Category: Haveri | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, AdithyanathHaveri

Haveri KARNATAKA State

ಹಾವೇರಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆ ಸಿಡಿ ಪ್ರಕರಣದ ನಂತ್ರ, ಈಗ ಮತ್ತೊಬ್ಬ ರಾಜಕಾರಣಿಯ ರಾಸಲೀಲೆ ವೀಡಿಯೋ ವೈರಲ್ ಆಗಿದೆ. ಹಾವೇರಿ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬರು ಮದುವೆಯಾಗುತ್ತೇನೆ ಎಂಬುದಾಗಿ ನಂಬಿಸಿ, ಅತ್ಯಾಚಾರ ಎಸಗಿರುವಂತ ವೀಡಿಯೋ, ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

BREAKING : ಪರಿಸ್ಥಿತಿ ಕೈಮೀರಿದ್ರೆ ‘ಎಸ್ಮಾ ಜಾರಿ’ – ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೆಜ್ ಖಡಕ್ ಎಚ್ಚರಿಕೆ

ಹಾವೇರಿ ಜಿಲ್ಲೆಯ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರು ಎಂದು ಹೇಳಲಾಗುತ್ತಿರುವಂತ ರಾಜಕಾರಣಿಯೊಬ್ಬರು, ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡ ನಂತ್ರ, ಈಗ ಆಕೆಗೆ ಕೈಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

‘ಸೋಷಿಯಲ್ ಮೀಡಿಯಾ’ದಲ್ಲಿ ‘ಯಡಿಯೂರಪ್ಪ’ ‘ಅಂದು-ಇಂದಿನ’ ಸಾರಿಗೆ ನೌಕರರ ಬಗೆಗಿನ ಹೇಳಿಕೆ ‘ಸಖತ್ ವೈರಲ್.’!

ಯುವತಿಯೊಂದಿಗೆ ಬೆಡ್ ರೂಂ ನಲ್ಲಿನ ಖಾಸಗಿ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡಿರುವಂತ ಪೋಟೋ, ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಯುವತಿಯೊಂದಿಗೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರು ರಾಸಲೀಲೆಯಲ್ಲಿ ತೊಡಗಿರುವಂತ ವೀಡಿಯೋ, ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

(ಪ್ರಸಾರಕ್ಕೆ ಯೋಗ್ಯವಾಗಿರದ ಕಾರಣ ವೀಡಿಯೋ ಪ್ರಕಟಿಸಿಲ್ಲ)


Haveri KARNATAKA State

ಹರಿಹರ : ಹಿಂದುಳಿದ ವರ್ಗದವರ ಹಿತ ಕಾಪಾಡಲು ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಅಧಿಕೃತವಾಗಿ ಪ್ರಕಟಿಸಿದರು.

‘ಉಪ ಚುನಾವಣೆ’ಯಲ್ಲಿ ‘ಬಿಜೆಪಿ ಅಭ್ಯರ್ಥಿ’ಗಳು ಭಾರಿ ಅಂತರದಿಂದ ಗೆಲುವು – ಸಿಎಂ ಯಡಿಯೂರಪ್ಪ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ಬೆಳ್ಳೊಡಿಯಲ್ಲಿ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿನಿಲಯ, ಸಮುದಾಯ ಭವನ ಮತ್ತು ಮುಖ್ಯ ಮಹಾದ್ವಾರ ಉದ್ಘಾಟನೆ ಹಾಗೂ ಶಾಖಾಮಠದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾಲುಮತ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕಾದರೆ ಮೀಸಲಾತಿ ಪ್ರಮಾಣವನ್ನು ಶೇಕಡಾ 7.5ಕ್ಕೆ ಹೆಚ್ಚಿಸಬೇಕು. ಅದೇ ರೀತಿ ಬೇರೆ ಸಮಾಜದವರು ಮೀಸಲಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕಾದರೆ ಈಗಿರುವ ಶೇಕಡ 50 ದಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಇದೇ ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸುಪ್ರೀಂಕೋರ್ಟಿಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ನಿಂದ ಒಳ್ಳೆಯ ತೀರ್ಮಾನದ ನಿರೀಕ್ಷೆ ಯಲ್ಲಿ‌ ಇದ್ದೇವೆ ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಿಸುವುದು ನಿಜಕ್ಕೂ ಸವಾಲು. ಮೀಸಲಾತಿ ಎಲ್ಲ ಸಮುದಾಯಗಳಿಗೆ ಕಾನೂನಾತ್ಮಕವಾಗಿ, ಸಂವಿಧಾನದ ಚೌಕಟ್ಟಿನಲ್ಲಿ, ಸೈದ್ಧಾಂತಿಕವಾಗಿ ನಿಗದಿ ಆಗಬೇಕು. ಮುಂದಿನ ದಿನಗಳಲ್ಲಿ ಯಾರೂ ಕೂಡ ಈ ನಿರ್ಧಾರವನ್ನು ಪ್ರಶ್ನೆ ಮಾಡಬಾರದೆಂಬ ಸದುದ್ದೇಶದಿಂದ ನಿವೃತ್ತ ನ್ಯಾಯಾಧೀಶ ರ ನೇತೃತ್ವದಲ್ಲಿ ತಜ್ಞ ರ ಸಮೀತಿ ರಚಿಸಲಾಗಿದೆ. ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಕುಲಶಾಸ್ತ್ರ ಅಧ್ಯಯನ ನಡೆಯುತ್ತದೆ. ಪಂಚಮಸಾಲಿ ‌ಸಮಾಜದವರು 2ಎ ಬೇಡಿಕೆ ಇಟ್ಟಿದ್ದಾರೆ. ಅದೇ ರೀತಿ ಹಲವು ಸಣ್ಣ ಸಮುದಾಯದ ಜನ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆ ಈಡೇರಿಸಲು ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

BIG BREAKING NEWS : ಬಾಲಿವುಡ್ ‘ನಟ ಗೋವಿಂದ’ಗೂ ಕೊರೋನಾ ಪಾಸಿಟಿವ್, ಹೋಂ ಕ್ವಾರಂಟೈನ್

ಕನಕ‌ಗುರು ಪೀಠಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ. ಮೈಲಾರ ಮಠದ ಅಭಿವೃದ್ಧಿ ಗಾಗಿ 10 ಕೋಟಿ ಮಂಜೂರು ಮಾಡಲಾಗಿದೆ. ಆ ಪೈಕಿ 2.5 ಕೋಟಿ ಹಣವನ್ನು ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಪ್ರೀತಿ ಸಮಾಜದ ಮೇಲಿದೆ. ಈ ಸಮಾಜದವರ ಪ್ರೀತಿ ಸರ್ಕಾರ ಮತ್ತು ಯಡಿಯೂರಪ್ಪ ಹಾಗೂ ಇತರೆ ನಾಯಕರ ಮೇಲಿದೆ ಎಂದು ಬೊಮ್ಮಾಯಿ ಹೇಳಿದರು.

ಕನಕದಾಸರು ಅಪರೂಪಕ್ಕೆ, ಯುಗಕ್ಕೆ ಒಮ್ಮೆ ಹುಟ್ಟುತ್ತಾರೆ. ಅಂಥ ದಾರ್ಶನಿಕರು ಹುಟ್ಟಿದ ಊರು ಬಾಡ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವುದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ವನ್ನು ಸೂಕ್ಷ್ಮ ವಾಗಿ ಗಮನಿಸಿದರೆ ಅವರಿಗೆ ಯಾವುದೇ ಜಾತಿ ಧರ್ಮ ಇಲ್ಲ. ಕನಕದಾಸರ ರೀತಿ ಎಲ್ಲಾ ಧರ್ಮಗಳಿಗೆ ಒಳಿತು ಮಾಡಬೇಕೆಂಬ ಮನೋಧರ್ಮ ಯಡಿಯೂರಪ್ಪ ಅವರದು. ಹೀಗಾಗಿ ಸರ್ವಧರ್ಮ ಗಳಿಗೆ ಅವರು ಸಕಲ ನೆರವು ನೀಡಿದ್ದಾರೆ ಎಂದು ಬೊಮ್ಮಾಯಿ ಮೆಚ್ವುಗೆ ವ್ಯಕ್ತಪಡಿಸಿದರು.


Haveri KARNATAKA State

ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿ ಮೂವರು ಬಾಲಕರು ಕೆರೆಯಲ್ಲಿ ಈಜಲು ತೆರಳಿದ್ದಂತ ಸಂದರ್ಭದಲ್ಲಿ, ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

‘ಸಿಡಿ ಲೇಡಿ’ ‘ಕಮೀಷನರ್’ಗೆ ಬರೆದ ಪತ್ರದ ಕುರಿತು ಸಂತ್ರಸ್ತ ಯುವತಿ ಪರ ‘ವಕೀಲ ಜಗದೀಶ್’ ಏನ್ ಹೇಳಿದ್ರು ಗೊತ್ತಾ.?

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿನ ಕೆರೆಯಲ್ಲಿ ಈಜಲು ಮೂವರು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಇಳಿದ ನಂತ್ರ ಈಜಲು ಆಗದೇ, ಒಬ್ಬರನ್ನು ಕಾಪಾಡಲು ಮತ್ತೊಬ್ಬರು ಹೋಗಿ ದಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.

BIG BREAKING NEWS : ‘ಸಾಹುಕಾರ್’ ವಿರುದ್ಧ ಮತ್ತೆ ಸಿಡಿದೆದ್ದ ‘ಸಿಡಿ ಲೇಡಿ’ : ‘ಕಮೀಷನರ್’ಗೆ SIT ತನಿಖೆ ಮೇಲೆ ಅನುಮಾನ ವ್ಯಕ್ತ ಪಡಿಸಿ ಪತ್ರ

ಮೃತ ಬಾಲಕರನ್ನು ಅಹ್ಮದ್ ಅಂಚಿ(15), ಸಾಹಿಲ್ ಡೊಂಗ್ರೆ(15) ಹಾಗೂ ರಾಜಾ ಯಲವಟ್ಟಿ(15) ಎಂಬುದಾಗಿ ತಿಳಿದು ಬಂದಿದೆ. ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Haveri State

ಹಾವೇರಿ: ಪಾಲಿಸಿ ಮಾ ಡಿಸುವ  ಸಂದರ್ಭದಲ್ಲಿ ಹೇಳಿದ ಹೆಚ್ಚುವರಿ ವಿಮಾ ಮೊತ್ತವನ್ನು ಪಾಲಿಸಿದಾರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಸವಣೂರ ಪಟ್ಟಣದ ನಿವೃತ್ತ ಸರ್ಕಾರಿ ನೌಕರ ವಿಷ್ಣುರಾವ ಭುಜಂಗರಾವ ಕುಂಠೆ ಅವರು ತಮ್ಮ 58ನೇ ವಯಸ್ಸಿನಲ್ಲಿ “ಜೀವನ ಸರಳ” ಪಾಲಸಿಯನ್ನು ವಾರ್ಷಿಕ 48,080 ರೂ.ಗಳಂತೆ 10 ವರ್ಷಗಳ ಅವಧಿಗೆ ತುಂಬಿದ್ದು, ಪಾಲಿಸಿ ಮೆಚ್ಯುರಿಟಿಯಾದ ನಂತರ ಮೆಚ್ಯುರಿಟಿ ಹಣ 1,89,760 ಹಾಗೂ ಬೋನಸ್ 10 ಲಕ್ಷ ರೂ. ಸೇರಿ ನೀಡುವುದಾಗಿ ಎಲ್.ಐ.ಸಿ. ಏಜೆಂಟರು ತಿಳಿಸಿದ್ದರು. ಆದರೆ ಪಾಲಿಸಿ ಮೆಚ್ಯುರಿಟಿ ನಂತರ ರೂ.2,70,407 ಮಾತ್ರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಪಾಲಿಸಿದಾರರು 4,80,400 ರೂ.ಗಳನ್ನು ವಿಮಾ ಕಂಪನಿಗೆ 10 ವರ್ಷ ವಿಮಾ ಕಂತನ್ನು ತುಂಬಿದ್ದಾರೆ. ಕಾರಣ ತಮಗೆ ಬರಬೇಕಾದ ಪಾಲಿಸಿ ಮೊತ್ತವನ್ನು ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಸೆಪ್ಟೆಂಬರ್-2019ರಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಸುನಂದಾ ಹಾಗೂ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್. ಅವರು ಪಾಲಿಸಿದಾರರು 4,80,400 ರೂ.ಗಳನ್ನು ವಿಮಾ ಕಂಪನಿಗೆ ತುಂಬಿ ರೂ.2,70,407 ಪಡೆಯಲು ಒಪ್ಪುತ್ತಿರಲಿಲ್ಲ. ಹಾಗಾಗಿ ವಿಮಾ ಕಂಪನಿ ಹಾಗೂ ಏಜೆಂಟರೂ ಸೇರಿ ವಿಮಾ ಪಾಲಿಸಿ ಮಾಹಿತಿ ಮುಚ್ಚಿಟ್ಟು ಪಾಲಿಸಿ ನೀಡಿರುವುದು ಸ್ಪಷ್ಟವಾಗಿದೆ. ಪಾಲಿಸಿ ಟೇಬಲ್‍ನಂತೆ ಮಾಹಿತಿ ನೀಡಬೇಕಾಗುವುದು ವಿಮಾ ಕಂಪನಿಯ ಕರ್ತವ್ಯವಾಗಿದೆ. ಪಾಲಿಸಿ ಟೇಬಲ್‍ನ್ನು ಗ್ರಾಹಕನಿಗೆ ನೀಡದಿರುವುದು ಸ್ಪಷ್ಟವಾಗಿದೆ. ಮೂಲ ಪ್ರಪೋಸಲ್ ಫಾರಂ ಪ್ರಕಾರವೇ ಪಾಲಿಸಿಯನ್ನು ನೀಡಬೇಕು.

ದೂರು ನೀಡಿದ ಗ್ರಾಹಕನು ದಿನಾಂಕ 23-12-2019 ರಂದು ಮರಣ ಹೊಂದಿದ ಕಾರಣ ವಾರಸುದಾರರಾದ ಅವರ ಪತ್ನಿ ಮತ್ತು ಮಗ ಪ್ರಕಣದಲ್ಲಿ ಭಾಗಿಯಾಗಿದ್ದಾರೆ. ವಿಮಾ ಕಂಪನಿಯು ದಿವಂಗತರ ಮೊದಲನೆ ವಾರಸುದಾರಳಿಗೆ ಬರಬೇಕಾದ ಪಾಲಿಸಿ ಮೊತ್ತ ರೂ.11,89,760 ರಲ್ಲಿ ವಿಮಾ ಕಂಪನಿ ಈಗಾಗಲೇ ನೀಡಿದ ರೂ.2,70,470ಗಳನ್ನು ವಜಾಮಾಡಿಕೊಂಡು ಉಳಿದ ರೂ.9,19,353ನ್ನು ವಾರ್ಷಿಕ 6ರ ಬಡ್ಡಿ ಸಹಿತ ದೂರು ದಾಖಲಿಸಿದ ದಿನದಿಂದ ನೀಡಬೇಕು. ಏಜೆಂಟನು ಪ್ರಕರಣದ ಖರ್ಚು ಮತ್ತು ಮಾನಸಿಕ ತೊಂದರೆಗಾಗಿ ಐದು ಸಾವಿರ ರೂ. ನೀಡಲು ಹಾಗೂ ಇದಕ್ಕೆ ತಪ್ಪಿದಲ್ಲಿ ಶೇ.12ರಷ್ಟು ವಾರ್ಷಿಕ ಬಡ್ಡಿ ಸಮೇತ ಪಾವತಿಸಲು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಸಹಾಯಕ ರಿಜಿಸ್ಟಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.


Haveri State

ಹಾವೇರಿ:ಪ್ರತಿಯೊಬ್ಬ ಪ್ರಜೆ ದೇಶದ ಕಾನೂನುಗಳು ಹಾಗೂ ಗ್ರಾಹಕರ ಹಕ್ಕುಗಳ ಬಗ್ಗೆಯೂ ತಿಳಿದುಕೊಂಡಾಗ ಮಾತ್ರ ತನಗೆ ಮೋಸ ಆದಾಗ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಹೇಳಿದರು.

ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾಡಳಿತ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆ, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಗರದ ಎಮ್.ಆರ್.ಎಮ್. ಪಿ.ಯು ಕಾಲೇಜ್‍ನಲ್ಲಿ ಮಂಗಳವಾರ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಸ್ತುಗಳ ಖರೀದಿಯಲ್ಲಿ, ಸೇವೆಗಳಲ್ಲಿ ನಿಮಗೆ ಮೋಸವಾದರೆ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಂಡು ನಿಮ್ಮ ಸುತ್ತಮುತ್ತಲಿನವರಿಗೂ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸುನಂದಾ ದುರ್ಗೇಶ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ನಾವು ಗ್ರಾಹಕರಾಗಿಯೇ ಇರುತ್ತೇವೆ. ಕಾನೂನಿನಡಿ ನಾವು ಗ್ರಾಹಕರಾಗಲು ನಾವು ಖರೀದಿಸಿದ ವಸ್ತುಗಳಿಗೆ ಪಡೆದ ಸೇವೆಗಳಿಗೆ ಸರಿಯಾದ ಬಿಲ್‍ಗಳನ್ನು ಪಡೆದು, ಸಂರಕ್ಷಿಸಿದರೆ ಮಾತ್ರ ನಾವು ಕಾನೂನಿನಡಿ ಗ್ರಾಹಕರಾಗುತ್ತೇವೆ. ನಮಗೆ ಮೋಸ ಆದರೆ ಈ ಬಿಲ್‍ಗಳ ಜೊತೆಗೆ ದೂರು ದಾಖಲಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ. ನಾವು ಖರೀದಿಸಿದ ವಸ್ತುಗಳು, ಸೇವೆಗಳ ಬಗ್ಗೆ ನಮಗೆ ಅರಿವು ಇರಬೇಕು. ಆ ವಸ್ತುಗಳ ಮೇಲೆ ಬರೆದ ಮಾಹಿತಿಯನ್ನು ಗಮನಿಸಬೇಕು. ಗ್ರಾಹಕರ ಹಕ್ಕಿನ ಕುರಿತು ಮಾಹಿತಿಯ ಜೊತೆಗೆ ಕಾಳಜಿ ಹಾಗೂ ವ್ಯಾಪಕವಾಗಿ ಬಳಕೆಯಾಗಬೇಕು. ಈ ಕಾಯ್ದೆಯ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರಾದ ಪಿ.ಎಮ್.ಬೆನ್ನೂರು ಅವರು ಗ್ರಾಹಕರ ರಕ್ಷಣಾ ಕಾಯ್ದೆ-2019 ಕುರಿತು ಉಪನ್ಯಾಸ ನೀಡಿ, ಗ್ರಾಹಕರು ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ಚಲಾಯಿಸಲು 1986 ಹಳೆ ಗ್ರಾಹಕರ ಹಕ್ಕು ಕಾಯ್ದೆಯಲ್ಲಿನ ತೊಡಕುಗಳನ್ನು ನಿವಾರಿಸಿ, ಮಾರ್ಪಾಡು ಮಾಡಿ ಗ್ರಾಹಕರ ರಕ್ಷಣಾ ಕಾಯ್ದೆ-2019 ಗ್ರಾಹಕರ ವ್ಯಾಖ್ಯಾನಕ್ಕೆ ಹೆಚ್ಚಿನ ವ್ಯಾಪ್ತಿಯನ್ನು ತರಲಾಗುತ್ತಿದೆ ಎಂದು ಹೇಳಿದರು.

ಹೊಸ ಕಾನೂನಿಂದ ಜಿಲ್ಲಾ ಗ್ರಾಹಕರ ವೇದಿಕೆ ಈಗ ಜಿಲ್ಲಾ ಗ್ರಾಹಕರ ಆಯೋಗ ಎಂದು ಮಾರ್ಪಾಡು ಆಗಿದೆ. ದೂರು ದಾಖಲಿಸಲು ಇರುವ ತೊಡಕುಗಳನ್ನು ಸರಿಪಡಿಸಲಾಗಿದೆ. ದೂರುದಾರನ ವ್ಯಾಪ್ತಿಯಲ್ಲಿಯೇ ಆಪ್‍ಲೈನ್ ಅಥವಾ ಆನ್‍ಲೈನ್‍ನಲ್ಲಿಯೂ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ದೂರುಗಳಿಗೆ ಸಂಬಂಧಿಸಿಂತೆ ಸಂವಾದ, ಚರ್ಚೆ, ವಿಚಾರಣೆಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕವು ಮಾಡಲಾಗುತ್ತದೆ ಹಾಗೂ ಮದ್ಯಸ್ಥಿಕೆಯಲ್ಲಿಯೇ ಪರಿಹಾರಗಳನ್ನು ಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಒಂದು ಕೋಟಿ(ಮೊದಲು 20 ಲಕ್ಷ ಇತ್ತು)ವರೆಗೆ ಪರಿಹಾರ ದೂರುಗಳನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾಖಲಿಸಬಹುದು. ಗ್ರಾಹಕರು ದೂರು ದಾಖಲಿಸಲು ಜಿಲ್ಲಾ, ರಾಜ್ಯ, ರಾಷ್ಟ್ರ ಎಂದು ಮೂರು ಆಯೋಗಗಳನ್ನು ರಚಿಸಲಾಗಿದೆ. ಒಂದ ಕೋಟಿಯಿಂದ 10 ಕೋಟಿವರೆಗೆ ಸರಕು ಸೇವೆಗಳು ದೂರುಗಳನ್ನು ರಾಜ್ಯ ಆಯೋಗದಲ್ಲಿ ಹಾಗೂ 10 ಕೋಟಿಗಿಂತ ಹೆಚ್ಚಿನ ಮೌಲ್ಯಗಳ ದೂರು ಇದ್ದಲ್ಲಿ ರಾಷ್ಟ್ರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಮಾತನಾಡಿ, ದಿನ ನಿತ್ಯದ ವಸ್ತುಗಳನ್ನು ಆನ್‍ಲೈನ್ ಶಾಪಿಂಗ್‍ನಿಂದ ಅನೇಕ ನಕಲಿ ಕಂಪನಿಗಳು ಹುಟ್ಟಿಕೊಂಡು ಜನರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಗ್ರಾಹಕರ ರಕ್ಷಣಾ ಕಾಯ್ದೆಯ ಬಗ್ಗೆ ಸರಿಯಾದ ಅರಿವು, ಮಾಹಿತಿಗಳು ಗ್ರಾಹಕರಿಗೆ ಇದ್ದರೇ ಈ ಮೋಸಗಳನ್ನು ತಡೆಯಬಹುದು ಹಾಗೂ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ವ.ಸಿ.ಜೆ.ಎಮ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ವಾಸುದೇವ್ ಆರ್. ಗುಡಿ, ಜಿಲ್ಲಾ ನ್ಯಾಯಾಲಯ ಸರ್ಕಾರಿ ಅಭಿಯೋಜಕರಾದ ಎಸ್.ಎಮ್. ಗೆಜ್ಜಿಹಳ್ಳಿ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಶ್ರೀಮತಿ ಮಹೇಶ್ವರಿ ವಿ.ಎಸ್, ಚೈತನ್ಯ ರೂರಲ್ ಡೆವಲಪಮೆಂಟ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಗೀತಾ ಪಾಟೀಲ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಡಿ.ಆರ್. ಚೌಗಲಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಚೈತನ್ಯ ರೂರಲ್ ಡೆವಲಪಮೆಂಟ್ ಸೊಸೈಟಿ ನಿರ್ದೇಶಕ ಎಸ್.ಹೆಚ್. ಮಜೀದ, ಎಮ್.ಆರ್.ಎಮ್. ಪಿ.ಯು ಕಾಲೇಜ್ ಪ್ರಾಚಾರ್ಯ ರಾಮ್ ಮೋಹನ ಇತರರು ಉಪಸ್ಥಿತರಿದ್ದರು.


Haveri State

ಹಾವೇರಿ:ಉತ್ಪನ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಬೆಳೆಗಳಿಗೆ ಯಾವ ಸಂದರ್ಭದಲ್ಲಿ ಏನು ಬಳಕೆಮಾಡಬೇಕು, ಉತ್ಪಾದನೆ ಹೆಚ್ಚಿಸಿಕೊಳ್ಳಲು ಹಾಗೂ ರೈತರ ಬೆಳೆಗಳ ನೇರ ಮಾರಾಟ ಅಗತ್ಯವಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರು ಹೇಳಿದರು. ದೇವಿಹೊಸೂರ ಗ್ರಾಮದ ಶ್ರೀ ಲಿಂಗರಾಜ ಶಿರಸಂಗಿ ಡಿ.ಎ.ಟಿ.ಸಿಯಲ್ಲಿ ಮಂಗಳವಾರ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‍ವೆಸ್ ಒಕ್ಕೂಟದ ಪಾಲುದಾರರಾದ ಸೌಹಾರ್ದ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಸರ್ವಿಸಸ್ ಸಹಯೋಗದಲ್ಲಿ ಜರುಗಿದ ಹಾವೇರಿ ಜಿಲ್ಲಾ ರೈತ ಉತ್ಪಾದಕರ ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳ ಹಾಗೂ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಬಿತ್ತನೆ ನಂತರ ಕಳೆನಾಶಕವಾಗಿ ಲಾಡಿಸ್‍ನ್ನು ರಸಗೊಬ್ಬರೊಂದಿಗೆ ಬೆರೆಸಿ ಭೂಮಿಗೆ ನೀಡಲಾಗುತ್ತಿದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ ಹಾಗೂ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಲಾಡಿಸ್‍ನ್ನು ಮರಳಿನೊಂದಿಗೆ ಬೆರಸಿ ನೀಡಬಹುದು. ನಮ್ಮ ಪದ್ಧತಿ ಬದಲಾಯಿಸಬೇಕು, ಸಂಪನ್ಮೂಲ ವ್ಯರ್ಥವಾಗುವುದನ್ನು ತಡೆಯಬೇಕು ಹಾಗೂ ವೈಜ್ಞಾನಿಕ ಮಾಹಿತಿಯನ್ನು ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕು. ಈ ತರಬೇತಿಯಲ್ಲಿ ಭಾಗವಹಿಸಿದ ರೈತರು ಇತರ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಆದಾಯ ಹೆಚ್ಚಿಸಲು, ಬಾಡಿಗೆ ಸೇವಾ ಆಧಾರಿತ ಪರಿಕರ ಕೇಂದ್ರ ಹಾಗೂ ಬೆಳೆ ವರ್ಧಕಗಳ, ನೇರ ಮಾರುಕಟ್ಟೆ ಬಗ್ಗೆ ಹೋಬಳಿ ಮಟ್ಟದಲ್ಲಿ ರೈತರ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆ. ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೇರವಾಗಿ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಲಾಗಿದೆ. ಮುಸುಕಿನ ಜೋಳದಿಂದ ಪಶು ಹಾಗೂ ಕೋಳಿಗೆ ಆಹಾರ ತಯಾರಿಸಲಾಗುತ್ತಿದೆ. ರೈತರು ನೇರವಾಗಿ ತಯಾರಿಕಾ ಕಂಪನಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು.

ಇಂದು ಜಂಕಫುಡ್ ಸೇವನೆಯಿಂದ 35 ವರ್ಷದೊಳಗಿನ ಯುವ ಜನತೆಗೆ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾರೆ. 2021-22ನೇ ಸಾಲನ್ನು ಯುನೈಟೆಡ್ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಬೇಕು. ಸಿರಿಧಾನ್ಯಗಳು ಪೌಷ್ಠಿಕ ಆಹಾರವಾಗಿದ್ದು, ಇದರ ಬಳಕೆ ಅಗತ್ಯವಾಗಿದೆ. ಚಂದ್ರಕಾಂತ ಸಂಗೂರ ಅವರು ಸಿರಿಧಾನ್ಯಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಹಾಗೂ ಲಂಡನ್, ಇಂಗ್ಲೆಂಡ್ ದೇಶಗಳಿಗೆ ರಫ್ತುಮಾಡುತ್ತಿದ್ದಾರೆ. ರೈತರು ಮನಸ್ಸು ಮಾಡಿದರೆ ಸಾಧನೆ ಮಾಡಬಹುದು. ನಮ್ಮ ಅವಶ್ಯಕತೆ, ಉತ್ಪಾದನೆ, ಆದಾಯ ಹೆಚ್ಚಿಸುವ, ಜೀವನಮಟ್ಟ ಸುಧಾರಿಸುವ ವಿಚಾರ ಹೊಂದಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮನೋಹರ ಮಸ್ಕಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕೃಷಿ ಇಲಾಖೆ ಹಾವೇರಿ ಕೃಷಿ ಉಪನಿರ್ದೇಶಕರಾದ ಕರಿಯಲ್ಲಪ್ಪ, ರಾಣೇಬೆನ್ನೂರಿನ ಕೃಷಿ ಉಪನಿರ್ದೇಶಕರಾದ ಶ್ರೀಮತಿ ಸ್ಫೂರ್ತಿ, ಸಹಾಯಕ ಕೃಷಿ ನಿರ್ದೇಶಕ ವಿಜಯ, ಪೂರ್ಣ ಪ್ರಜ್ಞ ಬೆಳ್ಳೂರ ಇತರರು ಉಪಸ್ಥಿತರಿದ್ದರು.


Haveri State

ಹಾವೇರಿ: ಪಂಚಾಯತ್ ಗ್ರಾಮಿಣ ಕೈಗಾರಿಕೆ ವಿಭಾಗದಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಯೋಜನೆಯಡಿ ಹೊಲಿಗೆ ಯಂತ್ರಗಳನ್ನು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಏಕನಾಥ ಭಾನುವಳ್ಳಿ ಅವರು ವಿತರಣೆ ಮಾಡಿದರು.
ಜಿ.ಪಂ.ಕಚೇರಿಯಲ್ಲಿ ಮಂಗಳವಾರ ಹೊಲಿಗೆ ಯಂತ್ರ ವಿತರಿಸಲಾಯಿತು. ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಾನಂದ ಕನ್ನಪ್ಪಳವರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾ ಟಾಕನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.