Dakshina Kannada – Kannada News Now


Dakshina Kannada

Dakshina Kannada District News State

ಡಿಜಿಟಲ್‌ಡೆಸ್ಕ್‌ : ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಸೆ.21ರಂದು ನಡೆಯಬೇಕಿದ್ದ ಯು.ಜಿ./ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮರುನಿಗದಿಯಾದ ದಿನಾಂಕ, ಉಳಿದ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ & ವೇಳಾಪಟ್ಟಿಪ್ರಕಾರ ನಡೆಸಲಾಗುವುದು ಅಂತ ಮಂಗಳೂರು ವಿಶ್ವವಿದ್ಯಾಲಯ. ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ.

Dakshina Kannada Jobs State

ಮಂಗಳೂರು : 2020-21ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪರಿಶಿಷ್ಟ ವರ್ಗದ ಕಾನೂನು ಪದವಿಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿಯು 2 ವರ್ಷಗಳಾಗಿದ್ದು, ಆಯ್ಕೆಯಾದ ಆಭ್ಯರ್ಥಿಗೆ ಮಾಸಿಕ ರೂ. 10,000 ಶಿಷ್ಯ ವೇತನ ನೀಡಲಾಗುವುದು. ತರಬೇತಿದಾರರಿಗೆ ಕಚೇರಿ ಸ್ಥಾಪಿಸಲು ಹಾಗೂ ಪುಸ್ತಕ ಖರೀದಿಸಲು ತಾಲೂಕು/ಟಿ.ಎಂ.ಸಿ ಕೇಂದ್ರ ಸ್ಥಾನಗಳಲ್ಲಿ ರೂ 50 ಸಾವಿರ ಮತ್ತು ನಗರ ಸಭೆ/ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರೂ. 1 ಲಕ್ಷ ಅನುದಾನ ನೀಡಲಾಗುವುದು.

ಆಯ್ಕೆಯಾದ ಆಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್, ಸರಕಾರಿ ವಕೀಲರು ಅಥವಾ 15 ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ವಕೀಲ ಅಧೀನದಲ್ಲಿ ತರಬೇತಿ ಪಡೆಯಬೇಕು. ಸುಳ್ಳು ಮಾಹಿತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದ ಅಭ್ಯರ್ಥಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿ ಸಲ್ಲಿಸಲು ಮೇ 30 ಕೊನೆ ದಿನವಾಗಿದೆ. ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅಬ್ಬಕ್ಕನಗರ, ಕೊಟ್ಟಾರ, ಮಂಗಳೂರು-575006 ಇಲ್ಲಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0824-2451269, 2450114ಯನ್ನು ಸಂಪರ್ಕಿಸಬಹುದು ಎಂದು ದ.ಕ ಜಿಲ್ಲೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಯೋಜನಾ ಸಮಸ್ವಯಾಧಿಕಾರಿ ಪ್ರಕಟಣೆ ತಿಳಿಸಿದೆ.

Dakshina Kannada State

ಮಂಗಳೂರು : ದುಬೈನಿಂದ ಮಂಗಳೂರಿಗೆ ಹಿಂದಿರುಗಿದ್ದಂತ 6 ತಿಂಗಳ ಗರ್ಭಿಣಿಯನ್ನು ಕ್ವಾರಂಟೈನ್ ನಲ್ಲಿ ಜಿಲ್ಲಾಡಳಿತ ಇರಿಸಲಾಗಿತ್ತು. ಆದ್ರೇ.. ಕ್ವಾರಂಟೈನ್ ನಲ್ಲಿದ್ದಂತ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರನ್ನು ಕರೆಸಿ, ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದ್ದಂತ ಜಿಲ್ಲಾಢಳಿತ, ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸದ ಪರಿಣಾಮ, ತಾಯಿಯ ಹೊಟ್ಟೆಯಲ್ಲಿಯೇ ಕಂದಮ್ಮ ಜೀವ ಬಿಡುವಂತಾಗಿದೆ.

ಮಂಗಳೂರಿನಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಗರ್ಭಿಣಿಯ ಹೊಟ್ಟೆಯಲ್ಲಿದ್ದಂತ 6 ತಿಂಗಳ ಕಂದಮ್ಮನನ್ನು ಬಲಿಯಪಡೆಯುವಂತಾಗಿದೆ. ದುಬೈನಿಂದ ನಗರಕ್ಕೆ ಆಗಮಿಸಿದ್ದಂತ ಮಹಿಳೆಯೊಬ್ಬರನ್ನು ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆದ್ರೇ ಯಾವುದೇ ಪರೀಕ್ಷೆ ನಡೆದ ವೈದ್ಯರು, ಜಿಲ್ಲಾಡಳಿತ, ಹೊಟ್ಟೆ ನೋವು ಬಂದಂತ ಸಂದರ್ಭದಲ್ಲಿ, ಚಿಕಿತ್ಸೆ ನೀಡಬೇಕಾಗಿತ್ತು. ಆದ್ರೇ ಚಿಕಿತ್ಸೆ ನೀಡಿಲ್ಲ.

ಕೊನೆಗೆ ಗರ್ಭಿಣಿ ಮಹಿಳೆಯ ಸಂಬಂಧಿಕರೇ ಖಾಸಗಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದಾಡಿದ್ದಾರೆ. ಈ ವೇಳೆ ನೋವು ಜಾಸ್ತಿಯಾಗಿ, ಹೊಟ್ಟೆಯಲ್ಲಿದ್ದಂತ ಪುಟ್ಟ ಕಂದಮ್ಮ, ತಾಯಿಯ ಹೊಟ್ಟೆಯಲ್ಲೇ ಜೀವ ಬಿಡುವಂತಾಗಿದೆ. ಈ ಮೂಲಕ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿಯ ಹೊಟ್ಟೆಯಲ್ಲೇ 6 ತಿಂಗಳ ಕಂದಮ್ಮ ಜೀವ ಬಿಡುವಂತಾಗಿದೆ.

Dakshina Kannada State

ಮಂಗಳೂರು : ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಬಲಿಯಾದವರ ಸಂಖ್ಯೆ ಏರಿಕೆಯಾಗಿದೆ. ಇಂದು ಕೂಡ ಕಿಲ್ಲರ್ ಕೊರೋನಾ ಸಾವಿನ ಸರಣಿ ಮುಂದುವರೆದಿದ್ದು, 58 ವರ್ಷದ ಕೊರೋನಾ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಕೊರೋನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದ್ದರೇ, ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಬೋಳೂರು ನಿವಾಸಿಯಾಗಿದ್ದಂತ 58 ವರ್ಷದ ಮಹಿಳೆಗೂ ಕೊರೋನಾ ಸೋಂಕು ತಗುಲಿತ್ತು. ಇಂತಹ ಮಹಿಳೆಯನ್ನು ಫಸ್ಟ್ ನ್ಯಾರೋ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕೊರೋನಾ ಸೋಂಕಿತ ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.  ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಇಂದು ಒಂದೇ ದಿನ ಕಲಬುರ್ಗಿಯಲ್ಲಿ ಒಬ್ಬರು, ಇದೀಗ ಮಂಗಳೂರಿನಲ್ಲಿ ಒಬ್ಬರು ಸಾವನ್ನಪ್ಪುವ ಮೂಲಕ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಅಂದಹಾಗೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 28ಕ್ಕೆ ಏರಿಕೆಯಾಗಿತ್ತು. ಅಲ್ಲದೇ 7 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದರು. ಕಿಲ್ಲರ್ ಕೊರೋನಾಗೆ 3 ಈಗಾಗಲೇ ಬಲಿಯಾಗಿದ್ದರು. ಇದೀಗ ಮತ್ತೊಂದು ಬಲಿಯನ್ನು ಪಡೆಯುವ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾದ್ರೇ, ಕರ್ನಾಟಕದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

Dakshina Kannada State

ಮಂಗಳೂರು : ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕರೆತರಲು ಮೊದಲ ವಿಮಾನ ಸಜ್ಜಾಗಿದ್ದು ಮೇ 12 ರಂದು ರಾತ್ರಿ ಸುಮಾರು 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ಐ.ಎ.ಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಾ, ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.

ಯು.ಎ.ಇ ನಿಂದ ಮಂಗಳೂರಿಗೆ ವಿಮಾನದಲ್ಲಿ ಒಟ್ಟು 177 ಪ್ರಯಾಣಿಕರು ಆಗಮಿಸಲಿದ್ದಾರೆ. 17 ಹೋಟೆಲ್‍ಗಳು ಹಾಗೂ 12 ಹಾಸ್ಟೆಲ್ ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ನೇಮಿಸಿರುವ ಅಧಿಕಾರಿಯು ಪ್ರಯಾಣಿಕರಿಂದ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯುವರು ಎಂದು ತಿಳಿಸಿದರು.

ಪ್ರಯಾಣಿಕರನ್ನು ಸ್ವೀಕರಿಸುವಲ್ಲಿ, ಹೋಟೆಲ್ ಬುಕ್ಕಿಂಗ್ ವ್ಯವಸ್ಥೆ, ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ರಾಹುಲ್ ಸೂಚಿಸಿದರು.

ಪ್ರಯಾಣಿಕರಲ್ಲಿ ಎ ಮತ್ತು ಬಿ ಎಂದು 2 ವಿಭಾಗ ಮಾಡಲಾಗುವುದು. ಕೆಮ್ಮು, ಜ್ವರ, ನೆಗಡಿ ಇರುವವರು ಎ ವಿಭಾಗದ ಪ್ರಯಾಣಿಕರು. ಇವರಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದರು. ಬಿ ವಿಭಾಗ ಎಂದರೆ ಯಾವುದೇ ರೋಗ ಲಕ್ಷಣ ಇಲ್ಲದವರು ಅಂತವರನ್ನು ಹೋಟೆಲ್/ಹಾಸ್ಟೆಲ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ವಿಮಾನ ನಿಲ್ದಾಣದಲ್ಲೇ ಹೋಟೆಲ್‍ಗಳನ್ನು ಗುರುತಿಸಲು ಏರ್ ಪೋರ್ಟ್ ನಲ್ಲೇ ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರು ಗುರುತಿಸಿರುವ ಹೋಟೆಲ್‍ಗಳಿಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ಮಂಗಳೂರು ಮಹಾನಗರಪಾಲಿಕೆ ಪರಿಸರ ಅಭಿಯಂತರ ಮಧು ಮನೋಹರ್ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Dakshina Kannada State

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತವು ಫೆಬ್ರವರಿ 2020 ರಿಂದಲೇ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕೋವಿಡ್-19 ರ ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿದೇಶೀ ಪ್ರಯಾಣದ ಇತಿಹಾಸ ಹೊಂದಿರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಕಲೆ ಹಾಕಿ ಗೃಹ ನಿಗಾವಣೆಯಲ್ಲಿರುವವರನ್ನು ಸಂಪರ್ಕಿಸಿ, ಅವರ ಆರೋಗ್ಯ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಲಾಗುತ್ತಿದೆ. ಸಾರ್ವಜನಿಕರು ತಮಗೆ ಜ್ವರ, ಕೆಮ್ಮ, ಉಸಿರಾಟದ ತೊಂದರೆ ಇದ್ದಲ್ಲಿ ನೇರವಾಗಿ ಹತ್ತಿರದ ಫೀವರ್ ಕ್ಲಿನಿಕ್ ಸಂಪರ್ಕಿಸಲು ತಿಳಿಸಲಾಗಿದೆ.

ಕೋವಿಡ್ ಪರೀಕ್ಷೆಗೊಳಪಡಿಸುವ ಗೃಹ ಅಥವಾ ಸರಕಾರಿ ನಿಗಾವಣೆಯಲ್ಲಿರುವ ಭಯದಿಂದ ಅಥವಾ ಸಂಕೋಚದಿಂದ ತಮ್ಮ ಆರೋಗ್ಯದ ವಿಷಯದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಆರೋಗ್ಯ ಸಮಸ್ಯೆಗಳ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳದಿರುವುದು ತೀರಾ ವಿಷಾದನೀಯ.

ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿಯೂ ಸಹ ಜ್ವರ, ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಲು ಈಗಾಗಲೇ ಆದೇಶಿಸಲಾಗಿದೆ. ಅದರಂತೆ ಎಲ್ಲಾ ಖಾಸಗಿ ವೈದ್ಯಾಧಿಕಾರಿಗಳು ಸಹ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ, ಈವರೆಗೆ ಪರೀಕ್ಷೆಗೊಳಪಟ್ಟಿರುವಂತಹ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದಿಲ್ಲ. ಸೋಂಕಿತ ಕೋವಿಡ್ ರೋಗಿಗಳ ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗುತ್ತಿದೆ. ಇದು ಸಹ ಸಾರ್ವಜನಿಕರು ವಹಿಸಬೇಕಾದ ಮುಂಜಾಗರೂಕತಾ ಕ್ರಮಕ್ಕಾಗಿ ನೀಡುವ ಮಾಹಿತಿ ಆಗಿರುತ್ತದೆ.

ಆದ್ದರಿಂದ ಸಾರ್ವಜನಿಕರು ಯಾವುದೇ ಸಂಕೋಚಪಡದೆ, ತಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ಜನವರಿ ತಿಂಗಳಿನಿಂದ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವವರ ಮಾಹಿತಿಯನ್ನು ನೀಡುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿರುತ್ತದೆ. ತಮ್ಮ ಕುಟುಂಬದಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ಕೂಡಲೇ ಸರಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ಅಥವಾ 1077 ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಲು ತಿಳಿಸಲಾಗಿದೆ.

ಈ ರೀತಿ ತ್ವರಿತವಾಗಿ ಮಾಹಿತಿಯನ್ನು ನೀಡುವುದರಿಂದ ಸಕಾಲದಲ್ಲಿ ಚಿಕಿತ್ಸೆ ದೊರೆತು ಗುಣಪಡಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Dakshina Kannada State

ಮಂಗಳೂರು : ರಾಜ್ಯದಲ್ಲಿ ಇಂದು ಮತ್ತೆ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ. ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜನತೆ ಕೊಂಚ ನಿರಾಳರಾಗಿದ್ದಾರೆ. ಏತನ್ಮಧ್ಯೆ, ಮಂಗಳೂರಿನಲ್ಲಿ ವಿದೇಶಿ ಮೂಲದ ಇಬ್ಬರು ಲಿಫ್ಟ್ ನಲ್ಲಿ ಉಗುಳುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ.

ಕೇಂದ್ರ ಸರ್ಕಾರವೇ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಕಠಿಣ ಶಿಕ್ಷೆ ವಿಧಿಸುವುದಾಗಿ ತಿಳಿಸಿದೆ. ಆದರೆ, ಮಂಗಳೂರಿನ ಕೋಡಿಬೈಲ್ ಪ್ರದೇಶದ ಅಪಾರ್ಟ್ ಮೆಂಟ್ ವೊಂದರಲ್ಲಿ ಹೋಂ ಕ್ವಾರೆಂಟೈನ್ ನಲ್ಲಿರುವ ಇಬ್ಬರು ವಿದೇಶಿಗರು ಲಿಫ್ಟ್ ನಲ್ಲಿ ಉಗುಳುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನಾ ಹಿನ್ನೆಲೆಯಲ್ಲಿ ಇಬ್ಬರು ವಿದೇಶಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಬಳಿಕ ದುಷ್ಕೃತ್ಯ ಮೆರೆದ ಇಬ್ಬರು ವಿದೇಶಿಗರು ಹಾಗೂ ಅವರ ಜೊತೆಗಿದ್ದ ಮೂವರು ರೂಂಮೇಟ್ ಗಳನ್ನು ಕ್ವಾರೆಂಟೈನ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ….

Dakshina Kannada State

ಮಂಗಳೂರು : ನಗರದ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸೋಂಕಿತರು, ಇಂದು ಗಣಮುಖರಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಂಗಳೂರಿ‌ನ ವೆನ್ ಲಾಕ್ ಆಸ್ಪತ್ರೆಯಲ್ಲಿ, ಕೊರೊನಾ ಪೀಡಿತರಾಗಿ ದಾಖಲಾಗಿದ್ದಂತ 63 ವರ್ಷದ ವೃದ್ಧ ಮಹಿಳೆ, 52 ವರ್ಷದ ವ್ಯಕ್ತಿ ಮತ್ತು 43 ವರ್ಷದ ವ್ಯಕ್ತಿಗಳು ಇಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಮೂಲಕ ಇಂದು ಮೂವರು ಕೊರೋನಾ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.

ಅಂದಹಾಗೇ, ದೆಹಲಿಯ ನಿಜಾಮುದ್ದೀನ್ ನಿಂದ ಆಗಮಿಸಿದ್ದ ಇಬ್ಬರು ವ್ಯಕ್ತಿಗಳಾಗಿದ್ದರು. ದುಬೈನಿಂದ ಬಂದಿದ್ದ ಕಾರ್ಕಳದ ವೃದ್ಧ ಮಹಿಳೆ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಿಯ 13 ಪ್ರಕರಣಗಳಲ್ಲಿ ಈವರೆಗೆ 12 ಮಂದಿ ಡಿಸ್ಚಾರ್ಜ್. ಉಳಿದ ಓರ್ವ ರೋಗಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಸದ್ಯ ಮಂಗಳೂರಿನಲ್ಲಿ ಏಕೈಕ ಕೊರೋನಾ ಪಾಸಿಟಿವ್ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Dakshina Kannada District News State

 

ಮಂಗಳೂರು: ಮೈಕಲ್ತೋ ಬಿಸಯಾ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷಾ ಅವರ ಫೋಟೋ ಬಳಸಿ, ”ಕೊರೊನಾಗಿಂದತಲೂ ಭಯಾನಕ ವೈರಸ್ ಮಂಗಳೂರು ಪೊಲೀಸರು. ಭಾರೀ ಸುದ್ದಿ ಮಾಡುತ್ತಿರುವ ಪೋಲೀ__ ವೈರಸ್” ಎಂದು ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ವಿರುದ್ಧ ಮಂಗಳೂರಿನ ಪ್ರದೀಪ್ ಎಂಬವರು ಕಂಕನಾಡಿ ನಗರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.