pongal cuisine – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



pongal cuisine

pongal cuisine sankranti 2021 State

ಕೋಲಾರ: ಇಡೀ ದೇಶಕ್ಕೆ ದೇಶವೇ ಸಂಕ್ರಾಂತಿ ಹಬ್ಬವನ್ನು ಮಾಡುತ್ತಿರುವ ಈ ಸಮಯದಲ್ಲಿ ರಾಜ್ಯದ ಈ ಊರಿನಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡುವುದಕ್ಕೆ ಜನತೆ ಹೆದರುತ್ತಾರೆ.ಕೋಲಾರ ಜಿಲ್ಲೆಯ ಅರಾಭಿಕೊತ್ತನೂರು ಎನ್ನುವ ಹೆಸರಿನ ಈ ಗ್ರಾಮದ ಜನತೆ ಸಂಕ್ರಾಂತಿ ಹಬ್ಬವನ್ನು ಮಾಡೋದಿಲ್ಲ, ಇದಕ್ಕೆ ಕಾರಣ, 300 ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದ ದಿನ ಜಾನುವಾರುಗಳು ಕಾಲರ ಮಾದರಿಯ ಕಾಯಿಲೆಗೆ ತುತ್ತಾಗಿ ಸಾಮೂಹಿಕವಾಗಿ ಸಾವನ್ನಪ್ಪಿದ್ದವು ಅಂತೆ.

ಹೀಗಾಗಿ ಇಲ್ಲಿನ ಜನತೆ ಮಕರ ಸಂಕ್ರಾಂತಿ ಹಬ್ಬದಂದು ಸುಗ್ಗಿ ಹಬ್ಬವನ್ನು ಆಚರಣೆ ಮಾಡುವ ಗೋಜಿಗೆ ಹೋಗುವುದಿಲ್ಲ ಎನ್ನಲಾಗಿದೆ. ಇಲ್ಲಿನ ಜನತೆ ಈ ಹಬ್ಬದಂದು ಯಾವುದೇ ಸಂಭ್ರಮ, ಸಡಗರವಿಲ್ಲದೇ ಎದಿನಂತೆ ತಮ್ಮ ಜೀವನವನ್ನು ನಡೆಸುತ್ತಾರೆ. ಊರಿನ ಜನರು ಯಾವುದೇ ರೀತಿಯಲ್ಲೂ ಕೂಡ ಇಲ್ಲಿ ಹಬ್ಬವನ್ನು ಆಚರಣೆ ಮಾಡೋದಕ್ಕೆ ಕಳೆದ ಮೂರು ತಲೆಮಾರಿನಿಂದ ಮನಸ್ಸು ಮಾಡಿಲ್ಲ. ತಮ್ಮ ಹಿರಿಯರು ಹಬ್ಬವನ್ನು ಅಂದ ನಿಲ್ಲಿಸಿದ್ದಾರೆ, ಈಗ ಏನಾದ್ರು ತಾವುಗಳು ಹಬ್ಬವನ್ನು ಆಚರಣೆ ಮಾಡಿದ್ರೆ, ಎಲ್ಲಿ ತಮ್ಮ ರಾಸೂಗಳಿಗೆ, ತಮ್ಮ ಊರಿಗೆ ಕೆಡುಕು ಉಂಟಾಗುವುದೋ ಅಂತ ಇಲ್ಲಿ ಜನರನ್ನು ಕಾಡುತ್ತದೆ. ಆದರೆ ಇಲ್ಲಿ ಜನ ಸುಗ್ಗಿ ತೆರನಾಗಿ ಹಬ್ಬವನ್ನು ಬಸವ ಜಯಂತಿಯಂದು ಮಾಡಿ ಅಂದು ತಮ್ಮ ರಾಸುಗಳಿಗೆ ಸಿಂಗಾರಿಸಿ ಇಡೀ ಊರಿಗೆ ಊರೇ ನವ ವಧುವವಿನಂತೆ ಸಿಂಗಾರಗೊಳ್ಳುತ್ತದೆಯಂತೆ.


pongal cuisine sankranti 2021

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಂಕ್ರಾಂತಿ ಯು ದೇಶದಾದ್ಯಂತ ಆಚರಿಸಲ್ಪಡುವ ಸುಗ್ಗಿ ಹಬ್ಬವಾಗಿದೆ. ಮಕರ ಸಂಕ್ರಾಂತಿಯಈ ಹಬ್ಬದಲ್ಲಿ ನೀಡುವ ಬೆಲ್ಲ ನಿಮಗೆ ಏಕೆ ನೀಡಲು ಅನೇಕ ಕಾರಣವು ಕೂಡ ಇದೇ. ಅವುಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡ್ತಾ ಇದ್ದೀವಿ. 

1.ಮಲಬದ್ಧತೆಯನ್ನು ತಡೆಯುತ್ತದೆ: ಬೆಲ್ಲವು ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಮಲವಿಸರ್ಜನೆಯನ್ನು ಪ್ರಚೋದಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

2.ಯಕೃತ್ ಅನ್ನು ಡಿಟಾಕ್ಸ್ ಮಾಡುತ್ತದೆ: ನೀವು ನಿಮ್ಮ ದೇಹವನ್ನು ಪರಿಣಾಮಕಾರಿಯಾಗಿ ಡಿಟಾಕ್ಸ್ ಮಾಡಿ, ಸ್ವಚ್ಛಗೊಳಿಸಬೇಕೆಂದಿದ್ದರೆ ಬೆಲ್ಲವನ್ನು ಬಳಸಿ. ಇದು ದೇಹದಲ್ಲಿರುವ ಹಾನಿಕಾರಕ ವಿಷಗಳನ್ನು ಹೊರಹಾಕುವ ಮೂಲಕ ಯಕೃತ್ ಅನ್ನು ಶುದ್ಧೀಕರಿಸುತ್ತದೆ.

3.ಫ್ಲೂ ನಂತಹ ಲಕ್ಷಣಗಳನ್ನು ಗುಣಮಾಡುತ್ತದೆ: ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳ ವಿರುದ್ಧ ಹೋರಾಡಲು ಬೆಲ್ಲ ಸಹಾಯ ಮಾಡುತ್ತದೆ. ಇದನ್ನು ಬಿಸಿ ನೀರಿಗೆ ಬೆರೆಸಿ ಅಥವಾ ಸಕ್ಕರೆಯ ಬದಲು ಟೀ ಯಲ್ಲಿ ಬೆರೆಸಿ ದರೆ ಪ್ರಯೋಜನಗಳು ನಿಮ್ಮದಾಗುತ್ತದೆ.

4.ರಕ್ತ ಶುದ್ಧೀಕರಣ: ಬೆಲ್ಲದಲ್ಲಿ ರಕ್ತಶುದ್ಧಿಮಾಡುವ ಶಕ್ತಿ ಇದೆ. ನಿಯಮಿತವಾಗಿ ಮತ್ತು ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ರಕ್ತವನ್ನು ಶುದ್ಧೀಕರಿಸುತ್ತದೆ, ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ.

5.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಲ್ಲವು ಫ್ರೀ ರ್ಯಾಡಿಕಲ್ ಹಾನಿಯನ್ನು ತಡೆಯುತ್ತದೆ ಮತ್ತು ಸೋಂಕುಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಾದ ಸತು ಮತ್ತು ಸೆಲೆನಿಯಂ ಇದೆ. ಬೆಲ್ಲವು ರಕ್ತದಲ್ಲಿ ಹಿಮೋಗ್ಲೋಬಿನ್ ನ ಒಟ್ಟು ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

6.ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ: ಮುಟ್ಟಿನ ವೇಳೆ ಬರುವ ನೋವಿನಸೆಳೆತದಿಂದ ಬೆಲ್ಲವು ಮುಕ್ತಿ ನೀಡುತ್ತದೆ. ಹಲವಾರು ಅವಶ್ಯಕ ಪೋಷಕಾಂಶಗಳಲ್ಲಿ ಇದರ ಸಮೃದ್ಧತೆ ಇರುವುದರಿಂದ ಮುಟ್ಟಿನ ಸಮಸ್ಯೆಗಳಿಗೆ ಪರಿಣಾಮಕಾರಿ ಯಾದ ನೈಸರ್ಗಿಕ ಚಿಕಿತ್ಸೆಯಾಗಿದೆ. ಬೆಲ್ಲದಲ್ಲಿರುವ ಎಂಡರ್ಫಿನ್ ಗಳು ನಿಮ್ಮ ದೇಹವನ್ನು ಸಡಿಲಗೊಳಿಸಿ, ಪ್ರೀ ಮೆನ್ಸ್ಟ್ರಿಯಲ್ ಸಿಂಡ್ರೋಮ್ (ಪಿಎಮ್ ಎಸ್) ಅನ್ನು ತಡೆಗಟ್ಟುತ್ತವೆ.

7.ರಕ್ತಹೀನತೆಯನ್ನು ತಡೆಯುತ್ತದೆ: ಬೆಲ್ಲವು ವಿಶೇಷವಾಗಿ ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದರಲ್ಲಿ ಕಬ್ಬಿಣಾಂಶ ಮತ್ತು ಫೋಲೇಟ್ ಅಂಶವು ಅಧಿಕವಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟುತ್ತದೆ.

8.ದೇಹವನ್ನು ತಂಪಾಗಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಬೆಲ್ಲ ವು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಇದು ನಿಮ್ಮ ಹೊಟ್ಟೆಯನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಅಂಶವಿದ್ದು, ಇದು ದೇಹದಲ್ಲಿ ಆಮ್ಲದ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

9.ತೂಕ ಇಳಿಕೆ: ಬೆಲ್ಲವು ಎಲೆಕ್ಟ್ರೋಲೈಟ್ ಗಳ ಸಮತೋಲನ ಕ್ಕೆ ಮತ್ತು ಸ್ನಾಯುಗಳನ್ನು ಬಲಗೊಳಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಂ ಕೂಡ ನೀರಿನ ಧಾರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನಿಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

10.ಶಕ್ತಿಯ ಉತ್ತಮ ಮೂಲ: ಬೆಲ್ಲ ವು ದೇಹದಲ್ಲಿ ನಯವಾದ ಆಯಾಸ ಮತ್ತು ನಿಶ್ಯಕ್ತಿಯನ್ನು ತಡೆಯುತ್ತದೆ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದ್ದು, ಇದು ದೇಹಕ್ಕೆ ನಿಧಾನವಾಗಿ ಮತ್ತು ಹೆಚ್ಚು ಹೊತ್ತು ಶಕ್ತಿಯನ್ನು ನೀಡುತ್ತದೆ. ಅಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟಗಳು ತಕ್ಷಣ ಏರುವುದಿಲ್ಲ.

ಬೆಲ್ಲ ವು ಸಕ್ಕರೆಗಿಂತ ಒಳ್ಳೆಯದು ಮತ್ತು ಹೆಚ್ಚು ಪ್ರಯೋಜನಕಾರಿಯಾಗಿದೆ ಏಕೆ ಎಂದರೆ ಸಕ್ಕರೆಯು ಒಂದು ಸರಳ ಕಾರ್ಬೋಹೈಡ್ರೇಟ್ ಆಗಿದ್ದು, ಇದು ತಕ್ಷಣವೇ ರಕ್ತಪ್ರವಾಹದಲ್ಲಿ ಹೀರಿಕೊಳ್ಳುತ್ತದೆ ಮತ್ತು ತಕ್ಷಣಶಕ್ತಿಯನ್ನು ನೀಡುತ್ತದೆ.


pongal cuisine sankranti 2021

ಕೆಎನ್‌ಎನ್‌ಸ್ಪೆಷಲ್ ಡೆಸ್ಕ್‌:  ಹಬ್ಬ ಅಂದಮೇಲೆ ಪಾಯಸ ಮಾಡದೇ ಇದ್ದರೆ ಹೇಗೆ? ಈ ಬಾರಿ ಶ್ಯಾವಿಗೆ, ಕಡ್ಲೆ ಬೇಳೆ ಪಾಯಸದ ಬದಲಾಗಿ ಗೋಧಿ ನುಚ್ಚಿನ ಪಾಯಸ ಮಾಡಿ.

ಬೇಕಾಗಿರುವ ಸಾಮಾಗ್ರಿಗಳು : ಗೋಧಿ ನುಚ್ಚು 1 ಕಪ್, ತೆಂಗಿನಕಾಯಿ ತುರಿ 1 ಕಪ್, ಬೆಲ್ಲ 11/2 ಕಪ್, ಬಾದಾಮಿ 10 ರಿಂದ12.

ತಯಾರಿಸುವ ವಿಧಾನ:  ಬಾಣಲೆಯಲ್ಲಿ ಒಂದು ಕಪ್ ಗೋಧಿ ನುಚ್ಚು ಹಾಕಿ ಸ್ವಲ್ಪ ಹುರಿದುಕೊಳ್ಳಿ.  ಕುಕ್ಕರ್ ನಲ್ಲಿ ಹುರಿದ ನುಚ್ಚು ಗೋಧಿಗೆ ಮೂರು ಕಪ್ ನೀರು ಹಾಕಿ ಎರಡು ವಿಸಿಲ್ ಹಾಕಿ ಬೇಯಿಸಿಕೊಳ್ಳಬೇಕು.  ಮಿಕ್ಸಿಗೆ ತುರಿದ ತೆಂಗಿನ ಕಾಯಿ,ಬಾದಾಮಿ ಹಾಕಿ ನುಣ್ಣಗೆ ರುಬ್ಬಿ ಕೊಂಡು ಬೆಂದ ಗೋಧಿ ನುಚ್ಚಿಗೆ ಸೇರಿಸಿ.  ಕೊನೆಗೆ ಬೆಲ್ಲ ಹಾಕಿ ಕುದಿಸಿದರೆ ರುಚಿ ಮತ್ತು ಆರೋಗ್ಯಕರವಾದ ಗೋಧಿ ನುಚ್ಚಿನ ಪಾಯಸ ಸಿದ್ದ.


pongal cuisine sankranti 2021

ಕೆಎನ್‌ಎನ್‌ಸ್ಪೆಷಲ್ ಡೆಸ್ಕ್‌: ಮನೆಯಲ್ಲಿ ಸುಲಭವಾಗಿ ಮಾಡಬಹುದಾದಂತ ತಿನಿಸು ಎಂದರೆ ಅದು ಶಂಕರಪೋಳಿ. ಹಬ್ಬದ ದಿನ ಸಿಹಿ ಶಂಕರಪೋಳಿ ಮಾಡಿದರೆ ಇನ್ನು ಉತ್ತಮ. ಶಂಕರಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು : ಸಕ್ಕರೆ 1/2ಕಪ್, ಚಿರೋಟಿ ರವೆ 3ಲೋಟ, ಮೈದಾ 1ಲೋಟ, ಮೈದಾಹಿಟ್ಟು 1ಲೋಟ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ 1ಲೋಟ, ಎಣ್ಣೆ ಕರಿಯಲು ಬೇಕಾಗುವಷ್ಟು.

ಮಾಡುವ ವಿಧಾನ : ಸಕ್ಕರೆಯನ್ನು ಸ್ವಲ್ಪವೇ ನೀರಿನಲ್ಲಿ ಕರಗಿಸಿಕೊಂಡು ಇಟ್ಟಿರಿ.  ಮೇಲೆ ಹೇಳಿದ ಎಲ್ಲ ಹಿಟ್ಟುಗಳನ್ನು ಸೇರಿಸಿ ಉಪ್ಪು ಮತ್ತು ತುಪ್ಪ ಬೆರೆಸಿ ಸಕ್ಕರೆ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.  ಹಿಟ್ಟನ್ನು ನಿಮ್ಮ ಅಂದಾಜಿನಷ್ಟು ಕೈಯಲ್ಲಿ ಒಂದು ಹಿಡಿಯಷ್ಟು ದೊಡ್ಡದಾಗಿ ಉಂಡೆ ಮಾಡಿ. ನಂತರ ಅದನ್ನು ಲಟ್ಟಿಸಿ. ನಂತರ ನಿಮಗೆ ಬೇಕೆನಿಸಿದ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕಾಯಿಸಿ.  ಕೆಂಪಗೆ ಕಾದಾಗ ತೆಗೆದರೆ ಸಾಕು.  ಈಗ ಸಿಹಿಯಾದ ಶಂಕರಪೋಳಿ ಸವಿಯಲು ರೆಡಿ.


pongal cuisine sankranti 2021

ಕೆಎನ್‌ಎನ್‌ಸ್ಪೆಷಲ್ ಡೆಸ್ಕ್‌: ಗೋಧಿ ಹುಗ್ಗಿ ಬಲು ರುಚಿಯಾದ ಆಹಾರ. ಇದನ್ನು ಹೆಚ್ಚಾಗಿ ದೇವರಿಗೆ ನೈವೇದ್ಯ ಮಾಡಲು ಬಳಸಲಾಗುತ್ತದೆ. ಗೋಧಿ ನುಚ್ಚಿನಿಂದ ಮಾಡಿದಂತಹ ಈ ರುಚಿಯಾದ ತಿನಿಸನ್ನು ಮಾಡುವುದು ಹೇಗೆ ನೋಡೋಣ… 

ಬೇಕಾಗುಚ ಸಾಮಗ್ರಿಗಳು : ಗೋಧಿ ನುಚ್ಚು ಒಂದು ಕಪ್‌, ಹೆಸರುಬೇಳೆ ಅರ್ಧ ಕಪ್‌, ಕಾಳು ಮೆಣಸು ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಜೀರಿಗೆ ಸ್ವಲ್ಪ, ಇಂಗು ಚಿಟಿಕೆ , ಶುಂಠಿ ಸಣ್ಣ ಚೂರು, 2 ಹಸಿಮೆಣಸಿನಕಾಯಿ, ಕೊತ್ತಂಬರಿ ಕಾಲು ಚಮಚ, ಕರಿಬೇವು ,ಒಂದು ಚಮಚ ತುಪ್ಪ , ಕೊಬ್ಬರಿ ಅಥವಾ ತೆಂಗಿನ ತುರಿ , ಗೋಡಂಬಿ ಹತ್ತು.

ತಯಾರಿಸುವ ವಿಧಾನ :  ಮೊದಲು ಹೆಸರು ಬೇಳೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ತೊಳೆದುಕೊಂಡು ಬೇಯಿಸಿ.  ಗೋಧಿ ನುಚ್ಚನ್ನು ಬೆಚ್ಚಗೆ ಮಾಡಿ ಕುಕ್ಕರಿನಲ್ಲಿ ಬೇಯಿಸಿ.
ಈಗ ಬಾಣಲೆಗೆ ತುಪ್ಪ ಹಾಕಿ ಮೆಣಸು ಜೀರಿಗೆ, ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಗೋಡಂಬಿ ಎಲ್ಲ ಒಗ್ಗರಣೆ ಮಾಡಿ . ಬೆಂದಿರುವ ಹುಗ್ಗಿಗೆ ಉಪ್ಪು, ಕಾಯಿ ತುರಿ, ಕೊತ್ತಂಬರಿ ಹಾಕಿ ನಂತರ ಒಗ್ಗರಣೆ ಹಾಕಿ ಮಿಕ್ಸ್‌ ಮಾಡಿ.  ಬಿಸಿ ಬಿಸಿಯಾಗಿ ತಿನ್ನಲು ಡೆಡಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಉತ್ತಮ.


pongal cuisine sankranti 2021

ಕೆಎನ್‌ಎನ್‌ಸ್ಪೆಷಲ್ ಡೆಸ್ಕ್ಡೆಸ್ಕ್‌:: ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನುವುದು ಸಾಮಾನ್ಯ. ಈ ದಿನ ಎಳ್ಳು ಬೆಲ್ಲದ ಲಡ್ಡು ಮಾಡಿ ತಿಂದರೆ ಇನ್ನು ಚೆನ್ನಾಗಿರುತ್ತೆ ಆಲ್ವಾ? ಹಾಗಿದ್ದರೆ ಮತ್ತೇಕೆ ತಡ ಈವಾಗ್ಲೇ ಹೇಗೆ ಮಾಡೋದು ನೋಡಿ…

ಬೇಕಾಗುವ ಸಾಮಗ್ರಿಗಳು : ಬಿಳಿ ಎಳ್ಳು – 1ಕಪ್, 2.ಬೆಲ್ಲ – 1 ಕಪ್, 3.ತುಪ್ಪ – 3 ಚಮಚ, 4.ಏಲಕ್ಕಿ – 2, 1/2 ಕಪ್ ನೀರು

ತಯಾರಿಸುವ ವಿಧಾನ :  ಪ್ಯಾನ್ ಬಿಸಿ ಮಾಡಿ ಸಣ್ಣ ಉರಿಯಲ್ಲಿ ಎಳ್ಳನ್ನು ಬಿಸಿ ಮಾಡಿ. ಎಳ್ಳಿನ ಕಾಳು ಸ್ವಲ್ಪ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ 3-4 ನಿಮಿಷಗಳವರೆಗೆ ಹುರಿದಿಡಿ. ನಂತರ, ಹುರಿದ ಎಳ್ಳನ್ನು ತಟ್ಟೆಗೆ ಹಾಕಿ ತಣಿಯಲು ಬಿಡಿ. ಪಾತ್ರೆಯಲ್ಲಿ ನೀರನ್ನು ಕುದಿಸಿ ಇದಕ್ಕೆ ಬೆಲ್ಲವನ್ನು ಹಾಕಿ. ಆಗಾಗ್ಗೆ ತಿರುಗಿಸಿಕೊಂಡು ಅದನ್ನು ದಪ್ಪ ಮಿಶ್ರಣವಾಗಿಸಿ. ಈ ಮಿಶ್ರಣ ದಪ್ಪಗಾದ ನಂತರ, ಹುರಿದ ಎಳ್ಳಿನ ಕಾಳು ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿ. ಮಿಕ್ಸ್ ಮಾಡಿ.  ತುಪ್ಪವನ್ನು ಕರಗಿಸಿ ಮಿಶ್ರಣವಿರುವ ಪಾತ್ರೆಗೆ ಹಾಕಿ. ಸ್ಟೌ ನಿಂದ ಇಳಿಸಿ.  ಮಿಶ್ರಣ ಬಿಸಿ ಇರುವಾಗಲೇ ಲಾಡನ್ನು ಉಂಡೆ ಕಟ್ಟಲು ಪ್ರಾರಂಭಿಸಿ. ನಿಮ್ಮ ಕೈಗೆ ಸ್ಪಲ್ಪ ತುಪ್ಪ ಹಚ್ಚಿಕೊಂಡು ಸುಲಭವಾಗಿ ಉಂಡೆ ಮಾಡಿಕೊಳ್ಳಿ. ಈಗ ಟೇಸ್ಟಿಯಾದ ಎಳ್ಳು ಬೆಲ್ಲದ ಉಂಡೆ ಸೇವಿಸಿ.


pongal cuisine sankranti 2021

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಿಹಿ ಪೊಂಗಲ್ ನಂತೆ ಸಂಕ್ರಾಂತಿ ಹಬ್ಬಕ್ಕೆ ಮಾಡುವಂತಹ ಮತ್ತೊಂದು ತಿನಿಸು ಎಂದರೆ ಅದು ಖಾರ ಪೊಂಗಲ್. ಮಾಡೋದು ಹೇಗೆ ಅನ್ನೋದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು : ಹೆಸರು ಬೇಳೆ – 3/4 ಕಪ್, ಅಕ್ಕಿ -3/4 ಕಪ್, ಜೀರಿಗೆ -1 ಟೀ ಚಮಚ, ಶುಂಠಿ- 1 ಇಂಚು ಕರಿಬೇವು/ – 8-9, ಹಸಿ ಮೆಣಸಿನ ಕಾಯಿ, 2 ಚಮಚ ಕಾಳು ಮೆಣಸಿನ ಪುಡಿ, -3/4 ಟೀ ಚಮಚ, ಗೋಡಂಬಿ. 8-10, ಅರಿಶಿನ ಪುಡಿ-ಚಿಟಿಕೆ ಉಪ್ಪು- ರುಚಿಗೆ ತಕ್ಕಷ್ಟು, ತುಪ್ಪ- 1, 1/4 ಟೇಬಲ್ ಚಮಚ

ತಯಾರಿಸುವ ವಿಧಾನ :
ಕುಕ್ಕರ್ನಲ್ಲಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ 6 ಕಪ್ ನೀರನ್ನು ಸೇರಿಸಿ. ಮುಚ್ಚಳವನ್ನು ಮುಚ್ಚಿ.
ಕುಕ್ಕರ್ 4-5 ಸೀಟಿ ಕೂಗಲು ಬಿಡಿ. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ.
ಅದಕ್ಕೆ ತುರಿದುಕೊಂಡ ಶುಂಠಿ,ಹಸಿಮೆಣಸಿನ ಕಾಯಿಯನ್ನು ಸೇರಿಸಿ ಚೆನ್ನಾಗಿ ತಿರುವಿ.
ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ.
ಇದಕ್ಕೆ ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳ ಕಾಲ ಬೇಯಿಸಿ.
ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯಿಂದ ಕೆಳಗಿಳಿಸಿ.
ಈಗ ಬಿಸಿ ಬಿಸಿಯಾದ ಪೊಂಗಲ್ ಸವಿಯಲು ನೀಡಿ.


pongal cuisine sankranti 2021

ಕೆಎನ್‌ಎನ್‌ಸ್ಪೆಷಲ್ ಡೆಸ್ಕ್ಡೆಸ್ಕ್‌:: ಸಂಕ್ರಾಂತಿಗೆ ಮುಖ್ಯವಾಗಿ ಮಾಡುವ ತಿನಿಸು ಎಂದರೆ ಪೊಂಗಲ್. ಅದರಲ್ಲೂ ಸಿಹಿ ಪೊಂಗಲ್ ವಿಶೇಷವಾಗಿ ಮಾಡಲಾಗುತ್ತದೆ. ಇದನ್ನು ಹೇಗೆ ಮಾಡೋದು ಅನ್ನೋದನ್ನು ನೋಡೋಣ…

ಬೇಕಾಗುವ ಸಾಮಾಗ್ರಿಗಳು
1/2 ಕಪ್‌ ಅಕ್ಕಿ, 1/2 ಕಪ್‌ ಹೆಸರು ಬೇಳೆ , 1/2 ಕಪ್‌ ಬೆಲ್ಲ , ಅರ್ಧ ಚಮಚ ಏಲಕ್ಕಿ, 2-3 ಚಮಚ ತುಪ್ಪ, 1 ಚಮಚ ಒಣದ್ರಾಕ್ಷಿ,
5-6 ಗೋಡಂಬಿ, 2 ಲವಂಗ.

ತಯಾರಿಸುವ ವಿಧಾನ:

ಕುಕ್ಕರ್ ನಲ್ಲಿ ಬಿಸಿ ಮಾಡಿ ಅದಕ್ಕೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಹೆಸರು ಬೇಳೆ ಹಾಕಿ, ಹೆಸರು ಬೇಳೆಯಿಂದ ಪರಿಮಳ ಬರುವವರೆಗೆ ಫ್ರೈ ಮಾಡಿ.  ಬಳಿಕ ಪಾತ್ರೆಗೆ ಅಕ್ಕಿಯನ್ನು ತೊಳೆದು ಹಾಕಿ ನಂತರ 3 ಕಪ್‌ ನೀರು ಹಾಕಿ ಅಕ್ಕಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ ಮತ್ತೊಂದು ಪಾತ್ರೆಯಲ್ಲಿ ಬೆಲ್ಲದ ಪಾಕ ತಯಾರಿಸಿ.  ಅನ್ನ ಮತ್ತು ಬೇಳೆ ಚೆನ್ನಾಗಿ ಬೆಂದ ಬಳಿಕ ಬೆಲ್ಲದ ಪಾಕವನ್ನು ಅನ್ನದ ಪಾತ್ರೆಗೆ ಸುರಿಯಿರಿ. ಏಲಕ್ಕಿ ಜಜ್ಜಿ ಹಾಕಿ. ಬೆಲ್ಲ ಮಿಶ್ರ ಮಾಡಿದ ಅನ್ನ ಕುದಿ ಬರಲಾರಂಭಿಸಿದಾಗ ಉರಿಯಿಂದ ಇಳಿಸಿ.  ಇದೀಗ ಮತ್ತೊಂದು ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಲವಂಗ ಹಾಕಿ ನಂತರ ಒಣ ದ್ರಾಕ್ಷಿ, ಗೋಡಂಬಿ, ಹಾಕಿ 2 ನಿಮಿಷ ಫ್ರೈ ಮಾಡಿ ರೆಡಿ ಪೊಂಗಲ್‌ಗೆ ಹಾಕಿ. ಈಗ ರುಚಿಯಾದ ಸಿಹಿ ಪೊಂಗಲ್ ರೆಡಿ.