ಶಿವಮೊಗ್ಗ : ತ್ಯಾವರೆಚಟ್ನಹಳ್ಳಿ ವಿವಿ ಕೇಂದ್ರದಿಂದ 11 ಕೆ.ವಿ. ಹೊಸ ಪೀಡರ್ ಚಾಲನೆಗೊಳಿಸುವ ಕಾಮಗಾರಿಯಿಂದಾಗಿ ಬೊಮ್ಮನಕಟ್ಟೆ ಎ ರಿಂದ ಹೆಚ್ ಬ್ಲಾಕ್ವರೆಗೆ, ಶಿವಬಸವ ನಗರ, ಇಂದಿರಾಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇಔಟ್, ತ್ರೀಮೂರ್ತಿನಗರ ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್.ಬಿ.ಎಸ್.ನಗರ, ಅಶ್ವತ್ಥ್ನಗರ, ಕೀರ್ತಿನಗರ, ದೇವಂಗಿ 1 ಮತ್ತು 02ನೇ ಹಂತ, ಬಸವೇಶ್ವರನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯರಸ್ತೆ, ರಾಯಲ್ ಬಡಾವಣೆ, ಅನೂಪ್ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಪ್ರಿಲ್ 16 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಈ ಪ್ರದೇಶದ ಸಾರ್ವಜನಿಕರು ಸಹಕರಿಸಬೇಕಾಗಿ ಶಿವಮೊಗ್ಗ ಮೆಸ್ಕಾಂ ಕಾ ಮತ್ತು ಪಾ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
Shimoga

ಶಿವಮೊಗ್ಗ : ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಬರುವ ಭಾನುವಾರದಂದು (ಏ.11) ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ ಮೂರು ಕ್ಲಸ್ಟರ್ಗಳಡಿ ಒಟ್ಟು ಹತ್ತು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.
ಸಹ್ಯಾದ್ರಿ ಕಾಲೇಜು ಆವರಣದಲ್ಲಿರುವ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಮೊದಲ ಕ್ಲಸ್ಟರ್ನಲ್ಲಿದ್ದರೆ, ಡಿವಿಎಸ್ ಕಲೆ ಮತ್ತು ವಿಜ್ಞಾನ ಕಾಲೇಜು, ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಡಿವಿಎಸ್ ಸಂಯುಕ್ತ ಪಿಯು ಕಾಲೇಜು ಎರಡನೆಯ ಕ್ಲಸ್ಟರ್ನಲ್ಲಿದೆ. ಇನ್ನು ಎಸ್ಆರ್ಎನ್ಎಂಎನ್ ಅನ್ವಯಿಕ ವಿಜ್ಞಾನ ಕಾಲೇಜು, ಎಟಿಎನ್ಸಿಸಿ ಕಾಲೇಜು, ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜು ಮತ್ತು ಎಚ್ಎಸ್ಆರ್ ನ್ಯಾಷನಲ್ ಪಿಯು ಕಾಲೇಜುಗಳನ್ನು ಮೂರನೆಯ ಕ್ಲಸ್ಟರ್ಗಳಾಗಿ ವಿಂಗಡಿಸಲಾಗಿದೆ.
‘ಬೀದರ್ ನಗರಸಭೆ’ ಚುನಾವಣೆ ಮುಂದೂಡುವಂತೆ ‘ಸಿಎಂ ಯಡಿಯೂರಪ್ಪ’ಗೆ ‘ಶಾಸಕ ಬಂಡೆಪ್ಪ ಖಾಶೆಂಪುರ್’ ಮನವಿ
ಪರೀಕ್ಷೆಯ ಮೊದಲ ಪೇಪರ್ ಬೆಳಿಗ್ಗೆ 9.30ರಿಂದ 10.30ರವರೆಗೆ ನಡೆಯಲಿದ್ದು, ಮೂವತ್ತು ನಿಮಿಷದ ಬಿಡುವಿನ ಬಳಿಕ ಎರಡನೆಯ ಪೇಪರ್ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಪ್ರವೇಶಾತಿ ಚೀಟಿಯೊಂದಿಗೆ ಬೆಳಿಗ್ಗೆ 8.30ಕ್ಕೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಸಂಯೋಜಕ ಡಾ. ರಾಜೇಶ್ವರ್ ತಿಳಿಸಿದ್ದಾರೆ.

ಶಿವಮೊಗ್ಗ : ಪರವಾನಗಿ ಹೊಂದಿದ್ದಂತ ಸಾಮಿಲ್ ಒಂದರಿಂದ, ಸಾಗುವಾನಿ ತುಂಡುಗಳನ್ನು ಪರವಾನಗಿಯೊಂದಿಗೆ ಖರೀದಿಸಿ, ಮನೆಗಾಗಿ ಡೈನಿಂಗ್ ಟೇಬಲ್ ಮಾಡಿಸಿಕೊಂಡು ಮನೆಗೆ ತರುವ ಸಂದರ್ಭದಲ್ಲಿ, ಪರವಾನಗಿ ಇದ್ದರೂ ಸಾಗರದಲ್ಲಿ ವ್ಯಕ್ತಿಯೊಬ್ಬರನ್ನು ತಡೆದಿದ್ದಂತ ಅರಣ್ಯ ಸಂಜಾರಿದಳದ ಅರಣ್ಯ ರಕ್ಷಕ ಕಿಜರ್ ಆಲಿ ಹಾಗೂ ಉಂಬ್ಲೆಬೈಲು ಸೋಗನೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜಿ.ಮಂಜು ಇವರು ನಾಲ್ಕು ಸಾವಿರ ಲಂಚ ಪಡೆದಿದ್ದರು. ಇಂತಹ ಲಂಚ ಸ್ವೀಕರಿಸಿದಂತ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. ಆದ್ರೇ ವಿಚಾರಣೆಗೆ ಬಾಕಿ ಇರುವ ಮುನ್ನವೇ ಅಮಾನತುಗೊಳಿಸಿದ್ದನ್ನು ರದ್ದು ಪಡಿಸುವಂತೆ ಜಿ.ಮಂಜು ಸತ್ಯಾಗ್ರಹ ನಡೆಸುತ್ತಿದ್ದಾರೆ.
ನೂತನ ಮನೆ ನಿರ್ಮಾಣ ಸಂಬಂಧ ಭದ್ರಾವತಿಯ ವಿಎನ್ ಟಿಂಬರ್ಸ್ ಟ್ರೇಡರ್ಸ್, ಗಣೇಶ ಸಾಮಿಲ್, ಚೆನ್ನಗಿರಿಯ ವೆಂಕಟೇಶ್ವರ ಸಾಮಿಲ್ ಇವರಿಂದ ಶಿವಮೊಗ್ಗದ ವಿದ್ಯಾನಗರ ನಿವಾಸಿ ಡಾ.ಬಿ.ಆನಂದ್ ಎಂಬುವರು ಸಾಗುವಾನಿ ತುಂಡುಗಳನ್ನು ಪರವಾನಗಿಯೊಂದಿಗೆ ಖರೀದಿಸಿದ್ದರು.
ಇಂತಹ ಮರದಲ್ಲಿ ಉಳಿದ ತುಂಡುಗಳಿಂದ ಮನೆಗಾಗಿ ಡೈನಿಂಗ್ ಟೇಬಲ್ ಅನ್ನು ಸಾಗರ ರಸ್ತೆಯಲ್ಲಿರುವ ಶಿವಮೊಗ್ಗದ ಮಂಜುನಾಥ ಸಾಮಿಲ್ ನಿಂದ ಡೈನಿಂಗ್ ಟೆಬಲ್ ಮಾಡಿಸಿಕೊಂಡು ದಿನಾಂಕ 02-04-2021ರಂದು ಸಂಜೆ ಮನೆಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ತಪಾಸಣೆ ಮಾಡುವ ನೆಪದಲ್ಲಿ ತಡೆದಿದ್ದಂತ ಶಿವಮೊಗ್ಗದ ಅರಣ್ಯ ಸಂಚಾರಿದಳದ ಅರಣ್ಯ ರಕ್ಷಕ ಕಿಜರ್ ಆಲಿ ಹಾಗೂ ಉಂಬ್ಲೆಬೈಲು ವಲಯದ ಸೋಗನೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ಜಿ.ಮಂಜು, ನಮಗೆ ಪರವಾನಿಗೆ ಇದೆ ಎಂದರೂ, ಹಣದ ಬೇಡಿಕೆ ಇಟ್ಟು, 4 ಸಾವಿರ ಹಣ ಪಡೆದುಕೊಂಡಿದ್ದರು.
ಇಂತಹ ಅಧಿಕಾರಿಗಳನ್ನು ಅನೇಕ ಬಾರಿ ಸಂಪರ್ಕಿಸಿದ್ದಂತ ಡಾ.ಬಿ.ಆನಂದ್ ಅವರು ನಮ್ಮ ದಾಖಲೆ ನೋಡಿ ಹಣ ವಾಪಸ್ಸು ನೀಡುವಂತೆಯೂ ಕೇಳಿಕೊಂಡಿದ್ದರು. ಆದ್ರೇ ಅನಗತ್ಯ ನೆಪ ಹೇಳುತ್ತಾ ಸತಾಯಿಸಿದ್ದರಿಂದಾಗಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರು.
ಡಾ.ಬಿ.ಆನಂದ್ ಅವರ ದೂರು ಆದರಿಸಿ, ಕಿಜರ್ ಆಲಿ ಹಾಗೂ ಜಿ.ಮಂಜು ಅವರಿಗೆ ನೀವು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ಮರ ಸಾಗಣೆಯ ಬಗ್ಗೆ ಪರವಾನಗಿಯನ್ನು ಹೊಂದಿದ್ದರೂ ರೂ.4000 ಹಣ ಪಡೆದು ನೇರವಾಗಿ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಾರದು ಏಕೆ ಎಂಬುದಾಗಿ ನೋಟಿಸ್ ಜಾರಿಗೊಳಿಸಿದ್ದರು. 7 ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆಯೂ ಸೂಚಿಸಿದ್ದರು.
ಇದಾದ ಬಳಿಕ ಶಿವಮೊಗ್ಗ ವೃತ್ತದ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್ ರವಿಶಂಕರ್ ಅವರು, ಉಪ ವಲಯ ಅರಣ್ಯಾಧಿಕಾರಿ ಜಿ.ಮಂಜು ಹಾಗೂ ಅರಣ್ಯ ರಕ್ಷಕ ಕಿಜರ್ ಅವರನ್ನು ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮವಾಳಿ 19666ರ ನಿಯಮ 3(i)(ii)(iii)ರ ಉಲ್ಲಂಘನೆ ಮಾಡಿರುವುದಾಗಿ ತಿಳಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತ್ತುಗೊಳಿಸಿದ್ದರು.
ಆದ್ರೇ ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಜಿ.ಮಂಜು ಅವರು ದಿನಾಂಕ 07-04-2021ರ ಮಧ್ಯಾಹ್ನ ಉಂಬ್ಳೆಬೈಲು ವಲಯ ಕಛೇರಿ ಮುಖಾಂತರ ನೋಟಿಸ್ ಜಾರಿ ಮಾಡಿದ ನಂತ್ರ, ಈ ನೋಟಿಸ್ ಗೆ ವಲಯ ಅರಣ್ಯಾಧಿಕಾರಿಗಳ ಮುಖಾಂತರ ಸಮಜಾಯಿಸಿಯನ್ನು ಸಲ್ಲಿಸಿರುತ್ತೇನೆ. ಆದ್ರೇ ನನ್ನ ಸಮಜಾಯಿಷಿ ಪತ್ರವನ್ನು ನಿಮ್ಮ ಕಚೇರಿಗೆ ಬರುವ ಮುಂಚೆಯೇ ಏಕಾಏಕಿ ಅಮಾನತುಗೊಳಿಸಿದಂತ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಕ್ರಮವನ್ನು ಖಂಡಿಸಿ, ಅಮಾನತು ಆದೇಶ ರದ್ದು ಪಡಿಸುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ

ಶಿವಮೊಗ್ಗ : ಸಾಗರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತಿದೆ. ಹೆರಿಗೆಗಾಗಿ ದಾಖಲಾಗುವಂತೆ ಮಹಿಳೆಯರಿಂದ ಲಂಚದ ಸುಲಿಗೆಯನ್ನೇ ಸಾವಿರಾರೂ ರೂಪಾಯಿಯಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ನಾರ್ಮನ್ ಹೆರಿಗೆ ಬದಲು ಸಿಜೇರಿಯನ್ ಹೆರಿಗೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವಂತ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಸಾವಿರಾರೂ ರೂಪಾಯಿಯನ್ನು ಹೆರಿಗೆಗಾಗಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು
ಈ ಕುರಿತಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ದಿನಾಂಕ 25-03-2021ರಂದು ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಗರದ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಸಾಕಷ್ಟು ಹೆರಿಗೆಗಾಳಾಗುತ್ತಿದ್ದು, 2,720 ಹೆರಿಗೆಗಳಾಗಿದ್ದಾಗಿ ತಿಳಿದು ಬಂದಿದೆ. ಇಂತಹ ಹೆರಿಗೆಗಳಲ್ಲಿ 1,113 ಸಿಸೇರಿಯನ್ ಆಗಿದ್ದಾಗಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.15ಕ್ಕಿಂತ ಹೆಚ್ಚು ಸಿಸೇರಿಯನ್ ಮಾಡಬಾರದಾಗಿ ಸರ್ಕಾರಿ ಮಾನದಂಡ ಇದೆ. ಹೀಗಿದ್ದರೂ ಸಹ ಹೆಚ್ಚಾಗಿ ಸಿಸೇರಿಯನ್ ಮಾಡಿ ಜನರಿಂದ ಹಣ ವಸೂಲು ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಹಣಕ್ಕಾಗಿಯೇ ಈ ರೀತಿ ಸಿಸೇರಿಯನ್ ಮಾಡುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಅನುಕೂಲವಾಗಬೇಕೆ ಹೊರತು, ಈ ರೀತಿ ಹಣ ವಸೂಲು ಮಾಡುವ ಕೇಂದ್ರಗಳಾಗಬಾರದು. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವಹಿಸುವಂತೆ ಕೋರಿದ್ದಾರೆ.
ಅಂದಹಾಗೇ, ಹೆರಿಗೆ ವಿಭಾಗದ ಸಿಜಿರಿಯನ್ ಮಾಡಿದಕ್ಕೆ ರೂ.5000/- ಸಹಜ ಹೆರಿಗೆಗೆ ರೂ.3000/- ಅನಸ್ತೇಶಿಯಾ ವೈದ್ಯರಿಗೆ ರೂ.2000/- ಸಾಗರದ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭ್ರಷ್ಟ ವೈದ್ಯರು ಬಡವರ ರಕ್ತ ಹೀರುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತಂತೆ ಸಾರ್ವಜನಿಕರೊಬ್ಬರು ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ, ವೈದ್ಯೋ ನಾರಾಯಣ ಹರಿಃ ಎಂದು ವೈದ್ಯ ವೃತ್ತಿಯನ್ನು ದೇವರಿಗೆ ಹೋಲಿಸುತ್ತಾರೆ. ಈ ಭ್ರಷ್ಟಾಚಾರ ನಡೆ ಕಡು ಬಡವರಿಗೆ ಯಮಲೋಕ ತೋರುಸುತ್ತಿದ್ದಾರೆ. ಹಣ ನೀಡಿಲ್ಲ ಅಥವಾ ಅವರು ಕೊಡೂದಿಲ್ಲ ಎಂತಾದರೇ ಕೂಡಲೇ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಇಲ್ಲಸಲ್ಲದ ನೇಪವೋಡ್ಡಿ ಕಳುಹಿಸುತ್ತಿದ್ದಾರೆ. ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡುತ್ತಿರುವ ವೈದ್ಯರಲ್ಲಿ ಒಂದು ಸವಿನಯ ವಿನಂತಿ ಇನ್ನಾದರೂ ಬಡವರ ರಕ್ತ ಹೀರುವುದನ್ನು ಬಿಟ್ಟು ಸರ್ಕಾರ ನೀಡುವ ಸಾರ್ವಜನಿಕ ತೆರಿಗೆ ಹಣದಲ್ಲಿ ನೀಡುವ ಸಂಬಳಕ್ಕೆ ಪ್ರಾಮಾಣಿಕ ವೈದ್ಯ ವೃತ್ತಿ ಸೇವೆಯನ್ನು ನೀಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ವರದಿ : ಓಂಕಾರ ಎಸ್ ವಿ ತಾಳಗುಪ್ಪ, ಸಾಗರ

ಶಿವಮೊಗ್ಗ : ರಾಜ್ಯಾಧ್ಯಂತ ಇಂದು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಜಿಲ್ಲೆಯ ಸಾಗರ ತಾಲೂಕಿನಲ್ಲೂ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದ್ದು, ಸಾರಿಗೆ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವುದು ಕಂಡು ಬಂದಿದೆ.
ರಾಜ್ಯ ‘ಹೈಕೋರ್ಟ್’ನಿಂದ ‘ಬೇಗೂರು ಹೋಬಳಿಯ ಯೆಲ್ಲಕುಂಟೆ’ ಗ್ರಾಮದ 1.22 ಎಕರೆ ಭೂಮಿ ಡಿನೋಟಿಫಿಕೇಷನ್ ರದ್ದು
ಜಿಲ್ಲೆಯ ಸಾಗರ ತಾಲೂಕಿನಲ್ಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರದ ಬಿಸಿ ಮುಟ್ಟಿದೆ. ನಗರದಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಸಂಚಾರವೇ ಸ್ಥಬ್ದಗೊಂಡಿದೆ. ಇಂತಹ ಸಾರಿಗೆ ಬಸ್ ನಿಲ್ದಾಣಕ್ಕೆ ಆಗಮಿಸಿರುವಂತ ಖಾಸಗಿ ಬಸ್ ಗಳು, ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ.

ಶಿವಮೊಗ್ಗ : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರನ್ನು ಇಂಗಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು
ಅವರು ಸೋಮವಾರ ಜಲಾಮೃತ ಹಾಗೂ ನೀರಿನ ಸಂರಕ್ಷಣೆ ಕುರಿತು ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಯೋಜನೆಯಡಿ ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಆಯ್ಕೆ ಮಾಡಲಾಗಿದೆ. ದೇಶದಾದ್ಯಂತ ನವೆಂಬರ್ ತಿಂಗಳಿನವರೆಗೆ ಯೋಜನೆ ಅನುಷ್ಟಾನಗೊಳ್ಳಲಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳ ಒಳಗಾಗಿ ಮಳೆ ನೀರನ್ನು ಬಿದ್ದಲ್ಲಿಯೇ ಇಂಗಿಸಲು ಯೋಜನೆ ರೂಪಿಸಲಾಗಿದ್ದು, ತಕ್ಷಣದಿಂದ ಅನುಷ್ಟಾನಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಮಳೆಗಾಲಕ್ಕಿಂತ ಪೂರ್ವದಲ್ಲಿಯೇ ಪ್ರತಿ ಗ್ರಾಮಗಳಲ್ಲಿ ಕೆರೆಗಳ ರಿಪೇರಿ, ಪ್ರತಿ ದೇವಸ್ತಾನದ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ, ಬೋರ್ವೆಲ್ ರಿಚಾರ್ಜ್ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಗುರುತಿಸಿ ಅನುಷ್ಟಾನಗೊಳಿಸಬೇಕು. ನೆಲಕ್ಕೆ ಬಿದ್ದ ನೀರು ಸುಮ್ಮನೆ ಹರಿದು ಹೋಗಲು ಬಿಡದೆ ಆದಷ್ಟು ನೆಲದಲ್ಲಿ ಇಂಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯ ದಾಖಲೆ ಪ್ರಮಾಣದಲ್ಲಿ ಕಳೆದ ಸಾಲಿನಲ್ಲಿ ಉದ್ಯೋಗ ಕಲ್ಪಿಸಿದೆ. ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ 13ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿ ಗುರಿಯನ್ನು ನಿಗದಿಪಡಿಸಿತ್ತು. ಆದರೆ ನಮ್ಮ ರಾಜ್ಯ ಮಾರ್ಚ್ ಅಂತ್ಯದ ವೇಳೆಗೆ 15ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 42ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿದ್ದು ದಾಖಲೆಯಾಗಿದ್ದು, ಇದುವರೆಗೆ ಗರಿಷ್ಟ ಅಂದರೆ 28ಲಕ್ಷ ಮಾನವ ದಿನಗಳನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗಿತ್ತು ಎಂದು ಹೇಳಿದರು.
BREAKING : ರಾಜ್ಯದಲ್ಲಿನ ‘1 ರಿಂದ 9ನೇ ತರಗತಿ ಪರೀಕ್ಷೆ’ ಕುರಿತಂತೆ ‘ಶಿಕ್ಷಣ ಸಚಿವ’ರು ಹೇಳಿದ್ದೇನು ಗೊತ್ತಾ.?
ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಅಂತರ್ಜಲ ಸಂರಕ್ಷಣೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಇರುವ ನೀರನ್ನು ಸದ್ಭಳಕೆ ಮಾಡಿ ಮುಂದಿನ ತಲೆಮಾರಿಗೆ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಯೋಜನೆಯ ಹಿರಿಯ ಅಧಿಕಾರಿ ಅಮರ್ ಸಕ್ಸೇನಾ ಮೊದಲಾದವರು ಉಪಸ್ಥಿತರಿದ್ದರು.

ಶಿವಮೊಗ್ಗ : ಕೆಲವೊಮ್ಮೆ ಎಣ್ಣೆಪ್ರಿಯರಿಗೆ ಖರೀದಿಸಿ ಕುಡಿಯೋದು ಮುಖ್ಯವಾಗಿರುತ್ತದೇ ವಿನಹ, ಅದಕ್ಕೆ ಇರೋ ಬೆಲೆ ಎಷ್ಟು ಅಂತ ಯೋಚಿಸೋದೆ ಇಲ್ಲ. ಇದನ್ನೆ ಕೆಲ ಮಾಲೀಕರು ಬಂಡವಾಳ ಮಾಡಿಕೊಂಡು ಎಂ.ಆರ್.ಪಿ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡ್ತಾರೆ. ಆದ್ರೇ ನಿಮಗೆ ತಿಳಿದಿರಲಿ.. ಎಂ.ಆರ್.ಪಿ ಮದ್ಯ ಮಾರಾಟದ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಎಂ ಆರ್ ಪಿ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡೋ ಹಾಗೆ ಇಲ್ಲ. ಒಂದು ವೇಳೆ ಹಾಗೆ ಮಾರಾಟ ಮಾಡಿದ್ರೇ. ಆತ ರೂ.42 ಹೆಚ್ಚುಪಡೆದ ಕಾರಣದಿಂದಾಗಿ ಎಷ್ಟು ಬಾರ್ ಮಾಲೀಕನಿಂದ ವಸೂಲಿ ಮಾಡಿದ ಎನ್ನುವ ಬಗ್ಗೆ ಮುಂದೆ ಓದಿ..
ಇಂದು ಸಂಜೆಯೊಳಗೆ ಸಚಿವ ಈಶ್ವರಪ್ಪ ಉಚ್ಛಾಟಿಸಿ, ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ – ಡಿಕೆ ಶಿವಕುಮಾರ್ ಒತ್ತಾಯ
ದಿನಾಂಕ 21-09-2020ರಂದು ಶಿವಮೊಗ್ಗದ ವಿನೋಬನಗರ ಎಪಿಎಂಸಿ ತರಕಾರಿ ಮಾರ್ಕೆಟ್ ಎದುರು ಇರುವಂತ ಶ್ರೀನಿಧಿ ವೈನ್ಸ್ ಎಂಬಲ್ಲಿ, ಭದ್ರಾವತಿಯ ಸಿ.ಶಿವರಾಮ್ ಎಂಬುವರು ಮದ್ಯ ಖರೀದಿಸಿದ್ದರು. ಹೀಗೆ ಖರೀದಿಸಿದಂತ ಮದ್ಯ ಬೆಂಗಳೂರು ವಿಸ್ಕಿ ಡ್ರಿಂಕ್ಸ್ ದು ಆಗಿತ್ತು. ಇಂತಹ ಮದ್ಯದ ಎಂ ಆರ್ ಪಿ ಬೆಲೆ 90 ಎಂ.ಎಲ್ ಗೆ ರೂ.27.98 ಪೈಸೆ ಆಗಿತ್ತು. ಇಂತಹ ರೂ.27.98 ಬೆಲೆಯ 90 ಎಂಎಲ್ ಮದ್ಯದ 21 ಪೌಚ್ ಮದ್ಯವನ್ನು ಶಿವರಾಮ್ ಖರೀದಿಸಿದ್ದರು. ಅದರ ಒಟ್ಟು ಬೆಲೆ ರೂ.587.58 ಪೈಸೆ ಆಗಿತ್ತು. ಆದ್ರೇ ಶ್ರೀನಿದಿ ವೈನ್ಸ್ ಮಾಲೀಕರು ರೂ.630 ರೂಪಾಯಿಗಳನ್ನು ಪಡೆದಿದ್ದರು. ಅಂದ್ರೇ ಹೆಚ್ಚುವರಿಯಾಗಿ ರೂ.42 ಹೆಚ್ಚವರಿಯಾಗಿ ಸ್ವೀಕರಿಸಿದ್ದರು.
ಪಾನಮತ್ತ ವ್ಯಕ್ತಿಯಿಂದ ಹೀನ ಕೃತ್ಯ : ಒಂದೇ ಕುಟುಂಬದ 6 ಜನರು ಸಜೀವ ದಹನ
ಈ ಬಗ್ಗೆ ಶ್ರೀನಿದಿ ವೈನ್ಸ್ ಅವರನ್ನು ಪ್ರಶ್ನಿಸಿದಂತ ಸಿ.ಶಿವರಾಮ್ ಅವರಿಗೆ, ಸರಿಯಾಗಿ ಉತ್ತರಿಸರಿಲ್ಲ. ಅಲ್ಲದೇ ನಮ್ಮ ಅಂಗಡಿಯಲ್ಲಿ ಇಷ್ಟಕ್ಕೆ ಮಾರಾಟ ಮಾಡೋದು ಹಾಗೇ, ಹೀಗೆ ಎಂಬುದಾಗಿ ಬೈದು, ದಬಾಯಿಸಿ ಕಳುಹಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಅವರು, ಎಂ.ಆರ್.ಪಿ ವೈನ್ಸ್ ಶಾಪ್ ಎಂಬುದಾಗಿ ಬೋರ್ಡ್ ಹಾಕಿದ್ದರೂ, ಹೆಚ್ಚುವರಿಯಾಗಿ 42 ರೂಪಾಯಿ ತೆಗೆದುಕೊಂಡಿದ್ದಕ್ಕಾಗಿ ಶಿವಮೊಗ್ಗ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುತ್ತಾರೆ.
ಇಂತಹ ಅರ್ಜಿಯನ್ನು ಶಿವಮೊಗ್ಗ ಗ್ರಾಹಕರ ನ್ಯಾಯಾಲಯದ ಆಯೋಗದ ಅಧ್ಯಕ್ಷರಾದಂತ ಶ್ರೀಮತಿ ಸಿಎಂ ಚಂಚಲ ಮತ್ತು ಸದಸ್ಯರಾದ ಶ್ರೀಮತಿ ಸವಿತಾ ಬಿ ಪಟ್ಟಣಶೆಟ್ಟಿ ಹಾಗೂ ಪಿವಿ ಲಿಂಗರಾಜು ನ್ಯಾಯಪೀಠವು ದಿನಾಂಕ 31-03-2021ರಂದು ಅರ್ಜಿಯನ್ನು ಪುರಸ್ಕರಿಸುತ್ತದೆ.
ಅರ್ಜಿದಾರ ಸಿ.ಶಿವರಾಮ್ ಅವರು, ಗ್ರಾಹಕರ ನ್ಯಾಯಾಲಯಕ್ಕೆ ಸಲ್ಲಿಸಿದ್ದಂತ ಅರ್ಜಿಯಲ್ಲಿ ಎಂ.ಆರ್.ಪಿ ಬೆಲೆಗಿಂದ ಹೆಚ್ಚಿನ ದರವಾಗಿ 42 ರೂಪಾಯಿಯನ್ನು ಶ್ರೀನಿಧಿ ವೈನ್ಸ್ ಪಡೆದಿದೆ. ಅಂಗಡಿಯ ಮುಂದೆ ಎಂ.ಆರ್.ಪಿ ಅಂಗಡಿ ಎಂಬುದಾಗಿ ಬೋರ್ಡ್ ಹಾಕಿದ್ದರೂ, ಹೆಚ್ಚುವರಿಯಾಗಿ ಮದ್ಯ ಖರೀದಿದಾರರಿಂದ ಹಣ ಪಡೆಯಲಾಗುತ್ತಿದೆ. ತನ್ನಿಂದ 42 ರೂಪಾಯಿ ಹೆಚ್ಚುವರಿಯಾಗಿ ಪಡೆದ್ರೂ ಸರಿಯಾಗಿ ಉತ್ತರಿಸಿಲ್ಲ. ಇದರಿಂದ ನೊಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೇ ಎದುರುದಾರರ ಅನುಚಿತ ವ್ಯಾಪಾರ ವರ್ತನೆಯನ್ನು ಪ್ರಶ್ನಿಸಿ, ಸೂಕ್ತ ನ್ಯಾಯ ಕೊಡಿಸುವಂತೆ ಕೋರಿರುತ್ತಾರೆ.
‘ರಾಜ್ಯ ಸರ್ಕಾರ’ದ ವಿರುದ್ಧ ಸಿಡಿದೆದ್ದ ‘ಸ್ಯಾಂಡಲ್ ವುಡ್’ : ನಿರ್ಮಾಪಕರ ಸಭೆ ಕರೆದ ‘ಫಿಲ್ಮ್ ಚೇಂಬರ್’
ಇಂತಹ ಅರ್ಜಿದಾರರು ನ್ಯಾಯಾಲಯಕ್ಕೆ ಹಾಜರುಪಡಿಸಿದಂತ ದಾಖಲೆಗಳನ್ನು ಪರಿಶೀಲಿಸಿ, ಎದುರುದಾರರು ಹಾಜರಾಗಿ ಅಹವಾಲು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿರುತ್ತದೆ. ನೋಟಿಸ್ ಜಾರಿ ನಂತ್ರ ಎದುರುದಾರ ಶ್ರೀನಿಧಿ ವೈನ್ಸ್ ಪರವಾಗಿ ವಿಟಿ ರತ್ನಾಕರ ಎಂಬುವರ ವೇದಿಕೆ ಮುಂದೆ ಹಾಜರಾಗಿದೆ, ಅರ್ಜಿದಾರರು ತನ್ನ ಮೇಲೆ ಸುಳ್ಳು ಪ್ರಕರಣ ಹಾಕಿದ್ದಾರೆ. ಬೇರೆಯವರಿಗೆ ನೀಡಿರುವ ವಿಸ್ಕಿ ಬಿಲ್ಲನ್ನು ನ್ಯಾಯಲಯಕ್ಕೆ ಅರ್ಜಿದಾರರು ಹಾಜರುಪಡಿಸಿದ್ದಾರೆಂದು ಹೇಳಿದ್ದರು. ಅಲ್ಲದೇ ಶಿವರಾಮ್ ಅವರು ತಮ್ಮ ಅಂಗಡಿಯಲ್ಲಿ ವಿಸ್ಕಿ ಖರೀದಿಸಿಲ್ಲ. ಯಾರೋ ಒಬ್ಬ ಗ್ರಾಹಕ 21 ಪೌಚ್ ಅನ್ನು ಬಿಲ್ ನಂ.6631 ರಂತೆ ಖರೀದಿಸಿದ್ದು, ಅದನ್ನು ತೆಗೆದುಕೊಂಡು ತಮ್ಮ ಮೇಲೆ ಸುಳ್ಳು ದೂರು ಹಾಕಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಮುಂದುವರೆದು ತಮ್ಮ ಅಂಗಡಿಗೆ ದಿನನಿತ್ಯ ನೂರಾರು ಗ್ರಾಹಕರು ವಿಸ್ಕಿ ಮತ್ತು ಇತರ ಮದ್ಯ ಖರೀದಿಗಾಗಿ ಬರುತ್ತಿದ್ದು, ಖರೀದಿಯ ನಂತ್ರ ತಾವು ನೀಡಿದ ಬಿಲ್ಲುಗಳನ್ನು ಅಲ್ಲಿಯೇ ಎಸೆದು ಹೋಕಿರುತ್ತಾರೆ. ಅಂತಹ ಬಿಲ್ಲುಗಳನ್ನು ಅರ್ಜಿದಾರ ಶಿವರಾಮ್ ತಮ್ಮ ವಿರುದ್ಧ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಆರೋಪಿಸಿರುತ್ತಾರೆ.
ರಾಜ್ಯದಲ್ಲಿ ಕೊರೋನಾ ಮುಂದುವರೆದರೆ ಮತ್ತೊಮ್ಮೆ ಲಾಕ್ ಡೌನ್ ಜಾರಿ : ಮಹಾ ಸಿಎಂ ಉದ್ಧವ್ ಠಾಕ್ರೆ
ಈ ಕುರಿತು ಅವರು ಯಾವುದೇ ದೂರನ್ನು ಅರ್ಜಿದಾರರ ವಿರುದ್ಧ ದಾಖಲಿಸಿರುವುದಿಲ್ಲ ಮತ್ತು ಅರ್ಜಿದಾರರಲ್ಲಿ ಈ ಬಗ್ಗೆ ಪ್ರಶ್ನಿಸಿರುವುದಿಲ್ಲ. ಇದರಿಂದಾಗಿ ಎದುರುದಾರರು ತಾವು ಅನುಚಿತ ವ್ಯಾಪಾರ ನಡೆಸುತ್ತಿಲ್ಲ ಎಂಬ ಬಗ್ಗೆ ಸಾಕ್ಷ್ಯ, ನೀಡುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ಪರಿಗಣಿಸಿ, ನ್ಯಾಯಾಲಯವು ಈ ಕೆಳಕಂಡಂತೆ ತೀರ್ಪನ್ನು ಆಧರಿಸಿ ಮಾಡಿದೆ.
ರಾಷ್ಟ್ರೀಯ ಆಯೋಗದ 2011ರ ಹೋಟೆಲ್ ನ್ಯಾಯಮಂದಿರ ವಿರುದ್ಧ ಈಶ್ವರಲಾಲ್ ಜೇನಬಾಯಿ ದೇಸಾಯಿ ಪ್ರಕರಣ ಮತ್ತು 2014ರ ಡಿಕೆ ಚೋಪ್ರ ವಿರುದ್ಧ ಸ್ನ್ಯಾಕ್ಸ್ ಬಾರ್ ಪ್ರಕರಣದಲ್ಲಿ ಹೇಳಿರುವಂತೆ ಎಂ.ಆರ್.ಪಿ ಗಿಂತ ಹೆಚ್ಚು ಹಣ ಸ್ವೀಕರಿಸುವುದು, ಅನುಚಿತ ವ್ಯಾಪಾರ ( Unfair Trade Practice) ಎಂದು ಪರಿಗಣಿಸಲಾಗಿರುತ್ತದೆ. ಆದ್ದರಿಂದ ಮಾನ್ಯ ಆಯೋಗವು ಈ ಕೆಳಗಿನಂತೆ ಆದೇಶಿಸಿದೆ.
Big Breaking News: ‘ಕಬ್ಜ ಚಿತ್ರ’ದ ಶೂಟಿಂಗ್ ವೇಳೆ ಕಬ್ಬಿಣದ ರಾಡ್ ತಗುಲಿ, ‘ನಟ ಉಪೇಂದ್ರ’ ತಲೆಗೆ ಪೆಟ್ಟು.!
ಎದುರುದಾರರು ಅರ್ಜಿದಾರರಿಂದ ಹೆಚ್ಚುವರಿಯಾಗಿ ಪಡೆದ 42 ರೂಪಾಯಿ 42 ಪೈಸೆಗಳನ್ನು ಹಿಂತಿರುಗಿಸಬೇಕು. ಫಿರ್ಯಾದಿ ದಾಖಲಾದ ದಿನದಿಂದ 6 ವಾರಗಳ ಒಳಗಾಗಿ ಫಿರ್ಯಾದು ದಾಖಲಾದ ದಿನಾಂಕದಿಂದ ಶೇ.10ರ ಬಡ್ಡಿ ಸಮೇತ ನೀಡತಕ್ಕದ್ದು. ಮಾನಸಿಕ ಹಿಂಸೆಗಾದ ಪರಿಹಾರಕ್ಕಾಗಿ ಎದುರುದಾರರು ಅರ್ಜಿದಾರರಿಗೆ ರೂ.1000 ಗಳನ್ನು ಪರಿಹಾರವಾಗಿ ನೀಡತಕ್ಕದ್ದು. ಅದೇ ರೀತಿ ರೂ.2,500ಗಳನ್ನು ದಾವಾ ಖರ್ಚು ಎಂದು ಎದುರುದಾರರು ಅರ್ಜಿದಾರರಿಗೆ ನೀಡತಕ್ಕದ್ದು. ಎದುರುದಾರರು ರೂ.5,000ಗಳನ್ನು ಅನುಚಿತ ವ್ಯಾಪಾರ ನಡೆಸಿದ್ದಕ್ಕಾಗಿ ಮಾನ್ಯ ವೇದಿಕೆಯ ಕಲ್ಯಾಣ ನಿಧಿಯ ಖಾತೆಗೆ ಸಂದಾಯ ಮಾಡತಕ್ಕದ್ದು ಎಂಬುದಾಗಿ ಆದೇಶಿಸಿ ತೀರ್ಪು ನೀಡಿದೆ.
ಹೀಗ್ ಮದ್ಯಪ್ರಿಯರೇ ಹೇಳಿ.. ನಿಮಗೂ ಹೀಗೆ ಎಂ.ಆರ್.ಪಿ ಬಾರ್ ಗಳಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿರಬೇಕು. ಆ ಬಗ್ಗೆ ಏನ್ ಮಾಡಬಹುದು. ಎಂ ಆರ್ ಪಿ ಗಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡೋದು ಅನುಚಿತ ವ್ಯಾಪಾರ ಎಂಬುದಾಗಿ ತಿಳಿದಿರಲಿ.

ಶಿವಮೊಗ್ಗ : ಕೆಲವೊಮ್ಮೆ ಎಣ್ಣೆಪ್ರಿಯರಿಗೆ ಖರೀದಿಸಿ ಕುಡಿಯೋದು ಮುಖ್ಯವಾಗಿರುತ್ತದೇ ವಿನಹ, ಅದಕ್ಕೆ ಇರೋ ಬೆಲೆ ಎಷ್ಟು ಅಂತ ಯೋಚಿಸೋದೆ ಇಲ್ಲ. ಇದನ್ನೆ ಕೆಲ ಮಾಲೀಕರು ಬಂಡವಾಳ ಮಾಡಿಕೊಂಡು ಎಂ.ಆರ್.ಪಿ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡ್ತಾರೆ. ಆದ್ರೇ ನಿಮಗೆ ತಿಳಿದಿರಲಿ.. ಎಂ.ಆರ್.ಪಿ ಮದ್ಯ ಮಾರಾಟದ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಎಂ ಆರ್ ಪಿ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡೋ ಹಾಗೆ ಇಲ್ಲ. ಒಂದು ವೇಳೆ ಹಾಗೆ ಮಾರಾಟ ಮಾಡಿದ್ರೇ.. ಏನ್ ಮಾಡಬಹುದು ಅಂತ ಮುಂದೆ ಓದಿ.. ಆ ಬಗ್ಗೆ ಏನ್ ಮಾಡ್ಬಹುದು ಅಂತ ಖಂಡಿತ ನಿಮಗೂ ಸಹಾಯ ಆಗಲಿದೆ.
ಇಂದು ಸಂಜೆಯೊಳಗೆ ಸಚಿವ ಈಶ್ವರಪ್ಪ ಉಚ್ಛಾಟಿಸಿ, ಇಲ್ಲವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ – ಡಿಕೆ ಶಿವಕುಮಾರ್ ಒತ್ತಾಯ
ದಿನಾಂಕ 21-09-2020ರಂದು ಶಿವಮೊಗ್ಗದ ವಿನೋಬನಗರ ಎಪಿಎಂಸಿ ತರಕಾರಿ ಮಾರ್ಕೆಟ್ ಎದುರು ಇರುವಂತ ಶ್ರೀನಿಧಿ ವೈನ್ಸ್ ಎಂಬಲ್ಲಿ, ಭದ್ರಾವತಿಯ ಸಿ.ಶಿವರಾಮ್ ಎಂಬುವರು ಮದ್ಯ ಖರೀದಿಸಿದ್ದರು. ಹೀಗೆ ಖರೀದಿಸಿದಂತ ಮದ್ಯ ಬೆಂಗಳೂರು ವಿಸ್ಕಿ ಡ್ರಿಂಕ್ಸ್ ದು ಆಗಿತ್ತು. ಇಂತಹ ಮದ್ಯದ ಎಂ ಆರ್ ಪಿ ಬೆಲೆ 90 ಎಂ.ಎಲ್ ಗೆ ರೂ.27.98 ಪೈಸೆ ಆಗಿತ್ತು. ಇಂತಹ ರೂ.27.98 ಬೆಲೆಯ 90 ಎಂಎಲ್ ಮದ್ಯದ 21 ಪೌಚ್ ಮದ್ಯವನ್ನು ಶಿವರಾಮ್ ಖರೀದಿಸಿದ್ದರು. ಅದರ ಒಟ್ಟು ಬೆಲೆ ರೂ.587.58 ಪೈಸೆ ಆಗಿತ್ತು. ಆದ್ರೇ ಶ್ರೀನಿದಿ ವೈನ್ಸ್ ಮಾಲೀಕರು ರೂ.630 ರೂಪಾಯಿಗಳನ್ನು ಪಡೆದಿದ್ದರು. ಅಂದ್ರೇ ಹೆಚ್ಚುವರಿಯಾಗಿ ರೂ.42 ಹೆಚ್ಚವರಿಯಾಗಿ ಸ್ವೀಕರಿಸಿದ್ದರು.
ಪಾನಮತ್ತ ವ್ಯಕ್ತಿಯಿಂದ ಹೀನ ಕೃತ್ಯ : ಒಂದೇ ಕುಟುಂಬದ 6 ಜನರು ಸಜೀವ ದಹನ
ಈ ಬಗ್ಗೆ ಶ್ರೀನಿದಿ ವೈನ್ಸ್ ಅವರನ್ನು ಪ್ರಶ್ನಿಸಿದಂತ ಸಿ.ಶಿವರಾಮ್ ಅವರಿಗೆ, ಸರಿಯಾಗಿ ಉತ್ತರಿಸರಿಲ್ಲ. ಅಲ್ಲದೇ ನಮ್ಮ ಅಂಗಡಿಯಲ್ಲಿ ಇಷ್ಟಕ್ಕೆ ಮಾರಾಟ ಮಾಡೋದು ಹಾಗೇ, ಹೀಗೆ ಎಂಬುದಾಗಿ ಬೈದು, ದಬಾಯಿಸಿ ಕಳುಹಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಅವರು, ಎಂ.ಆರ್.ಪಿ ವೈನ್ಸ್ ಶಾಪ್ ಎಂಬುದಾಗಿ ಬೋರ್ಡ್ ಹಾಕಿದ್ದರೂ, ಹೆಚ್ಚುವರಿಯಾಗಿ 42 ರೂಪಾಯಿ ತೆಗೆದುಕೊಂಡಿದ್ದಕ್ಕಾಗಿ ಶಿವಮೊಗ್ಗ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುತ್ತಾರೆ.
ಇಂತಹ ಅರ್ಜಿಯನ್ನು ಶಿವಮೊಗ್ಗ ಗ್ರಾಹಕರ ನ್ಯಾಯಾಲಯದ ಆಯೋಗದ ಅಧ್ಯಕ್ಷರಾದಂತ ಶ್ರೀಮತಿ ಸಿಎಂ ಚಂಚಲ ಮತ್ತು ಸದಸ್ಯರಾದ ಶ್ರೀಮತಿ ಸವಿತಾ ಬಿ ಪಟ್ಟಣಶೆಟ್ಟಿ ಹಾಗೂ ಪಿವಿ ಲಿಂಗರಾಜು ನ್ಯಾಯಪೀಠವು ದಿನಾಂಕ 31-03-2021ರಂದು ಅರ್ಜಿಯನ್ನು ಪುರಸ್ಕರಿಸುತ್ತದೆ.
ಅರ್ಜಿದಾರ ಸಿ.ಶಿವರಾಮ್ ಅವರು, ಗ್ರಾಹಕರ ನ್ಯಾಯಾಲಯಕ್ಕೆ ಸಲ್ಲಿಸಿದ್ದಂತ ಅರ್ಜಿಯಲ್ಲಿ ಎಂ.ಆರ್.ಪಿ ಬೆಲೆಗಿಂದ ಹೆಚ್ಚಿನ ದರವಾಗಿ 42 ರೂಪಾಯಿಯನ್ನು ಶ್ರೀನಿಧಿ ವೈನ್ಸ್ ಪಡೆದಿದೆ. ಅಂಗಡಿಯ ಮುಂದೆ ಎಂ.ಆರ್.ಪಿ ಅಂಗಡಿ ಎಂಬುದಾಗಿ ಬೋರ್ಡ್ ಹಾಕಿದ್ದರೂ, ಹೆಚ್ಚುವರಿಯಾಗಿ ಮದ್ಯ ಖರೀದಿದಾರರಿಂದ ಹಣ ಪಡೆಯಲಾಗುತ್ತಿದೆ. ತನ್ನಿಂದ 42 ರೂಪಾಯಿ ಹೆಚ್ಚುವರಿಯಾಗಿ ಪಡೆದ್ರೂ ಸರಿಯಾಗಿ ಉತ್ತರಿಸಿಲ್ಲ. ಇದರಿಂದ ನೊಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೇ ಎದುರುದಾರರ ಅನುಚಿತ ವ್ಯಾಪಾರ ವರ್ತನೆಯನ್ನು ಪ್ರಶ್ನಿಸಿ, ಸೂಕ್ತ ನ್ಯಾಯ ಕೊಡಿಸುವಂತೆ ಕೋರಿರುತ್ತಾರೆ.
‘ರಾಜ್ಯ ಸರ್ಕಾರ’ದ ವಿರುದ್ಧ ಸಿಡಿದೆದ್ದ ‘ಸ್ಯಾಂಡಲ್ ವುಡ್’ : ನಿರ್ಮಾಪಕರ ಸಭೆ ಕರೆದ ‘ಫಿಲ್ಮ್ ಚೇಂಬರ್’
ಇಂತಹ ಅರ್ಜಿದಾರರು ನ್ಯಾಯಾಲಯಕ್ಕೆ ಹಾಜರುಪಡಿಸಿದಂತ ದಾಖಲೆಗಳನ್ನು ಪರಿಶೀಲಿಸಿ, ಎದುರುದಾರರು ಹಾಜರಾಗಿ ಅಹವಾಲು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿರುತ್ತದೆ. ನೋಟಿಸ್ ಜಾರಿ ನಂತ್ರ ಎದುರುದಾರ ಶ್ರೀನಿಧಿ ವೈನ್ಸ್ ಪರವಾಗಿ ವಿಟಿ ರತ್ನಾಕರ ಎಂಬುವರ ವೇದಿಕೆ ಮುಂದೆ ಹಾಜರಾಗಿದೆ, ಅರ್ಜಿದಾರರು ತನ್ನ ಮೇಲೆ ಸುಳ್ಳು ಪ್ರಕರಣ ಹಾಕಿದ್ದಾರೆ. ಬೇರೆಯವರಿಗೆ ನೀಡಿರುವ ವಿಸ್ಕಿ ಬಿಲ್ಲನ್ನು ನ್ಯಾಯಲಯಕ್ಕೆ ಅರ್ಜಿದಾರರು ಹಾಜರುಪಡಿಸಿದ್ದಾರೆಂದು ಹೇಳಿದ್ದರು. ಅಲ್ಲದೇ ಶಿವರಾಮ್ ಅವರು ತಮ್ಮ ಅಂಗಡಿಯಲ್ಲಿ ವಿಸ್ಕಿ ಖರೀದಿಸಿಲ್ಲ. ಯಾರೋ ಒಬ್ಬ ಗ್ರಾಹಕ 21 ಪೌಚ್ ಅನ್ನು ಬಿಲ್ ನಂ.6631 ರಂತೆ ಖರೀದಿಸಿದ್ದು, ಅದನ್ನು ತೆಗೆದುಕೊಂಡು ತಮ್ಮ ಮೇಲೆ ಸುಳ್ಳು ದೂರು ಹಾಕಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಮುಂದುವರೆದು ತಮ್ಮ ಅಂಗಡಿಗೆ ದಿನನಿತ್ಯ ನೂರಾರು ಗ್ರಾಹಕರು ವಿಸ್ಕಿ ಮತ್ತು ಇತರ ಮದ್ಯ ಖರೀದಿಗಾಗಿ ಬರುತ್ತಿದ್ದು, ಖರೀದಿಯ ನಂತ್ರ ತಾವು ನೀಡಿದ ಬಿಲ್ಲುಗಳನ್ನು ಅಲ್ಲಿಯೇ ಎಸೆದು ಹೋಕಿರುತ್ತಾರೆ. ಅಂತಹ ಬಿಲ್ಲುಗಳನ್ನು ಅರ್ಜಿದಾರ ಶಿವರಾಮ್ ತಮ್ಮ ವಿರುದ್ಧ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಆರೋಪಿಸಿರುತ್ತಾರೆ.
ರಾಜ್ಯದಲ್ಲಿ ಕೊರೋನಾ ಮುಂದುವರೆದರೆ ಮತ್ತೊಮ್ಮೆ ಲಾಕ್ ಡೌನ್ ಜಾರಿ : ಮಹಾ ಸಿಎಂ ಉದ್ಧವ್ ಠಾಕ್ರೆ
ಈ ಕುರಿತು ಅವರು ಯಾವುದೇ ದೂರನ್ನು ಅರ್ಜಿದಾರರ ವಿರುದ್ಧ ದಾಖಲಿಸಿರುವುದಿಲ್ಲ ಮತ್ತು ಅರ್ಜಿದಾರರಲ್ಲಿ ಈ ಬಗ್ಗೆ ಪ್ರಶ್ನಿಸಿರುವುದಿಲ್ಲ. ಇದರಿಂದಾಗಿ ಎದುರುದಾರರು ತಾವು ಅನುಚಿತ ವ್ಯಾಪಾರ ನಡೆಸುತ್ತಿಲ್ಲ ಎಂಬ ಬಗ್ಗೆ ಸಾಕ್ಷ್ಯ, ನೀಡುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ಪರಿಗಣಿಸಿ, ನ್ಯಾಯಾಲಯವು ಈ ಕೆಳಕಂಡಂತೆ ತೀರ್ಪನ್ನು ಆಧರಿಸಿ ಮಾಡಿದೆ.
ರಾಷ್ಟ್ರೀಯ ಆಯೋಗದ 2011ರ ಹೋಟೆಲ್ ನ್ಯಾಯಮಂದಿರ ವಿರುದ್ಧ ಈಶ್ವರಲಾಲ್ ಜೇನಬಾಯಿ ದೇಸಾಯಿ ಪ್ರಕರಣ ಮತ್ತು 2014ರ ಡಿಕೆ ಚೋಪ್ರ ವಿರುದ್ಧ ಸ್ನ್ಯಾಕ್ಸ್ ಬಾರ್ ಪ್ರಕರಣದಲ್ಲಿ ಹೇಳಿರುವಂತೆ ಎಂ.ಆರ್.ಪಿ ಗಿಂತ ಹೆಚ್ಚು ಹಣ ಸ್ವೀಕರಿಸುವುದು, ಅನುಚಿತ ವ್ಯಾಪಾರ ( Unfair Trade Practice) ಎಂದು ಪರಿಗಣಿಸಲಾಗಿರುತ್ತದೆ. ಆದ್ದರಿಂದ ಮಾನ್ಯ ಆಯೋಗವು ಈ ಕೆಳಗಿನಂತೆ ಆದೇಶಿಸಿದೆ.
Big Breaking News: ‘ಕಬ್ಜ ಚಿತ್ರ’ದ ಶೂಟಿಂಗ್ ವೇಳೆ ಕಬ್ಬಿಣದ ರಾಡ್ ತಗುಲಿ, ‘ನಟ ಉಪೇಂದ್ರ’ ತಲೆಗೆ ಪೆಟ್ಟು.!
ಎದುರುದಾರರು ಅರ್ಜಿದಾರರಿಂದ ಹೆಚ್ಚುವರಿಯಾಗಿ ಪಡೆದ 42 ರೂಪಾಯಿ 42 ಪೈಸೆಗಳನ್ನು ಹಿಂತಿರುಗಿಸಬೇಕು. ಫಿರ್ಯಾದಿ ದಾಖಲಾದ ದಿನದಿಂದ 6 ವಾರಗಳ ಒಳಗಾಗಿ ಫಿರ್ಯಾದು ದಾಖಲಾದ ದಿನಾಂಕದಿಂದ ಶೇ.10ರ ಬಡ್ಡಿ ಸಮೇತ ನೀಡತಕ್ಕದ್ದು. ಮಾನಸಿಕ ಹಿಂಸೆಗಾದ ಪರಿಹಾರಕ್ಕಾಗಿ ಎದುರುದಾರರು ಅರ್ಜಿದಾರರಿಗೆ ರೂ.1000 ಗಳನ್ನು ಪರಿಹಾರವಾಗಿ ನೀಡತಕ್ಕದ್ದು. ಅದೇ ರೀತಿ ರೂ.2,500ಗಳನ್ನು ದಾವಾ ಖರ್ಚು ಎಂದು ಎದುರುದಾರರು ಅರ್ಜಿದಾರರಿಗೆ ನೀಡತಕ್ಕದ್ದು. ಎದುರುದಾರರು ರೂ.5,000ಗಳನ್ನು ಅನುಚಿತ ವ್ಯಾಪಾರ ನಡೆಸಿದ್ದಕ್ಕಾಗಿ ಮಾನ್ಯ ವೇದಿಕೆಯ ಕಲ್ಯಾಣ ನಿಧಿಯ ಖಾತೆಗೆ ಸಂದಾಯ ಮಾಡತಕ್ಕದ್ದು ಎಂಬುದಾಗಿ ಆದೇಶಿಸಿ ತೀರ್ಪು ನೀಡಿದೆ.
ಹೀಗ್ ಮದ್ಯಪ್ರಿಯರೇ ಹೇಳಿ.. ನಿಮಗೂ ಹೀಗೆ ಎಂ.ಆರ್.ಪಿ ಬಾರ್ ಗಳಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿರಬೇಕು. ಆ ಬಗ್ಗೆ ಏನ್ ಮಾಡಬಹುದು. ಎಂ ಆರ್ ಪಿ ಗಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡೋದು ಅನುಚಿತ ವ್ಯಾಪಾರ ಎಂಬುದಾಗಿ ತಿಳಿದಿರಲಿ.

ಶಿವಮೊಗ್ಗ : ಶರಾವತಿ ಕಣಿವೆಯ ಕಾರ್ಗಲ್ ವನ್ಯಜೀವಿ ವಲಯದಲ್ಲಿ 30 ಎಕರೆಗು ಹೆಚ್ಚು ದಟ್ಟ ಕಾಡು ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ನಡೆದು ಒಂದು ತಿಂಗಳೇ ಕಳೆದ್ರೂ, ನಿರ್ಲಕ್ಷ್ಯ ವಹಿಸಿದಂತ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳೋದಕ್ಕೆ, ಇಲಾಖೆಯ ಅಧಿಕಾರಿಗಳು ಮೀನಾಮೇಷ ವಹಿಸುತ್ತಿರುವುದೇಕೆ ಎಂಬುದಾಗಿ ಸಾಗರ ತಾಲೂಕಿನ ಪರಿಸರವಾದಿಗಳು ಕಿಡಿಕಾರಿದ್ದಾರೆ.
ಸಾಗರ ತಾಲೂಕಿನ ಕೊಗಾರು ಸಮೀಪದ ಬಾನುಕುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಕಾನೂರು ಕೋಟೆ ಹೋಗುವ ಮಾರ್ಗದ ಭೂತನ ಕಾನು ಪ್ರದೇಶದ 30 ಎಕರೆ ಕಾಡು ಬೆಂಕಿಗೆ ಅಹುತಿಯಾಗಿದ್ದರೂ ಈವರೆಗೆ ಪ್ರಾಥಮಿಕ ತನಿಖೆಯೂ ನಡೆಸದ ಇಲಾಖೆಯ ನಡೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದು ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮೂಢನಂಬಿಕೆ, ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಸುಪ್ರೀಂಗೆ ಪಿಐಎಲ್ ಸಲ್ಲಿಕೆ
ಒಂದು ತಿಂಗಳ ಹಿಂದೆ ಈ ಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಉಪ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಮರದ ದಿಮ್ಮಿಯೊಂದಕ್ಕೆ ಬೆಂಕಿ ಹಾಕಿ ಬೆಂಕಿ ಆರುವ ಮುನ್ನವೇ ಬೇಜವಾಬ್ದಾರಿಯಿಂದ ಹಿಂತಿರುಗಿದ್ದರಿಂದ ಬೆಂಕಿ ಕಾಡಿಗೆ ವ್ಯಾಪ್ತಿಸಿದೆ. ಇದರಿಂದಾಗಿ ಇತಿಹಾಸ ಪ್ರಸಿದ್ಧ ಕಾನೂರು ಕೋಟೆ ಹೋಗುವ ಮಾರ್ಗದ ಭೂತನ ಕಾನು ಪ್ರದೇಶದ 30 ಎಕರೆ ಕಾಡು ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿರುವುದಾಗಿ ಸ್ಥಳೀಯರು ಹೇಳುತ್ತಾರೆ.
ಈ ಬಗ್ಗೆ ತುಮರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹೋರಾಟಗಾರ ಜಿ. ಟಿ ಸತ್ಯನಾರಾಯಣ ಬೆಂಕಿಗೆ ನಾಶವಾದ ಕಾಡಿನ ಚಿತ್ರಣವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆನಂತ್ರವೂ ಕ್ರಮ ಕೈಗೊಳ್ಳಬೇಕಾದಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ…! ಹೊಸದಾಗಿ ‘ಬಿಗ್’ ಮನೆ ಪ್ರವೇಶಿಸಿದ್ದು ಇವರೇ ನೋಡಿ…!
ಈ ಕುರಿತು ಪರಿಸರವಾದಿ ಅಕಿಲೇಶ್ ಚಿಪ್ಳಿ ಮಾತನಾಡಿ, ಕೆಳಹಂತದ ಅರಣ್ಯ ಇಲಾಖೆ ನೌಕರರ ನಿರ್ಲಕ್ಷ್ಯ ದಿಂದ ಶರಾವತಿ ಅಭಯಾರಣ್ಯ ದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಪರಿಸರದಲ್ಲಿ ಅಪಾರ ಪ್ರಮಾಣದ ಜಿವವೈವಿದ್ಯಗಳು ನಾಶವಾಗಿದೆ. ನಿರ್ಲಕ್ಷ್ಯ ವಹಿಸಿದ ನೌಕರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಘಟನೆ ನಡೆದು ಒಂದು ತಿಂಗಳು ಆಗಿದ್ದು ಕಾಡು ನಾಶವಾಗಿರುವ ಸುದ್ದಿ ಹೊರ ಹೋಗದಂತೆ ತಡೆಯಲು ವನ್ಯಜೀವಿ ಇಲಾಖೆ ಅಧಿಕಾರಿಗಳು ಬೆದರಿಕೆ ತಂತ್ರ ಒಡ್ಡುತ್ತಾ ಇದ್ದಾರೆ. ಆದ್ದರಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಸತ್ಯನಾರಾಯಣ ಸ್ಥಳೀಯರ ಅಭಿಪ್ರಾಯವನ್ನ ದಾಖಲು ಮಾಡಿದ್ದಾರೆ. ಘಟನೆಯನ್ನ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಒಂದು ವಾರದಲ್ಲಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಕಾರ್ಗಲ್ ವಲಯ ಕಚೇರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದು ವಿಳಂಬವಾದರೆ ಹೋರಾಟವನ್ನ ಸಂಘಟನೆಗಳ ನೇತೃತ್ವದಲ್ಲಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ರೌಡಿಬೇಬಿ-ಸುಳ್ಳೆಪುಳ್ಳೆ ನಿಶ್ಚಿತಾರ್ಥಕ್ಕೆ ಅಡ್ಡಗಾಲು….! ಗಟ್ಟಿಮೇಳ ಸೀರಿಯಲ್ ಗೆ ಎಂಟ್ರಿ ಕೊಟ್ರು ಖಡಕ್ ವಿಲನ್….!
ಈ ಬಗ್ಗೆ ನಮ್ಮ ಕನ್ನಡ ನ್ಯೂಸ್ ನೌ ವೈಲ್ಡ್ ಲೈಫ್ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯಕ್ ಅವರನ್ನು ಸಂಪರ್ಕಿಸಿ ಮಾತನಾಡಿದಾಗ, ಭೂತನ ಕಾನು ಪ್ರದೇಶದ 30 ಎಕರೆ ಕಾಡಿಗೆ ಬೆಂಕಿ ಬಿದ್ದ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಘಟನೆ ನಡೆದ ನಂತ್ರ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗಳನ್ನು ಮಾಹಿತಿ ಪಡೆದ ವೇಳೆ ಸ್ಥಳೀಯರು ಹಾಕಿದ ಬೆಂಕಿಯಿಂದ ಕಾಡಿಗೆ ಬೆಂಕಿ ಬಿದ್ದಿದ್ದಾಗಿ ತಿಳಿಸಿದ್ದರು ಎಂದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ನಮ್ಮ ಸಿಬ್ಬಂದಿಗಳು ಸ್ಥಳೀಯರು ಕಾಡಿಗೆ ಬೆಂಕಿ ಬೀಳೋದಕ್ಕೆ ಕಾರಣವೆಂದು ಮಾಹಿತಿ ನೀಡಿದ್ದರು. ಆದ್ರೇ ಈ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಸಂಬಂಧ ವೀಡಿಯೋ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಈ ಬಗ್ಗೆ ಮತ್ತೆ ಪರಿಶೀಲನೆ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವರದಿ : ಉಮೇಶ್ ಮೊಗವೀರ, ಸಾಗರ

ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿ ಸಿ ರಾಜಹಂಸ ಬಸ್ ಪಲ್ಟಿಯಾಗಿರುವಂತ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಕ್ರಾಸ್ ಬಳಿ ನಡೆದಿದೆ.
ಇಂದು ಬೆಂಗಳೂರಿನಿಂದ ತೀರ್ಥಹಳ್ಳಿ ಮೂಲಕ ಕುಪ್ಪಳ್ಳಿಗೆ ತೆರಳುತ್ತಿದ್ದಂತ ಕೆಎಸ್ಆರ್ ಟಿ ಸಿ ರಾಜಹಂಸ ಬಸ್, ಮಾಳೂರು ಕ್ರಾಸ್ ಬಳಿ ತಿರುವು ಪಡೆಯುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದಾಗಿ ಬಸ್ ನಲ್ಲಿದ್ದಂತ ಕೆಲ ಪ್ರಯಾಣಿಕರು ಸೇರಿದಂತೆ ಚಾಲಕ, ನಿರ್ವಾಹಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬಸ್ ಪಲ್ಟಿಯಾಗಿದ್ದನ್ನು ಕಂಡಂತ ಸ್ಥಳೀಯರು, ಬಸ್ಸಿನಲ್ಲಿದ್ದಂತ ಪ್ರಯಾಣಿಕರು, ಚಾಲಕ, ನಿರ್ವಾಹಕರನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಪ್ರಯಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಈ ಸಂಬಂಧ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು : ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ರೂ.384 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಹಾಗೂ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ರೂ 220 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಅವರು ವಿಧಾನಸಭೆಯ ಪ್ರಶ್ನೋತ್ತರದಲ್ಲಿ ತಿಳಿಸಿದರು.
ಶಾಸಕ ಬಸನಗೌಡ ಆರ್ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಸಚಿವರು ವಿಮಾನ ನಿಲ್ದಾಣಕ್ಕೆ ತಾರತಮ್ಯ ಮಾಡಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಹೈಟೆನ್ಷನ್ ವೈರ್ ಹಾದು ಹೋಗುತ್ತಿದ್ದುದರಿಂದ ಅಲ್ಲಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ವಿಜಯಪುರ ವಿಮಾನ ನಿಲ್ದಾಣದ ಅನುದಾನದ ಬಗ್ಗೆ ಮುಖ್ಯಂತ್ರಿಗಳ ಜೊತೆ ಚರ್ಚಿಸುತ್ತೇನೆ. ಶಿವಮೊಗ್ಗ, ವಿಜಯಪುರ, ಹಾಸನ ಮಾತ್ರವಲ್ಲದೆ ಅಗತ್ಯವಿರುಡೆಯಲ್ಲಿ ಅಭಿವೃದ್ಧಿಪಡಿಸುತ್ತೇನೆ. ಯಾವ ವಿಮಾನ ನಿಲ್ದಾಣಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ಸಭೆಗೆ ತಿಳಿಸಿದರು.

ಶಿವಮೊಗ್ಗ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2020-21ನೇ ಸಾಲಿಗೆ “ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ”, “ಶುಲ್ಕ ವಿನಾಯಿತಿ”, “ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ” ಮತ್ತು “ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ” ಸೌಲಭ್ಯಕ್ಕಾಗಿ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿ: 20/04/2021 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ವೆಬ್ಸೈಟ್ www.ssp.postmatric.karnataka.gov.in ರಲ್ಲಿ ಏ.20 ರೊಳಗಾಗಿ ಸಲ್ಲಿಸುವುದು. ಯೋಜನೆಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ www.bcwd.karnataka.gov.in ಅಥವಾ ಸಹಾಯವಾಣಿ 8050770004/8050770005 ಅಥವಾ ಇ–ಮೇಲ್ bcwd.scholarship@karnataka.gov.in ಗಳನ್ನು ಸಂಪರ್ಕಿಸುವಂತೆ ಇಲಾಖೆಯ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿಗಳ ದೂ,ಸಂ. ಶಿವಮೊಗ್ಗ-08182-240078/222129, ಭದ್ರಾವತಿ-08282-264644, ಸಾಗರ-08183-220274, ಶಿಕಾರಿಪುರ-08187-222332, ಸೊರಬ-08184-272024, ಹೊಸನಗರ-08185-221050, ತೀರ್ಥಹಳ್ಳಿ-08181-220096 ಗಳಿಗೆ ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ವಾಣಿಜ್ಯ ಕಟ್ಟಡಗಳು/ಮಳಿಗೆಗಳಲ್ಲಿ ಗುತ್ತಿಗೆ ಪಡೆದಿರುವ ಬಾಡಿಗೆದಾರರು ಬಾಕಿ ಬಾಡಿಗೆ ಪಾವತಿಸಲು, ಕರಾರು ನವೀಕರಿಸಿಕೊಳ್ಳಲು ವಿಫಲರಾಗಿರುತ್ತಾರೆ. ಅಂತಹವರು ಕೂಡಲೇ ಬಾಕಿ ಬಾಡಿಗೆ ಮೊತ್ತವನ್ನು ಪಾವತಿಸಿ, ಗುತ್ತಿಗೆ ಕರಾರು ಪತ್ರಗಳನ್ನು ನವೀಕರಿಸಿಕೊಳ್ಳಲು ಸೂಚಿಸಿದ್ದು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಕ್ಫ್ ಆಸ್ತಿಗಳ ಗುತಿಗೆ ಪ್ರಕರಣಗಳ ಸಂಪೂರ್ಣ ಮಾಹಿತಿ ಇಲ್ಲದಿರುವುದು, ವಕ್ಫ್ ಆಸ್ತಿಗಳ ಗುತ್ತಿಗೆ ನಿಯಮ-2014ರಲ್ಲಿರುವ ಪ್ರಾವಧಾನಗಳ ಅನ್ವಯ ಬಾಡಿಗೆ ದರವನ್ನು ನಿಗಧಿಪದೇ ಇರುವುದು, 10-15 ವರ್ಷಗಳ ಹಿಂದೆ 11 ತಿಂಗಳ ಅವಧಿಗೆ ಗುತ್ತಿಗೆ ಪಡೆದಿದ್ದು, ನಂತರ ಗುತ್ತಿಗೆ ನವೀಕರಿಸಲಾಗಿರುವುದಿಲ್ಲ ಹಾಗೂ ಬಾಡಿಗೆ ದರ ಪ್ರಚಲಿತ ಮಾರುಕಟ್ಟೆ ಬೆಲೆ ಆಧಾರ ನಿಗಧಿಪಡಿಸದೇ ಇರುವುದು, ಗುತಿಗೆ ನೀಡುವುದರಲ್ಲಿ ವಕ್ಫ್ ಆಸ್ತಿಗಳ ಗುತ್ತಿಗೆ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಮುತವಲ್ಲಿ, ವ್ಯವಸ್ಥಾನಾ ಸಮಿತಿ ಮತ್ತು ಆಡಳಿತ ಅಧಿಕಾರಿಗಳು ಮತ್ತು ಉಸ್ತುವಾರಿ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮತ್ತು ವಕ್ಫ್ ಕಾಯ್ದೆಯ ಅನುಸಾರ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೊಗದ ಆದೇಶದನ್ವಯ 2011 ರಿಂದ 2015ನೇ ಸಾಲಿನ ಪಿರ್ಯಾದು ವಿಭಾಗದಿಂದ ಮುಕ್ತಾಯಗೊಂಡು ರೆಕಾರ್ಡ್ ಶಾಖೆಗೆ ನೀಡಲಾದ 2011 ರಿಂದ 2015ನೇ ಸಾಲಿನವರೆಗಿನ ಮೂಲ ದಾಖಲೆಗಳ ಕಡತಗಳನ್ನು ನಾಶಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
2011 ರಿಂದ 2015ರವರೆಗೆ ಅಂತಿಮ ಆದೇಶದ ವಿರುದ್ಧ ಕ.ರಾ.ಗ್ರಾ.ವ್ಯಾ.ಪ.ಆ. ಹಾಗೂ ರಾ.ಗ್ರಾ.ವ್ಯಾ.ಪ.ಆ. ಮತ್ತು ಉಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್ ಅರ್ಜಿ ಪುನರ್ ಪರಿಶೀಲನಾ ಅರ್ಜಿಗಳು ದಾಖಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಈ ಆಯೋಗದ ಗಮನಕ್ಕೆ ತರಬಹುದಾಗಿರುತ್ತದೆ.. ಹಾಗೂ ಆಯೋಗದಲ್ಲಿ ಪಕ್ಷಕಾರರು/ವಕೀಲರು ತಮ್ಮ ಪಿರ್ಯಾದು (ದೂರು)/ಎಕ್ಸಿಕ್ಯೂಷನ್ ಅರ್ಜಿ/ ಮಿಸಲೇನಿಯಸ್ ಪಿಟಿಷನ್ ಕಡತಗಳಲ್ಲಿನ ಮೂಲ ದಾಖಲೆ ಮತು ಇನ್ನಿತರ ಆದೇಶದ ಪ್ರತಿಗಳು ಅವಶ್ಯಕತೆವಿದ್ದಲ್ಲಿ ಮಾರ್ಚ್-31ರೊಳಗೆ ಆಯೋಗದಿಂದ ವಾಪಾಸ್ಸು ಪಡೆಯುವುದು. ಇಲ್ಲದಿದ್ದಲ್ಲಿ ಮೂಲ ದಾಖಲೆಗಳ ಅವಶ್ಯಕತೆವಿಲ್ಲ ಎಂದು ಭಾವಿಸಿ, ಏಪ್ರಿಲ್-01ರ ನಂತರ ತಮ್ಮ ಕೇಸಿಗೆ ಸಂಬಂದಿಸಿದಂತೆ ಎಲ್ಲಾ ಪ್ರತಿಗಳು, ಮೂಲ ದಾಖಲೆಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: ಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದ ಪೂಜ್ಯ ಶ್ರೀ ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದು, ಸಂಸದ ಬಿ.ವೈ. ರಾಘವೇಂದ್ರರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಡಿನಾಧ್ಯಂತ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಶ್ರೀಗಳು 44 ವರ್ಷಗಳ ಕಾಲ ಮಠವನ್ನು ಮುನ್ನೆಡೆಸಿ ನಡೆದಾಡುವ ದೇವರೆಂದೇ ಕರೆಯಲ್ಪಡುತ್ತಿದ್ದರು. ಸಮಾಜಮುಖಿ ಚಿಂತನೆಗಳ ಮೂಲಕ ಜಾತಿ ಜನಾಂಗಗಳ ಬೇದವಿಲ್ಲದೇ ಎಲ್ಲಾ ಜನರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಶ್ರೀಗಳು ಕೃಷಿ ಬಗ್ಗೆ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದರು. ಮಕ್ಕಳಿಲ್ಲದ ದಂಪತಿಗಳಿಗೆ ವಿಶೇಷವಾಗಿ ಗಿಡಮೂಲಿಕೆ ಔಷಧವನ್ನು ನೀಡುವುದರ ಮೂಲಕ ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಕಾರಣರಾಗಿದ್ದರು. ಕಳೆದ ಶುಕ್ರವಾರವಷ್ಟೇ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದನ್ನು ಸ್ಮರಿಸುತ್ತಾ, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿಯೂ ಸಹ ಕುಟುಂಬ ಸಮೇತ ಭೇಟಿ ನೀಡಿ ಪೂಜ್ಯ ಶ್ರೀಗಳ ಆರೋಗ್ಯ ವಿಚಾರಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ತಂದೆಯವರಾದ ಬಿ.ಎಸ್. ಯಡಿಯೂರಪ್ಪರವರ ಮಾರ್ಗದರ್ಶಕರಾಗಿ ಅವರ ಶ್ರೇಯೋಭಿವೃದ್ಧಿ ಬಗ್ಗೆ ಯಾವಾಗಲೂ ಉತ್ತಮ ಸಲಹೆಗಳನ್ನು ನೀಡುತ್ತಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಪೂಜ್ಯಶ್ರೀಗಳ ಅಗಲಿಕೆಯಿಂದ ನಾಡು ಒಬ್ಬ ಹಿರಿಯ ಮಾರ್ಗದರ್ಶಿಯನ್ನು ಕಳೆದುಕೊಂಡಂತಾಗಿದೆ. ಪೂಜ್ಯ ಶ್ರೀಗಳ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಸಮಸ್ತ ಭಕ್ತರಿಗೆ ಅವರ ಅಗಲಿಕೆಯ ದು:ಖ ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ : 2020-21ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರ ಆದೇಶಿಸಿದೆ. ಯೋಜನೆಯನ್ವಯ ಶಿವಮೊಗ್ಗ ಜಿಲ್ಲೆಯ ರೈತರು ತಮ್ಮ ಜಮೀನುಗಳ ಸರ್ವೆ ನಂಬರ್, ಹಿಸ್ಸಾ ನಂಬರ್ವಾರು ತಾವು ಬೆಳೆದ ಬೇಸಿಗೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ತಾವೇ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸಬಹುದಾಗಿದೆ. ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ನ ಗೂಗಲ್ ಪ್ಲೇಸ್ಟೋರ್ನಲ್ಲಿ ಬೇಸಿಗೆ ಹಂಗಾಮಿನ ರೈತರ ಬೆಳೆ ಸಮೀಕ್ಷೆ ಆಪ್ 2020-21 (Summer Farmer Crop Survey 2020-21) ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ದಾಖಲಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬೆಳೆ ಸಮೀಕ್ಷೆ ದತ್ತಾಂಶವನ್ನು ಸಾಂಖ್ಯಿಕ ಇಲಾಖೆ, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕುವ ಕಾರ್ಯದಲ್ಲಿ, ಬೆಳೆ ವಿಮೆ ಯೋಜನೆಯ ತಾಕು ಹಂತದ ಬೆಳೆ ಪರಿಶೀಲನೆಗೆ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಹಾಗೂ ತಾಕಿನ ಸರ್ವೇ ನಂಬರ್ ಆಯ್ಕೆಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಎನ್.ಡಿ.ಆರ್.ಎಫ್, ಮತ್ತು ಎಸ್.ಡಿ.ಆರ್.ಎಫ್.ನಡಿ ಸಹಾಯಧನ ನೀಡಲು ಅಂದರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸುವಲ್ಲಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ದಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆಯ ಮಾಹಿತಿಯನ್ನೆ ಆಧಾರವಾಗಿಟ್ಟುಕೊಂಡು ಸಿದ್ದಪಡಿಸುವುದರಿಂದ ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ಆಪ್ ನಲ್ಲಿ ನಮೂದಿಸುವುದು. ಬೇಸಿಗೆ ಹಂಗಾಮಿನ ಬೆಳೆ ಸಮೀಕ್ಷೆ ವಿವರಗಳನ್ನು ರೈತರು ದಿನಾಂಕ 25.03.2021ರ ಒಳಗಾಗಿ ಅಪ್ ಲೋಡ್ ಮಾಡಲು ಕಾಲಮಿತಿಯಿರುತ್ತದೆ.
ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆ ಮಾಹಿತಿಯನ್ನು ಅಪ್ಲೋಡ್ ಮಾಡದೇ ಇದ್ದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಸಮಿತಿಯು ನೇಮಿಸಿರುವ ಖಾಸಗಿ ನಿವಾಸಿಗಳ ಸಹಾಯದಿಂದ ತಮ್ಮ ಜಮೀನುಗಳ ಬೆಳೆ ಮಾಹಿತಿಯನ್ನು ಧಾಖಲಿಸಲು ದಿನಾಂಕ 25.03.2021 ರಿಂದ 15.4.2021ರ ವರೆಗೆ ಅವಕಾಶವಿರುತ್ತದೆ.
ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಖಚಿತ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ದಾಖಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರವರ ಕಛೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ತಹಶೀಲ್ದಾರ್ ಕಛೇರಿ ಅಥವಾ ಸಂಬಂದಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಮತ್ತು ಬೆಳೆ ಸಮೀಕ್ಷೆ ಸಹಾಯವಾಣಿ 8448447715 ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.

ಶಿವಮೊಗ್ಗ : ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆಗಳಲ್ಲೊಂದಾಗಿರುವ ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಯತ್ನಿಸಲಾಗಿದ್ದು, ಈ ಸಂಬಂಧ ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾತಾಮನ್ ಅವರನ್ನು ಭೇಟಿ ಮಾಡಿ ಮಾಡಿಕೊಳ್ಳಲಾಗಿದ್ದು, ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಇದೇ ರೀತಿ ಎಂಪಿಎಂ ಕಾರ್ಖಾನೆಯನ್ನು ಖಾಸಗಿ ವ್ಯವಸ್ಥೆಯಲ್ಲಿ ನಡೆಸಲು ಈಗಾಗಲೇ ಟೆಂಡರ್ ಕರೆದಿದ್ದು ಶೀಘ್ರ ಒಂದು ಹಂತಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಇಂದು ಎಂ.ಪಿ.ಎಂ. ಹಾಗು ವಿ.ಐ.ಎಸ್.ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಕೈಗಾರಿಕಾ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಆಯುಕ್ತ ಗುಂಜನ್ ಕೃಷ್ಣ ಹಾಗೂ ಪರಿಸರ ಅಧಿಕಾರಿ ಶ್ರೀನಿವಾಸ ಇವರುಗಳು ಉಪಸ್ಥಿತರಿದ್ದರು

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮೆಸ್ಕಾಂ ಇಲಾಖೆಯಿಂದ ಗಾಜನೂರು ಮೂಲಸ್ಥಾವರದಲ್ಲಿ ಮೀಟರಿಂಗ್ ಕ್ಯೂಬಿಕಲ್ ಬದಲಾವಣೆ ಮಾಡುವುದರಿಂದ ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುತ್ತಿದ್ದು, ದಿನಾಂಕ 16/03/2021 ಮತ್ತು 17/03/2021ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆಯ ಸಹಾಯಕ ಕಾರ್ಯಪಾಲಕ ಅಭಿಯಂತತರು ತಿಳಿಸಿದ್ದಾರೆ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ನಗರ ಉಪ ವಿಭಾಗ-2, ಘಟಕ -6ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾಮಗಾರಿ ಕೈಗೊಂಡಿರುವುರಿಂದ ದಿನಾಂಕ 17/03/2021 ರಂದು ಬೆಳಗ್ಗೆ 9:00ರಿಂದ ಸಂಜೆ 6:00ರ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾದಲಿದೆ.
ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್, ಓ.ಬಿ.ಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಿ.ಹೆಚ್ ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂನ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಶಿವಮೊಗ್ಗ: ಆರೋಗ್ಯ ಇಲಾಖೆಯ ಆಹಾರ ಮತ್ತು ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣಾ ಉದ್ಯಮದಾರರು ಹೀಗೆ ವಿವಿಧ ಆಹಾರೋದ್ಯಮದ ವ್ಯಾಪಾರಿಗಳಿಗೆ ಅಹಾರ ಸೇವೆಗಳ ಗುಣಮಟ್ಟ ಉದ್ದೇಶಗಳನ್ನು ಬಲಪಡಿಸುವ ಸಲುವಾಗಿ ತಜ್ಞ ತರಬೇತುದಾರರಿಂದ ಆಸಕ್ತರಿಗೆ ತರಬೇತಿಗಳನ್ನು ನೀಡಲು ಉದ್ದೇಶಿಸಿದೆ.
ಎಫ್.ಎಸ್.ಎಸ್.ಎ.ಐ. ನ ಶಿಫಾರಸ್ಸಿನಂತೆ ಎಲ್ಲಾ ಆಹಾರ ಉದ್ಯಮದಾರರು ವ್ಯಾಪಾರ ನಡೆಸುವ, ಆಹಾರ ತಯಾರಿಸುವ ಜಾಗದಲ್ಲಿ ಕನಿಷ್ಟ ಒಬ್ಬರಿಗೆ ಪಡೆದು ಪ್ರಮಾಣಪತ್ರ ಹೊಂದಿರುವ ಆಹಾರ ನಿರ್ವಾಹಕರು ಪ್ರತಿ ವ್ಯಾಪಾರ ಸ್ಥಳದಲ್ಲಿ ಕನಿಷ್ಟ ಓರ್ವ ಆಹಾರ ನಿರ್ವಾಹಕರು ಇರಬೇಕಾಗುವುದು.
ಈ ತರಬೇತಿಯಿಂದ ಉತ್ಪಾದಕತೆಯನ್ನು ಹೆಚ್ಚಿಸಲು ಸಹಯೋಗವನ್ನು ಹೊಂದಲು ನಿರ್ವಹಣೆಯು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿರ್ವಹಣೆ ವೆಚ್ಚ ಕಡಿಮೆ ಮಾಡಲು ಹೆಚ್ಚಿನ ಜ್ಞಾನ ಹೊಂದಲು, ತಾಂತ್ರಿಕವಾಗಿ ನೈಪುಣ್ಯತೆ ಪಡೆಯಲು ಬದಲಾಗುತ್ತಿರುವ ಜಗತ್ತಿನೊಂದಿಗೆ ತಾಂತ್ರಿಕವಾಗಿ ವ್ಯವಹರಿಸಲು, ಆದಾರ ಹೆಚ್ಚಿಸಲು ಆಹಾರೋಧ್ಯಮದ ಮುಂದಿನ ಭವಿಷ್ಯದ ರೂಪುರೇಷೆಗಳ ಬಗ್ಗೆ ಕಲಿಯಲು ತಿಳಿಯುವ ಅವಕಾಶವನ್ನು ಕಲ್ಪಿಸುವ ಸಲುವಾಗಿ ಎಲ್ಲಾ ಆಹಾರ ವಹಿವಾಟು, ಉದ್ದಿಮೆದಾರರು ಅತಿ ಸಣ್ಣ ಮತ್ತು ದೊಡ್ಡ ಉದ್ದಿಮೆಯವರು ಈ ತರಬೇತಿಯ ಲಾಭ ಪಡೆದುಕೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ : ಮಾರ್ಚ್ 20ರಂದು ಬೆಳಿಗ್ಗೆ 11ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ ಅವರ ಅಧ್ಯಕ್ಷತೆಯಲ್ಲಿ ಮೊದಲನೇ, ಎರಡನೇ ಮತ್ತು ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯನ್ನು ಏರ್ಪಡಿಸಲಾಗಿದೆ. ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಾಗುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.