Other Sports – Kannada News Now


Other Sports

Other Sports Sports

ನ್ಯೂಯಾರ್ಕ್​: ಯುಎಸ್ ಓಪನ್ ಪುರುಷರ ಸಿಂಗಲ್ಸ್​ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 2-6, 4-6, 6-4, 6-3, 7-6 (6) ಸೆಟ್‌ಗಳಿಂದ ಸೋಲಿಸಿದ ಡೊಮಿನಿಕ್ ಥೀಮ್ ಚೊಚ್ಚಲ ಗ್ರ್ಯಾಂಡ್​ಸ್ಲಾಮ್​ ಮುಡಿಗೇರಿಸಿಕೊಂಡರು.

27 ವರ್ಷದ ಥೈಮ್, ಮರಿನ್ ಸಿಲಿಕ್(2014) ನಂತರ ಗ್ರ್ಯಾಂಡ್​ಸ್ಲಾಮ್ ಗೆದ್ದ ಕಿರಿಯ ಆಟಗಾರ ಎನಿಸಿದರು.

ಮೊದಲ ಎರಡು ಸೆಟ್​ಗಳಲ್ಲಿ ಹಿನ್ನಡೆ ಅನುಭವಿಸಿದ ಥೀಮ್​ ನಂತರ 2 ಸೆಟ್​ಗಳಲ್ಲಿ ಪ್ರಬಲ ಪೈಪೋಟಿ ನೀಡಿದ್ರು. ಅಂತಿಮವಾಗಿ ಟೈ ಬ್ರೇಕರ್​ನಲ್ಲಿ ಜರ್ಮನಿಯ ಆಟಗಾರ ಅಲೆಕ್ಸಾಂಡರ್​ ಜ್ವೆರೆವ್​ ವಿರುದ್ಧ ಸೆಣಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

Other Sports Sports

ನ್ಯೂಯಾರ್ಕ್: ಯುಎಸ್ ಓಪನ್ ಫೈನಲ್‌ ಪಂದ್ಯದಲ್ಲಿ ಬೆಲರಷಿಯನ್​ ಟೆನ್ನಿಸ್​ ಆಟಗಾರ್ತಿ​ ವಿಕ್ಟೋರಿಯಾ ಅಜರೆಂಕಾರನ್ನು ಸೋಲಿಸಿ ಜಪಾನ್​​ನ ನವೋಮಿ ಒಸಾಕಾ, ಮೂರನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಾಲ್ಕನೇ ಶ್ರೇಯಾಂಕಿತ ಒಸಾಕಾ, ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷ ಹೋರಾಟದಲ್ಲಿ 1-6, 6-3, 6-3 ಸೆಟ್‌ಗಳಿಂದ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿದ್ದಾರೆ.

2018ರ ಯುಎಸ್ ಓಪನ್ ಮತ್ತು 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಗಳಿಸಿದ ನಂತರ 22 ವರ್ಷದ ಒಸಾಕಾಗೆ ಇದು ಮೂರನೇ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಗೆದ್ದಿದ್ದಾರೆ.

Other Sports Sports

ನ್ಯೂಯಾರ್ಕ್: ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಜನಪ್ರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ಟ್ವೆಟಾನಾ ಪಿರೊಂಕೋವಾ ವಿರುದ್ಧ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. 14 ನೇ ಬಾರಿಗೆ ಯುಎಸ್ ಓಪನ್ ಸೆಮಿಫೈನಲ್​ ಪ್ರವೇಶಿಸಿರುವ ವಿಲಿಯಮ್ಸ್, ಕ್ವಾರ್ಟರ್-ಫೈನಲ್​ನಲ್ಲಿ ಪಿರೊಂಕೋವಾ ವಿರುದ್ಧ 4-6, 6-3, 6-2 ಅಂತರದಲ್ಲಿ ಜಯ ಗಳಿಸಿದರು.

Other Sports Sports

ನವದೆಹಲಿ: ಹಾಕಿ ಇಂಡಿಯಾ ಪ್ರಧಾನ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತದೆ ಎಂದು ಪ್ರಕಟಣೆ ಹೇಳಿದೆ.

ಕಚೇರಿಯಲ್ಲಿ 31 ಉದ್ಯೋಗಿಗಳಲ್ಲಿ 29 ಮಂದಿಯನ್ನು ಪರೀಕ್ಷಿಸಲಾಗಿದ್ದು ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಅವರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ನೆಗೆಟಿವ್ ವರದಿ ಬಂದಿರುವ 25 ಜನರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೀನ್​ನಲ್ಲಿರುವಂತೆ ಸೂಚಿಸಲಾಗಿದೆ.

ಕೊರೋನಾ ದೃಢಪಟ್ಟ ಇಬ್ಬರು ಉದ್ಯೋಗಿಗಳ ಪೈಕಿ ಒಬ್ಬರು ಲೆಕ್ಕಪತ್ರ ವಿಭಾಗದ ಒಬ್ಬ ಸಿಬ್ಬಂದಿಯಾಗಿದ್ದರೆ ಇನ್ನೊಬ್ಬರು ಕಿರಿಯ ಫೀಲ್ಡ್ ಆಫೀಸರ್​ ಆಗಿದ್ದಾರೆ.

Other Sports Sports

ನವದೆಹಲಿ: ಭಾರತ ಹಾಕಿ ಲೆಜೆಂಡ್, ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಜಯಿಸಿದ ಹಾಗೂ ಭಾರತದ ಹಾಕಿ ತಂಡದ ಸದಸ್ಯರಾಗಿದ್ದ ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಸೋಮವಾರ ವಿಧಿವಶರಾಗಿದ್ದಾರೆ.

ಹಲವಾರು ಸಮಯದಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್ ಸಿಂಗ್ ಪಂಜಾಬ್ ನ ಮೊಹಾಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಬಲ್ಬೀರ್ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಇವರು 1948, 1952 ಮತ್ತು 1956 ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಧುನಿಕ ಒಲಿಂಪಿಕ್ ಇತಿಹಾಸದ 196 ದಂತಕತೆಗಳಲ್ಲಿ ಒಬ್ಬರು ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಬಲ್ಬೀರ್ ಸಿಂಗ್ ಅವರನ್ನು ಆಯ್ಕೆ ಮಾಡಿತ್ತು. ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ.

1971 ಮತ್ತು 1975ರಲ್ಲಿ ಇವರು ಕೋಚ್ ಆಗಿದ್ದಾಗ ಹಾಕಿ ವಿಶ್ವಕಪ್ ನಲ್ಲಿ ಕ್ರಮವಾಗಿ ಕಂಚಿನ ಮತ್ತು ಚಿನ್ನದ ಪದಕವನ್ನು ಭಾರತೀಯ ತಂಡ ಗೆದ್ದಿದ್ದು.

ದೇಶದ ಜನಪ್ರಿಯ ಆಟಗಾರನ ನಿಧನಕ್ಕೆ ದೇಶದ ಗಣ್ಯರು, ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.

India Other Sports Sports

ನವದೆಹಲಿ : ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಸೋಮವಾರ ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ದೀಪಾ, ರಾಷ್ಟ್ರೀಯ ಕ್ರೀಡಾ ನೀತಿ-ಮಾರ್ಗದರ್ಶಿಯ ಅನುಸಾರ ಅಥ್ಲೆಟಿಕ್ಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ನಿವೃತ್ತಿ ಬಗ್ಗೆ ಮಾಹಿತಿ ನೀಡಿರುವ ದೀಪಾ ಮಲಿಕ್, ಚುನಾವಣೆ ಉದ್ದೇಶಕ್ಕಾಗಿ ಈಗಾಗಲೇ ಬಹಳ ಹಿಂದೆಯೇ ಪಿಸಿಐಗೆ ಪತ್ರವೊಂದನ್ನು ಸಲ್ಲಿಸಿದ್ದೇವು. ಹೊಸ ಸಮಿತಿಯನ್ನು ಮೌಲ್ವೀಕರಿಸುವ ಹೈಕೋರ್ಟ್ ನ ನಿರ್ಧಾರಕ್ಕಾಗಿ ಕಾಯುತ್ತಿದ್ದೇವು. ಅದರಂತೆ ಸಕ್ರಿಯೆ ಕ್ರೀಡೆಯಿಂದ ನಿವೃತ್ತಿ ನೀಡುತ್ತಿರುವುದನ್ನು ಸಾರ್ವಜನಿಕರು ಘೋಷಿಸಲು ಸೂಚಿಸಲಾಗಿದೆ. ಹೀಗಾಗಿ ಇನ್ನು ನಾನು ಪ್ಯಾರಾ ಕ್ರೀಡೆ ಸೇವೆಯಲ್ಲಿದ್ದು, ಇತರರಿಗೆ ಬೆಂಬಲಿಸಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಕ್ರೀಡಾ ನೀತಿಯ ಪ್ರಕಾರ, ಯಾವುದೇ ಸಕ್ರಿಯ ಕ್ರೀಡಾಪಟು ಯಾವುದೇ ಫೆಡರೇಶನ್ ಗಳಲ್ಲಿ ಅಧಿಕೃತ ಹುದ್ದೆ ಪಡೆದುಕೊಳ್ಳುವಂತಿಲ್ಲ. ಇದಕ್ಕಾಗಿಯೇ ತಾನು ಕ್ರೀಡೆಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಮಲಿಕ್ ತಿಳಿಸಿದ್ದಾರೆ.

ದೀಪಾ ಮಲಿಕ್ ಅವರು 58 ರಾಷ್ಟ್ರೀಯ ಹಾಗೂ 23 ಅಂತರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012 ರಲ್ಲಿ ಅರ್ಜುನ ಹಾಗೂ 2017 ರಲ್ಲಿ ಪದ್ಮಶ್ರೀ ಗೌರವಕ್ಕೆ ದೀಪಾ ಪಾತ್ರರಾಗಿದ್ದಾರೆ.

Other Sports Sports

ಚಂಡೀಗಢ: ಲೆಜೆಂಡ್ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅವರನ್ನು ಚಂಡೀಗಢ್‌ದ ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೊದಲು ಅವರನ್ನು ಪಿಜಿಐ ಚಂಡೀಗಢ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

‘ಶುಕ್ರವಾರ ಸಂಜೆ ಅವರ ಆರೋಗ್ಯವು ಹಠಾತ್ತನೆ ಹದಗೆಟ್ಟಿತ್ತು. ಸದ್ಯ ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿ ಚೀತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಾಕಿ ಆಟಗಾರನ ಮೊಮ್ಮಗ ಕಬೀರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ಎರಡು-ಮೂರು ದಿನಗಳಿಂದ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದು. ಅವರ ವಿವಿಧ ಅಂಗಗಳ ಮೇಲೂ ಪರಿಣಾಮ ಬೀರಿದೆ. ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Other Sports Sports

ನ್ಯೂಸ್‌ಡೆಸ್ಕ್‌ : 2021 ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ನಡೆಸುವ ಹಕ್ಕನ್ನು ಭಾರತ ಕಳೆದುಕೊಂಡಿದೆ ಎನ್ನಲಾಗಿದೆ.ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘವು ರಾಷ್ಟ್ರೀಯ ಒಕ್ಕೂಟದಿಂದ ಆತಿಥೇಯ ಶುಲ್ಕವನ್ನು ಪಾವತಿಸಲಿಲ್ಲ ಎಂದು ಆರೋಪಿಸಿದೆ.

ಇದೇ ವೇಳೇ ಘಟನೆಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಒಪ್ಪಿಕೊಂಡಿದ್ದು, ಹಣವನ್ನು ವರ್ಗಾಯಿಸಬೇಕಾದ ಖಾತೆಗೆ ಸಂಬಂಧಿಸಿದಂತೆ “ಸಮಸ್ಯೆಗಳನ್ನು” ಪರಿಹರಿಸಲು ಎಐಬಿಎ ವಿಫಲವಾದ ಕಾರಣಗಳಿಂದ ಹೀಗಾಗಿದೆ ಅಂತ ಹೇಳಿದೆ.  ಕಳೆದ ವರ್ಷ ಡಿಸೆಂಬರ್ 2 ರಂದು 4 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಭಾರತ ಪಂದ್ಯಾವಳಿ ನಡೆಸುವ ಸಲುವಾಗಿ ಪಾವತಿಸಬೇಕಾಗಿತ್ತು ಎನ್ನಲಾಗಿದೆ. ಹೋಸ್ಟ್ ಸಿಟಿ ಒಪ್ಪಂದದ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ನವದೆಹಲಿ ಆತಿಥೇಯ ಶುಲ್ಕವನ್ನು ಪಾವತಿಸುವ ಜವಾಬ್ದಾರಿಯನ್ನು ಪೂರೈಸದ ನಂತರ, ಎಐಬಿಎ ಒಪ್ಪಂದವನ್ನು ರದ್ದುಗೊಳಿಸಿದೆ. ಆದ್ದರಿಂದ, ಭಾರತವು 500 ಡಾಲರ್ ರದ್ದತಿ ದಂಡವನ್ನು ಪಾವತಿಸಬೇಕಾಗುತ್ತದೆ” ಎಂದು ಎಐಬಿಎ ಹೇಳಿಕೆಯಲ್ಲಿ ತಿಳಿಸಿದೆ

Cricket Other Sports Sports

 

ನವದೆಹಲಿ : ಕೊರೋನಾವೈರಸ್ ನಿಂದಾಗಿ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದ್ದು, ಈ ನಡುವೆ ಕ್ರಿಕೆಟ್‌ ಪ್ರಿಯರಿಗಾಗಿ ಬಿಸಿಸಿಐ ಸಿಹಿ ಸುದ್ದಿಯೊಂದು ನೀಡಿದೆ. ಹೌದು, 2000 ರ ಕ್ರಿಕೆಟ್ ರಿವೈಂಡ್ ! ಬಿಸಿಸಿಐ ಮತ್ತು ಭಾರತ ಸರ್ಕಾರ ನಿಮಗೆ ಹಿಂದಿನ ಕ್ರಿಕೆಟ್ ಮುಖ್ಯಾಂಶಗಳನ್ನು ತರುತ್ತಿದ್ದು, ಮನೆಯಲ್ಲಿಯೇ ಇದ್ದುಕೊಂಡು ಕ್ರಿಕೆಟ್ ಆನಂದಿಸಿ # ಸ್ಟೇಹೋಮ್ ಸ್ಟೇ ಸೇಫ್ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಈ ಪಂದ್ಯಗಳಲ್ಲಿ 2003 ರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿ ಪಂದ್ಯಗಳು, 2002 ರಲ್ಲಿ ವೆಸ್ಟ್ ಇಂಡೀಸ್‌ನ ಭಾರತ ಪ್ರವಾಸ ಮತ್ತು 2005 ರಲ್ಲಿ ಶ್ರೀಲಂಕಾದ ಭಾರತ ಪ್ರವಾಸದ ಪಂದ್ಯಗಳು, 2000 ರಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ, 2001 ರಲ್ಲಿ ಆಸ್ಟ್ರೇಲಿಯಾದ ಭಾರತ ಪ್ರವಾಸದ ಪಂದ್ಯಗಳು. ಜಗತ್ತಿನಾದ್ಯಂತ ಕರೋನವೈರಸ್ ಹರಡಿದ ನಂತರ ಕ್ರಿಕೆಟ್ ಪಂದ್ಯಾವಳಿಗಳನ್ನು ಸ್ಥಗಿತಗೊಂಡಿದೆ. ಭಾರತದಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯನ್ನು ಏಪ್ರಿಲ್ 15 ರವರೆಗೆ ಅಮಾನತುಗೊಳಿಸಲಾಗಿದೆ,