Bollywood – Kannada News Now


Bollywood

Bollywood Film

ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಬಾಲಿವುಡ್ ನಟಿ ಇದೀಗ ನಿರ್ದೇಶಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಕುರಿತು ನಟಿಯ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಐಪಿಸಿ ಸೆಕ್ಷನ್ 376, 354, 341, 342 ರ ಅಡಿಯಲ್ಲಿ ಅತ್ಯಾಚಾರ, ಸಂಯಮ ಮೀರಿ ವರ್ತನೆ, ಮಹಿಳೆಯರ ನಮ್ರತೆಯನ್ನು ಮೀರಿದ ಅಪರಾಧಕ್ಕಾಗಿ ಲಿಖಿತ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಅನುರಾಗ್ ಕಶ್ಯಪ್ ಈ ಹಿಂದೆ ತಮ್ಮ ವಿರುದ್ಧದ ಲೈಂಗಿಕ ದುರ್ನಡತೆ ಆರೋಪಗಳನ್ನು ಸರಣಿ ಟ್ವೀಟ್‌ಗಳಲ್ಲಿ ನಿರಾಕರಿಸಿದ್ದರು. ನಂತರ, ಕಶ್ಯಪ್ ತಮ್ಮ ವಕೀಲೆ ಪ್ರಿಯಾಂಕಾ ಖಿಮಾನಿ ಮೂಲಕ ನೀಡಿದ ಹೇಳಿಕೆಯಲ್ಲಿ, ಆರೋಪಗಳನ್ನು ‘ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ’ ಎಂದು ಕರೆದಿದ್ದರು.

 

Bollywood Film India

ನವದೆಹಲಿ:ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ವನ್ನು ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ಅಕ್ಟೋಬರ್ 6ರವರೆಗೆ ವಿಸ್ತರಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಿಯಾ ಚಕ್ರವರ್ತಿ ಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್ ಸಿಬಿ) ಸೆಪ್ಟೆಂಬರ್ 8ರಂದು ಬಂಧಿಸಿತ್ತು. ಇದಕ್ಕೂ ಮುನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಈಗ ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.

Bollywood Film

ಮುಂಬೈ : ಕಳೆದ ಕೆಲವು ದಿನಗಳಿಂದ ಕಂಗನಾ ವಿರುದ್ಧ ಟ್ವೀಟ್ ದಾಳಿ ನಡೆಸುತ್ತಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್‌ ವಿರುದ್ಧ ನಟಿ ಪಾಯಲ್ ಘೋಷ್‌ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪಾಯಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಅನುರಾಗ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಅವರಿಗೆ ನಟಿ ಕಂಗನಾ ರಣಾವತ್ ಕೂಡ ಸಾಥ್ ನೀಡಿದ್ದಾರೆ.

ವಿಡಿಯೋವೊಂದರ ಮೂಲಕ ಐದು ವರ್ಷಗಳ ಹಿಂದೆ ನಡೆದ ಘಟನೆಯಲ್ಲಿ ಅನುರಾಗ್‌, ತಮ್ಮ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ, ಈತನ ಮೇಲೆ ಕ್ರಮ ಕೈಗೊಳ್ಳಿ. ಒಬ್ಬ ಸೃಜನಶೀಲ ವ್ಯಕ್ತಿಯ ಹಿಂದಿರುವ ರಾಕ್ಷಸ ಮುಖವನ್ನು ದೇಶ ನೋಡಲಿ. ನನಗೆ ಗೊತ್ತಿದೆ, ಇದರಿಂದ ನನಗೆ ತೊಂದರೆ ಆಗಲಿದೆ. ನಾನೀಗ ತೊಂದರೆಯಲ್ಲಿದ್ದೇನೆ. ದಯವಿಟ್ಟು ಸಹಾಯ ಮಾಡಿ’ ಎಂದು ಪಾಯಲ್ ಹೇಳಿದ್ದಾರೆ.

ಇನ್ನು, ಪಾಯಲ್‌ ಟ್ವೀಟ್ ಅನ್ನು ಕಂಗನಾ, ‘#ArrestAnuragKashyap’ ಹ್ಯಾಷ್‌ಟ್ಯಾಗ್‌ ಬಳಸಿ, ರೀ-ಟ್ವೀಟ್ ಮಾಡಿದ್ದಾರೆ. ಇನ್ನು ಪಾಯಲ್‌ ಘೋಷ್‌ ಮಾಡಿದ ಆರೋಪಗಳಿಗೆ ಅನುರಾಗ್ ಪ್ರತಿಕ್ರಿಯೆ ನೀಡಿದ್ದು, ಇವೆಲ್ಲ ಆಧಾರರಹಿತ ಆರೋಪಗಳು ಎಂದಿದ್ದಾರೆ.

Bollywood Film India

ನವದೆಹಲಿ: ರಾಜ್ಯಸಭೆಯಲ್ಲಿ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದ ಜಯ ಬಚ್ಚನ್ ಅವರು ಚಿತ್ರರಂಗವನ್ನು ಕೆಣಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಮತ್ತು ಸರ್ಕಾರ ಇದರ ವಿರುದ್ಧ ರಕ್ಷಣೆ ನೀಡಬೇಕು ಎಂದು ಹೇಳಿದ ನಂತರ, ಕಂಗನಾ ರನೌತ್ ಅವರು ಕಠಿಣವಾದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಜಯಾ ಜಿ ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಹದಿಹರೆಯದವಳಾಗಿದ್ದಾಗ, ಮಾದಕ ದ್ರವ್ಯ ಮತ್ತು ಕಿರುಕುಳಕ್ಕೊಳಗಾಗಿದ್ದರೆ ನೀವು ಅದೇ ಮಾತನ್ನು ಹೇಳುತ್ತೀರಾ, ಅಭಿಷೇಕ್ ನಿರಂತರವಾಗಿ ಬೆದರಿಸುವಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಿದರೆ ಮತ್ತು ಒಂದು ದಿನ ನೇಣು ಬಿಗಿದುಕೊಂಡರೆ ನೀವು ಅದೇ ಮಾತನ್ನು ಹೇಳುತ್ತೀರಾ? ನಮಗೂ ಸಹಾನುಭೂತಿ ತೋರಿಸಿ ಅಂತ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಜಯ ಬಚ್ಚನ್ ಅವರು ಸೋಮವಾರ ಲೋಕಸಭೆಯಲ್ಲಿ ಡ್ರಗ್ಸ್ ಪಿತೂರಿ ಹೇಳಿಕೆಗಾಗಿ ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಸರ್ಕಾರವು ಮನರಂಜನಾ ಉದ್ಯಮದ ಪರವಾಗಿ ನಿಲ್ಲಬೇಕು ಏಕೆಂದರೆ  ಸಿನಿಮಾ ಯಾವಾಗಲೂ ಸರ್ಕಾರಕ್ಕೆ ಸಹಾಯ ಮಾಡಲು ಮುಂದೆ ಬರುತ್ತದೆ ರಾಷ್ಟ್ರೀಯ ವಿಪತ್ತು ಇದ್ದರೆ ಅವರಿಗೆ ಬೆಂಬಲ ನೀಡುತ್ತಾರೆ, ಅವರು ಮುಂದೆ ಬರುತ್ತಾರೆ, ಹಣ ನೀಡುತ್ತಾರೆ, ತಮ್ಮ ಸೇವೆಗಳನ್ನು ನೀಡುತ್ತಾರೆ. ಮತ್ತು ಸರ್ಕಾರವು ಈ ಉದ್ಯಮವನ್ನು ಬೆಂಬಲಿಸಬೇಕು ಮತ್ತು ಕೆಲವೇ ಜನರು ಇರುವುದರಿಂದ ಅದನ್ನು ಕೊಲ್ಲಬಾರದು ಎಂಬುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ನೀವು ಇಡೀ ಉದ್ಯಮದ ಚಿತ್ರಣವನ್ನು ಕೆಡಿಸಲು ಸಾಧ್ಯವಿಲ್ಲ ಅಂತ ಜಯಬಚ್ಚನ್‌ ಹೇಳಿಕೊಂಡಿದ್ದರು.

Bollywood Film

ಮುಂಬೈ : ಬಾಲಿವುಡ್ ಖ್ಯಾತ ಗಾಯಕಿ ಅನುರಾಧ ಪೌಡ್ವಾಲ್​​​​​​ ಪುತ್ರ 35 ವರ್ಷದ ಆದಿತ್ಯ ಪೌಡ್ವಾಲ್​ ಇಂದು ಬೆಳಗ್ಗೆ ಮುಂಬೈ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆದಿತ್ಯ ಪೌಡ್ವಾಲ್ ಮುಂಬೈ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆದಿತ್ಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ತಾಯಿ ಅನುರಾಧ ಪೌಡ್ವಾಲ್​ ಹಾಗೂ ಸಹೋದರಿ ಕವಿತಾ ಪೌಡ್ವಾಲ್ ಅವರನ್ನು ಆದಿತ್ಯ ಅಗಲಿದ್ದಾರೆ.

ಆದಿತ್ಯ ಅಗಲಿಕೆಗೆ ಸ್ನೇಹಿತರು, ಕುಟುಂಬದವರು ಹಾಗೂ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ ಮುಂಬೈನಲ್ಲಿ ಆದಿತ್ಯ ಅಂತ್ಯಕ್ರಿಯೆ ನೆರವೇರಲಿದ್ದು ಕೆಲವೇ ಮಂದಿ ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

Bollywood Film

ಮುಂಬೈ: ಬಿಜೆಪಿಯ ಮಾಜಿ ಸಂಸದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್​ ರಾವಲ್​​ ನ್ಯಾಷನಲ್​​​ ಸ್ಕೂಲ್​ ಆಫ್​ ಡ್ರಾಮಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

2017ರಿಂದಲೂ ಖಾಲಿಯಾಗಿದ್ದ ಹುದ್ದೆಗೆ ಇದೀಗ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಪರೇಶ್​ ರಾವಲ್​​ ಅವರನ್ನ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

65 ವರ್ಷದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್​ ರಾವಲ್​ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು, ಹತ್ತಾರು ಪ್ರಶಸ್ತಿ ಗೆದ್ದಿದ್ದಾರೆ. 2014ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಗಿದೆ.

ಪೂಂಚ್ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ

Bollywood Film State

ಡಿಜಿಟಲ್‌ ಡೆಸ್ಕ್‌: ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯನ್ನು NCB ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮಂಗಳವಾರ ರಿಯಾ ಚಕ್ರವರ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ.

ನಟಿಯನ್ನು ಬಂಧಿಸಲು ನಾರ್ಕೋಟಿಕ್ಸ್ ಬ್ಯೂರೋಗೆ ಅನುಮತಿ ಸಿಕ್ಕಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿವೆ. ನ್ಯಾಯಾಲಯಗಳು ಸಂಜೆ 5 ಗಂಟೆಗೆ ಮುಚ್ಚುವುದರಿಂದ ಎನ್‌ಸಿಬಿ ಅವಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಧೀಶರ ಮುಂದೆ ಹಾಜರು ಪಡಿಸಬಹುದು ಎನ್ನಲಾಗಿದೆ.ಸುಶಾಂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಪ್ರಕರಣವೊಂದು ಹೊರಬಿದ್ದ ನಂತರ ಸತತ ಮೂರನೇ ದಿನವೂ ಹೆಚ್ಚಿನ ವಿಚಾರಣೆಗಾಗಿ ಚಕ್ರವರ್ತಿ ಮುಂಬೈನ ಎನ್‌ಸಿಬಿ ಕಚೇರಿಗೆ ಹೋಗಿದ್ದರು.

Bollywood Film

ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಕರೋನಾವೈರಸ್ ಪಾಸಿಟಿವ್ ಬಂದ ಬಂದ ಬಳಿಕ ಇದೀಗ ಮಲೈಕಾ ಅರೋರಾ ಕೂಡ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಮಲೈಕಾ ಕೋವಿಡ್ -19 ಪಾಸಿಟಿವ್ ಬಂದಿದೆ. ಲಕ್ಷಣರಹಿತವಾಗಿದ್ದು, ಪ್ರಸ್ತುತ ಮನೆಯಲ್ಲಿ ಹೋಮ್ ಕ್ವಾರೆಂಟೈನ್ ಆಗಿದ್ದೇನೆ ಎಂದು ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸೆಪ್ಟೆಂಬರ್ 6 ರಂದು ಮಲೈಕಾ ಅವರ ಗೆಳೆಯ ಅರ್ಜುನ್ ಕಪೂರ್ ಅವರಿಗೆ ಕರೋನವೈರಸ್ ಪಾಸಿಟಿವ್ ಎಂದು ವರದಿ ಬಂದಿತ್ತು.

ಮಲೈಕಾ ಅರೋರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು “ಇಂದು ನಾನು ಕರೋನವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ ಆದರೆ  ಚೆನ್ನಾಗಿದ್ದೇನೆ ಎಂದು  ನಿಮಗೆ ತಿಳಿಸಲು ಬಯಸುತ್ತೇನೆ. ನಾನು ಲಕ್ಷಣರಹಿತನಾಗಿರುತ್ತೇನೆ ಮತ್ತು ಅಗತ್ಯವಿರುವ ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದೇನೆ ಮತ್ತು ವೈದ್ಯರು ಮತ್ತು ಅಧಿಕಾರಿಗಳ ಸಲಹೆಯಂತೆ ಮನೆಯಲ್ಲಿಯೆ ಐಸಲೋಟ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.

Bollywood Film India

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಸುಶಾಂತ್ ನಿಧನದ ಬಗ್ಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಪ್ರಹದಾನಿ “ಸುಶಾಂತ್ ಸಿಂಗ್ ರಜಪೂತ್ …ಪ್ರತಿಭಾವಂತ ಯುವನಟ, ಬಹಳ ಬೇಗ ಹೊರಟು ಹೋಗಿದ್ದಾರೆ. ಅವರು ಟಿವಿ ಮತ್ತು ಸಿನಿಮಾರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮನರಂಜನಾ ಜಗತ್ತಿನಲ್ಲಿ ಅವರ ಏಳಿಗೆ ಅನೇಕರಿಗೆ ಸ್ಫೂರ್ತಿ ನೀಡಿತು ಮತ್ತು ಅವರು ಹಲವು ಸುಂದರ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.ಅವರ ನಿಧನದಿಂದ ಆಘಾತವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವಿದೆ. ಓಂ ಶಾಂತಿ, “ಎಂದು ಟ್ವೀಟ್ ಮಾಡಿದ್ದಾರೆ.

ಕಿರುತೆರೆಯ ಮೂಲಕ ಜನಪ್ರಿಯತೆ ಪಡೆದಿದ್ದ ಸುಶಾಂತ್ ಸಿಂಗ್ ರಜಪೂತ್ ನಂತರ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು. ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಮತ್ತು ಚಿಚೋರ್ ಇವರು ನಟಿಸಿದ ಜನಪ್ರಿಯ ಚಿತ್ರಗಳು.

 

Bollywood Film India

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕಿಲ್ಲರ್ ಕೊರೊನಾಗೆ ಬಾಲಿವುಡ್ ನ ಹಿರಿಯ ನಿರ್ಮಾಪಕ ಅನಿಲ್ ಸೂಊರಿ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ರಾಜೀವ್ ಸೂರಿ ಮಾಹಿತಿ ನೀಡಿದ್ದಾರೆ.

ಕಳೆದ ಜೂನ್ 2 ರಂದು ಅನಿಲ್ ಅವರಿಗೆ ಜ್ವರ ಕಾಣಿಸಿಕೊಂಡಿತು. ಮರು ದಿನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ 7 ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.