Mysore – Kannada News Now


Mysore

Mysore State

ಮೈಸೂರು : 11 ವಾರದ ಬಳಿಕ ಮೈಸೂರು ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾವೇ ನಮ್ಮ ಜೊತೆಗೆ ಬಂದ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಪ್ರವೇಶಕ್ಕೆ ಚಾಲನೆ ನೀಡಿದ್ದೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಇದೇವೇಳೆ ತಿಳಿಸಿದರು.

ಪ್ರತಿ ದಿನಕ್ಕೆ 10 ಸಾವಿರ ಪ್ರವಾಸಿಗರು ಭೇಟಿ ಕೊಡಲು ಸದ್ಯದ ಪರಿಸ್ಥಿತಿಯಲ್ಲಿ ಆಗಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣ ಮಾಡುತ್ತಿರುವುದು ಸದುದ್ದೇಶದಿಂದಲೇ ವಿನಹ ಬೇರೆ ಯಾವುದೇ ಕಾರಣವೂ ಇಲ್ಲಿಲ್ಲ. ಸಕ್ಕರೆ ಕಾರ್ಖಾನೆಗಳು ಉಳಿದು, ಬೆಳೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಹರ್ಷವರ್ಧನ್, ಡಿಸಿಪಿ ಪ್ರಕಾಶ್‍ಗೌಡ, ಮೇಯರ್ ತಸ್ನಿಂ, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕೀಲಾರ ಸೇರಿ ಇತರರು ಇದ್ದರು.

Mysore State

ಮೈಸೂರು : ಜಿಲ್ಲಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ಜೂನ್ 08 ರಿಂದ ಷರತ್ತಿಗೆ ಒಳಪಟ್ಟು ತೆರೆಯಲು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅನುಮತಿ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳು ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯೂಲೇಷನ್-2020ರ ನಿಯಮ 12 ರಲ್ಲಿ ಹಾಗೂ disaster management act 2005 ಕಲಂ 30(2) ಮತ್ತು 34 ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಆದೇಶ ಹೊರಡಿಸಿದ್ದಾರೆ.

ಈ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರಿಂದ ಆಗಬಹುದಾದ ಸೋಂಕು ಹರಡುವುದನ್ನು ತಡೆಗಟ್ಟಲು ಹಲವಾರು ಷರತ್ತುಗಳನ್ನು ಅವರು ವಿಧಿಸಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಕಂಡುಬರುವ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ತೆರೆಯುವಂತಿಲ್ಲ. ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ ಅಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡು ಮುಖಗವಸನ್ನು ತಪ್ಪದೇ ಧರಿಸಬೇಕು ಹಾಗೂ ದೇವಾಲಯಗಳಲ್ಲಿ ಸೋಪ್‍ನಿಂದ ಕೈತೊಳೆಯಲು ಹಾಗೂ ಆಲ್ಕೊಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಕಡ್ಡಾಯವಾಗಿ ಹ್ಯಾಂಡ್ ಕರ್ಚಿಪ್ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು.

ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ನೀಡಲು ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ಸ್ಮಾರ್ಟ್‍ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಹೊಂದಿರಬೇಕು. ದೇವಾಲಯಗಳಲ್ಲಿ ಕೋವಿಡ್-19 ವೈರಾಣು ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಶ್ವತ ಫಲಕ ಅಳವಡಿಸುವುದು ಹಾಗೂ ವಿಡಿಯೋ-ಆಡಿಯೋ ಕ್ಲಿಪ್‍ಗಳ ಮೂಲಕ ಪ್ರಚಾರ ಮಾಡಬೇಕು.

ಭಕ್ತಾಧಿಗಳು ತಮ್ಮ ಶೂ, ಚಪ್ಪಲಿಗಳನ್ನು ಅವರು ಬಂದಿರುವ ವಾಹನದಲ್ಲೇ ಬಿಡಬೇಕು. ಕುಟುಂಬದವರು ಚಪ್ಪಲಿಗಳನ್ನು ಅವರೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಬೇಕು. ಪಾರ್ಕಿಂಗ್ ಸ್ಥಳ ಹಾಗೂ ಹೊರಗೆ ಗುಂಪು ಗೂಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಗತ್ಯ ವ್ಯವಸ್ಥೆ ಮಾಡಬೇಕು. ಕ್ಯೂ ಲೈನ್‍ನಲ್ಲಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

ದೇವಾಲಯ ಪ್ರವೇಶಕ್ಕೂ ಮುಂಚೆ ಸಾರ್ವಜನಿಕರಿಗೆ ಸೋಪಿನಿಂದ ಕೈ ಹಾಗೂ ಕಾಲು ತೊಳೆಯಲು ವ್ಯವಸ್ಥೆ ಮಾಡಬೇಕು. ವಿಗ್ರಹಗಳು ಹಾಗೂ ಪವಿತ್ರ ಗ್ರಂಥಗಳನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆಗಳು, ಉತ್ಸವಗಳನ್ನು ಆಯೋಜಿಸುವುದನ್ನು ಹಾಗೂ ಪರಸ್ಪರ ಸಂಪರ್ಕಿಸುವುದನ್ನು ನಿಷೇಧಿಸಿದೆ. ದೇವಾಲಯದಲ್ಲಿ ಸಾಮೂಹಿಕವಾಗಿ ಹಾಡಲು ಅವಕಾಶವಿರುವುದಿಲ್ಲ. ಸಾಮೂಹಿಕವಾಗಿ ಕೂರಲು ನೆಲಹಾಸು ಬಳಸಬಾರದು. ಭಕ್ತಾದಿಗಳು ಅವರ ಸ್ವಂತ ನೆಲಹಾಸು ಬಟ್ಟೆಯನ್ನು ತಂದು ಹೋಗುವಾಗು ವಾಪಸ್ ಕೊಂಡೊಯ್ಯಬೇಕು.

ಧಾರ್ಮಿಕ ಸ್ಥಳಗಳನ್ನು ಕ್ರಿಮಿನಾಶಕ ಬಳಸಿ ಆಗಾಗ್ಗೆ ಶುಚಿಗೊಳಿಸಬೇಕು. ಭಕ್ತಾದಿಗಳು ಹಾಗೂ ನೌಕರರು ಬಳಸಿ ಬಿಟ್ಟು ಹೋಗುವ ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಕ್ರಮಬದ್ಧವಾಗಿ ನಾಶಗೊಳಿಸುವುದು. ಉಸಿರಾಟದ ತೊಂದರೆ, ಜ್ವರ, ಕೆಮ್ಮು, ನೆಗಡಿಗಳಂತಹ ರೋಗ ಲಕ್ಷಣಗಳು ಕಂಡುಬಂದರೇ ಅಂತಹ ವ್ಯಕ್ತಿಗಳಿಗೆ ದೇವಾಲಯದ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ. ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರಲು ಅವಕಾಶವಿರುವುದಿಲ್ಲ. ಹಾಗೂ ಪ್ರಸಾದ, ತೀರ್ಥ ನೀಡಲು ಹಾಗೂ ಪ್ರೋಕ್ಷಿಸಲು ಅವಕಾಶವಿರುವುದಿಲ್ಲ.

65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರವೇಶ ನಿಷೇಧಿಸಲಾಗಿದೆ. ದೇವಾಲಯದ ವಸತಿಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ಅಲ್ಲದೆ ಸದ್ಯದ ಮಟ್ಟಿಗೆ ದಾಸೋಹ ನಡೆಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದ್ದಾರೆ.

Mysore State

ಮೈಸೂರು : ಜಿಲ್ಲೆಯ ಮೈಸೂರು ಮಹಾರಾಜರ ಜೊತೆಯಲ್ಲಿ ವೇದಿಕೆ ಹಂಚಿಕೊಂಡು ಹಸಿರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ. ಅವರೂ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ. ಮೈಸೂರು ಜಿಲ್ಲೆಯನ್ನು ಹಸಿರೀಕರಣಗೊಳಿಸುವುದರ ಜೊತೆಗೆ ಸ್ವಚ್ಛನಗರಿಯನ್ನಾಗಿ ಮಾಡೋಣ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರು ಜಿಲ್ಲಾಡಾಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಜೆ.ಪಿ.ನಗರದ ಮಕ್ಕಗಣಪತಿ ದೇವಸ್ಥಾನ ಸಮೀಪದ ಎ ಬ್ಲಾಕ್ ನಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾಡಳಿತ ವತಿಯಿಂದ ಸುಮಾರು 27 ಲಕ್ಷ ಸಸಿಗಳನ್ನು ಜಿಲ್ಲೆಯಲ್ಲಿ ನೆಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ಪ್ರತಿ ಹಳ್ಳಿಯಲ್ಲಿ 5 ಲಕ್ಷ ಗಿಡಗಳನ್ನು ರಾಜ್ಯಾದ್ಯಂತ ನೆಡುವ ಕೆಲಸಕ್ಕೆ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಮುಂದಾಗಿದ್ದಾರೆ. ಜಿಲ್ಲೆಯಲ್ಲೂ ನೆಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು.

ನಾವು ಈಗಾಗಲೇ ಜಿಲ್ಲಾಧಿಕಾರಿಗಳು, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ಕಾರ್ಪೋರೇಶನ್ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಸಹಿತ ವಿವಿಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಅಲ್ಲಿ ಗಿಡ ನೆಡುವಾಗ ಹಾಗೂ ನೆಟ್ಟ ಮೇಲೆ ಯಾವ ರೀತಿ ಸಮಸ್ಯೆಯಾಗುತ್ತದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅಭಿವೃದ್ಧಿ ಕಾರ್ಯಗಳಿಗೋಸ್ಕರ ನೆಟ್ಟಿರುವ ಗಿಡಗಳನ್ನು ಕಡಿಯಲಾಗುತ್ತದೆ. ಜೊತೆಗೆ ವಿದ್ಯುತ್ ಕಂಬಗಳಡಿ, ರಸ್ತೆ ಅಗಲೀಕರಣಗಳಂತಹ ಸಂದರ್ಭದಲ್ಲಿ ತೊಂದರೆಯಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಲೆಕ್ಕ ಕೇಳಿದರೆ ಬದ್ಧತೆ ಇರುತ್ತೆ

ಮೈಸೂರು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ 27 ಲಕ್ಷ ಗಿಡಗಳನ್ನು ನೆಡುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಅನೇಕ ಇಲಾಖೆಗಳು ಸೇರೆದಂತೆ ಸಂಘ-ಸಂಸ್ಥೆಗಳು ಗಿಡವನ್ನು ಪಡೆಯಲು ಮುಂದೆ ಬಂದವು. ಹೀಗಾಗಿ ಪಡೆದ ಗಿಡಗಳ ನಿರ್ವಹಣೆ ಹೇಗಾಗುತ್ತದೆ ಎಂಬುದು ಮುಖ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು. ಇದರಿಂದ ಬೆಳೆಸುವವರಿಗೂ ಬದ್ಧತೆ ಇರುತ್ತದೆ ಎಂದು ಸಚಿವರು ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ಗಿಡ ನೆಡುವ ಸಂದರ್ಭದಲ್ಲಿ ಯಾವುದಾದರೂ ಒತ್ತುವರಿಗಳು ಆಗಿದ್ದರೆ ಅದನ್ನು ಬಿಡಿಸಿಕೊಡುವ ಹಾಗೂ ಫೆನ್ಸಿಂಗ್ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಚಿವರನ್ನು ಆಹ್ವಾನಿಸಿದ್ದೇನೆ. ಅವರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಸ್ಯಾನಿಟರಿ ಸಮಸ್ಯೆಗೆ ಶೀಘ್ರ ಮುಕ್ತಿ

ಸ್ಯಾನಿಟರಿ ನೀರು ರಸ್ತೆಗಳಿಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದನ್ನು ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಶೀಘ್ರವಾಗಿ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮುಖ್ಯ ಅತಿಥಿಗಳಾದ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಅರಣ್ಯ ಸಂರಕ್ಷಣೆ ನಮಗೆ ಬಹುದೊಡ್ಡ ಸವಾಲಾಗಿದೆ. ನಾವು ಕಾಡು, ಪ್ರಾಣಿಪಕ್ಷಿಗಳ ಜೊತೆ ಯಾವ ರೀತಿ ಬದುಕಬೇಕೆಂಬುದನ್ನು ಅರ್ಥ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವು ಮೈಸೂರು ಚಾಮುಂಡಿ ಬೆಟ್ಟಕ್ಕೆ ತಾಯಿ ಪೂಜೆಗೆಂದು ಹೋಗಿ ಬರುತ್ತೇವೆ. ಆದರೆ, ಅಲ್ಲಿಗೆ ಹೋಗಿರುವವರು ಬರುವಾಗ ರಸ್ತೆ ತುಂಬೆಲ್ಲ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಸಾಡಿರುವುದನ್ನು ನಾನು ಕಂಡಿದ್ದೇನೆ. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ಅಲ್ಲಿ ಯಾವುದನ್ನೂ ಬಿಸಾಡದೆ ನಗರಕ್ಕೆ ವಾಪಸಾದ ಬಳಿಕ ನಿಗದಿತ ತ್ಯಾಜ್ಯ ಜಾಗದಲ್ಲಿ ಹಾಕೋಣ ಎಂದು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್ ಮಾತನಾಡಿ, ಪ್ರತಿಯಿಂದಕ್ಕೂ ಮಾಲೀಕತ್ವ ಇರಬೇಕು. ಆ ನಿಟ್ಟಿನಲ್ಲಿ ಮುಂದಿನ ಭವಿಷ್ಯವನ್ನು ಬರೆಯಬಹುದಾಗಿದ್ದು, ಹೀಗಾಗಿ ಜುಲೈ 1 ನೇ ತಾರೀಖಿನಿಂದ ಕೃಷ್ಣರಾಜ ಕ್ಷೇತ್ರದ 80 ಸಾವಿರ ಮನೆಗೆ ತಲಾ 2 ಗಿಡಗಳನ್ನು ನೀಡುವ ಸಂಕಲ್ಪ ಮಾಂದಿದ್ದೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ನಮಗೆ ನೀರು, ಆಹಾರ ಸಿಗುವುದು ಪರಿಸರದ ಚೈನ್ ಮೂಲಕವೇ ಆಗಿದೆ. ಹೀಗಾಗಿ ಇದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕರ್ತವ್ಯ ನಮ್ಮದಾಗಿದೆ ಎಂದರು.

ಶಾಸಕರಾದ ಎಸ್.ಎ. ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಮುಖಂಡರಾದ ರಾಜೀವ್‌, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸೇರಿದಂತೆ ಇತರರು ಇದ್ದರು.

Mysore State

ಮೈಸೂರು : ನಾಳೆ ರಂಜಾನ್ ಪವಿತ್ರ ಹಬ್ಬ. ಇಂತಹ ಹಬ್ಬದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆಯಲ್ಲಿ ಭಾಗವಹಿಸುತ್ತೇವೆ. ಈ ಮೂಲಕ ರಂಜಾನ್ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚುತ್ತಿವೆ.

ಇದೀಗ ಇದೇ ಒತ್ತಯವನ್ನು ಹಾಕಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ತನ್ನೀಂ, ಮೈಸೂರಿನ ಈದ್ಗಾ ಮೈದಾನದಲ್ಲಿ ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನಗೆ ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾದರು ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

District News Mysore State

ದೆಹಲಿ: ಕಸ ಮುಕ್ತನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದ್ದು, ಕರ್ನಾಟಕದ ಮೈಸೂರು ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಈ ಪಟ್ಟಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದ್ದು, ಛಅಂಬಿಕಾಪುರ, ಗುಜರಾತ್‌ನ ರಾಜ್‌ಕೋಟ್, ಕರ್ನಾಟಕದ ಮೈಸೂರು, ಸಂಸದದಲ್ಲಿ ಇಂದೋರ್ ಮತ್ತು ಮಹಾರಾಷ್ಟ್ರದ ನವೀ ಮುಂಬಯಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. ಇದಲ್ಲದೆ, ಹರಿಯಾಣ, ನವದೆಹಲಿಯ ಕರ್ನಾಲ್, ಆಂಧ್ರಪ್ರದೇಶದ ತಿರುಪತಿ ಮತ್ತು ವಿಜಯವಾಡ, ಚಂಡೀಗಡ ತ್ತೀಸ್‌ಗಡ್‌ನ ಭಿಲಾಯ್ ನಗರ, ಗುಜರಾತ್‌ನ ಅಹಮದಾಬಾದ್‌ಗೆ ಮೂರು ಸ್ಟಾರ್ ರೇಟಿಂಗ್ ಸಿಕ್ಕಿದೆ. ದೆಹಲಿ ಕ್ಯಾಂಟ್, ವಡೋದರಾ, ರೋಹ್ಟಕ್ ನಗರಗಳಲ್ಲಿ ಸ್ಟಾರ್ ರೇಟಿಂಗ್ ಪಡೆದುಕೊಂಢಿದೆ. 

Mysore State

ಮೈಸೂರು : ಜಿಲ್ಲೆಯ ಭೋಗಾದಿಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಸೋಮೇಶ್ವರನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಮೈಸೂರು ಕೊರೋನಾ ಮುಕ್ತವಾಗುವತ್ತ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾಡಾಳಿತ ಮತ್ತು ಜನಪ್ರತಿನಿಧಿಗಳ ಶ್ರಮ ಅಧಿಕವಾಗಿದೆ. ಈ ವೇಳೆ ಎಲ್ಲರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಛತೆಗೆ ಆದ್ಯತೆ, ಜನಮಾನಸದಲ್ಲಿ ಜಾಗೃತಿ ಉಂಟುಮಾಡಬೇಕೆಂಬ ಆಶಯ ವ್ಯಕ್ತಪಡಿಸಿದರು.

ಹೊರ ಜಿಲ್ಲೆಗಳು, ದೇಶಗಳಿಂದ ಬರುತ್ತಿರುವವರನ್ನು ಹೋಂ ಕ್ವಾರಂಟೇನ್ ಮಾಡಿಸಲಾಗುತ್ತಿದ್ದು, ಇದು ಉತ್ತಮ ಕ್ರಮ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಲಿ, ಮುಂದೂ ಸಹ ಕೊರೋನಾ ಹೀಗೇ ಇರುವುದರಿಂದ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಮತ್ತೊಮ್ಮೆ ಮೈಸೂರು ಹಸಿರಲಾಗಲಿ, ಸಾಂಸ್ಕೃತಿಕ ಜಿಲ್ಲೆಯತನವನ್ನು ಮತ್ತೆ ಗಳಿಸಿಕೊಳ್ಳಲಿ ಎಂದು ಸ್ವಾಮೀಜಿ ತಿಳಿಸಿದರು.

ಇನ್ನು ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹಲವು ಕಡೆ ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಆದರೆ, ಪ್ರಾಕ್ಟಿಕಲ್ ತರಗತಿಗಳು ಸದ್ಯಕ್ಕೆ ಕಷ್ಟ. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತರಗತಿಗಳನ್ನು ನಡೆಸಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಹಣ ದುರುಪಯೋಗದ ವಿರುದ್ಧ ಕ್ರಮ

ಸಹಕಾರ ಸಂಘಗಳಲ್ಲಿ ಅಕ್ರಮ ಇದ್ದರೆ ಸಹಿಸುವುದಿಲ್ಲ. ಯಾವುದಾದರೂ ಸಂಘ ಸಂಸ್ಥೆಗಳಲ್ಲಿ ದುಡ್ಡು ಕಟ್ಟಿಸಿಕೊಂಡು ಮೋಸ ಮಾಡಿದ್ದರೆ ಕ್ರಮ ಅನಿವಾರ್ಯ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗೆ ಯಾವುದೇ ತೊಂದರೆಯಾಗದು. ಉದಾಹರಣೆಗೆ ಗುಂಡ್ಲುಪೇಟೆಯಲ್ಲಿ ಬೆಳೆದ ರೈತ ರಾಜ್ಯದ ಯಾವ ಎಪಿಎಂಸಿ ಇಲ್ಲವೇ ಯಾವುದೇ ಭಾಗದಲ್ಲಿ ಮಾರಾಟ ಮಾಡಬಹುದು. ಎಪಿಎಂಸಿ ಕಮಿಟಿಗೆ ಇರುವ ಅಧಿಕಾರ ತುಸು ತಗ್ಗಲಿದೆ ಅಷ್ಟೇ. ಶೇಕಡಾ ಒಂದೂವರೆಯಷ್ಟು ಬರುತ್ತಿದ್ದ ಸೆಸ್ ಈಗ ಒಂದೂ ಕಾಲು ಪರ್ಸೆಂಟ್ ಸಿಗಬಹುದಷ್ಟೆ. ಎಸ್‌ಸಿಎಸ್‌ಟಿಗಳಿಗೆ ಕೃಷಿ ಸಾಲ ಸರಿಯಾದ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಣೆಯಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.

Mysore State

ಮೈಸೂರು : ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದ್ದು, ಈ ಕುರಿತಂತೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ಹರ್ಷಗುಪ್ತಾ ಅವರಿಂದ ತನಿಖೆ ನಡೆಯುತ್ತಿದೆ. ಏತನ್ಮಧ್ಯೆ,  ಜ್ಯೂಬಿಲಿಯೆಂಟ್ ಕಾರ್ಖಾನೆ ತನಿಖೆ ವಿಚಾರದಲ್ಲಿ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಅವರು, ತನಿಖೆ ಹಾಗೂ ಹೋರಾಟದ ವಿಚಾರದಲ್ಲಿ ಸರ್ಕಾರದಿಂದ ನನಗೆ ಬೆಂಬಲ ಸಿಕ್ಕಿಲ್ಲ. ಜ್ಯೂಬಿಲಿಯೆಂಟ್ ವಿಚಾರದಲ್ಲಿ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ. ಕಂಪನಿಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಿ ನನ್ನನ್ನು ತಪ್ಪಿತಸ್ಥನಂತೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದೆ. ನೇಮಕ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ತನಿಖೆ ಹಾದಿ ತಪ್ಪಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಇಲಾಖೆಗಳು ಹರ್ಷಗುಪ್ತಾ ಅವರಿಗೆ ಸಹಕಾರ ನೀಡಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹರ್ಷಗುಪ್ತಾ ಅವರಂಥ ಅಧಿಕಾರಿಯೇ ಏನೂ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಹೇಳೋಕಾಗುತ್ತೆ. ತನಿಖೆಗೆ ಸಹಕರಿಸದಿರುವುದು ಎಲ್ಲೋ ಒಂದು ಕಡೆ ನಿರಾಸೆಯಾಗಿದೆ ಎಂದರು….

Mysore State

ಮೈಸೂರು : ಒಬ್ಬ ಸಚಿವರಾದವರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತೋರಿಸಿಕೊಟ್ಟಿದ್ದಾರೆ. ಮೊದಲು ರಾಜಕೀಯ ಪಟುಗಳಿಗೆ ಇಚ್ಛಾಶಕ್ತಿ ಇರಬೇಕಷ್ಟೆ ಎಂಬುದು ಮುಖ್ಯವಾಗುತ್ತದೆ. ಈಗ ಆ ಇಚ್ಛಾಶಕ್ತಿಯ ಪರಿಣಾಮವೇ ಮೈಸೂರು ಮೃಗಾಲಯಕ್ಕೆ ಹೊಸ ದಿಕ್ಕನ್ನು ನೀಡಲು ಹೊರಟಿದೆ. ಇದೀಗ ಪ್ರಾಣಿಸಂಗ್ರಹಾಲಯಕ್ಕೆ 73.16 ಲಕ್ಷ ಆರ್ಥಿಕ ನೆರವು ಹರಿದುಬಂದಿದೆ.

ಹೌದು. ಕೊರೋನಾ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಬಿಸಿ ಮೃಗಾಲಯಗಳಿಗೂ ತಟ್ಟಿದೆ. ಯಾರೂ ಎಲ್ಲಿಯೂ ಸಂಚರಿಸದಿರುವುದರಿಂದ ಪ್ರವಾಸಿಗರ ಆಗಮನ ಶೂನ್ಯಕ್ಕೆ ಇಳಿದಿದೆ. ಒಂದು ವೇಳೆ ಪ್ರವಾಸಿಗರು ಆಗಮಿಸುತ್ತಿದ್ದರೆ ಪ್ರವೇಶ ಶುಲ್ಕದಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಅಲ್ಪ ಮಟ್ಟಿಗೆ ಸಹಾಯವಾಗುತ್ತಿತ್ತು. ಈಗ ಅದೂ ಇಲ್ಲವಾಗಿದೆ.

ಈ ವಿಷಯ ಏ.ಪ್ರಿಲ್ 22 ರಂದು ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರು ಭೇಟಿ ಕೊಟ್ಟಾಗ ಗಮನಕ್ಕೆ ಬಂದಿತ್ತು. ಆಗಲೇ ಅಲ್ಲಿನ ಪರಿಸ್ಥಿತಿಯನ್ನು ಮನಗಂಡ ಸಚಿವರು ತಕ್ಷಣ 1.75 ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕವಾಗಿ ನೆರವನ್ನು ನೀಡುವ ಮೂಲಕ 5 ವರ್ಷದ ಚಾಮುಂಡಿ ಎಂಬ ಹೆಣ್ಣಾನೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದರು. ಅಲ್ಲದೆ, ಅಲ್ಲಿರುವ 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂಪಾಯಿಯ ನೆರವನ್ನೂ ನೀಡಿ ಮಾನವೀಯತೆ ಮೆರೆದರು.

ಇಷ್ಟಕ್ಕೇ ಸುಮ್ಮನಾಗದ ಸಚಿವರು ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೈಸೂರು ಮೃಗಾಲಯಕ್ಕೆ ದಾನಿಗಳಿಂದ ದೇಣಿಗೆ ನೀಡುವಂತೆ ವೈಯಕ್ತಿಕವಾಗಿ ಮಾಡಿಕೊಂಡ ಒಂದು ಮನವಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಈಗ 73 ಲಕ್ಷ 16 ಸಾವಿರ ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಮೃಗಾಲಯಕ್ಕೆ ಸ್ವತಃ ಸಚಿವರು ಹಸ್ತಾಂತರ ಮಾಡಿದರು. ಸರ್ಕಾರದ ಯೋಜನೆಗಳ ಜೊತೆಗೆ ಸಾರ್ವಜನಿಕರ ಸಹಕಾರವನ್ನು ಪಡೆದರೆ ಹೀಗೆಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಎಂಬುದನ್ನು ಈ ಮೂಲಕ ಸಚಿವ ಸೋಮಶೇಖರ್ ತೋರಿಸಿಕೊಟ್ಟಿದ್ದಾರೆ.

Mysore State

ಮೈಸೂರು : ಮಾರಕ ಕೊರೊನಾ ವೈರಸ್ ನಿಂದಾಗಿ ತೀವ್ರ ತತ್ತರಿಸಿರುವ ಜಿಲ್ಲೆಗಳ ಪೈಕಿ ಬೆಂಗಳೂರಿನ ನಂತರ ಮೈಸೂರು ಎರಡನೇ ಸ್ಥಾನದಲ್ಲಿದೆ. ಕೊರೊನಾ ಸೋಂಕಿತ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿ ಎಂದು ಹೇಳಲಾಗಿದ್ದು, ಮೈಸೂರಿನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ 43 ಮಂದಿ ಈಗ ಪ್ಲಾಸ್ಮಾ ದಾನ ಮಾಡಲು ಸಮ್ಮತಿ ನೀಡಿದ್ದಾರೆ. 

ದೆಹಲಿ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ಬಂದು ಸೋಂಕಿಗೊಳಗಾಗಿದ್ದವರೂ ಸೇರಿ, ವಿವಿಧ ಸೋಂಕಿತರು ಇದೀಗ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ  ಎಲ್ಲರೂ ಬರವಣಿಗೆ ಮೂಲಕ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದೀಗ ಆಸ್ಪತ್ರೆಗಳು ಈ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಸುತ್ತಿವೆ. ಈ ಕುರಿತು ಕೆ.ಆರ್.ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಪ್ಲಾಸ್ಮಾ ಮತ್ತು ರಕ್ತದ ಇತರೆ ಅಂಶಗಳನ್ನು ಪ್ರತ್ಯೇಕಿಸಲು ಬಳಸುವ ಯತ್ನ ನಮ್ಮಲ್ಲಿದೆ. ಆದರೆ, ಘಟಕ ಹಳೆಯದಾಗಿದ್ದು, ಅದನ್ನು ನವೀಕರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.  ಇನ್ನು ಪ್ಲಾಸ್ಮಾ ಚಿಕಿತ್ಸೆಗೆ ಯಂತ್ರ ಬಳಕೆ ಮಾಡುವ ಬಗ್ಗೆ ಈಗಾಗಲೇ ಅನುಮತಿ ಕೋರಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಏಪ್ರಿಲ್ 15ರಂದೇ ಐಸಿಎಂಆರ್’ಗೆ ಪತ್ರ ಬರೆಯಲಾಗಿದೆ….

Mysore State

ಮೈಸೂರು : ಮಾರಕ ಕೊರೊನಾ ವೈರಸ್ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದು, ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಲವೆಡೆ ಲಾಕ್ ಡೌನ್ ನಿಯಮ ಉಲ್ಲಂಘಿಸಲಾಗುತ್ತಿದ್ದು, ಹಾಟ್ ಸ್ಪಾಟ್ ಗಳಲ್ಲಿ ಈ ನಿಯಮ ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಮೈಸೂರಿನಲ್ಲೂ ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮಹಾನಗರ ಪಾಲಿಕೆ ಮುಂದಾಗಿದ್ದು, ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಅಂತಹವರಿಗೆ ದಂಡ ವಿಧಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಬೆಂಗಳೂರು ಬಳಿಕ ಮೈಸೂರು ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ಲಾಕ್ ಡೌನ್ ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತಂದಿದ್ದರೂ ಕೆಲವೆಡೆ ಜನತೆ ಮಾತ್ರ ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ.  ತರಕಾರಿ ಖರೀದಿ ಸೇರಿದಂತೆ ಇತರೇ ಕಾರಣಗಳಿಗಾಗಿ ಜನತೆ ಮುಗಿಬೀಳುತ್ತಿದ್ದಾರೆ. ಏತನ್ಮಧ್ಯೆ, ಮಾಸ್ಕ್ ಧರಿಸದೇ ಮನೆಗಳಿಂದ ಹೊರಬರುವವರ ವಿರುದ್ಧ ಕಠಿಣ ಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದು, ಏ.30ರ ಬಳಿಕ ಒಂದು ವೇಳೆ ಮಾಸ್ಕ್ ಧರಿಸದೇ ನಾಗರಿಕರು ಮನೆಗಳಿಂದ ಹೊರಬಂದರೆ ಅಂತಹವರಿಗೆ 100 ರೂ. ದಂಡ ವಿಧಿಸಲು ನಿರ್ಧರಿಸಿದ್ದಾರೆ…