Health – Kannada News Now


Health

Health Lifestyle

ಸ್ಪೆಷಲ್ ಡೆಸ್ಕ್ : ತಲೆನೋವು ತುಂಬಾ ಕಿರಿ ಕಿರಿ ನೀಡುವಂತಹ ವಿಷಯ. ಕೆಲವೊಮ್ಮೆ, ಹೆಚ್ಚು ಕೆಲಸ ಮಾಡಿದರೆ ತಲೆನೋವು ಬರುತ್ತದೆ, ನಿದ್ರೆ ಸರಿಯಾಗಿ ಮಾಡದಿದ್ದರೆ ಅಂದರೆ ನಿದ್ರೆಯ ಕೊರತೆ, ಜೋರಾದ ಶಬ್ದ ಮತ್ತು ಒತ್ತಡವು ತಲೆನೋವಿಗೆ ಕೆಲವು ಸಾಮಾನ್ಯ ಕಾರಣಗಳಾಗಿವೆ. ಆದರೆ ತಲೆನೋವನ್ನು ಪ್ರಚೋದಿಸುವ ಇನ್ನೊಂದು ಕಾರಣ ಎಂದರೆ ನಾವು ಸೇವಿಸುವ ಕೆಲವೊಂದು ಆಹಾರಗಳು.

ಹೌದು, ಕೆಲವೊಂದು ಆಹಾರಗಳನ್ನು ತಿಂದರೆ ತಲೆನೋವು ಕಾಣಿಸಿಕೊಳ್ಳುತ್ತದೆ. ತಲೆನೋವನ್ನು ಪ್ರಚೋದಿಸುವ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ.

ಆಲ್ಕೋಹಾಲ್ : ಕೆಲವು ವೈನ್ ಗಳು ಮತ್ತು ಇತರ ಆಲ್ಕೋಹಾಲ್ ಗಳನ್ನು ತಾಜಾವಾಗಿಡಲು ಸಲ್ಫಿಟ್ ಗಳನ್ನು ಸೇರಿಸಲಾಗುತ್ತದೆ. ಇದರಿಂದ ಮೈಗ್ರೇನ್ ತಲೆನೋವು ಕಾಡುವುದು. ನಿಮ್ಮ ಪಾನೀಯದಲ್ಲಿ ಸಲ್ಫೈಟ್ ಇಲ್ಲದಿದ್ದರೂ ಸಹ, ಆಲ್ಕೋಹಾಲ್ ನಿಂದ ಉಂಟಾಗುವ ನಿರ್ಜಲೀಕರಣವು ನಿಮಗೆ ದೊಡ್ಡ ತಲೆನೋವನ್ನು ಉಂಟುಮಾಡಬಹುದು.

ಸೋಡಾ ಮತ್ತು ಕೋಲಾಗಳು : ಕೃತಕ ಸಿಹಿತಿಂಡಿಗಳು ತಲೆನೋವು, ತಲೆಸುತ್ತುವಿಕೆ ಮತ್ತು ನೆನಪಿನ ಶಕ್ತಿ ನಷ್ಟ ಮೊದಲಾದ ಸಮಸ್ಯೆ ತರುತ್ತದೆ. ಡಯಟ್ ಸೋಡಾ ಸೇವನೆಯ ನಂತರ ಪ್ರತಿಯೊಬ್ಬರಿಗೂ ತಲೆನೋವು ಬರುವುದಿಲ್ಲವಾದರೂ ಕೆಲವರಿಗೆ ಇದು ಒಂದು ಪ್ರಚೋದಕವಾಗಬಹುದು.

ಕ್ಯೂರ್ಡ್ ಮಾಂಸಗಳು : ಹಾಟ್ ಡಾಗ್ ಮತ್ತು ಬೇಕನ್ ನಂತಹ ಮಾಂಸಗಳು ಯಾವಾಗಲೂ ತಾಜಾವಾಗಿಯೇ ಇರುತ್ತವೆ. ಯಾಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಆಹಾರ ತಯಾರಕರು ಇವುಗಳನ್ನು ಸಂರಕ್ಷಿಸಲು ನೈಟ್ರೇಟ್ ಬಳಸುತ್ತಾರೆ. ಈ ಸಂಯುಕ್ತಗಳು ರಕ್ತನಾಳಗಳನ್ನು ವಿಮುಖಗೊಳಿಸಿ ತಲೆನೋವಿಗೆ ಕಾರಣವಾಗುತ್ತದೆ.

ಸೋಯಾ ಸಾಸ್ : ಸೋಯಾ ಸಾಸ್ ನಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸೌಮ್ಯ ನಿರ್ಜಲೀಕರಣಕೂಡ ತಲೆನೋವಿಗೆ ಕಾರಣವಾಗಬಹುದು.

ಎಂಎಸ್ ಜಿ ಇರುವ ಆಹಾರಗಳು : ಹೈಡ್ರೋಲೈಝಡ್ ತರಕಾರಿ ಪ್ರೋಟೀನ್, ಇದು ಫ್ಲೇವರ್ ವರ್ಧಕವಾಗಿದ್ದು, ಇದು ರಾಸಾಯನಿಕವಾಗಿ ಅಮೈನೋ ಆಮ್ಲವಾಗಿ ವಿಭಜಿಸಲ್ಪಟ್ಟ ಸಸ್ಯಪ್ರೋಟೀನ್ ಆಗಿದೆ. ಈ ಅಮೈನೋ ಆಮ್ಲಗಳಲ್ಲಿ ಒಂದಾದ ಗ್ಲುಟಾಮಿಕ್ ಆಮ್ಲವು ಮುಕ್ತ ಗ್ಲುಟಮೇಟ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿಮ್ಮ ದೇಹದಲ್ಲಿ ಮುಕ್ತ ಸೋಡಿಯಂ ಅನ್ನು ಸೇರಿಸುತ್ತದೆ ಮತ್ತು ಮೋನೊಸೋಡಿಯಂ ಗ್ಲುಟಮೇಟ್ (MSG) ಅನ್ನು ರೂಪಿಸುತ್ತದೆ. ಇದರಿಂದ ವಾಕರಿಕೆ ಮತ್ತು ತಲೆನೋವು ಉಂಟಾಗುತ್ತದೆ.

ಅವಕಾಡೊ : ಅವಕಾಡೊ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಆದರೆ ಕೆಲವು ಅವಕಾಡೋಗಳು ತಲೆನೋವನ್ನು ಉಂಟುಮಾಡಬಹುದು. ಇದು ಟೈರಮೈನ್ ಅನ್ನು ಹೊಂದಿದ್ದು, ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ ನಂತರ ಹಿಗ್ಗಲು ಕಾರಣವಾಗುತ್ತದೆ, ಇದು ಒಂದು ದೊಡ್ಡ ತಲೆನೋವಿಗೆ ಕಾರಣವಾಗುತ್ತದೆ.

ಬಾಳೆಹಣ್ಣು : ಆರೋಗ್ಯಕರ ತಿಂಡಿಗಳಲ್ಲಿ ಒಂದಾದ ಬಾಳೆಹಣ್ಣು ಕೂಡ ತಲೆನೋವಿಗೆ ಕಾರಣವಾಗಬಹುದು.

ಚೀಸ್ : ಹಳೆಯ ಚೀಸ್ ಟೈರಮೈನ್ ಅನ್ನು ಹೊಂದಿದ್ದು, ಇದು ನಿಮ್ಮ ರಕ್ತನಾಳಗಳನ್ನು ಸಂಕುಚಿತಗೊಳಿಸಿ ಹಿಗ್ಗಿಸಿ, ತಲೆನೋವಿಗೆ ಕಾರಣವಾಗುತ್ತದೆ.

ಗಮ್ :ನೀವು ಆಗಾಗ ಚ್ಯೂಯಿಂಗ್ ಗಮ್ ಅನ್ನು ಜಗಿಯುವ ಅಭ್ಯಾಸವನ್ನು ಹೊಂದಿದ್ದರೆ, ಇದು ನಿಮ್ಮ ಪದೇ ಪದೇ ತಲೆನೋವಿಗೆ ಕಾರಣವಾಗಿರಬಹುದು. ಒಂದು ಅಧ್ಯಯನದ ಪ್ರಕಾರ, ತಲೆ ಅಥವಾ ಕುತ್ತಿಗೆಯಲ್ಲಿ ದೀರ್ಘಕಾಲದ ಸ್ನಾಯು ಸಂಕೋಚನವು ತಲೆನೋವನ್ನು ಉಂಟು ಮಾಡುತ್ತದೆ.

Beauty Tips Food Health India Lifestyle Tour

ಡಿಜಿಟಲ್‌ಡೆಸ್ಕ್‌: ಮನೆಯಲ್ಲಿರುವ ಹಲವು ಪದಾರ್ಥಗಳಿಂದ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತೆ ಅಂತಾ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಅದ್ರಲ್ಲಿ ಒಂದು ಮನೆಯಲ್ಲೇ ಇರುವ ಕಪ್ಪು ಎಳ್ಳು. ಈ ಎಳ್ಳಿಗೆ ಅತ್ಯದ್ಭುತ ಶಕ್ತಿ ಇದೆ. ಇವುಗಳನ್ನ ದಾನ ಮಾಡುವುದ್ರಿಂದ ಹಲವು ದೋಷಗಳಿಗೆ ಪರಿಹಾರವೂ ಲಭಿಸುತ್ತೆ.

* ಕಾರ್ಯದ ಅಡ್ಡಿ-ಆತಂಕಗಳ ನಿವಾರಣೆ: ನೀವು ಮಾಡುವ ಕಾರ್ಯದಲ್ಲಿ ಪದೇ ಪದೇ ಅಡಚಣೆ ಆಗುತ್ತಿದ್ದರೆ ಅಥವಾ ಅಡಚಣೆ ಇದ್ದರೆ ಒಂದು ತಂಬಿಗೆಯಲ್ಲಿ ನೀರು ತುಂಬಿಸಿ ಅದಕ್ಕೆ ಎಳ್ಳು ಹಾಕಿ ಶಿವಲಿಂಗಕ್ಕೆ ಅರ್ಪಿಸಬೇಕು. ಅಭಿಷೇಕದ ಸಂದರ್ಭ ಮಂತ್ರ ಜಪಿಸಿ, ಹೂ ಮತ್ತು ಬಿಲ್ವಪತ್ರೆ ಅರ್ಪಿಸಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗುತ್ತೆ ಅನ್ನೋದು ನಂಬಿಕೆ.

* ಶನಿದೋಷ ನಿವಾರಣೆ: ಜ್ಯೋತಿಷಿಗಳು ನಿಮ್ಮ ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿದ್ದಾನೆ, ಇಲ್ಲಿದ್ದರೆ ಶುಭವಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಇಂತಹ ಸಂದರ್ಭದಲ್ಲಿ ನೀವು ಪ್ರತಿ ಶನಿವಾರ ಕಪ್ಪು ಎಳ್ಳು ಪವಿತ್ರ ನದಿಗೆ ಸಮರ್ಪಿಸಿ. ಇದರಿಂದ ಶನಿದೋಷ ನಿವಾರಣೆಯಾಗುತ್ತದೆ.

* ರೋಗ ನಿವಾರಣೆಗೆ: ನೀವೇನಾದ್ರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೇ ಭಕ್ತಿಯಿಂದ ಕಪ್ಪೆಳ್ಳನ್ನ ಶಿವಲಿಂಗಕ್ಕೆ ಸಮರ್ಪಿಸಿ. ಎಳ್ಳು ಮತ್ತು ಶಿವನ ದಯೆಯಿಂದ ರೋಗಗಳು ದೂರವಾಗಿ ಆರೋಗ್ಯ ವೃದ್ದಿಯಾಗುತ್ತೆ.

* ಕೆಟ್ಟ ಸಮಯ ಕಳೆಯಲು: ಇನ್ನು ಹಾಲಿನಲ್ಲಿ ಕಪ್ಪು ಎಳ್ಳು ಬೆರೆಸಿ ಶನಿವಾರದ ದಿನ ಜನರಿಗೆ ನೀಡುವುದರಿಂದ ನಮ್ಮ ಕೆಟ್ಟ ಸಮಯ ಹೋಗಿ ಒಳ್ಳೆ ಸಮಯ ಶುರುವಾಗುತ್ತೆ ಅನ್ನೋದು ನಂಬಿಕೆ.

* ರಾಹು-ಕೇತು ದೋಷ ನಿವಾರಣೆ: ಜಾತಕದಲ್ಲಿ ರಾಹು-ಕೇತು ದೋಷ ಪರಿಹಾರಕ್ಕಾಗಿ ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದ್ರಿಂದ ಕಾಲಸರ್ಪ ದೋಷ, ಸಾಡೇಸಾತಿ, ಪಿತೃ ದೋಷ ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಇದೆ.

Beauty Tips Food Health India Lifestyle Tour

ಡಿಜಿಟಲ್‌ಡೆಸ್ಕ್‌: ನಾರಿಗೆ ಕೇಶವೇ ಭೂಷಣ ಅಂತಾರೆ. ಹಾಗಂತ ಬರೀ ಕೂದಲಿದ್ರೆ ಸಾಕಾಗುವುದಿಲ್ಲ, ಅವು ಅಂದವಾಗಿ ಇರ್ಬೇಕು. ಆಗ ನಾರಿ ಮತ್ತಷ್ಟು ಚೆಂದವಾಗಿ ಕಾಣ್ತಾಳೆ. ಅದ್ರಲ್ಲೂ ನೀಳ ಕೇಶರಾಶಿ ಇದ್ದರಂತೂ ಮುಗಿದೆಯೋಯ್ತು. ಆಕೆ ನಾಲ್ಕು ಜನರ ಚಿತ್ತ ಕದಿಯುವುದ್ರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಂತ ಈ ನೇರ ಕೂದಲಿಗಾಗಿ ನೀವು ಬ್ಯೂಟಿ ಪಾರ್ಲರ್‌ಗೆ ಹೋಗ್ಬೇಕು ಅಂತೇನಿಲ್ಲ. ನಾವು ಕೂಡುವ ಈ ಸಿಂಪಲ್‌ ಸಲಹೆಗಳನ್ನ ಅನುಸರಿಸಿದ್ರೆ ಸಾಕು, ಮನೆಯಲ್ಲಿಯೇ ಕೂತು ಸ್ಟ್ರೈಟ್‌ನರ್‌ ಇಲ್ಲದೆಯೇ ಸ್ಟ್ರೈಟ್‌ ಹೇರ್‌ ಪಡೆಯಬೋದು. ಸಾಮಾನ್ಯ ಸ್ಟ್ರೈಟ್‌ನರ್‌ ಉಪಯೋಗಿಸುವುದ್ರಿಂದ ಕೂದಲು ಕವಲೊಡೆದು ಹೊಳಾಗುವುದು, ಕೂದಲು ಉದುರುವ ಸಮಸ್ಯೆಗಳು ಕಾಣಿಸುತ್ವೆ. ಹಾಗಾಗಿ ಶಾಖ ನೀಡದೇ ಮಾಡುವ ಈ ಸಿಂಪಲ್‌ ಮೆಥಡ್‌ಗಳನ್ನ ಅನುಸರಿಸಿ ನಿಮ್ಮ ಕೇಶಗಳನ್ನ ನೇರವಾಗಿ ಪರಿವರ್ತಿಸಿಕೊಳ್ಳಿ. 1. ಬ್ಯಾಂಡಿಂಗ್: ಇದು ಶಾಖವಿಲ್ಲದೆ ಕೂದಲನ್ನು ನೇರಗೊಳಿಸುವ ಅತ್ಯಂತ ಯಶಸ್ವಿ ಮತ್ತು ಸಾಂಪ್ರದಾಯಿಕ ವಿಧಾನಗಳಲ್ಲಿ ಒಂದು.. ತಲೆ ಸ್ನಾನ ಮಾಡಿ ಕೂದಲು ಒಣಗುವ ಮುನ್ನವೇ ಬಾಚಣಿಕೆಯಿಂದ ಬಾಚುತ್ತಾ, ಕೂದಲನ್ನ ವಿಭಜಿಸಿಕೊಳ್ಳಿ. ನಂತ್ರ ಅವಕ್ಕೆ ಬಾಬಿ ಪಿನ್‌ಗಳನ್ನ ಹಾಕಿ. ಅಮೇಲೆ ಉದ್ದವಾದ ಕೂದಲನ್ನ ಇದೇ ರೀತಿ ಸುತ್ತಿಕೊಳ್ಳುತ್ತಾ ಬಾಬಿ ಪಿನ್‌ಗಳನ್ನ ಹಾಕಿ. ಕೊನೆಯಲ್ಲಿ ರೇಷ್ಮೆ ಬಟ್ಟೆಯಿಂದ ಕೂದಲನ್ನ ಕಟ್ಟಿಕೊಳ್ಳಿ. ಹೀಗೆ ಮಾಡೋದ್ರಿಂದ ಕೂದಲು ನೇರವಾಗಿ ಪರಿವರ್ತನೆ ಆಗೋದು ಖಂಡಿತ. 2. ಡೈ ಸ್ಟ್ರೈಟ್‌ನಿಂಗ್‌ ಮಾಸ್ಕ್‌: ಮನೆಯಲ್ಲಿ ತಯಾರಿಸಿದ ಅಥವಾ ಶಾಪ್‌ಗಳಲ್ಲಿ ಸಿಗುವ ಹೇರ್ ಮಾಸ್ಕ್‌ನಿಂದಲೂ ಕೂದಲನ್ನ ನೇರಗೊಳಿಸಬಹುದು. ವಾರಕೊಂದು ದಿನದಂತೆ ಕೆಲ ತಿಂಗಳುಗಳವರೆಗೆ ಹೇರ್‌ ಮಾಸ್ಕ್‌ ಬಳಸುವುದ್ರಿಂದ ಕೂದಲು ನೇರವಾಗುವುದು ಖಂಡಿತ. ಅಂದ್ಹಾಗೆ, ಮನೆಯಲ್ಲಿ ಮಾಸ್ಕ್‌ ತಯಾರಿಸುವುದು ಹೇಗೆ ಅನ್ನೋದನ್ನ ನೋಡಿ.

1. ಹಾಲು ಮತ್ತು ಮೊಟ್ಟೆ: ಒಂದು ಬೌಲ್‌ಗೆ 2 ಕಪ್‌ ಹಾಲು ಮತ್ತು1 ಮೊಟ್ಟೆ ರಸವನ್ನ ಹಾಕಿ ಚನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. 10 ನಿಮಿಷ ಬಿಟ್ಟು ಕೂದಲಿಗೆ ಹಚ್ಚಿ, ಪ್ಲ್ಯಾಸ್ಟಿಕ್ ಕವರ್‌ ಕಟ್ಟಿ, 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ಕೂದಲು ನೇರವಾಗಿ ಬದಲಾಗುತ್ತೆ. 2. ಒಂದು ಕಪ್‌ ಹಾಲಿಗೆ ಒಂದು ಚಮಚ ಜೇನು ತುಪ್ಪ ಬೆರೆಸಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತಲೆ ಸ್ನಾನ ಮಾಡುವುದ್ರಿಂದ ಕೇಶ ನೇರವಾಗುತ್ತೆ. 3. ನಿಂಬೆ ರಸ ಮತ್ತು ತೆಂಗಿನ ಹಾಲು: ಬೌಲ್‌ವೊಂದಕ್ಕೆ 1 ಕಪ್ ತೆಂಗಿನ ಹಾಲು, 5-6 ಚಮಚ ನಿಂಬೆ ರಸ, 2 ಚಮಚ ಎಣ್ಣೆ ಹಾಗೂ 3 ಚಮಚ ಕಾರ್ನ್‌ಸ್ಟಾರ್ಚ್ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ತಣ್ಣಾಗದ ನಂತ್ರ ತಲೆಗೆ ಹಚ್ಚಿ,30-45 ನಿಮಿಷ ಬಿಟ್ಟು ತೊಳೆಯುವುದ್ರಿಂದ ಕೂದಲು ಸ್ಟ್ರೈಟ್‌ ಆಗುತ್ತೆ. ಕೂದಲು ಸ್ರ್ಟೈಟ್‌ ಮಾಡಲು ಇನ್ನೊಂದು ಸುಲಭ ಉಪಾಯ ಅಂದ್ರೆ, ತಲೆ ಸ್ನಾನ ಮಾಡಿದ ನಂತರ ಕೂದಲು ಒದ್ದೆಯಾಗಿರುವಾಗ್ಲೇ, ಮುಡಿ ಕಟ್ಟಿ, ರಬ್ಬರ್‌ ಬ್ಯಾಂಡ್‌ ಹಾಕಿ. ಕೂದಲು ಸಂಪೂರ್ಣ ಒಣಗಿದ ನಂತ್ರ ಬಾಚಣಿಕೆಯಿಂದ ಬಾಚಿ. ಇದ್ರಿಂದಲೂ ಕೂದಲು ನೇರವಾಗುವುದು ಖಂಡಿತ.

Health Lifestyle

ಡಿಜಿಟಲ್‌ಡೆಸ್ಕ್‌:ಹಣ್ಣು ಮತ್ತು ತರಕಾರಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅನ್ನೋ ಸಂಗತಿ ಅನೇಕರಿಗೆ ಗೊತ್ತು. ಆದ್ರೆ, ಯಾವ ಸಮಯದಲ್ಲಿ ಯಾವ ಹಣ್ಣು ತಿನ್ನುವುದು ಸೂಕ್ತ. ಅದ್ರಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು ಅನ್ನೋ ವಿಷ್ಯ ಅನೇಕರಿಗೆ ಗೊತ್ತಿಲ್ಲ. ಅಂದ್ಹಾಗೆ, ಪ್ರಕೃತಿಯಲ್ಲಿ ಹವಾಮಾನಕ್ಕೆ ತಕ್ಕಂತೆ ಕೆಲವೊಂದು ಹಣ್ಣುಗಳು ನಮಗೆ ಲಭ್ಯವಾಗುತ್ವೆ. ಇವುಗಳನ್ನ ತಿಂದು ಆರೋಗ್ಯವನ್ನ ಸುಸ್ಥಿತಿಯಲ್ಲಿಡಬೋದು. ಹೌದು, ಹಣ್ಣುಗಳು ಕೇವಲ ಆರೋಗ್ಯ ವೃದ್ಧಿಸುವುದಷ್ಟೆ ಅಲ್ಲ, ಕೆಲವೊಂದು ಖಾಯಿಲೆಗಳನ್ನ ಗುಣಪಡಿಸುವ ಶಕ್ತಿಯಿದೆ. ಇನ್ನು ಶೀತ, ಜ್ವರದಂತಹ ಕೆಲ ಪುಟ್ಟ ಸಮಸ್ಯೆಗಳಿಗೆ ಈ ಹಣ್ಣುಗಳು ರಾಮಾಬಾಣವಿದ್ದಂತೆ. ಹಾಗಾದ್ರೆ, ಶೀತ, ಜ್ವರದಂತಹ ನಿವಾರಣೆಗೆ ಯಾವ ಹಣ್ಣು ತಿನ್ನಬೇಕು ಅನ್ನೋದನ್ನ ತಿಳಿಯೋಣ ಬನ್ನಿ.

ಸೇಬಿನಲ್ಲಿದೆ ವೈರಸ್ ಗಳಿಂದ ರಕ್ಷಿಸುವ ಶಕ್ತಿ..!
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಅಂತಾ ದೊಡ್ಡವರು ಹೇಳ್ತಾರೆ. ಯಾಕೆಂದರೆ, ಸೇಬು ಮಾನವನ ಶರೀರಕ್ಕೆ ಬೇಕಾಗಿರುವಂತಹ ಆಂಟಿಆಕ್ಸಿಡೆಂಟ್ ನ್ನು ಹೆಚ್ಚಿನ ಮಟ್ಟದಲ್ಲಿ ನೀಡುವುದು. ಒಂದು ಸೇಬಿನಲ್ಲಿ ಆಂಟಿ ಆಕ್ಸಿಡೆಂಟ್ ನ ಪರಿಣಾಮವಾಗಿರುವ ವಿಟಮಿನ್ ಸಿ 1,500 ಗ್ರಾಂನಷ್ಟಿರುತ್ತೆ. ಇನ್ನೂ ಫ್ಲಾವನಾಯ್ಡ್ ಗಳಿಂದ ತುಂಬಿರುವಂತಹ ಸೇಬು ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ ನ್ನು ತಡೆಯುವ ಶಕ್ತಿ ಹೊಂದಿದೆಯಂತೆ.. ಅಲ್ದೇ ಇದು ಚರ್ಮಕ್ಕೆ ಕಾಂತಿ ನೀಡುವುದ್ರ ಜೊತೆಗೆ ದೇಹವನ್ನ ಆರೋಗ್ಯವಾಗಿ ಇಡುತ್ತದೆ. ಇನ್ನೂ ಶೀತ ಮತ್ತು ಜ್ವರದ ವೈರಸ್ ನಿಂದ ರಕ್ಷಿಸುವುದು.

ಖಾಯಿಲೆಗಳ ಸರ್ವನಾಶಕ ಈ ಬಾಳೆಹಣ್ಣು..!
ಈ ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ6ನ್ನ ಸಮೃದ್ಧವಾಗಿರುತ್ವೆ. ಬಾಳೆಯನ್ನ ಸೇವಿಸೊದ್ರಿಂದ ನಿಶ್ಯಕ್ತಿ, ಖಿನ್ನತೆ, ಒತ್ತಡ ಮತ್ತು ನಿದ್ರಾಹೀನತೆ ನಿವಾರಣೆ ಆಗುತ್ತೆ. ಇನ್ನಿದು ಹಸಿವು ನೀಗಿಸೋದ್ರ ಜೊತೆಗೆ ದೇಹಕ್ಕೆ ಹೆಚ್ಚು ಕೊಬ್ಬು ಸೇರದಂತೆ ನೋಡಿಕೊಳ್ಳುತ್ತೆ. ಇದರಲ್ಲಿರುವ ಮೆಗ್ನಿಶಿಯಂನ ಮೂಳೆಯ ಆರೋಗ್ಯವನ್ನ ಕಾಪಾಡುವುದ್ರ ಜೊತೆಗೆ ಬಲಗೊಳಿಸುತ್ತೆ. ಇನ್ನೂ ಬಾಳೆಯಲ್ಲಿರುವ ಪೊಟಾಶಿಯಂ ಅಂಶದಿಂದ ಹೃದಯದ ಖಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆ ಮಾಡಬಹುದು.

ಸೋಂಕುಗಳಿಗೆ ಮದ್ದು ಈ ಕಲ್ಲಂಗಡಿ ಹಣ್ಣು..!
ಅತಿಯಾದ ಉಷ್ಣತೆಯಿಂದ ಪಾರು ಮಾಡುವ ಕಲ್ಲಂಗಡಿ ಹಣ್ಣಿಗೆ ಶೀತ ಹಾಗೂ ಜ್ವರವನ್ನ ದೂರ ಮಾಡುವ ಶಕ್ತಿಯಿದೆ. ಇದ್ರಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುತ್ವೆ. ಹಾಗಾಗಿ ದೇಹದಲ್ಲಿನ ಉರಿಯೂತ ಕಡಿಮೆ ಮಾಡುವುದು ಮತ್ತು ದೇಹವನ್ನ ಸೋಂಕಿನಿಂದ ರಕ್ಷಿಸುವುದು.

Beauty Tips Food Health India Lifestyle Tour

ಡಿಜಿಟಲ್‌ಡೆಸ್ಕ್‌: ಮೈಗ್ರೇನ್‌ ಅನ್ನು ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ‘ಪುನರಾವರ್ತಿತ ಥ್ರೋಬಿಂಗ್ ತಲೆನೋವು’ ಎಂದು ಕರೆಯುತ್ತದೆ, ಇದು ಸಾಮಾನ್ಯವಾಗಿ ತಲೆಯ ಒಂದು ಬದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ನಮ್ಮನ್ನು ಹಿಂಡಿ ಹಿಪ್ಪೆಕಾಯಿ ಮಾಡಿ ಬಿಡುತ್ತದೆ ಈ ಮೈಗ್ರೇನ್‌. ಅಂದ ಹಾಗೇ ಮೈಗ್ರೇನ್ ರಿಸರ್ಚ್ ಫೌಂಡೇಶನ್ (ಎಮ್ಆರ್ಎಫ್) ಪ್ರಕಾರ ಇದು ವಿಶ್ವದ ಮೂರನೇ ಅತ್ಯಂತ ಪ್ರಚಲಿತ ಕಾಯಿಲೆಯಾಗಿದೆ ಇದರಿಂದ ವಿಶ್ವಾದ್ಯಂತ ಸುಮಾರು 1.04 ಬಿಲಿಯನ್ ವಯಸ್ಕರು ತೊಂದರೆ ಪಡುತ್ತಿದ್ದಾರಂತೆ.

ಗರ್ಭಧಾರಣೆ, ಜನನ ನಿಯಂತ್ರಣ ಮಾತ್ರೆಗಳು ಮತ್ತು ಹಾರ್ಮೋನ್ ಬದಲಿ ಚಿಕಿತ್ಸೆಯು ನಮ್ಮ ಹಾರ್ಮೋನುಗಳಲ್ಲಿ ಬದಲಾವಣೆಗೆ ಕಾರಣವಾಗಿದ್ದು. ಇದು ನಮ್ಮ ಮೈಗ್ರೇನ್ ಅನ್ನು ಪ್ರಚೋದಿಸುತ್ತದಯಂತೆ. ಇದಲ್ಲದೇ ಭಾವನಾತ್ಮಕ ಒತ್ತಡ, ಕೋಪ, ಖಿನ್ನತೆ, ನಿದ್ರೆಯಲ್ಲಿನ ಏರುಪೇರು, ವ್ಯಾಯಾಮದ ಕೊರತೆಯು ಮೈಗ್ರೇನ್‌ಗೆ ಕಾರಣವಾಗಬಹುದು ಕೂಡ. ಬಲವಾದ ವಾಸನೆ ಸುಗಂಧ ದ್ರವ್ಯಗಳು ಅಥವಾ ಶುಚಿಗೊಳಿಸುವ ಏಜೆಂಟ್, ಮತ್ತು ತಂಬಾಕು ಹೊಗೆ ಮೈಗ್ರೇನ್‌ಗೆ ಕಾರಣವಾಗಬಹುದು.

ಒಂದು ವೇಳೆ ನೀವು ಮೈಗ್ರೇನ್‌ನಿಂದ ಬಳಲುತ್ತಿದ್ದರೆ ಈ ಎಂಟು ಆಹಾರಗಳನ್ನು ತಪ್ಪದೇ ಸೇವಿಸಬೇಡಿ.

ಕಾಫಿ: ಕಾಫಿ ನಿಮ್ಮ ತಲೆನೋವನ್ನು ನಿವಾರಿಸುವ ದಿವ್ಯ ಔಶದಿ ಅಂತ ಅಂದುಕೊಂಡಿದ್ದರೇ ಅದು ತಪ್ಪು ಎನ್ನುತ್ತವೆ ಸಂಶೋಧನೆಗಳು, ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಒಂದು ದಿನದಲ್ಲಿ 3 ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯುವುದರಿಂದ ಮೈಗ್ರೇನ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ವಾಸ್ತವವಾಗಿ, ಚಹಾ ಮತ್ತು ಕೋಲಾಗಳಂತಹ ಇತರ ಕೆಫೀನ್ ಪಾನೀಯಗಳ ಅತಿಯಾದ ಸೇವನೆಯು ಸಹ ಸಾಕಷ್ಟು ಅಪಾಯಕಾರಿ ಎಂದು ಕಂಡುಬಂದಿದೆ.

ಆಲ್ಕೊಹಾಲ್: ನೀವು ಮೈಗ್ರೇನ್ ದಾಳಿಗೆ ಗುರಿಯಾಗಿದ್ದರೆ, ಮದ್ಯಪಾನ ಮಾಡುವ ಮೂಲಕ ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಗೆಡಿಸುವುದರಲ್ಲಿ ಸಂಶಯವಿಲ್ಲ, ಹೀಗಾಗಿ ಆಲ್ಕೋಹಾಲ್‌ ಸೇವನೆಯನ್ನು ಬಿಟ್ಟು ಬಿಡಿ ಇಲ್ಲವಾದಲ್ಲೀ ನಿಮ್ಮನ್ನು ಮೈಗ್ರೇನ್‌ ಬಿಟ್ಟು ಹೋಗುವುದಿಲ್ಲ.

ಚೀನೀ ಆಹಾರ: ಬಾಯಲ್ಲಿ ನೀರೂರಿಸುವ ಚೈನಾ ಮೂಲದ ಆಹಾರಗಳು ಕೂಡ ನಿಮ್ಮ ಮೈಗ್ರೇನ್‌ ಅನ್ನು ಹೆಚ್ಚು ಮಾಡುವುದರಲ್ಲಿ ಸಹಕಾರಿಯಾಗಲಿದೆ. ಈ ದೇಶದ ಆಹಾರದಲ್ಲಿರುವ ಮಸಾಲೆಯುಕ್ತ ಮೆಣಸಿನಕಾಯಿ-ಬೆಳ್ಳುಳ್ಳಿ ನೂಡಲ್ಸ್ ಮೈಗ್ರೇನ್‌ಗೆ ಕಾರಣವಾಗಬಹುದು, ಎಂಎಸ್‌ಜಿ (ಮೊನೊಸೋಡಿಯಂ ಗ್ಲುಟಾಮೇಟ್) ಇರುವಿಕೆ ಕೂಡ ಮೈಗ್ರೇನ್‌ ಹೆಚ್ಚಾಗಬಹುದು. ಕೃತಕ ಸಿಹಿಕಾರಕಗಳು: ಅಮೇರಿಕನ್ ಫೌಂಡೇಶನ್ ಆಫ್ ಮೈಗ್ರೇನ್ ಆಸ್ಪರ್ಟೇಮ್‌ನಂತಹ ಕೃತಕ ಸಿಹಿಕಾರಕಗಳನ್ನುಮೈಗ್ರೇನ್ ಪ್ರಚೋದಕ ಎಂದು ಹೇಳುತ್ತದೆ. ಆದ್ದರಿಂದ ಹೆಂಗಸರು ಜಾಗರೂಕರಾಗಿರಿ. ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಮೈಗ್ರೇನ್ ಪ್ರಚೋದಕ ಎಂದು ಹೇಳುತ್ತದೆ. ಆದ್ದರಿಂದ ಹೆಂಗಸರು ಜಾಗರೂಕರಾಗಿರಿ. ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಬಳಸಿ.

ಚಾಕೊಲೇಟ್: ಚಾಕೊಲೇಟ್‌ಗಳಲ್ಲಿ ಅಮೈನೊ ಆಸಿಡ್ ಟೈರಮೈನ್ ಇರುವುದರಿಂದ ಇದು ಕೂಡ ನಿಮ್ಮ ಮೈಗ್ರೇನ್ ಪ್ರಚೋದಕ ಎಂದು ಹೇಳಲಾಗುತ್ತದೆ.
ಹಾಟ್ ಡಾಗ್ಸ್: ಚೀನೀ ಆಹಾರದಂತೆಯೇ ಫ್ರಿಜ್‌ನಲ್ಲಿ ಇಟ್ಟಿರುವ ಮಾಂಸ ಸಲಾಮಿ ಮತ್ತು ಸಾಸೇಜ್‌ಗಳುಹಾನಿಕಾರಕ ನೈಟ್ರೇಟ್‌ಗಳ ಗಳನ್ನು ಹೊಂದಿದ್ದು,ರಕ್ತದಲ್ಲಿನ ಆಮ್ಲಜನಕದ ಹರಿವನ್ನು ಅಡ್ಡಿಪಡಿಸುತ್ತದೆ ಮತ್ತು ಮೈಗ್ರೇನ್ ದಾಳಿಯನ್ನು ಪ್ರಚೋದಿಸುತ್ತದೆ ಎನ್ನಲಾಗಿದೆ.

ಅಲಂಕಾರಿಕ ಚೀಸ್: ಚಾಕೊಲೇಟ್‌ಗಳು ಮತ್ತು ಚೀಸ್ ತಲೆನೋವು ಉಂಟುಮಾಡುವ ಟೈರಮೈನ್ ಅನ್ನು ಹೊಂದಿರುತ್ತಾರೆ. ಆದ್ದರಿಂದ, ನೀವು ಮೈಗ್ರೇನ್‌ಗೆ ಗುರಿಯಾಗಿದ್ದರೆ ನೀವು ಚೀಸ್‌ನಿಂದ ದೂರವಿದ್ದರೆ ಚೆನ್ನ.

ಮೊಸರು: ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನವು ಮೈಗ್ರೇನ್ ಅನ್ನು ಪ್ರಚೋದಿಸುವಲ್ಲಿ ಕರುಳಿನ ಬ್ಯಾಕ್ಟೀರಿಯಾವನ್ನು ಕಂಡು ಹಿಡಿದಿದ್ದು, ಇದು ಬದಲಾದಂತೆ, ಮೈಗ್ರೇನ್ ನಿಂದ ಬಳಲುತ್ತಿರುವವರು ಮೊಸರನ್ನು ತಿನ್ನದೇ ಇರುವುದು ಒಳಿತು.

Beauty Tips Food Health Lifestyle Tour

ಡಿಜಿಟಲ್‌ಡೆಸ್ಕ್‌: ಉಪ್ಪು ನಮ್ಮ ಆಹಾರದ ಒಂದು ಪ್ರಮುಖ ಭಾಗವಾಗಿದೆ. ಉಪ್ಪು ಇಲ್ಲದೆ ನಾವುದೇ ಆಹಾರವನ್ನು ಸೇವನೆ ಮಾಡೋದೇ ಇಲ್ಲ ಬಿಡಿ ಉಪ್ಪು ಆ ಮಟ್ಟಿಗೆ ನಮ್ಮ ಜೀವನದಲ್ಲಿ ಕೆಲಸ ಮಾಡುತ್ತದೆ ಅಲ್ವಾ?

ಇನ್ನೂ ಉಪ್ಪು ಅಡುಗೆಯಲ್ಲಿ ಮಾತ್ರ ನಮಗೆ ಸಹಾಯ ಮಾಡೋದಿಲ್ಲ ಬದಲಿಗೆ ವಾಸ್ತು ಶಾಸ್ತ್ರದ ಪ್ರಕಾರ, ದುಷ್ಟ ಶಕ್ತಿಗಳನ್ನು ಮನೆಯಿಂದ ಓಡಿಸಲು ಮತ್ತು ಸರ್ಕಾರದ ಶಕ್ತಿಯನ್ನು ತರುವಲ್ಲಿ ಉಪ್ಪು ಬಹಳ ಪರಿಣಾಮಕಾರಿ. ಉಪ್ಪಿನ ಅಂತಹ ಕೆಲವು ಕ್ರಮಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ, ಅದು ನಿಮ್ಮ ಸಮಸ್ಯೆಗಳನ್ನು ಅಳವಡಿಸಿಕೊಳ್ಳುವ ಮೂಲಕ ತೆಗೆದುಹಾಕುತ್ತದೆ ಅಂದ್ರೆ ನೀವು ನಂಬಲೇ ಬೇಕು.ವಾರಕ್ಕೊಮ್ಮೆ ಮನೆ ಒರೆಸುವಾಗ (ಗುರುವಾರ ಹೊರತುಪಡಿಸಿ), ಸ್ವಲ್ಪ ಸಂಪೂರ್ಣ ಉಪ್ಪು (ಸಮುದ್ರ ಉಪ್ಪು) ನೀರಿಗೆ ಸೇರಿಸಬೇಕು. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಸಂತಸಗೊಂಡು ಸಂಪತ್ತನ್ನು ಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಇದೆ.ಗಂಡ ಹೆಂಡತಿ ನಡುವಿನ ಸಂಬಂಧದಲ್ಲಿ ಕಹಿ ಇದ್ದರೆ, ಒಂದು ಸಣ್ಣ ತುಂಡು ಕಲ್ಲು ಉಪ್ಪನ್ನು ಮಲಗುವ ಕೋಣೆಯಲ್ಲಿ ಇಡಬೇಕು. ಉಪ್ಪು ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಇದು ಮನೆಯಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಸಂಬಂಧಗಳಲ್ಲಿ ಪ್ರೀತಿ ಬೆಳೆಯಲು ಕಾರಣವಾಗುತ್ತದೆ.

ನೀವು ಯಾವುದೇ ವಾಸ್ತು ದೋಷಗಳನ್ನು ತೆಗೆದುಹಾಕಬೇಕಾದರೆ, ನಂತರ ಗಾಜಿನ ಬಟ್ಟಲಿನಲ್ಲಿ ರಾಕ್ ಉಪ್ಪನ್ನು ಹಾಕಿ ಶೌಚಾಲಯದಲ್ಲಿ ಇರಿಸಿ. ಇದು ಅಲ್ಲಿನ ಋಣಾತ್ಮಕ ಶಕ್ತಿಯನ್ನು ಕರಗಿಸುತ್ತದೆ. ಪ್ರತಿ 15 ದಿನಗಳ ನಂತರ ಉಪ್ಪನ್ನು ಬದಲಾಯಿಸುವುದು ಮುಖ್ಯವಾಗಿದೆ.ಕೆಟ್ಟ ದೃಷ್ಟಿ ತೆಗೆದುಹಾಕುವಲ್ಲಿ ಉಪ್ಪು ಸಹ ಬಹಳ ಪರಿಣಾಮಕಾರಿಯಾಗಿದೆ.

Health Lifestyle State

ಸ್ಪೆಷಲ್ ಡೆಸ್ಕ್ : ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಎಲ್ಲರೂ ಅನುಭವಿಸುತ್ತಾರೆ. ಮೂತ್ರ ಮಾಡುವಾಗ ಉರಿ ಬರಲು ಏನು ಕಾರಣ..? ಇದಕ್ಕೆ ಏನು ಪರಿಹಾರವೆಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ.

ಹೆಚ್ಚು ಖಾರ ಅಥವಾ ನಾನ್ ವೆಜ್ ಊಟ ಸೇವಿಸಿದ ಬಳಿಕ ಹಲವರಿಗೆ ಮೂತ್ರ ಉರಿ ಸಮಸ್ಯೆ ಕಾಣುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಉರಿ ಮೂತ್ರ ಕಂಡು ಬರುತ್ತದೆ. ಉರಿ ಮೂತ್ರಕ್ಕೆ ಏನು ಪರಿಹಾರ ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ.

ಊಟವಾದ ಬಳಿಕ ಸಾಕಷ್ಟು ನೀರು ಕುಡಿಯಿರಿ ಇದರಿಂದ ಮೂತ್ರ ಉರಿ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚು ಪ್ರೋಬಯೋಟಿಕ್ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.

ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿವುದರಿಂದ ಮೂತ್ರ ಉರಿ ಸಮಸ್ಯೆ ನಿವಾರಣೆಯಾಗುತ್ತದೆ. ಸಾಕಷ್ಟು ಹಣ್ಣು ಹಾಗೂ ತರಕಾರಿಯನ್ನು ಸೇವಿಸಿ,

ಊಟವಾದ ಬಳಿಕ ಏಲಕ್ಕಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ, ಇದರಿಂದ ಮೂತ್ರನಾಳದ ಸೋಂಕು ಕಡಿಮೆಯಾಗುತ್ತದೆ. ಏಲಕ್ಕಿ ಸೇವಿಸುವುದರಿಂದ ಕಿಡ್ನಿ ಚೆನ್ನಾಗಿ ಕೆಲಸ ಮಾಡುತ್ತದೆ.  ಇನ್ನೂ. ಏಲಕ್ಕಿಯನ್ನು ನೀರಿನಲ್ಲಿ ನೆನೆಸಿ ಅಥವಾ ಕಷಾಯ ಮಾಡಿ ಕುಡಿಯುವುದರಿಂದ  ಈ ಸಮಸ್ಯೆ ನಿವಾರಣೆಯಾಗುತ್ತದೆ, ಏಲಕ್ಕಿ ಹಾಗೂ ಇದರ ಜೊತೆಗೆ ಗಸಗಸೆಯನ್ನು ರಾತ್ರಿವೇಳೆ ಮೊಸರಿನಲ್ಲಿ ನೆನಸಿ ಬೆಳಗಿನ ವೇಳೆ ಸೇವನೆ ಮಾಡುವುದರಿಂದ ಉರಿಮೂತ್ರ ನಿವಾರಣೆಯಾಗುವುದು.

 

Beauty Tips Food Health India Lifestyle Tour

ಡಿಜಿಟಲ್‌ಡೆಸ್ಕ್‌: ನಿಮ್ಮ ಮನೆಯಲ್ಲಿ ಗಣೇಶ, ಲಕ್ಷ್ಮೀ ಹಾಗೂ ಸರಸ್ವತಿ ಫೋಟೋ ಇರಬೇಕು. ಮುಖ್ಯವಾಗಿ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಅವಶ್ಯಕ.  ಇದಕ್ಕೆ ಲಕ್ಷ್ಮೀ ಕಟಾಕ್ಷ ಬೇಕು. ಅದಕ್ಕಾಗಿ ಶ್ರೀ ಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಪ್ರಾಣಕ್ಕೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ತುಂಬಾ ಆವಶ್ಯಕವಾಗಿದೆ. ಗಣೇಶನ ಆರಾಧನೆಯಿಂದಾಗಿ ಶಿವ ಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ. ಶ್ರೀ ಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ.

ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದ ಕೊಡಗಳು ತುಂಬಿರುತ್ತವೆ ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟ ಸಿದ್ಧಿಗಳು ಅಷ್ಟ ಶೋಭೆಗಳು, ಅಷ್ಟ ಭೋಗಗಳು ಅಷ್ಟ ಮಂಗಲಾವೃತ ಸುಸ್ಥಿತಿಗಳು, ಅಷ್ಟ ದಿಕ್ಕುಗಳಿಂದ ಉತ್ತಮ ಫ‌ಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆಯೊಂದಿಗೆ ಒದಗಿಬರುತ್ತದೆ.

Beauty Tips Food Health India Lifestyle Tour

ಡಿಜಿಟಲ್‌ಡೆಸ್ಕ್‌: ವಿಟಮಿನ್ ಡಿ ಕೊರತೆಯು ಕರೋನವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಅಂತ ಯುಎಸ್ನ ಚಿಕಾಗೊ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕರು COVID-19 ರೋಗಿಗಳ ಹಿಂದಿನ ಅಧ್ಯಯನದ ಮೂಲಕ ಕಂಡುಹಿಡಿದಿದ್ದಾರೆ.

COVID-19 ಗೆ ಪರೀಕ್ಷಿಸುವ ಮೊದಲು ಒಂದು ವರ್ಷದೊಳಗೆ ವಿಟಮಿನ್ ಡಿ ಮಟ್ಟವನ್ನು ಅಳೆಯುವ 489 ಯುಚಿಕಾಗೊ ಮೆಡಿಸಿನ್ ರೋಗಿಗಳನ್ನು ಸಂಶೋಧನಾ ತಂಡ ಈ ಬಗ್ಗೆ ಪತ್ತೆ ಹಚ್ಚಿದೆ.ವಿಟಮಿನ್ ಡಿ ಕೊರತೆಯನ್ನು ಹೊಂದಿರುವ ವ್ಯಕ್ತಿಗಳು ಸಾಕಷ್ಟು ಪ್ರಮಾಣದ ವಿಟಮಿನ್ ಹೊಂದಿರುವ ರೋಗಿಗಳಿಗೆ ಹೋಲಿಸಿದರೆ COVID-19ಗೆ ಈಡಾಗುವ ಸಾಧ್ಯತೆ ಇದೇ ಎನ್ನಲಾಗಿದೆ.ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಕೆ ವಿಟಮಿನ್ ಡಿ ಮುಖ್ಯವಾಗಿದೆ ಮತ್ತು ವಿಟಮಿನ್ ಡಿ ಪೂರಕಗಳು ವೈರಲ್ ಉಸಿರಾಟದ ಪ್ರದೇಶದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಈ ಹಿಂದೆ ತೋರಿಸಲಾಗಿದೆ ಎಂದು ಯುಚಿಕಾಗೊ ಮೆಡಿಸಿನ್‌ನ ಆಸ್ಪತ್ರೆ ಔ ಷಧದ ಮುಖ್ಯಸ್ಥ ಮತ್ತು ಅಧ್ಯಯನದ ಪ್ರಮುಖ ಲೇಖಕ ಡಾ. ಡೇವಿಡ್ ಮೆಲ್ಟ್ಜರ್ ಹೇಳಿದ್ದಾರೆ.

ನೀವು ಒಂದಕ್ಕಿಂತ ಹೆಚ್ಚು ʼಬ್ಯಾಂಕ್ ಅಕೌಂಟ್ʼ‌ಗಳನ್ನ ಹೊಂದಿದ್ದೀರಾ?: ಅಯ್ಯೋ! ಹಾಗಾದ್ರೆ, ಈ ಸೌಲಭ್ಯಗಳು ಮಿಸ್‌ ಆಗ್ಬೋದು

ಇದೇ ವೇಳೆ ಅವರು ನಮ್ಮ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯು COVID-19 ಸೋಂಕಿಗೆ ಇದು ನಿಜವೆಂದು ಸೂಚಿಸುತ್ತದೆ ಅಂತ ತಿಳಿಸಿದ್ದಾರೆ. ವಿಟಮಿನ್ ಡಿ ಶ್ವಾಸಕೋಶದ ಕಾರ್ಯ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುವುದಲ್ಲದೆ, ಇದು ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ, ಮೆದುಳು ಮತ್ತು ನರಮಂಡಲದ ಆರೋಗ್ಯವನ್ನು ಬೆಂಬಲಿಸುತ್ತದೆ. ಮತ್ತು ಸಾಕಷ್ಟು ಸೂರ್ಯನ ಬೆಳಕಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ದೇಹವು ವಿಟಮಿನ್ ಡಿ ಉತ್ಪಾದಿಸಲು ಉತ್ತಮ ಮಾರ್ಗವಾಗಿದೆ, ಈ ಪ್ರಮುಖ ಪೋಷಕಾಂಶವನ್ನು ಮೊಟ್ಟೆಯ ಹಳದಿ, ಚೀಸ್, ಬಲವರ್ಧಿತ ಧಾನ್ಯಗಳು ಮತ್ತು ರಸಗಳು, ಅಣಬೆಗಳು ಮುಂತಾದ ಆಹಾರ ಮೂಲಗಳಿಂದಲೂ ಪಡೆಯಬಹುದು.

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಚಿಂತೆ ಬಿಡಿ…. ಇಲ್ಲಿದೆ ಬೆಸ್ಟ್ ಟಿಪ್ಸ್

ವಾಸ್ತವವಾಗಿ, ವಿಟಮಿನ್ ಡಿ ಪೂರೈಕೆಯು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು COVID-19 ನ ತೀವ್ರತೆಯನ್ನು ನಿರ್ಧರಿಸಬಹುದೇ ಎಂದು ನಿರ್ಧರಿಸಲು ಪ್ರಾಯೋಗಿಕ ಅಧ್ಯಯನಗಳ ಮಹತ್ವವನ್ನು ಮೆಲ್ಟ್ಜರ್ ಮತ್ತು ಅವರ ತಂಡವು ಒತ್ತಿಹೇಳಿದೆ. ನಿರ್ದಿಷ್ಟ ಜನಸಂಖ್ಯೆಯಲ್ಲಿ ವಿಟಮಿನ್ ಡಿ ಪೂರೈಕೆಯ ಯಾವ ಕಾರ್ಯತಂತ್ರಗಳು ಹೆಚ್ಚು ಸೂಕ್ತವೆಂದು ಅರ್ಥಮಾಡಿಕೊಳ್ಳುವ ಅಧ್ಯಯನಗಳ ಅಗತ್ಯವನ್ನು ಎತ್ತಿ ತೋರಿಸಿದ ಸಂಶೋಧನಾ ತಂಡವು ಸ್ಥಳೀಯ ಪಾಲುದಾರರೊಂದಿಗೆ ಯುಚಿಕಾಗೊ ಮೆಡಿಸಿನ್‌ನಲ್ಲಿ ಹಲವಾರು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ. COVID-19 ಪರೀಕ್ಷಾ ಫಲಿತಾಂಶಗಳೊಂದಿಗೆ ಅಸೋಸಿಯೇಷನ್ ​​ಆಫ್ ವಿಟಮಿನ್ ಡಿ ಸ್ಥಿತಿ ಮತ್ತು ಇತರ ಕ್ಲಿನಿಕಲ್ ಗುಣಲಕ್ಷಣಗಳನ್ನು ಹೆಸರಿಸಲಾದ ಈ ಅಧ್ಯಯನವನ್ನು ಸೆಪ್ಟೆಂಬರ್ 3 ರಂದು ಜಮಾ ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟಿಸಲಾಗಿದೆ.

Health Lifestyle

ಸ್ಪೆಷಲ್ ಡೆಸ್ಕ್ :ರಾತ್ರಿ ಮಲಗುದಾಗ ಸರಿಯಾದ ನಿದ್ರೆ ಮಾಡಿದರೆ ಮಾತ್ರ ಮುಂದಿನ ದಿನ ಉತ್ತಮವಾಗಿರುತ್ತದೆ. ಆದರೆ ರಾತ್ರಿ ಇಡಿ ಸರಿ ನಿದ್ದೆ ಬಾರದೆ ಇದ್ದರೆ ಮುಖ ಬಾಡಿ ಹೋಗುವುದರ ಜೊತೆಗೆ, ಕಣ್ಣುಗಳು ಪೇಲವವಾಗಿ ದಿನವಿಡೀ ಮೂಡ್ ಹಾಳಾಗಿರುತ್ತದೆ. ಇದೆಲ್ಲಾ ಆಗಬಾರದು ಎಂದಾದರೆ ಚೆನ್ನಾಗಿ ನಿದ್ರೆ ಮಾಡಬೇಕು. ಚೆನ್ನಾಗಿ ನಿದ್ರೆ ಮಾಡಲು ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು…

ಚೆರ್ರಿ ಸೇವನೆ : ಚೆರ್ರಿ ಹಣ್ಣಿನಲ್ಲಿ ನಿದ್ರೆ ಸಮಸ್ಯೆಗೆ ಪರಿಹಾರ ನೀಡುವ ಮೆಲಾಟೊನಿನ್ ಎಂಬ ಹಾರ್ಮೋನ್ ಇರುತ್ತದೆ. ಇದರ ಜೊತೆಗೆ ದೇಹದ ಇತಹ ಹಾರ್ಮೋನ್‌ಗಳನ್ನು ಕೂಡ ಅದು ನಿಯಂತ್ರಿಸುತ್ತದೆ. ಇದು ಮಾತ್ರವಲ್ಲ ಟೋಮೆಟೊ, ಅಲೀವ್ ಎಣ್ಣೆಯಲ್ಲಿ ಕೂಡ ಇದೇ ರೀತಿ ನೈಸರ್ಗಿಕ ಹಾರ್ಮೋನ್ ಇರುತ್ತದೆ.

ತಾಂತ್ರಿಕ ಉಪಕರಣದಿಂದ ದೂರವಿರಿ : ತಂತ್ರಜ್ಞಾನ ಉಪಕರಣಗಳು ಮತ್ತು ಸ್ಮಾರ್ಟ್‌ಫೋನ್‌ನ ಕೃತಕ ಬೆಳಕು ರಾತ್ರಿ ವೇಳೆ ನಿದ್ರೆಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ನಿದ್ರೆ ಹೋಗುವ ಮುನ್ನ ಅವುಗಳನ್ನು ಸ್ವಿಚ್ ಆಫ್ ಮಾಡಬೇಕು. ಮಲಗುವ ಮುನ್ನ ಪುಸ್ತಕ, ನಿಯತಕಾಲಿಕ ಕಾದಂಬರಿಗಳನ್ನು ಓದಿದರೆ ಕೂಡ ನಿದ್ರೆ ಬರುತ್ತದೆ.

ಪೂರ್ತಿ ಮುಚ್ಚಿಕೊಳ್ಳಿ : ಹಲವಾರು ಜನರು ನಿದ್ರೆಯ ಸಂದರ್ಭದಲ್ಲಿ ಕಾಲಿನಿಂದ ಹೊದಿಕೆ ಸರಿದಿರುತ್ತದೆ. ಇದರಿಂದ ಕಾಲು ಮತ್ತು ಕೈಗಳು ತಂಪಾಗಿ ರಕ್ತ ಪರಿಚಲನೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಈ ಮೂಲಕ ನಿದ್ರೆಗೆ ಸಮಸ್ಯೆ ಉಂಟು ಮಾಡುತ್ತದೆ. ಹೀಗಾಗಿ ನಿದ್ರಿಸುವ ಸಂದರ್ಭದಲ್ಲಿ ಕಾಲು ಮತ್ತು ಕೈಗಳು ಹೊದಿಕೆಯ ಒಳಗಿರುವಂತೆ ನೋಡಿಕೊಳ್ಳಬೇಕು.

ಲ್ಯಾವೆಂಡರ್ ಸುವಾಸನೆ :ಲ್ಯಾವೆಂಡರ್ ಸುವಾಸನೆಯು ನಿದ್ರೆ ಸಮಸ್ಯೆಗೆ ಅತ್ಯುತ್ತಮ ಔಷಧ ಎಂದು ಹಲವಾರು ಅಧ್ಯಯನಗಳು ಶಿಫಾರಸು ಮಾಡಿವೆ. ಲ್ಯಾವೆಂಡರ್ ಎಣ್ಣೆಯು ಮನಸ್ಸನ್ನು ಶಾಂತಗೊಳಿಸುವ ಶಕ್ತಿ ಹೊಂದಿದೆ. ಈ ಮೂಲಕ ಸುಖ ನಿದ್ರೆ ಬರುವಂತೆ ಮಾಡುತ್ತದೆ. ಸಾಧ್ಯವಾದರೆ ನಿದ್ರೆಗೆ ಮುನ್ನ ಲ್ಯಾವೆಂಡರ್ ಎಣ್ಣೆ ಹಚ್ಚಿ ಸ್ನಾನ ಮಾಡಿ. ಸಾಧ್ಯವಾಗದಿದ್ದರೆ ತಲೆ ದಿಂಬಿಗೆ ಎಣ್ಣೆ ಸ್ಪ್ರೇ ಮಾಡಿ.

ಒಟ್ಟಿನಲ್ಲಿ ನಿದ್ರೆ ಸಮಸ್ಯೆಯ ಬಗ್ಗೆಯೇ ಯೋಚನೆ ಮಾಡುತ್ತಾ ಮತ್ತಷ್ಟು ಆರೋಗ್ಯ ಹದಗೆಡಿಸಿಕೊಳ್ಳದೆ, ಮೇಲೆ ಹೇಳಿದ ಸಲಹೆ ಪಾಲಿಸಿ ಸುಖ ನಿದ್ರೆ ಮಾಡಿ.