದೆ. ಇದೇ ಕಾರಣಕ್ಕಾಗಿ ಎಂ ಎನ್ ಪಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಅಂದ್ರೇ ಡಿಸೆಂಬರ್ 10, 2019ರಿಂದ ಡಿಸೆಂಬರ್ 15, 2019ರ ವರೆಗೆ ಎಂ ಎನ್ ಪಿ ಸೇವೆ ಲಭ್ಯವಿರುವುದಿಲ್ಲ ಎಂಬುದಾಗಿ ಮೊಬೈಲ್ ಬಳಕೆ ಗ್ರಾಹಕರಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಮೊಬೈಲ್ ನೆಟ್ವರ್ಕ್ ಬಳಕೆದಾರರು ಒಂದು ನೆಟ್ವರ್ಕ್ ನಿಂದ ಮತ್ತೊಂದು ನೆಟ್ವರ್ಕ್ ಗೆ ಸುಲಭವಾಗಿ ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಮೂಲಕ ಮೈಗ್ರೇಷನ್ ಆಗಬಹುದಾಗಿದೆ. ಇಂತಹ ವ್ಯವಸ್ಥೆಯನ್ನು ಕಲ್ಪಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ಇದೀಗ ಎಂ ಎನ್ ಪಿ ಸೇವೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಪರಿಷ್ಕೃತ ನೀತಿಯನ್ನು ಜಾರಿಗೆ ತರುತ್ತಿದೆ.

ಇದೇ ಕಾರಣದಿಂದಾಗಿ ಪ್ರಸ್ತುತ ಎಂ ಎನ್ ಪಿ ವ್ಯವಸ್ಥೆಯು ನೂತನ ಎಂ ಎನ್ ಪಿ ಪ್ರಕ್ರಿಯೆಗೆ ಪರಿವರ್ತನೆಗೊಳ್ಳುವ ಪ್ರಕ್ರಿಯೆಯು ಡಿಸೆಂಬರ್ 16, 2019ರಿಂದ ನೂತನ ಎಂ ಎನ್ ಪಿ ನೀತಿ ಜಾರಿಗೊಳ್ಳುತ್ತಿದೆ. ಹೀಗಾಗಿ ಡಿಸೆಂಬರ್ 10, 2019ರಿಂದ ಡಿಸೆಂಬರ್ 15, 2019ರ ವರೆಗೆ ಎಂ ಎನ್ ಪಿ ಸೇವೆ ಲಭ್ಯವಿರುವುದಿಲ್ಲ. ಈ ಸೇವೆ ನೂತನ ಸೇವೆಯೊಂದಿಗೆ ಡಿಸೆಂಬರ್ 16, 2019ರಿಂದ ಜಾರಿಯಾಗಲಿದೆ. ಅಂದಿನಿಂದ ಪರಿಷ್ಕೃತ ಪ್ರಕ್ರಿಯೆ ಜಾರಿಗೊಳ್ಳುತ್ತಿರುವುದರಿಂದ ಮೊಬೈಲ್ ಚಂದದಾರರು ಯೂನಿಕ್ ಪೋರ್ಟಿಂಗ್ ಕೋಡ್ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಮೊಬೈಲ್ ನಂಬರ್ ಪೋರ್ಟಿಂಗ್ ಸೌಲಭ್ಯ ಎಂದಿನಂತೆ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೇಳೆ ಮೊಬೈಲ್ ನಂಬರ್ ಪೋರ್ಟಿಬಿಲಿಟ್ ಮಾಡಿಸುವಂತವರು ಡಿಸೆಂಬರ್ 10, 2019ರಿಂದ ಡಿಸೆಂಬರ್ 15, 2019ರ ವರೆಗೆ ಯೂನಿಕ್ ಪೋರ್ಟಿಂಗ್ ಕೋಡ್ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಡಿಸೆಂಬರ್ 16, 2019ರ ನಂತ್ರ ಮೊಬೈಲ್ ನಂಬರ್ ಪೋರ್ಟಿಬಿಲಿಟಿಗೆ ಪ್ರಯತ್ನ ಮಾಡಿದರೇ ಮಾತ್ರ ಹೊಸ ಪರಿಷ್ಕೃತ ನಿಯಮಾನುಸಾರ ನೀವು ಯೂನಿಕ್ ಪೋರ್ಟಿಂಗ್ ಕೋಡ್ ಪಡೆಯುತ್ತೀರಿ. ಈ ಮೂಲಕ ನೀವು ಇಚ್ಚಿಸುವಂತ ನೆಟ್ವರ್ಕ್ ಗೆ ನಿಮ್ಮ ನಂಬರ್ ಪೋರ್ಟಿಬಿಲಿಟಿ ಮಾಡಬಹುದಾಗಿದೆ.

ಅಂದಹಾಗೇ ಈ ಕುರಿತಂತೆ ಯಾವುದೇ ವಿಚಾರಣೆ ಅಥವಾ ಸ್ಪಷ್ಟೀಕರಣ ಬೇಕಾಗಿದ್ದಲ್ಲಿ, ಮೊಬೈಲ್ ನೆಟ್ವರ್ಕ್ ಬಳಕೆದಾರರು ಆಯಾ ತಮ್ಮ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬಹುದಾಗಿದೆ. ಇಲ್ಲವೇ ಮಹಾಗರ ದೂರ ಸಂಚಾರ ಭವನ, ಜವಾಹರಲಾಲ್ ನೆಹರು ಮಾರ್ಗ ( ಓಲ್ಡ್ ಮಿಂಟೋ ರೋಡ್) ನವದೆಹಲಿ -110002, +911123664145 ಗೆ ಸಂಪರ್ಕಿಸಿ ಮಾಹಿತಿ ಪಡೆಯಲು ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions