Other Film – Kannada News Now


Other Film

Film Other Film

ಚೆನ್ನೈ : ಖ್ಯಾತ ಮಲೆಯಾಳಂ ನಟಿ ಕೆ.ವಿ. ಶಾಂತಿ (81) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

1953ರಲ್ಲಿ ತೆರೆಕಂಡ ತಮ್ಮ ಚೊಚ್ಚಲ ಚಿತ್ರ ‘ಪಡಾಥ ಪೈಂಕಿಲಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ನಂತರ ಮಲಯಾಳಂ, ತಮಿಳು ಭಾಷೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

Film India Other Film

ಗೋವಾ : ಹಾಟ್ ಬೆಡಗಿ ಪೂನಂ ಪಾಂಡೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಇದೀಗ ಅವರು ಬಿಸಿ ಬಿಸಿ ಸುದ್ದಿ ಮೂಲಕ ಚರ್ಚೆಯಲ್ಲಿದ್ದಾರೆ. ದಕ್ಷಿಣ ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಪತಿ ಸ್ಯಾಮ್ ಅಹ್ಮದ್ ವಿರುದ್ಧ ಪೂನಂ ಪಾಂಡೆ (29) ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504, 354 ಮತ್ತು 506 (ii) ರ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ, ಆರೋಪಿ ಸ್ಯಾಮ್ (46), ನನ್ನ ಮೇಲೆ ಹಲ್ಲೆ ನಡೆಸಿ “ವೈಯಕ್ತಿಕ ವಿವಾದ” ಹಿನ್ನೆಲೆಯಲ್ಲಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾಳೆ.

ಈ ವರ್ಷ ಸೆಪ್ಟೆಂಬರ್ 10 ರಂದು ಇವರಿಬ್ಬರು ವಿವಾಹವಾಗಿದ್ದರು ಮತ್ತು ಇಬ್ಬರೂ ಗೋವಾಕ್ಕೆ ಭೇಟಿ ನೀಡಿ ಮದುವೆಯಾಗಿದ್ದರು, ಪೂನಮ್ ತನ್ನ ಅಧಿಕೃತ ಖಾತೆಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಸ್ಯಾಮ್ ಅವರೊಂದಿಗಿನ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ತಮ್ಮ ಮದುವೆಯ ಉಡುಪಿನಲ್ಲಿ ದಂಪತಿಗಳ ಚಿತ್ರಗಳ ಸರಣಿಯನ್ನು ಹಂಚಿಕೊಂಡ ಪೂನಮ್, “ಇಲ್ಲಿ ನಿಮ್ಮೊಂದಿಗೆ ಏಳು ಜೀವಿತಾವಧಿಯನ್ನು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು.

ಜುಲೈ 2020 ರಲ್ಲಿ, ಪೂನಂ ಪಾಂಡೆ ಮತ್ತು ಸ್ಯಾಮ್ ತಮ್ಮ ಉಂಗುರವನ್ನು ತೋರಿಸುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು. “ನಾವು ಅಂತಿಮವಾಗಿ ಇದನ್ನು ಮಾಡಿದ್ದೇವೆ!” ಎಂಬ ಶೀರ್ಷಿಕೆಯೊಂದಿಗೆ ಸ್ಯಾಮ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

Film Other Film

ಹೈದರಾಬಾದ್ : ತೆಲುಗು ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಹೈದರಾಬಾದ್​ನ ಎಸ್​.ಆರ್​. ನಗರದ ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಶ್ರಾವಣಿ ಹೈದರಾಬಾದ್​ನದಲ್ಲಿ ವಾಸಿಸುತ್ತಿದ್ದರು. ‘ಮನಸು ಮಮತ’ ಹಾಗೂ ‘ಮೌನರಾಗಂ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಪರಿಚಯವಾದ ದೇವರಾಜು ರೆಡ್ಡಿ ಪ್ರೀತಿಯ ನಾಟಕವಾಡಿ, ಖಾಸಗಿ ಪೋಟೋ ತೆಗೆದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದನು ಎಂದು ಶ್ರಾವಣಿ ಎಸ್.ಆರ್. ನಗರದಲ್ಲಿ ದೂರು ನೀಡಿದ್ದಳು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ದೇವರಾಜು ರೆಡ್ಡಿಯ ಕಿರುಕುಳ ಹೆಚ್ಚಾದ ಬಳಿಕ ಶ್ರಾವಣಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Film Other Film

ಡಿಜಿಟಲ್‌ಡೆಸ್ಕ್‌: ಮನಸು ಮಮತಾ ಧಾರಾವಾಹಿಯಲ್ಲಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ತೆಲುಗು ಟಿವಿ ನಟ ಶ್ರಾವಣಿ ಸೆಪ್ಟೆಂಬರ್ 8, 2020 ರಂದು ರಾತ್ರಿ 9-10 ರ ನಡುವೆ ಹೈದರಾಬಾದ್‌ನ ಮಧುರನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡಿರುವ ನಟಿ ಶ್ರಾವಣಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನೂ ನಟಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ನಡುವೆ ಕೆಲವು ದಿನಗಳ ಹಿಂದೆ ಆಕೆಗೆ ಕಿರುಕುಳ ನೀಡಿದ ದೇವರಾಜ್ ರೆಡ್ಡಿ ಅವರನ್ನು ಕುಟುಂಬ ಸದಸ್ಯರು ದೂಷಿಸಿದ್ದು ನ್ಯಾಯಾಕ್ಕಾಗಿ ಮನವಿ ಮಾಡಿದ್ದಾರೆ. ದೇವರಾಜ್ ತಮ್ಮ ಮಗಳಿಗೆ ಕಿರುಕುಳ ನೀಡಿದ್ದದ್ದಾರೆ ಆದಾದ ಘಟನೆಯ ನಂತರ ಶ್ರಾವಣಿ ತುಂಬಾ ಆತಂಕಕ್ಕೊಳಗಾದರು ಮತ್ತು ಉದ್ವಿಗ್ನತೆ ಹೊಂದಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.

Film Other Film

ಹೈದರಾಬಾದ್​​: ಟಾಲಿವುಡ್ ಹಿರಿಯ ನಟ ಜಯಪ್ರಕಾಶ ರೆಡ್ಡಿ (74) ಇಂದು ಗುಂಟೂರಿನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಅವರು ತಮ್ಮ ಸ್ನಾನದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಮೂಲತಃ ಕರ್ನೂಲ್ ಜಿಲ್ಲೆಯ ಆಳ್ಲಗಡ್ಡ ಮೂಲದವರಾದ ನಟ ಜಯಪ್ರಕಾಶ ರೆಡ್ಡಿ ಲಾಕ್​ಡೌನ್ ಶುರುವಾದಾಗಿನಿಂದ ಗುಂಟೂರು ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ.

Film Other Film Sandalwood State

ಚನ್ನೈ:  ಕರೋನ ಸೊಂಕಿನಿಂದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗುಣಮುಖರಾಗಿದ್ದು, ಈ ಸುದ್ದಿಯನ್ನು ಅವರ ಪುತ್ರ ಚರಣ್ ಅವರು ಖಚಿತಪಡಿಸಿದ್ದಾರೆ.

ಸದ್ಯ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತ ಇದೇ ವೇಳೆ ಅವರು ಹೇಳಿದ್ದು, ಇದೇ ವೇಳೆ ಅವರು ನನ್ನ ತಂದೆಯವರ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಸಮಯಬೇಕಾಗಿದ್ದು, ಕೆಲವು ದಿನದ ಹಿಂದೆ ನನ್ನ ತಂದೆ ತಾಯಿ ತಮ್ಮ ಮದ್ವೆಯ ಸಂಭ್ರವನ್ನು ಆಚರಣೆ ಮಾಡಿಕೊಂಡರು. ಇನ್ನೂ ನನ್ನ ತಂದೆ ಟಿವಿಯಲ್ಲಿ ಬರುವ ಕಾರ್ಯಕ್ರಮವನ್ನು ನೋಡುತ್ತಿದ್ದು, ನಿಮ್ಮೆಲ್ಲರ ಹಾರೈಕೆಯಿಂದ ನನ್ನ ತಂದೆ ಕರೋನವನ್ನು ಗೆದಿದ್ದಾರೆ ಅಂತ ಚರಣ್‌ ಹೇಳಿದ್ದಾರೆ.

Film Other Film

ನ್ಯೂಸ್ ಡೆಸ್ಕ್ : ದಕ್ಷಿಣ ಭಾರತದ ಸುಂದರ ಟಾಪ್ ನಟಿ ಸಮಂತಾ ಅಕ್ಕಿನೇನಿಯವರ ಬ್ಯಾಚುಲರ್ ಡಿಗ್ರಿ (ಕಾಮರ್ಸ್) ಸರ್ಟಿಫಿಕೇಟ್ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಲೀಕ್ ಮಾಡಿದ್ದು ಇದನ್ನು ನೋಡಿ ಸ್ವತಃ ನಟಿ ಶಾಕ್ ಆಗಿದ್ದಾರೆ.

ಅಭಿಮಾನಿಯೊಬ್ಬ ತನ್ನ ಬ್ಯಾಚುಲರ್ ಪದವಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವುದನ್ನು ನೋಡಿದ ನಟಿ ಶಾಕ್ ಆಗಿದ್ದಾರೆ. ಅಭಿಮಾನಿಯೊಬ್ಬರು ಸಮಂತಾ ಅಕ್ಕಿನೇನಿಯ ವಾಣಿಜ್ಯ ಪದವಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ತನ್ನ ಬ್ಯಾಚುಲರ್ ಪದವಿಯ ಚಿತ್ರವನ್ನು ಅಭಿಮಾನಿಯೊಬ್ಬರು ಹೇಗೆ ಹಿಡಿದಿದ್ದಾರೆಂದು ನೋಡಿ ನಟಿ ಆಘಾತಕ್ಕೊಳಗಾದರು. ಇದು ಹೇಗೆ ನಿಮಗೆ ಸಿಕ್ಕಿದೆ ಎಂದು ರೀ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳು ಮತ್ತು ಅನುಯಾಯಿಗಳು ಸಮಂತಾ ಅವರ ವಾಣಿಜ್ಯ ಪದವಿಯ ಫೋಟೋವನ್ನು ನೋಡಿದಾಗ ಅಷ್ಟೇ ಆಶ್ಚರ್ಯಚಕಿತರಾದರು. ಆದರೆ, ನಂತರ ಅನೇಕ ಜನರ ಆಶ್ಚರ್ಯಕ್ಕೆ, ಸಮಂತಾ ಅಕ್ಕಿನೇನಿಯ ಬ್ಯಾಚುಲರ್ ಪದವಿಯ ಚಿತ್ರವನ್ನು ಯಾವುದೇ ಕಾರಣವನ್ನು ನೀಡದೆ ಅಭಿಮಾನಿ ಫೋಟೋವನ್ನು ಡಿಲಿಟ್ ಮಾಡಿದ್ದಾನೆ.

ಸಮಂತಾ ಅಕ್ಕಿನೇನಿ ಜಾನು ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ಸೌತ್ ಫ್ಲಿಕ್ 96 ರ ರೀಮೇಕ್ ಆಗಿತ್ತು. ಮಜೀಲಿ ನಟಿ ಸಮಂತಾ ಅಕ್ಕಿನೇನಿ ಮತ್ತು ದಕ್ಷಿಣ ನಟ ಶರ್ವಾನಂದ್ ಜೊತೆ ಜಾನು ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅಲ್ಲದೇ ಪತಿ ಜೊತೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

 

ಮತ್ತೊಂದು ಫ್ಯಾನ್ ಪೇಜ್ ಸಮಂತಾ ಅವರ ಎಂಟನೇ ತರಗತಿ ಸರ್ಟಿಫಿಕೇಟ್ ಪೋಸ್ಟ್ ಮಾಡಿ, ಟಾಪರ್ ಯಾವಾಗಲೂ ಟಾಪರ್ ಆಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

 

Film Other Film

ಸಿನಿಮಾಡೆಸ್ಕ್:  ನಟ ರಾಣಾ ದಗ್ಗುಬಾತಿ ಈಗ ಗೆಳತಿ ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ನಡುವೆ ಅವರ ನಿಶ್ಚಿತಾರ್ಥದ ಸಮಾರಂಭದ ಕೆಲವು ಸುಂದರವಾದ ಚಿತ್ರಗಳನ್ನು ರಾಣಾ ದಗ್ಗುಬಾತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ನಡುವೆ ಬುಧವಾರವೇ ರಾಣಾ ಮತ್ತು ಮಿಹೀಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ರಾಣಾ ‘ಈಗ ಇದು ಅಧಿಕೃತ’ ಎಂದಿದ್ದಾರೆ. ಇಂಟಿರೀಯರ್ ಡಿಸೈನ್‌ನಲ್ಲಿ ಡಿಪ್ಲೋಮಾ ಗಳಿಸಿದ ನಂತರದಲ್ಲಿ ಲಂಡನ್‌ನ ಚೆಸ್ಲಿಯಾ ಯುನಿವರ್ಸಿಟಿ ಆಫ್ ಆರ್ಟ್, ಡಿಸೈನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿರುವ ಮಿಹೀಕಾDew Drop Design Studio ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಇದಲ್ಲದೇ , ‘ಡಿಸೈನ್ ಪಟಾಕಿ’ಯಲ್ಲಿ ಬರಹಗಾರ್ತಿಯಾಗಿದ್ದಾರೆ.

View this post on Instagram

And it’s official!! ????

A post shared by Rana Daggubati (@ranadaggubati) on

Film Other Film

ಮುಂಬೈ : ಹಿಂದಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ‘ಕಹಾನಿ ಘರ್ ಘರ್ ಕಿ’ ಧಾರಾವಾಹಿಯ ನಟ ಸಚಿನ್ ಕುಮಾರ್ ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿ ಕಿರುತೆರೆ ನಟರಾದ ರಾಕೇಶ್ ಪೌಲ್, ಚೇತನ್ ಹನ್ಸರಾಜ್, ವಿನೀತ್ ರೈನಾ, ಸುರಭಿ ತಿವಾರಿ ಮುಂತಾದವರು ಸಚಿನ್ ನಿಧನ ಸುದ್ದಿಯಿಂದ ಶಾಕ್ ಆಗಿದ್ದು ಸಂತಾಪ ಸೂಚಿಸಿದ್ದಾರೆ.

ಹಲವು ವರ್ಷಗಳಿಂದ ಸಚಿನ್ ಬಣ್ಣದ ಬದುಕಿನಿಂದ ದೂರ ಉಳಿದು ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದರು. ಇವರ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಗೆಳೆಯ ರಾಕೇಶ್ ಪೌಲ್ ‘ ಸಾವಿನ ಸುದ್ದಿ ಶಾಕ್ ತಂದಿದೆ. ಆತನನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗಲಿಲ್ಲ. ಮನೆಯಲ್ಲಿಯೆ ಸಾವನ್ನಪ್ಪಿದ್ದಾರೆ. ತನ್ನ ಕೊಠಡಿ ಬಾಗಿಲು ಹಾಕಿಕೊಂಡು ರಾತ್ರಿ ಮಲಗಿದವರು ಬೆಳಗ್ಗೆ ಬಾಗಿಲು ತೆಗೆದಿರಲಿಲ್ಲ. ಅವರ ತಂದೆತಾಯಿ ಸಾಕಷ್ಟು ಪ್ರಯತ್ನಿಸಿ ಕೊನೆಗೆ ಬಾಗಿಲು ತೆರೆದು ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಬಹುಶಃ ತಡರಾತ್ರಿ ಅಥವಾ ಮುಂಜಾನೆ ಅವರಿಗೆ ಹೃದಯಾಘಾತವಾಗಿರಬಹುದು” ಎಂದಿದ್ದಾರೆ.

Film India Other Film

ಸಿನಿಮಾ ಡೆಸ್ಕ್ : ದೇಶದಲ್ಲಿ ಕೊರೊನಾ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಇನ್ನೂ ಕೊರೋನಾ ಲಾಕ್ಡೌನ್ನಿಂದಾಗಿ ಸಾಕಷ್ಟು ಶುಭ ಸಮಾರಂಭಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅದ್ಧೂರಿಯಾಗಿ ಮದುವೆ ಯೋಜನೆ ಹಾಕೊಂಡಿದ್ದ ಸೆಲೆಬ್ರಿಟಿಗಳು ಕೂಡ ತಮ್ಮ ಮದುವೆಯವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ

ಇನ್ನು ಕೆಲ ಸೆಲೆಬ್ರಿಟಿಗಳು ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕನ್ನಡದ ನಟ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರ ಸ್ವಾಮಿ ಮತ್ತು ರೇವತಿ ಸರಳವಾಗಿ ವಿವಾಹವಾಗಿದ್ದರು. ಇದೀಗ ಟಾಲಿವುಡ್​ ನಟ ನಿಖಿಲ್​ಸಿದ್ಧಾರ್ಥ್​​​​​ ಹಸೆಮಣೆ ಏರಲಿದ್ದಾರೆ. ಗೆಳತಿ ಪಲ್ಲವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಮೇ 14ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿಖಿಲ್​ ಮತ್ತು ಪಲ್ಲವಿ ವಿವಾಹ ಏ.16ರಂದು ನಡೆಯ ಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ವಿವಾಹ ದಿನಾಂಕ ಮುಂದೂಡಿಕೆ ಆಯಿತು. ಇದೀಗ ನಿಖಿಲ್​ ತಮ್ಮ ಫಾರ್ಮ್​ಹೌಸ್​ನಲ್ಲಿ ಸರಳ ವಿವಾಹವಾಗುತ್ತಿದ್ದಾರೆ. ಆದರೆ ಮದುವೆಗೆ ಕೆಲವೇ ಕೆಲವು ಮಂದಿ ಸ್ನೇಹಿತರು,  ಸಂಬಂಧಿಕರಿಗೆ ಮಾತ್ರ ಆಹ್ವಾನವಂತೆ.