Other Film – Page 2 – Kannada News Now


Other Film

Cricket Other Film Sports

ಸ್ಪೆಷಲ್ ಡೆಸ್ಕ್ : ವಿಶ್ವದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನೂ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್‌ ಡೇವಿಡ್‌ ವಾರ್ನರ್‌, ತಮ್ಮ ಟಿಕ್‌ ಟಾಕ್‌ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಮುದಗೊಳಿಸುತ್ತಿದ್ದಾರೆ.

ಇತ್ತಿಚೆಗಷ್ಟೇ ತಮ್ಮ ಮಗಳಿಗಾಗಿ ಅಧಿಕೃತವಾಗಿ ಟಿಕ್‌ಟಾಕ್‌ ಆಪ್‌ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್ ವಾರ್ನರ್‌, ಹಲವು ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಭಾರತೀಯ ಹಾಡುಗಳೂ ಸೇರಿವೆ.

ಐಪಿಎಲ್ ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕರಾಗಿರುವ ವಾರ್ನರ್ ತಮ್ಮ ಅಭಿಮಾನಿಗಳಿವಾಗಿ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್‌ ಮತ್ತು ಪೂಜಾ ಹೆಗ್ಡೆ ನಟಿಸಿರುವ ಅಲಾ ವೈಕುಂಠಪುರಮುಲೋ ಸಿನಿಮಾದ ‘ಬುಟ್ಟ ಬೊಮ್ಮ’ಗೆ ಸಖತ್‌ ಸ್ಟೆಪ್‌ ಹಾಕಿ ಮಿಂಚಿದ್ದಾರೆ. ಪತ್ನಿ ಕ್ಯಾಂಡೀಸ್‌ ವಾರ್ನರ್‌ ಕೂಡ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಹಿಂದೆ ವಾರ್ನರ್ ಮುದ್ದಿನ ಮಗಳು ಐವೀ ಜೊತೆ ಕಟ್ರೀನಾ ಕೈಫ್‌ ಅವರ ಸೂಪರ್‌ ಹಿಟ್‌ ‘ಶೀಲಾ ಕಿ ಜವಾನಿ’ ಹಾಡಿಗೆ ಸ್ಟೆಪ್‌ ಹಾಕಿದ್ದರು.

 

View this post on Instagram

Indi stealing the show. #buttabomma #iso

A post shared by Mrs Candice Warner (@candywarner1) on

 

Bollywood Film Other Film

ಸಿನಿಮಾ ಡೆಸ್ಕ್ : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ, ಈ ಹಿನ್ನೆಲೆ ಸಿನಿಮಾ ನಟ ನಟಿಯರು ಮನೆಯಲ್ಲೇ ಕುಳಿತು ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ನಟಿ ನಿಧಿ ಅಗರವಾಲ್ ಸಾಮಾಜಿಕ ಜಾಲತಾಣದಲ್ಲಿ ಪ್ಯಾಂಟ್ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

ಸಮಯ ಸಿಕ್ಕಾಗಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ನಟಿ ಇದೀಗ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಟೀಕೆಗೆ ಕಾರಣವಾಗಿದೆ.

Film Other Film

ಸಿನಿಮಾ ಡೆಸ್ಕ್ :  ಬಾಹುಬಲಿ ಸಿನಿಮಾದ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ  ಸದ್ಯ ಬಿಗ್ ಪ್ರಾಜೆಕ್ಟ್ ಆರ್ ಆರ್ ಆರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಚಿತ್ರೀಕರಣದ ಕೆಲಸ ಅರ್ಧಕ್ಕೆ ನಿಂತಿದೆ. ಈ ನಡುವೆ ಆಲಿಯಾ ಭಟ್ ರಾಜಮೌಳಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಯೆಸ್, ಅದೇನಪ್ಪ ಅಂದ್ರೆ ರಾಮ್‌ ಚರಣ್‌ ಮತ್ತು ಜೂ.ಎನ್‌ಟಿಆರ್ ನಾಯಕತ್ವದ ‘ಆರ್‌ಆರ್‌ಆರ್‌’ ಚಿತ್ರದಲ್ಲಿ ಆಲಿಯಾ ಭಟ್‌ ನಟಿಸಲಿದ್ದಾರೆ ಎಂಬ ವಿಚಾರ ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. . ಇನ್ನು, ರಾಮ್‌ ಚರಣ್‌ಗೆ ಆಲಿಯಾ ಭಟ್ ನಾಯಕಿ  ಎನ್ನಲಾಗಿತ್ತು. ಜೊತೆಗೆ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಎಂಬ ಸುದ್ದಿ ಕೂಡ ಹರಡಿತ್ತು.

ಆದರೆ ಈ ವಿಚಾರದ ಕುರಿತು ರಾಜಮೌಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ತ್ರಿಕೋನ ಪ್ರೇಮಕಥೆ ಇಲ್ಲ. ಅಲ್ಲದೆ, ಇಬ್ಬರು ಹೀರೋಗಳಿಗೂ ಆಲಿಯಾ ಭಟ್ ಜೋಡಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ರಾಜಮೌಳಿ ಹೇಳಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನೂ, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕ್ಯುರಿಯಾಸಿಟಿ ಇದ್ದು, ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಎದುರು ನೋಡುತ್ತಿದ್ದಾರೆ.